POLICE BHAVAN KALABURAGI

POLICE BHAVAN KALABURAGI

19 January 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ರೇವೂರ ಠಾಣೆ : ಶ್ರೀಮತಿ ಸೂಚಿತಾ ಗಂಡ ಗೋಪಾಲ ಭೋಸ್ಲೆ ಸಾವಂತ ಸಾ||ಮನೆ ನಂ-407 ರೂಪೇಶ ಸೋಸೈಟಿ, ಕಳವಾ ವೆಸ್ಟ, ಜಿಲ್ಲಾ-ಠಾಣಾ. ಮಹಾರಾಷ್ಟ ರಾಜ್ಯ ರವರ ಠಾಣೆಗೆ ಹಾಜರಾಗಿ ನಾನು ಈ ಮೇಲ್ಕಂಡ ಹೆಸರು ಮತ್ತು ವಿಳಾಸದ ನಿವಾಸಿತಳಿದ್ದು ಮನೆಕೆಲಸ ಮಾಡಿಕೊಂಡು ಪರಿವಾರ ದೊಂದಿಗೆ ಉಪಜೀವನ ಸಾಗಿಸುತ್ತಿದ್ದೇನೆ. ನನ್ನ ತಾಯಿಯಾದ ಜಯಶ್ರೀ ಗಂಡ ದಿ||ವಸಂತ ಸಾವಂತ ವಯ||75 ಜಾ|| ಮರಾಠ ಉ|| ಮನೆಕೆಲಸ ಸಾ||ನಾಟಲ ಗ್ರಾಮ ತಾ||ಕನಕೌಲಿ ಜಿಲ್ಲಾ||ಸಿಂಧದುರ್ಗ ಮಹಾರಾಷ್ಟ್ರ. ಇವರು ಒಂದು ವಾರದ ಹಿಂದೆ ನಮ್ಮ ಮನೆಗೆ ಬಂದಿರುತ್ತಾಳೆ. ದೇವಲಗಾಣಗಾಪೂರ ದತ್ತ ಮಹಾರಾಜ ದರ್ಶನಕ್ಕೆ ಹೋಗಲು  ನಾನು ನನ್ನ ತಾಯಿ ಮತ್ತು  ನನ್ನ ಅಕ್ಕಳ  ಮಗನಾದ ಪ್ರಸಾದ ತಂದೆ  ಪ್ರದೀಪ ರಾಸಮ ವಯ||20 ಜಾ|| ಮರಾಠ ಉ|| ವಿಧ್ಯಾರ್ಥಿ  ಸಾ||ಮನೆ ನಂ-170 ಕಂದಮವಾರ ನಗರ ವಿಕೋಳಿ ಈಸ್ಟ ಜಿ|| ಠಾಣಾ ಮತ್ತು ನಮಗೆ ಪರಿಚಯಿಸ್ಥರು ಮತ್ತು ಗುರುಜಿಗಳಾದ ಮಹೇಶ ತಂದೆ ರಾಮಚಂದ್ರ  ದೇವಧರ ಸಾ|| ಮನೆ ನಂ-1/8 ಶ್ರೀಚಿಂತಾಮಣಿ, ವಿಟ ಬಂದರ ರಸ್ತೆ ಠಾಣೆಈಸ್ಟ, ಎಲ್ಲರೂ ದಿನಾಂಕ-15/01/2019 ರಂದು  ರಾತ್ರಿ ಠಾಣೆಯಿಂದ  ರೈಲಿನ ಮೂಲಕ ಬಿಟ್ಟು ದಿನಾಂಕ-16/01/2019 ರಂದು ಸೋಲಾಪೂರಕ್ಕೆ ಬಂದಿರುತ್ತೇವೆ. ಸೋಲಾಪೂರದಲ್ಲಿ ಮೊದಲಿನಿಂದಲು ನಮಗೆ ಪರಿಚಯ ಇರುವ ಶ್ರೀ ಚಂದ್ರಕಾಂತ ತಂದೆ ವಿಠಲರಾವ ಭಾಲೆಕಾರ ಸಾ||ಮನೆ ನಂ-18/14 ಮಾಧವನಗರ ಎಮ್,,ಡಿ,ಸಿ ರೋಡ  ಸೋಲಾಪೂರ  ರವರ ಓಮಿನಿ ಕಾರ ನಂ-ಎಮ್,ಹೆಚ್-13 ಎಸಿ-3977 ನೇದ್ದನ್ನು ಬಾಡಿಗೆಗೆ ತೆಗೆದುಕೊಂಡು ಸೋಲಾಪೂರದಿಂದ ಎಲ್ಲರೂ  ಓಮಿನಿ ಕಾರನಲ್ಲಿ ಅಕ್ಕಲಕೋಟಾದ ಸ್ವಾಮಿ ಸಮರ್ಥಕ್ಕೆ ಬಂದಿರುತ್ತೇವೆ. ಸದರಿ ಓಮಿನಿ ಕಾರ ಚಂದ್ರಕಾಂತ ರವರೆ ಚಲಾಯಿಸುತ್ತಿದ್ದರು ದಿನಾಂಕ 17/01/2019 ಮುಂಜಾನೆ 09-00 ಎಎಮ್ ಕ್ಕೆ ದೇವಲಗಾಣಗಾಪೂರಕ್ಕೆ ಹೋಗಲು  ಎಲ್ಲರೂ ಚಂದ್ರಕಾಂತ ರವರ ಓಮಿನಿ ಕಾರ ನಂ-ಎಮ್,ಹೆಚ್-13 ಎಸಿ-3977 ನೇದ್ದರಲ್ಲಿ ಅಕ್ಕಲಕೋಟದಿಂದ ಬಿಟ್ಟು ದೇವಲಗಾಣಗಾಪೂರಕ್ಕೆ ಹೋಗಿ ದೇವರ ದರ್ಶನ ಮಾಡಿಕೊಂಡು ಮರಳಿ ಅಕ್ಕಲಕೋಟಕ್ಕೆ ಹೋಗಲು ಅದೆ ಓಮಿನಿ ಕಾರನಲ್ಲಿ ಅತನೂರ  ಗ್ರಾಮ ದಾಟಿ ಸುಮಾರು 02 ಕೀ,ಮೀಟರ ಅಂತರದಲ್ಲಿ ಹೋಗುತ್ತಿದ್ದಾಗ 4-15 ಪಿಎಮ್ ಕ್ಕೆ ಓಮಿನಿ ಚಲಾಯಿಸುತ್ತಿದ್ದ ಚಂದ್ರಕಾಂತ ರವರು ಓಮಿನಿಯನ್ನು ಅತಿವೇಗ ಹಾಗೂ ನಿಷ್ಕಾಳಜಿತದಿಂದ ಚಲಾಯಿಸಿ ದ್ದರಿಂದ ಅವರಿಗೆ ನಿಯಂತ್ರಿಸಲು ಆಗದೆ ನಿಯಂತ್ರಣ ತಪ್ಪಿ ಓಮಿನಿ ಪಲ್ಟಿಯಾಗಿ ಬಿದ್ದಿತು. ಪಲ್ಟಿಯಾದಾಗ ಬಾಗಿಲು  ತೆರೆದಿದ್ದರಿಂದ ನನ್ನ ತಾಯಿ ಜಯಶ್ರೀ ಓಮನಿ ವಾಹನದಿಂದ ರಸ್ತೆಯ ಮೇಲೆ ಕೆಳಗೆ ಬಿದ್ದಿರುತ್ತಾಳೆ. ನಾನು, ಪ್ರಸಾದ ಮಹೇಶ ಗುರುಜಿ ಎಲ್ಲರೂ ಓಮಿನಿಂದ ಕೆಳಗೆ ಇಳಿದೇವು. ಆಗ ಅಲ್ಲೆ ಇದ್ದ ಸಂತೋಷ ಹುಲಿ ಎಂಬ ವ್ಯಕ್ತಿಯು ಬಂದಿದ್ದು ಎಲ್ಲರೂ ಕೂಡಿ ಓಮಿನಿ ಚಲಾಯಿಸುತ್ತಿದ್ದ ಚಂದ್ರಕಾಂತ ರವರಿಗೆ ಹೋರಗೆ ತೆಗೆದು ಕೂಡಿಸಿ, ನನ್ನ ತಾಯಿಗೆ ಎತ್ತಿ ರಸ್ತೆಯ ಪಕ್ಕಕ್ಕೆ ಹಾಕಿರುತ್ತೇವೆ. ಸಂತೋಷ  ಹುಲಿ ಎಂಬುವರು ಅಂಬುಲೇನ್ಸ ವಾಹನಕ್ಕೆ  ಪೋನ ಮಾಡಿ ಬರಲು ಹೇಳಿದರು. ಸದರಿ ಅಪಘಾತದಿಂದ  ನನ್ನ ತಾಯಿ ಜಯಶ್ರೀ ಹಣೆಯ ಬಲಭಾಗಕ್ಕೆ  ಮತ್ತು ತಲೆಗೆ  ಭಾರಿ ರಕ್ತಗಾಯ ಮತ್ತು ಒಳಪೆಟ್ಟಾಗಿ ಪ್ರಜ್ಞಾಹಿನಳಾಗಿದ್ದಳು. ಓಮಿನಿ ಚಲಾಯಿಸುತ್ತಿದ್ದ ಚಂದ್ರಕಾಂತ ರವರ ತಲೆಯ ಹಿಂಭಾಗದಲ್ಲಿ ರಕ್ತಗಾಯ ಮತ್ತು ಬೆನ್ನಿಗೆ ಗುಪ್ತಗಾಯ ವಾಗಿರುತ್ತವೆ. ಮತ್ತು ನನ್ನ ಗಲ್ಲಕೆ ಮತ್ತು ಬಲಭಾಗದ ಭುಜಕ್ಕೆ ಒಳ ಪೆಟ್ಟಾಗಿರುತ್ತದೆ. ಮತ್ತು ಪ್ರಸಾದ ಮತ್ತು ಮಹೇಶ ಗುರುಜಿಗೆ ರವರಿಗೆ ಸಣ್ಣ ಪುಟ್ಟ ತೆರೆಚಿದ ಗಾಯಗಳಾಗಿರುತ್ತದೆ. ಅಂಬುಲೇನ್ಸ ವಾಹನ ಬಂದ ನಂತರ ನನ್ನ ತಾಯಿಗೆ ಮತ್ತು ಚಂದ್ರಕಾಂತ ರವರಿಗೆ ಅದರಲ್ಲಿ ಹಾಕಿಕೊಂಡು ನಾನು ಮಹೇಶ ಗುರುಜಿ, ಪ್ರಸಾದ ಕಲಬುರಗಿಯ ಗಂಗಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ನನ್ನ ತಾಯಿಗೆ ಪರೀಕ್ಷೆ ಮಾಡಿ ಮೃತಪಟ್ಟಿರುತ್ತಾಳೆ ಅಂತಾ ಹೇಳಿದರು. ಚಂದ್ರಕಾಂತ ರವರಿಗೆ ಗಂಗಾ ಆಸ್ಪತ್ರೆಯಲ್ಲಿ ಉಪಚಾರ ಕುರಿತು ದಾಖಲು ಮಾಡಿ ನನ್ನ ತಾಯಿಯ ಮೃತದೇಹವನ್ನು ಅಫಜಲಪೂರ ಸರಕಾರಿ ಆಸ್ಪತ್ರೆಯ ಶವಗಾರ ಕೋಣೆಯಲ್ಲಿ  ತಂದು ಹಾಕಿರುತ್ತೇವೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 18/01/2019 ರಂದು ಕೊಳ್ಳೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ರೋಡಿನ ಮೇಲೆ ಬುಲೆರೋ ನಂ ಕೆಎ-28 ಎನ್ 4712 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೊಗುತ್ತಿದ್ದ ಶ್ರೀ ಕಾಮಣ್ಣ ತಂದೆ ನಾಗಪ್ಪ ಪೂಜಾರಿ ಸಾಃ ಕೊಳ್ಳೂರ ಗ್ರಾಮ ರವರ  ಮಗನಾದ ದೇವಪ್ಪ ಇತನಿಗೆ ಡಿಕ್ಕಿಪಡಿಸಿ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ  ರಾಜಾಪಟೇಲ ತಂದೆ ದಾವಲಸಾಬ ಹಚ್ಚಡದ ಸಾ|| ಕಣಮೇಶ್ವರ ತಾ|| ಜೇವರ್ಗಿ ರವರು ದಿನಾಂಕ 15-01-2019 ರಂದು ನಮ್ಮೂರ ಹಜರತ ಶಾಹುಸೇನಿ ಜಾತ್ರಾ ಪ್ರಯುಕ್ತ ಸಮುದಾಯ ಭವನದ ಹತ್ತಿರ ಇದ್ದ ಟಾವರ ಕಂಭಕ್ಕೆ ನಾನು ಹಸೀರು ಬಣ್ಣದ ಝಂಡಾವನ್ನು ಕಟ್ಟಿದ್ದು ಇರುತ್ತದೆ, ಅದನ್ನು ನೋಡಿ ನಮ್ಮೂರಿನ ಹಿಂದು ಸಮಾಜದ ಕೆಲವರು ಅದೇ ಟಾವರ ಮೇಲೆ ಕೇಸರಿ ಬಣ್ಣದ ಝಂಡಾವನ್ನು ಕಟ್ಟಿರುತ್ತಾರೆ. ಈ ಬಗ್ಗ ನಮ್ಮ ಹಿರಿಯವರು ಉರಲ್ಲಿ ವಿನಾಕಾರಣ ಜಗಳಾಗುತ್ತವೆ, ನೀನು ಕಟ್ಟಿದ ಝಂಡಾವನ್ನು ಬಿಚ್ಚುಕೊಂಡು ಬಾ ಅಂತಾ ನನಗೆ ಹೇಳಿದ್ದರಿಂದ ನಾನು ಕಟ್ಟಿದ ಹಸೀರು ಬಣ್ಣದ ಝಂಡಾವನ್ನು ಬಿಚ್ಚಿರುತ್ತೇನೆ, ದಿನಾಂಕ 17-01-2019 ರಂದು ಮದ್ಯಾಹ್ನ ನಾನು ಸಂಡಾಸಕ್ಕೆ ಅಲ್ಲೆ ನಮ್ಮೂರ ಪಕ್ಕದಲ್ಲಿರುವ ಬಂದಗಿಸಾಬ ಹಚ್ಚಡದ ರವರ ಹೊಲಕ್ಕೆ ಹೋಗಿದ್ದು, ಮರಳಿ ಬರುವಾಗ ಅಲ್ಲೆ ಹೊಲದಲ್ಲೆ ನಮ್ಮೂರ 1] ರಾಜು ತಂದೆ ಬಸವರಾಜ ನಾಟೀಕಾರ, 2] ರಮೇಶ ತಂದೆ ಬಸವರಾಜ ನಾಟೀಕಾರ, 3] ಸುನೀಲ ತಂದೆ ಶಂಕ್ರೆಪ್ಪ ಜೇರಟಗಿ, 4] ಮಾಳಪ್ಪ ತಂದೆ ಸಾಯಬಣ್ಣ ನಾಟೀಕಾರ, 5] ಬಸವರಾಜ ತಂದೆ ಚಂದ್ರಾಮ ನಾಗಾವಿ, 6] ಸಂತೋಷ ತಂದೆ ಶಂಕ್ರೆಪ್ಪಾ ನಾಟೀಕಾರ, 7] ದಯಾನಂದ ತಂದೆ ಬಲಭೀಮ ನಾಗಾವಿ, 8] ದತ್ತಪ್ಪ ನಾಟೀಕಾರ, 9] ಸಂತೋಷ ತಂದೆ ಮಲ್ಕಪ್ಪ ನಾಟೀಕಾರ, 10] ಪರಸಪ್ಪ ತಂದೆ ಬಸಪ್ಪ ಮುದಬಾವಿ, 11] ರಾವುತಪ್ಪ ತಂದೆ ಮಲ್ಕಪ್ಪ ನಾಟೀಕಾರ, 12] ಜಯವಂತ ತಂದೆ ರಾಮಣ್ಣ ಕೆಲೋಜಿ, 13] ಸಿದ್ದಪ್ಪ ತಂದೆ ನಾಗಪ್ಪ ನಾಟೀಕಾರ, 14] ಸಂತೋಷ ಗುಬ್ಬೇವಾಡ, 15] ವಿಶ್ವರಾದ್ಯ ತಂದೆ ಗೋಪಾಲ ಬೋರಗಿ, 16] ಸಾಯಬಣ್ಣ ತಂದೆ ಲಕ್ಷ್ಮಣ ನಾಟೀಕಾರ, 17] ಸುರೇಶ ತಂದೆ ಬಲಭೀಮ ನಾಗಾವಿ, 18] ಪರಸಪ್ಪ ತಂದೆ ಅಡವೆಪ್ಪ ಕೊಂಡಗೂಳಿ, 19] ದೇವಪ್ಪ ಮಲ್ಕಪ್ಪ ನಾಟೀಕಾರ, 20] ದೇವಪ್ಪ ಚಟ್ಟರಕಿ, 21] ಶಿವರಾಜ ತಂದೆ ಮಲ್ಲಪ್ಪ ನಾಗಾವಿ ಸಾ|| ಎಲ್ಲರೂ ಕಣಮೇಶ್ವರ ಗ್ರಾಮ ಹಿಗೆಲ್ಲರು ಗುಂಪು ಕಟ್ಟಿಕೊಂಡು ನನ್ನ ಹತ್ತಿರ ಬಂದು ನನಗೆ ತಡೆದು ನಿಲ್ಲಿಸಿ ಏ ರಂಡಿ ಮಗನೆ ಮೊನ್ನೆ ಜಾತ್ರಿಯಲ್ಲಿ ಬಹಳ ಹಾರಾಡಿದಿ, ಉರಾಗ ನಿವೂ ಮುಸಲರು ಕಡಿಮಿ ಇದ್ದಿರಿ, ಇವತ್ತ ನಿನಗ ಖಲಾಸೆ ಮಾಡುತ್ತೇವೆ  ಅಂತಾ ಅಂದು ಹೊಡೆ ಬಡೆ ಮಾಡಿ ಬಿಡಿಸಲು ಬಂದ ನನ್ನ ತಾಯು ಮತ್ತು ಅತ್ಎಯಂದಿರಿಗೆ ಹೊಡೆದು ಅವಮಾನ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.