POLICE BHAVAN KALABURAGI

POLICE BHAVAN KALABURAGI

30 November 2013

Gulbarga District Reported Crimes

ದರೋಡೆ ಪ್ರಕರಣ :
ಶಾಹಾಬಾದ ನಗೆರ ಠಾಣೆ : ಶ್ರೀ ಬಾಬುರಾವ ತಂದೆ ವೈಜುನಾಥ ಪಂಚಾಕ್ಷರಿ ಸಾ||ಬಾತಾಂಬ್ರಾ ತಾ||ಬಾಲ್ಕಿ ಜಿ|| ಬೀದರ ರವರು ದಿನಾಂಕ 28.11.2013 ರಂದು ರಾತ್ರಿ ವಾಡಿಯಿಂದ ಲಾರಿ ನಂ ಎಮ್.ಪಿ.-09/ಹೆಚ್.ಎಫ್.6710 ನೇದ್ದರಲ್ಲಿ 470 ಚೀಲ ಸಿಮೆಂಟ ತುಂಬಿಸಿಕೊಂಡು ಶಹಾಬಾದ ಮಾರ್ಗವಾಗಿ ಗುಲಬರ್ಗಾಕಡೆಗೆ ಹೊರಟಾಗ 00.15 ಎ.ಎಮ್.ಕ್ಕೆ ತೆಗನೂರ ಗ್ರಾಮದಾಟಿ 1 ಕಿಮಿ ಅಂತರದಲ್ಲಿ ಚಡಾವದಲ್ಲಿ ನನ್ನ ಲಾರಿಯ ಹಿಂದುಗಡೆಯಿಂದ ಒಂದು ಕಪ್ಪು ಬಣ್ಣದ 4 ಚಕ್ರದ ವಾಹನ ನನ್ನ ಲಾರಿಯ ಹಿಂದುಗಡೆಯಿಂದ ಓವರ ಟೇಕ ಮಾಡಿ  ಲಾರಿಯ ಎದರುಗಡೆ ಬಂದು ನಿಲ್ಲಿಸಿ ಅದರಲ್ಲಿದ್ದ  4 ಜನರು ತಮ್ಮ ಮುಖಕ್ಕೆ ಕಪ್ಪು ಬಟ್ಟೆಯನ್ನು ಕಟ್ಟಿಕೊಂಡು  ಕೆಳಗೆ ಇಳಿದು ನನಗೆ ಚಾಕು ತೋರಿಸಿ ಚಾಲಕನ ಹತ್ತಿರ ಇದ್ದ ದು ನೊಕಿಯಾ ಮೊಬಾಯಿಲ ಅ.ಕಿ. 1000/-ರೂ.& 15500/-ನಗದು ಹಣ , ಚಾಲಕನಿಂದ ಲಾರಿ ಅ.ಕಿ. 5,00,000/-ರೂ ನದ್ದು ಮತ್ತು ಅದರಲ್ಲಿದ್ದ 93,500 ರೂ ಕಿಮ್ಮತ್ತಿನ ಸಮೆಂಟ ಸಮೇತ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜನರಿಗೆ ಮೋಸ ಮಾಡುತ್ತಿರುವ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 29-11-13 ರಂದು ಸಂಜೆ 7-30 ಗಂಟೆಗೆ ರಂದು ತಾಜ ಸುಲ್ತಾನಪುರದಲ್ಲಿರುವ ಗಿರಿಮಲ್ ಪಾರ್ದಿ ಇವರ ಮನೆಯ ಹತ್ತೀರ ಒಬ್ಬ ಗಂಡು ಮನುಷ್ಯ ಮತ್ತು ಮೂರು ಜನ ಹೆಣ್ಣು ಮಕ್ಕಳು ನಿಂತುಕೊಂಡು ಹೋಗಿ ಬರುವ ಜನರಿಗೆ ತಮ್ಮ ಹತ್ತೀರ ಬಂಗಾರವಿದೆ , ಮಾರಾಟ ಮಾಡುವುದಿದೆ, ಅಂತಾ ಹೇಳುತ್ತಾ ಬಂಗಾರದ ತುಕಡಿಯನ್ನು ಜನರಿಗೆ ತೋರಿಸಿ ಮೋಸ ಮಾಡುತ್ತಿದ್ದಾರೆಂದು ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಹರಿಬ್ಬಾ ಎ. ಜಮಾದಾರ ಪಿ.ಎಸ್.ಐ. (ಕಾ.ಸು.) ಗ್ರಾಮೀಣ ಪೊಲೀಸ ಠಾಣೆ ಗುಲಬರ್ಗಾ ಸಿಬ್ಬಂದಿ ಮತ್ತು ಮಹಿಳಾ ಸಿಬ್ಬಂದಿಯವರೊಂದಿಗೆ  ತಾಜ ಸುಲ್ತಾನಪುರದಲ್ಲಿಯ ನಾಗುಶೇಠ ಕಡಗಂಚಿ ಇವರ ತೋಟದ ಹತ್ತೀರ ಇರುವ ಗಿರಿಮಲ್ ಪಾರ್ದಿ ಇವರ ಮನೆಯ ಹತ್ತೀರ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಸದರಿ ಮನೆ ಎದರುಗಡೆ ರಸ್ತೆಯ ಮೇಲೆ  ನಮೂದಿಸಿದ ಒಬ್ಬ ಗಂಡು ಮನುಷ್ಯ ಹಾಗೂ ಮೂರು ಜನ ಹೆಣ್ಣು ಮಕ್ಕಳು ನಿಂತುಕೊಂಡು ಅಲ್ಲಿಂದ ಹಾದು ಹೋಗುವ ಜನರಿಗೆ ಬಂಗಾರದ ತುಕಡಿ ತೋರಿಸಿ, ಇದು ಮಾರಾಟ ಮಾಡುವುದಿದೆ ಅಂತಾ ಅನ್ನುತ್ತಿರುವುದನ್ನು ಕೇಳಿಸಿ ಕೊಂಡು ಸಂಗಡ ಇದ್ದ ಸಿಬ್ಬಂದಿಯವರ ಸಹಾಯದಿಂದ ಅವರನ್ನು ಸುತ್ತುವರೆದು ಹಿಡಿಯಲು ಪ್ರಯತ್ನಿಸಿದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿದ ಕೂಡಲೆ ಮೂರು ಜನ ಹೆಣ್ಣು ಮಕ್ಕಳು ಜೋರಾಗಿ ಕೂಗಾಡುತ್ತಾ ಸಾಲೆ ಪೊಲೀಸ್ವಾಲೆ ಆಗಯೆ ಮಾರೋ ಸಾಲೋಂಕೋ, ಅಂತಾ ಜೋರಾಗಿ ಕೂಗಿದ್ದರಿಂದ ಅವರ ಪೈಕಿ ಇದ್ದ ಗಂಡು ಮನುಷ್ಯನಿಗೆ ಹಿಡಿಯಲು ಹೋದ ನಮ್ಮ ಠಾಣೆಯ ಸಿಬ್ಬಂದಿ ಪಿಸಿ:  261 ಹಣಮಂತ ಇವರಿಗೆ ತನ್ನ ಪ್ಯಾಂಟಿನ ಜೇಬಿನಲ್ಲಿದ್ದ  ಚಾಕುವನ್ನು ಹೊರತೆಗೆದವನೆ ಹಣಮಂತ ಇವರಿಗೆ ಜೋರಾಗಿ ಹೊಡೆಯಲು ಹೋದಾಗ ಅವರು ಕೈ ಅಡ್ಡ ತರಲು ಸದರಿ ಚಾಕು ಹಣಮಂತ ಪಿಸಿ ಇವರ ಎಡಗೈ ಬೆರಳುಗಳಿಗೆ ಬಡಿದು ತೀವೃ ಸ್ವರೂಪದ ರಕ್ತಗಾಯವಾಗಿ ರಕ್ತ ಸೋರ ಹತ್ತಿತು . ಸದರಿ ಮನುಷ್ಯನು ತನ್ನಲ್ಲಿದ್ದ ಚಾಕುವನ್ನು ತೋರಿಸುತ್ತಾ ಹಣಮಂತ ಇವರಿಂದ ಕೊಸರಿಕೊಂಡು ಓಡಿ ಹೋದನು. ಸಿಕ್ಕಿಬಿದ್ದ ಮೂರು ಜನ ಹೆಣ್ಣು ಮಕ್ಕಳ ಅಂಗಶೋಧನೆ ಮಹಿಳಾ ಸಿಬ್ಬಂದಿಯವರ ಮುಖಾಂತರ  ಮಾಡಲು ಸುಮಿತ್ರಾ ಪವಾರ ಎಂಬುವವರ ಹತ್ತೀರ ಒಂದು ಬಂಗಾರದ ತುಕಡಿ ದೊರಕಿದ್ದು ವಿಚಾರಿಸಿದಾಗ ಸದರಿ ಬಂಗಾರದ ತುಕಡಿಯು ರಾಜು ಬೋಸ್ಲೆ ಈತನು ಮಹಾರಾಷ್ಟ್ರ ಕಡೆ ಕಳವು ಮಾಡಿ ತನಗೆ ಕೊಟ್ಟಿದ್ದು  ಅಂತಾ ವಗೈರೆ ತಿಳಿಸಿದ್ದರಿಂದ, ಕೂಡಲೆ ಸದರಿ ಸ್ಥಳಕ್ಕೆ ಇಬ್ಬರೂ ಪಂಚರನ್ನು ಬರಮಾಡಿಕೊಂಡು ಆಕೆಯ ಹತ್ತಿರವಿದ್ದ ಬಂಗಾರದ ನಮೂನೆಯಿದ್ದ ಅಂದಾಜ 4.5 ಗ್ರಾಂ ತೂಕವುಳ್ಳದ್ದು ಅಂದಾಜ ಬೆಲೆ 13,000/- ನೇದ್ದನ್ನು ಪಂಚರ ಸಮಕ್ಷಮ ಜಪ್ತ ಪಡಿಸಿಕೊಂಡಿದ್ದು ಆರೋಪಿತರು ಸಾರ್ವಜನಿಕರಿಗೆ ಮೋಸ ಮಾಡುವ ದುರುದ್ದೇಶ ಹೊಂದಿದ್ದು ಅಲ್ಲದೇ ಲೋಕ ನೌಕರಾದ ನಮಗೆ ಸರ್ಕಾರಿ ಕರ್ತವ್ಯ ನಿರ್ವಹಿಸದಂತೆ ಬೆದರಿಸಿ ಸ್ವ ಇಚ್ಛೆಯಿಂದ  ಸಿಪಿಸಿ 261 ಹಣಮಂತ ಇವರಿಗೆ ತೀವೃ ಗಾಯ ಉಂಟು ಮಾಡಿದ್ದರಿಂದ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಫಿರ್ಯಾದು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.