POLICE BHAVAN KALABURAGI

POLICE BHAVAN KALABURAGI

16 June 2017

Kalaburagi District Reported Crimes

ಕಳವು ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀಮತಿ. ಗೌಶಿಯಾಬೇಗಂ ಗಂಡ ಮಹ್ಮದ ಸತ್ತರ ಸ್ಟೋವಾಲೆ ಸಾ|| ಅಕ್ಬರ ಬಾಗ್ ಟಿಪ್ಪು ಚೌಕ ರಿಂಗ್ ರೋಡ ಕಲಬುರಗಿ ರವರು ಮತ್ತು ತಾಯಿಯಾದ ಬಾನುಬೇಗಂ ಗಂಡ ಮಹ್ಮದ ಸಲೀಂ ಬಂಗಡೆವಾಲೆ ಹಾಗೂ ನನ್ನ ತಂಗಿಯಾದ ತಯಾಬಬೇಗಂ ಇವಳ ಮದುವೆಯು ಇರುವುದರಿಂದ ನಾವೇಲ್ಲ ಕೂಡಿಕೊಂಡು ಬಂಗಾರ ಖರೀದಿಸುವ ಸಲುವಾಗಿ ನಮ್ಮ ಮನೆಯಿಂದ 90000/- ರೂಪಾಯಿಗಳನ್ನುನನ್ನ ತಾಯಿ ನನ್ನ ಹತ್ತಿರ ಕೊಟ್ಟಿದ್ದು ಅವುಗಳನ್ನು ನನ್ನ ವೆನೆಟಿ ಬ್ಯಾಗದಲ್ಲಿ ಇಟ್ಟಿಕೊಂಡಿದ್ದು, ಹಾಗೂ ನನ್ನ ತಾಯಿ ತನ್ನ ಹತ್ತಿರ 10000/- ರೂ ಗಳನ್ನು ಇಟ್ಟುಕೊಂಡಿದ್ದಳು ಮದ್ಯಾಹ್ನ 2-00 ಗಂಟೆ ಸುಮಾರಿಗೆ ಸುಪರ ಮಾರ್ಕೆಟಗೆ ಬಂದು ಕೆಲವು ಸಾಮಾನುಗಳನ್ನು ನನ್ನ ತಾಯಿಯ ಹತ್ತಿರವಿದ್ದ ಹಣದಿಂದ ಖರೀದಿಸಿ ನಂತರ ಚಪ್ಪಲಬಜಾರದಲ್ಲಿ ಹೋಗಿ ಅಲ್ಲಿ ಚಪ್ಪಲಗಳನ್ನು ಖರೀದಿ ಮಾಡಿ ಅಂದಾಜು ಮದ್ಯಾಹ್ನ 3-00 ಗಂಟೆ ಸುಮಾರಿಗೆ ಚಪ್ಪಲಬಜಾರದಿಂದ ಸ್ವಲ್ಪ ಮುಂದೆ ಸರಾಫ ಬಜಾರ ಕಡೆಗೆ ಬಂಗಾರ ಖರೀದಿ ಮಾಡಲು ಹೋಗುವಾಗ ಯಾರೋ ಒಬ್ಬ ಬುರಕದಾರಿ ಮಹಿಳೆ ನನ್ನ ವೆನೆಟಿ ಬ್ಯಾಗ ಚೈನ್ ಉಚ್ಚಿದೆ ಅಂತಾ ಅಂದಾಗ ನಾನು ಸದರಿ ಬ್ಯಾಗನ್ನು ಪರಿಶೀಲಿಸಲಾಗಿ ಅದರಲ್ಲಿದ್ದ 90000/- ರೂಪಾಯಿಗಳು ಇದ್ದಿರಲಿಲ್ಲ, ನಂತರ ಅಲ್ಲಿ ಇಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ಸಿಗಲಿಲ್ಲ. ಯಾರೋ ಕಳ್ಳರು ನಾವು ಚಪ್ಪಲ ಖರೀದಿ ಮಾಡಲು ಚಪ್ಪಲ ಬಜಾರದಲ್ಲಿ ಹೋದಾಗ ಚಪ್ಪಲ ಬಜಾರದಿಂದ ಸ್ವಲ್ಪ ಮುಂದೆ ಸರಾಫ ಬಜಾರ ಕಡೆಗೆ ಹೋಗುವಾಗ ನನ್ನ ಹಿಂದೆ ಹಾಕಿಕೊಂಡ ವೆನೆಟಿ ಬ್ಯಾಗದಲ್ಲಿದ್ದ ಹಣವನ್ನು ಹಿಂದಿನಿಂದ ಯಾರೋ ಕಳ್ಳರು ಅದರ ಚೈನ್ ಬಿಚ್ಚಿ ಸುಮಾರು 90000/- ರೂಪಾಯಿ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಅಭಯಕುಮಾರ ತಂದೆ ಪರಶ್ಮರಾಮ  ಜಾಧವ ಸಾ: ಖಣದಾಳ ತಾ: ಜಿ: ಕಲಬುರಗಿ ರವರು ದಿನಾಂಕ  14/06/16 ರಂದು ತನ್ನ ಮನೆಯ ಮುಂದೆ  ನಿಂತಾಗ ಶ್ರೀ ಸುನೀಲ ತಂದೆ ಗಣಪತಿ ರಾಠೋಡ ಇನ್ನೂ 25 ಜನರು ಸಾ: ಎಲ್ಲರು ಇಟಗಾ (ಕೆ) ತಾಂಡಾ & ಸಣ್ಣೂರ ತಾಂಡಾ ಗ್ರಾಮದವರು  ಕುಡಿಕೊಂಡು ಗುಂಪು ಕಟ್ಟಿ ಕೊಂಡು ಬಂದು ತಮ್ಮ ಅತ್ತೆ ಅನೂಸುಬಾಯಿಯೊಂದಿಗೆ ಯಾಕೇ ಜಗಳ ಮಾಡಿದ್ದಿ ಅಂತಾ ಅವ್ಯಾಚ್ಛ ವಾಗಿ ಬೈದು ಚಾಕುವಿನಿಂದ ಪಿರ್ಯಾದಿಗೆ ಬೆನ್ನ ಹಿಂದೆ ಚುಚ್ಚಿದ್ದು  ಹಾಗೂ ದೀರು ಚವ್ಹಾಣ ಇತನಿಗೂ   ಮೇಲಿನಿಂದ ಎತ್ತಿ ಒಗೆದು ಭಾರಿ ಗಾಯ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.