POLICE BHAVAN KALABURAGI

POLICE BHAVAN KALABURAGI

01 October 2013

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 29-09-2013 ರಂದು 01-30 ಪಿ.ಎಮ್ ಕ್ಕೆ ಶ್ರೀಮತಿ ಜೈನತಬಿ ಗಂಡ ಮಹ್ಮದ ರಫೀಕ ಸಾಃ ಪಾಶಾಪೂರ ಇವರ ಗಂಡನಾದ ಮಹ್ಮದ ರಫೀಕ ಈತನು ತಾನು ಚಲಾಯಿಸುತ್ತಿದ್ದ  ಅಟೋರಿಕ್ಷಾ ನಂ. ಕೆ.ಎ 32 7037 ನೇದ್ದು ಸರಾಫ ಬಜಾರ ಕಡೆಯಿಂದ ಗಣೇಶ ಮಂದಿರ ಕಡೆಗೆ ಅತಿವೇಗ ಮತ್ತು ಅಲಕ್ಷತದಿಂದ ಚಲಾಯಿಸಿಕೊಂಡು ಹೋಗಿ ಗಣೇಶ ಮಂದಿರ ಹತ್ತಿರ ಇರುವ ಗೌಳಿ ಹೋಟೆಲ್ ಮುಂದುಗಡೆ ರೋಡಿನ ಮೇಲೆ ಒಮ್ಮೆಲೆ ಬ್ರೆಕ್ ಹಾಕಿದಕ್ಕೆ ಅಟೋರಿಕ್ಷಾ ಪಲ್ಟಿಯಾಗಿದ್ದರಿಂದ ಅಟೋ ಚಲಾಯಿಸುತ್ತಿದ್ದ ಮಹ್ಮದ ರಫೀಕ ಈತನು ಕೆಳಗೆ ಬಿದ್ದು ತಲೆಗೆ ಮತ್ತು ಹಣೆಗೆ ಮುಖಕ್ಕೆ ತರಚಿದ ಗಾಯಗಳಾಗಿದ್ದು  ಉಪಚಾರ ಕುರಿತು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮದ್ಯ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಜೇವರ್ಗಿ ಠಾಣೆ : ಶ್ರೀ ಜೆಟ್ಟೆಪ್ಪ ದೊಡ್ಡಮನಿ ಸಾ: ಶಾಖಾಪುರ (ಎಸ್. ವಾಯ್) ತಾ: ಜೇವರ್ಗಿ ಇವರು ದಿನಾಂಕ 26-09-2013 ರಂದು 5-45 ಪಿ.ಎಮ್.ಕ್ಕೆ ತಾನು ಮತ್ತು ಸುರೇಶ ದೊಡ್ಡಮನಿ ಇವರು ಮೋಟಾರ ಸೈಕಲ್ ನಂ. ಕೆಎ-32- ವಾಯ್- 3142 ನೇದ್ದರ ಮೇಲೆ ಕುಳಿತುಕೊಂಡು ಇಜೇರಿ- ಸಾಥಖೆಡ  ರೋಡ ಶಂಕ್ರೆಪ್ಪ ಇವರ ಹೊಲದ ಹತ್ತಿರ ಹೋಗುತ್ತಿದ್ದಾಗ ಅದೆ ವೇಳಗೆ ಎದುರುಗಡೆಯಿಂದ ಕ್ರೂಜರ್ ವಾಹನ ನಂ. ಎಪಿ.07-ಡಬ್ಲೂ-8960 ನೇದ್ದರ ಚಾಲಕನು ತನ್ನ ವಾಹನ ಅತಿ ವೇಗ ಮತ್ತು ಅಲಕ್ಷಯನದಿಂದ ನಡೆಸಿಕೊಂಡು ಬಂದು ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಬಾರಿ ಗಾಯ ಗೋಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಡನ ಮನೆಯವರ ಕಿರುಕಳ ಗೃಹಿಣಿ ಸಾವು :
ಮಾದನ ಹಿಪ್ಪರಗಾ ಠಾಣೆ : ಶ್ರೀ.ದಶರಥ ತಂದೆ ಮಲ್ಲಪ್ಪಾ ಬೇಳ್ಳೆ   ಸಾ:ಮಟಕಿ ತಾ: ಆಳಂದ ಇವರ  ಮಗಳಾದ ಶಾಂತಾಬಾಯಿ ಗಂಡ ರೇವಣಸಿದ್ದ ಅಂಬೇವಾಡ ಇವಳು ಗಂಡನ ಮನೆಯಾದ ಮಾದನ ಹಿಪ್ಪರಗಾದಲ್ಲಿ ತನ್ನ ಗಂಡನಾದ ರೇವಣಸಿದ್ದ ತಂದೆ ಶಿವಣ್ಣಾ ಅಂಬೇವಾಡ ಮತ್ತು ಸಿದ್ದಮ್ಮ ಗಂಡ ಪರಮೇಶ್ವರ ಅಂಬೇವಾಡ ಮು:ಮಾದನ ಹಿಪ್ಪರಗಾ ಇವರು ಕೊಟ್ಟ ಮಾನಸಿಕ ತೊಂದರೆ ತಾಳಲಾರದೆ ಮತ್ತು ಅವರು ಎಲ್ಲಿಯಾದರೂ ಹೋಗಿ ಉರಲು ಹಾಕಿಕೊಂಡು ಸಾಯಿ ಎಂದು ತೊಂದರೆ ಕೊಟ್ಟಿದ್ದರಿಂದ ನನ್ನ ಮಗಳು ಮನೆಯಲ್ಲಿ ಉರಲು ಹಾಕಿಕೊಂಡು ಮೃತಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.