POLICE BHAVAN KALABURAGI

POLICE BHAVAN KALABURAGI

02 December 2013

Gulbarga District Reported Crimes

ಮಾನವ ಜೀವಕ್ಕೆ ಅಪಾಯವಾಗುವ ಮಾದಕ ವಸ್ತು  ಬ್ರೌನ್ ಶೂಗರನ್ನು  2 ಕೆ.ಜಿ 900 ಗ್ರಾಂ ಜಪ್ತಿ 8 ಜನರ ಬಂಧನ.
ಗ್ರಾಮೀಣ ಠಾಣೆ : ದಿನಾಂಕ 01-12-2013 ರಂದು ಆಳಂದ ರೋಡಿನ ರಾಣೇಶ ಪೀರ ದರ್ಗಾದ ಹತ್ತಿರ ಕೆಲವು ಜನರು ಬ್ರೌನ ಸೂಗರ ಅಕ್ರಮವಾಗಿ ಹೊಂದಿದ್ದು ಅಲ್ಲದೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿಯ ಮೇರೆಗೆ ಮಾನ್ಯ ಎಸ್.ಪಿ ಸಾಹೇಬರು ಗುಲಬರ್ಗಾ ಮತ್ತು ಅಪರ ಎಸ್.ಪಿ. ಸಾಹೇಬರ ಮಾರ್ಗದರ್ಶನದಲ್ಲಿ ಶ್ರೀ ಸಂತೋಷಬಾಬು, ಕೆ. ಈಪಿಎಸ್ (ಪ್ರೋ) ಎ.ಎಸ್.ಪಿ. ಗ್ರಾಮಾಂತರ ಉಪ-ವಿಭಾಗ ರವರ ನೇತ್ರತ್ವದಲ್ಲಿ ಶ್ರೀ ಡಿ.ಜಿ. ರಾಜಣ್ಣಾ ಸಿಪಿಐ ಗ್ರಾಮೀಣ ವೃತ್ತ, ಪಿ.ಎಸ್.ಐ ರವರಾದ ಹರಿಬಾ ಜಮಾದಾರ, ಗ್ರಾಮೀಣ ಠಾಣೆ, ನಿಂಪ್ಪ ಶಿವೂರ ಕಮಲಾಪೂರ ಠಾಣೆ, ಬಾಪುಗೌಡ ಪಾಟೀಲ ಮಾಹಾಗಾಂವ ಠಾಣೆ,ಹಾಗು ಪಂಚರು ಮತ್ತು  ಸಿಬ್ಬಂದಿಯವರೋಂದಿಗೆ ಮಧ್ಯಾಹ್ನ 0100 ಗಂಟೆಗೆ ರಾಣೇಶ ಪೀರ ದರ್ಗಾದ ಮುಂದೆ ಹೋದಾಗ 8 ಜನ ಆಪಾದಿತರಾದ 1.ಇರ್ಫಾನ್ ತಂದೆ ಉಸ್ಮಾನ ಪಟೇಲ್ ಇನಾಮಾದಾರ ಸಾ : ಬೆನಕನಳ್ಳಿ 2.ಗಣೇಶಕುಮಾರ ತಂದೆ ಶರಣಪ್ಪ ಹೊಸಮನಿ  ಉ: ಎಂ.ಬಿ.ಬಿ.ಎಸ್ ವಿದ್ಯಾರ್ಥಿ ತುಮಕುಮರ ಸಿಧ್ದಾರ್ಥ ಕಾಲೇಜ್ ಸಾ: ಬೆನಕನಳ್ಳಿ 3.ಶೇಖರ @ ರಾಜಶೇಖರ ತಂದೆ ಸಿದ್ದಣ್ಣ ಕ್ಯಾಸನ್ ಸಾ : ಇಂದಿರಾ ನಗರ ಚಿತಾಪುರ 4.ಶಿವಕುಮಾರ ತಂದೆ ಚೆನ್ನಪ್ಪ ಪಡಶೇಟ್ಟಿ ಸಾ: ಲಾಡ್ಜಿಂಗ್ ಕ್ರಾಸ್ ಚಿತಾಪುರ 5. ಜಯತೀರ್ಥ @ ಜಯಪ್ರಕಾಶ ತಂದೆ ಮಲ್ಲಿಕಾರ್ಜುನ ಹುಡುಗಿ ಸಾ: ವಿದ್ಯಾನಗರ ಕಾಲೋನಿ ಬೀದರ 6. ಶ್ರೀನಿವಾಸ ತಂದೆ ದೇವಿಂದ್ರಪ್ಪ @ ಗುಂಡಪ್ಪ ಯಲಗುರ್ತಿ  ಉ : ಡಿ,,ಆರ್ ಪೊಲೀಸ್ ಪೇದೆ ಬಕಲ್ ನಂ: 307  ಸಾ : ಕ್ವಾಟರ್ಸ ನಂ: 10-1-35 ಪೊಲೀಸ್ ಕಾಲೋನಿ ಬೀದರ. 7.ಮಹಿಬೂಬ ತಂದೆ ಖಾಜಾಮಿಯ್ಯಾ ಇನಾಮದಾರ  ಸಾ : ಬೆನಕನಳ್ಳಿ ತಾ : ಚಿಂಚೋಳಿ 8. ರಾಚಯ್ಯಾ @ ಬಸಯ್ಯಾ ತಂದೆ ಮೋಘಲಯ್ಯಾ ಗುತ್ತೇದಾರ ಸಾ : ಬೆನಕನಳ್ಳಿ ತಾ :  ಚಿಂಚೋಳಿ ರವರೇಲ್ಲರೂ ಕೂಡಿ ಮಾನವ ಜೀವಕ್ಕೆ ನಶೆಯಾಗುವ ಮತ್ತು ಅಪಾಯಕಾರಿಯಾಗಿರುವ ಬ್ರೌನ್ ಶೂಗರನ್ನು ಅಕ್ರಮವಾಗಿ ಯಾವುದೆ ಲೈಸೇನ್ಸ ಇಲ್ಲದೆ ಅನಧಿಕೃತವಾಗಿ ವ್ಯಾಪಾರದಲ್ಲಿ ತೊಡಗಿರುವಾಗ 0130 ಗಂಟೆಗೆ ದಾಳಿ ಮಾಡಿದಾಗ ಆಪಾದಿತರಿಂದ 2 ಕೆ.ಜಿ 900 ಗ್ರಾಂ, ಬ್ರೌನ್ ಶೂಗರ್ ಹಾಗೂ 4 ಮೋಟಾರ ಸೈಕಲಗಳು, ಮತ್ತು 7 ಮೊಬೈಲಗಳನ್ನು ಜಪ್ತಿ ಪಡಿಸಿಕೊಂಡು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 30-12-2013 ರಂದು ಸಾಯಾಂಕಾಲ 6:00 ಗಂಟೆಯ ಸುಮಾರಿಗೆ ಶ್ರೀ  ರಫೀಕ ತಂದೆ ಸೈಯದಸಾಬ ಪಾಗಾ  ಸಾ: ಇಜೇರಿ ತಾ: ಜೇವರ್ಗಿ ಜಿ:ಗುಲಬರ್ಗಾ ರವರು ತಮ್ಮ ಟಮ್‌ಟಮ್‌ ನಂ ಕೆಎ 32 ಬಿ- 7064 ನೇದ್ದನ್ನು ತೆಗೆದುಕೊಂಡು ನಾನು ಮತ್ತು ನಮ್ಮ ಅಣ್ಣ ಇಬ್ಬರೂ ಕೂಡಿ ತರಕಾರಿ ತರಲು ಗುಲಬರ್ಗಾಕ್ಕೆ ಹೊಗಿರುತ್ತೆವೆ. ತರಕಾರಿಯನ್ನು ಖರಿದಿ ಮಾಡಿಕೊಂಡು ದಿನಾಂಕ 01-12-2013 ರಂದು ನೆಸುಕಿನಲ್ಲಿ 5:00 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಮೇಲೆ ಫಿರೊಜಾಬಾದ ದರ್ಗಾದ ಸಮೀಪ ಹೊಗುತ್ತಿರುವಾಗ ನಮ್ಮ ಎದುರುಗಡೆ ಜೇವರ್ಗಿ ಕಡೆಯಿಂದ ಒಬ್ಬ ಕಾರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಆಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ನಮ್ಮ ಟಮ್‌ಟಮ್‌ನ ಎದುರಿಗೆ ಡಿಕ್ಕಿ ಪಡಿಸಿದನು. ಇದರಿಂದ ನನಗೆ ಯಾವುದೆ ಗಾಯ ವಾಗಿರುವದಿಲ್ಲ. ಟಮ್‌ಟಮ್‌ನಲ್ಲಿದ್ದ ನಮ್ಮಣ್ಣನಿಗೆ ರಕ್ತಗಾಯವಾಗಿದ್ದಲ್ಲದೆ ಎದಗೆ ಒಳಪೆಟ್ಟಾಗಿರುತ್ತದೆ. ನಂತರ ಸದರಿ ಕಾರ ನಂ. ನೋಡಲಾಗಿ ಕೆಎ 32 ಎಮ್‌-6921 ಅಂತಾ ಇದ್ದು ಅದರ ಚಾಲಕನ ಹೆಸರು ಸಿದ್ದಲಿಂಗಪ್ಪ ಅಂತಾ ಗೊತ್ತಾಗಿರುತ್ತದೆ. ಕಾರ ಚಾಲಕನಿಗೆ ರಕ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜುಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಫರಥಾಬಾದ ಠಾಣೆ : ನಂದಿಕೂರ ಗ್ರಾಮದಲ್ಲಿ ಕೆಲವು ಜನರು ಹನುಮಾನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕೆ ಇಟ್ಟು ಇಸ್ಪೆಟ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಮೇರೆಗೆ ಮಾನ್ಯ ಎ.ಎಸ್.ಪಿ ಸಾಹೇಬರು ಮಾರ್ಗದರ್ಶನದಲ್ಲಿ ಹೋಗಿ ಗುಡಿಯ ಹಿಂದೆ ನಿಂತು ನೋಡಲಾಗಿ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ 4 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಜೂಜಾಟ ಆಡುತ್ತಿದ್ದುದನ್ನು ಖಚಿತಪಡಿಸಿಕೊಂಡು  ದಾಳಿ ಮಾಡಿ 3 ಜನರನ್ನು ಹಿಡಿದುಕೊಂಡಿದ್ದು ಒಬ್ಬನು ಓಡಿ ಹೋದನು. ನಾನು ಸದರಿಯವರಿಗೆ ವಿಚಾರಿಸಿ ಚೇಕ ಮಾಡಲಾಗಿ ಅವರಲ್ಲಿ 1. ಮಹೇಶ ತಂದೆ ದೇವಿಂದ್ರ ಚವ್ಹಾಣ ಸಾ:ನಂದಿಕೂರ ತಾಂಡಾ 2.ಬಾಬು ತಂದೆ ಶಿವಶರಣಪ್ಪಾ  ಸಕಪಲ  3. ರಾಜು ತಂದೆ ಕಾನು ಚವ್ಹಾಣ   ಸಾ:ನಂದಿಕೂರ ತಾಂಡಾ  ಅಲ್ಲದೆ ಓಡಿ ಹೋದವನ ಹೆಸರು  ನಾಗಪ್ಪಾ ಗುತ್ತೇದಾರ ಸಾ:ನಂದಿಕೂರ ಇರುತ್ತಾನೆ ಅಂತಾ ತಿಳಿಸಿದರು. ಒಟ್ಟು 5120=00 ರೂಗಳು ಹಾಗು  52 ಇಸ್ಪೇಟ ಮತ್ತು ಎರಡು ಮೊಬೈಯಲ್ ಗಳು ಹೀಗೆ ಒಟ್ಟು 5920=00 ರೂ ಜಪ್ತಿ ಪಂಚನಾಮೆಯ ಮೂಲಕ ಜಪ್ತಿ ಮಾಡಿಕೊಂಡು ಆಪಾದಿತರೊಂದಿಗೆ ಠಾಣೆಗೆ ಬಂದು ಸದರಿಯವರ ವಿರುದ್ಧ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೈದಿ ಅ ಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 01-12-2013 ರಂದು ಸಾಯಂಕಾಲ 7:00 ಗಂಟೆಗೆ ಕೇಂದ್ರ ಕಾರಾಗೃಹದ ಸಿಬ್ಬಂದಿಯವರಾದ ಶ್ರೀ ಗುರುರಾಜ .ಎನ್. ಕಾಮಾ ವಿಕ್ಷಕ ಇವರು ಪೊಲೀಸ ಠಾಣೆಗೆ ಹಾಜರಾಗಿ ಕೇಂದ್ರ ಕಾರಾಗೃಹದ ಅಧೀಕ್ಷಕರು ಎಮ್. ಸೋಮಶೇಖರ ರವರು ನೀಡಿದ ಲಿಖಿತ ಫಿರ್ಯಾದಿ ತಂದು ಹಾಜರ ಪಡಿಸಿದ್ದು ಸದರಿ ಲಿಖಿತ ಫಿರ್ಯಾದಿ ಸಾರಾಂಶವೆನೆಂದರೆ ಈ ಕೇಂದ್ರ ಕಾರಾಗೃಹದ ಶಿಕ್ಷಾ ಬಂದಿ 19458 ಆಶಾಬೀ ತಂದೆ ಚಾಂದ ಮಹಿಬೂಬಸಾಬ ಸಾ: ದೇವದುರ್ಗ ತಾ: ದೇವದುರ್ಗ ಜಿ: ರಾಯಚೂರ ಎಂಬಾಕೆಯು 01 ವರ್ಷ ಶಿಕ್ಷೆ ಅನುಭವಿಸುತ್ತಿದ್ದು ವಯಸ್ಸಾಗಿದರಿಂದ ಅನಾರೋಗ್ಯದಿಂದ ಬಳಲುತಿದ್ದರಿಂದ ಈ ಸಂಸ್ಥೆಯ ವೈದ್ಯಾಧಿಕಾರಿಗಳು ಮೇಲ್ಕಾಣಿಸಿದ ಬಂದಿಯನ್ನು ಅಂದೆ ಒಳರೋಗಿಯಾಗಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡುತ್ತಿದ್ದರು. ಸದರಿ ಬಂಧಿಯು ಇಂದು ದಿನಾಂಕ: 01-12-2013 ರ ಮದ್ಯಾಹ್ನ 03:00 ಗಂಟೆಯ ಸಮಯದಲ್ಲಿ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾಹಾಗಾಂವ ಠಾಣೆ : ದಿನಾಂಕ 30-11-2013 ರಂದು ಬೆಳಿಗ್ಗೆ 11:00 ಗಂಟೆ ಸುಮಾರಿಗೆ ಕಲ್ಲಿನ ವಿಷಯದ ಸಂಬಂಧ ಕಸ್ತೂರಿಬಾಯಿ ತಂ, ಗುರುಪಾದಯ್ಯ ಸ್ವಾಮಿ ಚನ್ನಮ್ಮ ಗಂ, ಶಿವಲಿಂಗಯ್ಯ ಸ್ವಾಮಿ, ಶಿವಲಿಂಗಯ್ಯ ತಂ, ಗುರುಪಾದಯ್ಯ ಸ್ವಾಮಿ ಇವರೆಲ್ಲರೂ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡಿ ಕಸ್ತೂರಿಬಾಯಿ ಇವಳು ಹಲ್ಲಿನಿಂದ ಬಲಕೈಗೆ ಕಚ್ಚಿದ್ದು ಶಿವಲಿಂಗಯ್ಯ ಇತನು ನನ್ನ ತಲೆ ಮೇಲಿನ ಕೂದಲು ಹಿಡಿದು ಎಳೆದಾಡಿ ಮಾನಭಂಗ ಮಾಡಿ ಅವರೆಲ್ಲರೂ ಕೂಡಿ ಜೀವದ ಬೆದರಿಕೆ ಹಾಕಿರುತ್ತಾರೆ ಶ್ರೀಮತಿ ಸುವರ್ಣ ಗಂ ಸೂರ್ಯಕಾಂತ ಸುಂಕೆನವರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಅಖಿಲಾಬೇಗಂ ಗಂಡ ಮಹ್ಮದ ಮದಾರ ಸಾ;ಬುದ್ದನಗರ ಸ್ಟೇಷನ ಎರಿಯಾ ಗುಲಬರ್ಗಾ ಇವರನ್ನು ತಂದೆ ತಾಯಿಯವರು ದಿನಾಂಕ 02.11.2011 ರಂದು ಮಹ್ಮದ ಮದಾರ ಇತನೊಂದಿಗೆ ಸಂಪ್ರದಾಯದಂತೆ ಜೆ.ಕೆ ಪಂಕ್ಷನ್ ಹಾಲದಲ್ಲಿ ಮದುವೆ ಮಾಡಿಕೊಟ್ಟಿದ್ದು ಮದುವೆ ಕಾಲಕ್ಕೆ ವರನಿಗೆ ವರದಕ್ಷೀಣೆ ವರೋಪಚಾರ ಅಂತಾ 1 ವರೆ ತೊಲೆ ಬಂಗಾರ 25.000/-ರೂಪಾಯಿ ಕೊಟ್ಟಿದ್ದು ಅಲ್ಲದೇ ಗೃಹಪಯೋಗಿ ಸಾಮಾನುಗಳು ಕೂಡ ಕೊಟ್ಟಿದ್ದು ಇರುತ್ತದೆ . ನನ್ನ ಗಂಡ ದಿನಾಲೂ ಕುಡಿದು ಬಂದು ನಿನ್ನ ತವರು ಮನೆಯಿಂದ 1 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ನಾನು ಹಣ್ಣಿನ ವ್ಯಾಪಾರ ಮಾಡುತ್ತೇನೆ. ಅಂತಾ ಹಿಂಸೆ ಕೊಡುತ್ತಿದ್ದನು. ಹಾಗೂ ನನ್ನ ಅತ್ತೆಯಾದ ರಜಿಯಾ ಕೂಡ ಇನ್ನು 3 ತೊಲೆ ಬಂಗಾರ ತೆಗೆದುಕೊಂಡು ಬಾ ಅಂತಾ ಹಿಂಸಿಸುತ್ತಿದ್ದಳು. ದಿನಾಂಕ 07.11.2013 ರಂದು ಬೆಳಗ್ಗೆ 11 ಎ.ಎಂಕ್ಕೆ ನನ್ನ ಗಂಡ ಮಹ್ಮದ ಮದಾರ ಅತ್ತೆ ರಜಿಯಾ ಹಾಗೂ ನಾದಿನಿಯರಾದ ಪರವೀನ, ವಾಹೀದಾ ಮೈದುನ ಮಹ್ಮದ ಗೌಸ ಇವರುಗಳು ನನ್ನ ತವರು  ಮನೆಗೆ ಬಂದು ರಂಡಿ ತವರು ಮನೆಯಿಂದ 1 ಲಕ್ಷ ರೂಪಾಯಿ 3 ತೊಲೆ ಬಂಗಾರ ತೆಗೆದುಕೊಂಡು ಬಾ ಅಂದರೆ ಬಂದು ತವರು ಮನೆಯಲ್ಲಿ ಕುಳಿತಿರುವಿಯಾ ಅಂತಾ ನನ್ನ ಕೂದಲು ಹಿಡಿದು ಒದ್ದು ಹೊಡೆಬಡೆಮಾಡಿ ಅವಾಚ್ಯ ಶಬ್ದಗಳಿಂದ ಬೈದು  ನನಗೆ ಹಣ ಮತ್ತು ಬಂಗಾರವನ್ನು ತೆಗೆದುಕೊಂಡು ಬಾ ಅಂತಾ ಮಾನಸಿಕ ಮತ್ತು ದೈಹಿಕ  ಕಿರುಕುಳ ನೀಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀ ಮಲ್ಲೇಶ ತಂದೆ ಹಣಮಂತ ಮೇತ್ರೆ ಸಾ;ಶಹಾ ಹುಸೇನಿ ಚಿಲ್ಲಾ ಹತ್ತಿರ ಬೋರಾಬಾಯಿ ನಗರ ಗುಲಬರ್ಗಾ ಇವರ ಮಗಳಾದ ಕು; ನೀಲು @ ನೀಲಮ್ಮ ವಯ;11 ವರ್ಷ ಇವಳು ದಿನಾಂಕ 23.11.2013 ರಂದು ಸಂಜೆ 6.30 ಗಂಟೆಯ ಸುಮಾರಿಗೆ ಮನೆಯ ಮುಂದೆ ಆಟವಾಡುತ್ತಿದ್ದವಳು ನಂತರ 7 ಗಂಟೆಯ ಸುಮಾರಿಗೆ ನೋಡಲಾಗಿ ಅವಳು ಮನೆಯ ಮುಂದೆ ಇರಲಿಲ್ಲಾ ಎಲ್ಲಿಯಾದರೂ ಬೇರೆ ಕಡೆ ಹೋಗಿರಬಹುದು ಅಂದುಕೊಂಡು ಓಣಿಯಲ್ಲಿ ಹುಡುಕಾಡಿದ್ದು ಸಿಗಲಿಲ್ಲಾ ಅಲ್ಲದೇ ನಮ್ಮ ಸಂಬಂದಿಕರ ಮನೆಗಳಿಗೆ ಮತ್ತು ಊರುಗಳಿಗೆ ಹೋಗಿ ಹುಡುಕಾಡಿದರೂ ಸಿಕ್ಕಿರುವದಿಲ್ಲಾ ಅಮತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.