POLICE BHAVAN KALABURAGI

POLICE BHAVAN KALABURAGI

09 June 2012

GULBARGA DIST REPORTED CRIMES


ಕಳ್ಳತನ ಪ್ರಕರಣ:
ವಿಶ್ವ ವಿಧ್ಯಾಲಯ ಪೋಲೀಸ್ ಠಾಣೆ:ಅಜಾದಪೂರ ಗ್ರಾಮದ ಸೀಮಾಂತರದಲ್ಲಿ  ಅಳವಡಿಸಿದ ಏರಟೆಲ್ ಟವರನಲ್ಲಿನ ಆರ.ಎಫ ಕೇಬಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ  ತಾಂತ್ರಿಕ ನಿರ್ವಾಹಕನಾದ ಹೂವಣ್ಣ ಇತನು ಪೋನ ಮೂಲಕ ತೀಳಿಸಿದ ಮೇರೆಗೆ ನಾನು ದಿನಾಂಕ:07-06-2012 ರಂದು 2-45 ಪಿ.ಎಮಕ್ಕೆ ಹೋಗಿ ಪರಿಶೀಲಿಸಿ ನೋಡಲಾಗಿ ಆರ.ಎಫ ಕೇಬಲ ಸುಮಾರು ಅಂದಾಜು 250 ಮೀಟರ ಅ.ಕಿ.24,000/ರೂ ನೇದ್ದನ್ನು ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ಕತ್ತರಿಸಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ . ಅಂತಾ ಶ್ರೀ ಮಲ್ಲಿಕಾರ್ಜುನ ತಂದೆ ಶಿವಶರಣಪ್ಪ ಕಲಬುರ್ಗಿ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ-131/12 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ,
ಗೋದಾಮ ಕೂಲಿ ಕಾರ್ಮಿಕ ಸಾವು :

ಸೇಡಂ ಪೊಲೀಸ್ ಠಾಣೆ: ಲಕ್ಷ್ಮೀ ಗಂಡ ಲಕ್ಷ್ಮಣ ದಂಡಗುಂಡ ಸಾ:ಕಾಚವಾರ ಇವರು ನನ್ನ  ಗಂಡನಾದ ಲಕ್ಷ್ಮಣ ತಂದೆ ಸಿದ್ದಪ್ಪ ದಂಡಗುಂಡ ವಯ:36 ವರ್ಷ ಇವನು ಪ್ರತಿನಿತ್ಯ ಬೆಳಗ್ಗೆ 8-00 ಗಂಟೆಗೆ ಮನೆಯಿಂದ ಬುತ್ತಿ ಕಟ್ಟಿಕೊಂಡು ಹೋಗಿ ಬಟಗೇರಾ (ಬಿ) ಗೇಟದಲ್ಲಿರುವ ಸರಕಾರಿ ಗೋದಾಮಿನಲ್ಲಿ ಹಮಾಲಿ ಕೆಲಸ ಮಾಡಿಕೊಂಡು ಮರಳಿ ಸಂಜೆ 7-00 ಗಂಟೆಗೆ ಮನೆಗೆ ಬರುತ್ತಿದ್ದರು. ದಿ:08-06-2012 ರಂದು ಸಹ ಬೆಳಗ್ಗೆ 8-00 ಗಂಟೆಗೆ ಹೋಗಿ ಕೆಲಸ ಮಾಡುವ ಕಾಲಕ್ಕೆ ಸುಮಾರು  ಸಾಯಂಕಾಲ 5-30 ಗಂಟೆಯ ಸುಮಾರಿಗೆ  ಒಂದು ಲಾರಿಯಲ್ಲಿ ಗೋದಿ ಚೀಲ ಲೋಡ ಮಾಡಲು ಬೆನ್ನ ಮೇಲೆ ಗೋದಿ ಚೀಲಿ ಹೊತ್ತುಕೊಂಡು ಹೋಗುವಾಗ ಒಂಕು ಡೊಂಕಾಗಿರುವ ಸಾಲಿನ ಗೋದಿ ಚೀಲಗಳು ಮೇಮೇಲೆ ಬಿದ್ದು ಬಿದ್ದಿರುತ್ತವೆ. ಆತನನ್ನು ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದದಿಂದ ರಾತ್ರಿ 9-30 ಗಂಟೆ ಸುಮಾರಿಗೆ ನಾನು ಬಂದು ನೋಡಲು ನನ್ನ ಗಂಡನು ಮೃತ ಪಟಟಿದ್ದನು. ಗೋದಾಮಿನಲ್ಲಿ ಕೆಲಸಗಾರಿಗೆ ಸರಿಯಾಗಿ ನಿರ್ವಹಣೆ ಮಾಡದೇ ಇರುವದರಿಂದ ಗೋದಿ ಚೀಲಗಳು ಜಾರಿ ಮೈಮೇಲೆ ಬಿದ್ದು ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 127/2012 ಕಲಂ 304 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ,GULBARGA DIST


ಗುಲಬರ್ಗಾ ಜಿಲ್ಲಾ ವಿಶೇಷ ಘಟಕದ ಪೊಲೀಸ್ ಅಧಿಕಾರಿಗಳಿಂದ, ಶಹಾಬಾದ ನಗರದಲ್ಲಿ ಮಟಕಾ ಜೂಜಾಟ ಬರೆದುಕೊಳ್ಳುತ್ತಿದ್ದ ಆರೋಪಿಗಳ ಬಂದನ, ನಗದು ಹಣ 60,230 ರೂಪಾಯಿಗಳು ಜಪ್ತಿ.
ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ್ ಗುಲಬರ್ಗಾ ರವರು, ಶಹಾಬಾದ ನಗರದ ವಡ್ಡರ ಸಂಘದಲ್ಲಿರುವ ಅಂಬರಾಯ ಹದನೂರ ಇತನ ಮನೆಯ ಪಕ್ಕದ ಖುಲ್ಲಾ  ಜಾಗೆಯಲ್ಲಿ ಸಾರ್ವಜನಿಕರಿಂದ ಒಂದು ರೂಪಾಯಿಗೆ  ಎಂಬತ್ತು ರೂಪಾಯಿಗಳು ಬರುತ್ತೆವೆ ಅಂತಾ ಜನರಿಗೆ ನಂಬಿಸಿ ಅವರಿಂದ  ಹಣ ಪಡೆದುಕೊಂಡು ಮಟಕಾ ಬರೆದುಕೊಳ್ಳುತ್ತಿರುವ ವ್ಯಕ್ತಿಯ ಮೇಲೆ ದಾಳಿ ಮಾಡಲು ಸೂಚಿಸಿದ ಮೇರೆಗೆ ಶ್ರೀ ಅಸ್ಲಾಂ ಭಾಷ ಪೊಲೀಸ್ ಇನ್ಸಪೇಕ್ಟರ ಜಿಲ್ಲಾ ವಿಶೇಷ ಶಾಖೆ ಗುಲಬರ್ಗಾ ರವರು, ಮತ್ತು ಶ್ರೀ ಚೇತನ ಐಪಿಎಸ್ ರವರು, ಬಿ.ಬಿ ಪಟೇಲ್ ಡಿಸಿಐಬಿ ಘಟಕ, ಶಿವಪ್ಪಾ ಹೆಚಸಿ, ಎಪಿಸಿಗಳಾದ ರಾಘವೇಂದ್ರ, ಸಿದ್ದಾರೋಢ, ಶಿವಪ್ಪಾ, , ಮತ್ತು ಖಾಸಿಂ ಹೆಚಸಿ ಡಿಎಸಬಿ ಶಾಖೆ ರವರೆಲ್ಲರೂ ಕೂಡಿಕೊಂಡು ಸದರಿ ಸ್ಥಳಕ್ಕೆ ಹೋಗಿ ಸಾರ್ವಜನಿಕರಿಂದ ಹಣ ಪಡೆದು ಅಂಕಿ ಸಂಖ್ಯೆಗಳ ಮೇಲೆ ಒಪನ ಬಂದರೆ ಒಂದು ರೂಪಾಯಿಗೆ ಎಂಟು ರೂಪಾಯಿ, ಜಾಯಿಂಟ ಬಂದರೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುತ್ತೆವೆ ಅಂತಾ ಹೇಳಿ ಚೀಟಿ ಬರೆದುಕೊಳ್ಳುತ್ತಿವರ ಮೇಲೆ ದಾಳಿ ಮಾಡಿ ವಶಕ್ಕೆ ತೆಗೆದುಕೊಂಡು ವಿಚಾರಿಸಲಾಗಿ, ಅಂಬರಾಯ ತಂದೆ ಹಣಮಂತ ಹದನೂರ, ಸಾ|| ವಡ್ಡರ ಸಂಘ ಗುಲಬರ್ಗಾ, ಇತನಿಂದ ನಗದು ಹಣ 13500/- ಮತ್ತು ಪೆನ್ನು,ಮಟಕಾ ಚೀಟಿಗಳು, ವೆಂಕಟೇಶ ತಂದೆ ಯಲ್ಲಪ್ಪಾ ಚೌದರಿ ಸಾ|| ಸುಭಾಶ ಚೌಕ ಶಹಾಬಾದ ಇತನಿಂದ 10,930/- ನಗದು ಹಣ, ಮತ್ತು ಪೆನ್ನು, ಮಟಕಾ ಚಿಟಿಗಳು, ಮಲ್ಲಿನಾಥ ತಂದೆ ಹಣಮಂತ ಹದನೂರ ಸಾ|| ವಡ್ಡರ ಸಂಘ ಇತನಿಂದ 10,000/- ನಗದು ಹಣ, ಪೆನ್ನು ಮತ್ತು ಮಟಕಾ ಚೀಟಿಗಳು, ಚಂದ್ರಶೇಖರ ತಂದೆ ಶರಣಪ್ಪಾ ಹದನೂರ ಇತನಿಂದ 10,000/- ನಗದು ಹಣ ಮತ್ತು ಪೆನ್ನು, ಮಟಕಾ ಚೀಟಿಗಳು, ಪರಮಾನಂದ ತಂದೆ ದುಂಡಪ್ಪಾ ಯಲಗೋಡ್ ಇತನಿಂದ ನಗದು ಹಣ 9300/- ಮತ್ತು ಪೆನ್ನು ಮಟಕಾ ಚೀಟಿಗಳು, ನಾಗು ತಂದೆ ಮಲ್ಲಪ್ಪಾ ಬೆನಕನಳ್ಳಿ ಇತನಿಂದ ನಗದು ಹಣ 6500/- ಪೆನ್ನು ಮತ್ತು ಮಟಕಾ ಚೀಟಿಗಳು, ಹೀಗೆ ಒಟ್ಟು ನಗದು ಹಣ 60,230/- ರೂಪಾಯಿಗಳು, ಜಪ್ತಿ ಮಾಡಿಕೊಂಡಿರುತ್ತಾರೆ, ಹೀರಾ ಮೇಸ್ತ್ರಿ ಮಟಕಾ ಬುಕ್ಕಿ ಇತನು ಪರಾರಿಯಾಗಿರುತ್ತಾನೆ. ಈ ಸಂಬಂಧ ಶಹಾಬಾದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

GULBARGA DIST REPORTED CRIMES


ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀಮತಿ ಕುಷಾಬಾಯಿ ಗಂಡ ಅಣ್ಣಪ್ಪಾ ನಾಕಮನ ಸಾ|| ಕೆರಿಬೋಸಗಾ ತಾ;ಜಿ;ಗುಲಬರ್ಗಾರವರು ನಮ್ಮ ಮನೆ ಮುಂದೆ ಇದ್ದಾಗ ಶ್ರೀಮತಿ, ಮಾಪಮ್ಮಾ ಗಂಡ  ರಾಣಪ್ಪಾ, ಲಕ್ಷ್ಮೀ ಗಂಡ ನಾಗಪ್ಪಾ ನಾಕಮನ , ಗಂಗಾದರ ತಂದೆ ಲಕ್ಷಪ್ಪಾ ನಾಕಮನ , ಶ್ರೀಮತಿ ಕುಷಾಬಾಯಿ ಗಂಡ ಅಣ್ಣಪ್ಪಾ ನಾಕಮನ ಎಲ್ಲರೂ ಸಾ;ಕೆರಿಬೋಸಗಾ ತಾ;ಜಿ;ಗುಲಬರ್ಗಾ ರವರು ದಿನಾಂಕ.8-6-2012 ರಂದು ಮಧ್ಯಾಹ್ನ 1-00 ಗಂಟೆಗೆ  ಮನೆಯ ಎದುರುಗಡೆ ಬಂದು  ನಮ್ಮ ಮನೆಯ ಪಕ್ಕದಲ್ಲಿ (ಕೆರ್) ಬಾಡ ಏಕೆ ಕಟ್ಟಿರುವಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು  ತೆಲೆಯ ಮೇಲಿನ ಕೂದಲೂ ಹಿಡಿದು ಎಳೆದಾಡಿ , ಕೈ ಹಿಡಿದು ಎಳೆದಾಡಿ , ಕೈಯಿಂದ , ಕಟ್ಟಿಗೆ ಬಡಿಗೆಯಿಂದ ಕಲ್ಲಿನಿಂದ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 192/2012 ಕಲಂ 323, 324, 354, 504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀ, ರೇವಣಸಿದ್ಧಪ್ಪ ತಂದೆ ಗುರುಶಾಂತಪ್ಪ  ಪೊಲೀಸ ಪಾಟೀಲ  ಗುಲಬರ್ಗಾ ರವರು ನಾನು ದಿನಾಂಕ: 08-06-2012 ರಂದು ಮಧ್ಯಾಹ್ನ 1-00 ಗಂಟೆ ಸುಮಾರಿಗೆ ನನ್ನ ಮನೆ ಎದುರು ನಿಂತಾಗ ನನ್ನ ತಮ್ಮ ಶರಣಬಸಪ್ಪಾ ಇತನು  ಕೆಲಸಕ್ಕೆ ಯ್ಯಾಕೆ ಹೋಗಿಲ್ಲ ಅಂತಾ ಕೇಳಿದನು, ಅದಕ್ಕೆ ನಾನು ಮೈಯಲ್ಲಿ ಆರಾಮ ಇಲ್ಲದ್ದಕ್ಕೆ ಹೋಗಿರುವುದಿಲ್ಲಾ ಅಂತ ಹೇಳಿದಾಗ ಸುಮ್ನೆತ ತಿಂದರೆ ಹೇಗೆ ನಡೆಯುತ್ತೆ ಅಂತ ಹೇಳಿದನು, ನಾನು ಆಸ್ತಿಯಲ್ಲಿ ಪಾಲು ಕೊಡು ಅಂತಾ ಕೇಳಿದ್ದಕ್ಕೆ ಅವಾಚ್ಯವಾಗಿ ಬೈದು ಅಲ್ಲೇ ಬಿದ್ದ  ಕೊಡಲಿ ಕಾವಿನಿಂದ  ತಲೆಯ  ಹಿಂದೆ ಮತ್ತು ಬಲರಟ್ಟೆಗೆ ಹೊಡೆದು ರಕ್ತಗಾಯಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 193/2012 ಕಲಂ 504, 324 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ: ಶ್ರೀಮತಿ ಗಜರಾಬಾಯಿ ಗಂಡ ಲಕ್ಷ್ಮಣ ಲವಟೆ  ಸಾ|| ಭೂಸನೂರ ರವರು ನನ್ನ ಗಂಡನಾದ ಮೃತ ಲಕ್ಷ್ಮಣ ಇವರು ದಿನಾಂಕ 30/05/2012 ರಂದು 6-00 ಗಂಟೆಗೆ ನಮ್ಮ  ಕಬ್ಬಿನ ಗದ್ದೆಗೆ ನೀರು ಬಿಡಲು ಹೋಗಿದ್ದು, ನನ್ನ ಭಾವನ ಮಕ್ಕಳಾದ ಸುಧಾಕರ ಮತ್ತು ಪ್ರಶಾಂತ ಇವರು ರಾತ್ರಿ 11-00 ಗಂಟೆಗೆ ನನ್ನ ಗಂಡನನ್ನು ಮೋಟಾರ ಸೈಕಲ ಮೇಲೆ ತೆಗೆದುಕೊಂಡು ಬಂದಿದ್ದು, ನನ್ನ ಗಂಡನಿಗೆ ತಲೆಗೆ ಭಾರಿ ರಕ್ತಗಾಯವಾಗಿ ತಲೆಯಿಂದ ಮತ್ತು ಕಿವಿಯಿಂದ ರಕ್ತ ಬರುತ್ತಿತ್ತು ಅವನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿಂದ ವೈಧ್ಯರು ಸಲಹೆ ಮೇರೆಗೆ ಗಂಗಾ ಆಸ್ಪತ್ರೆ ಸೊಲ್ಲಾಪೂರದಲ್ಲಿ ಸೇರಿಕೆ ಮಾಡಿ 5-6 ದಿವಸಗಳವರೆಗೆ ಚಿಕಿತ್ಸೆ ಪಡೆದು ಮರಳಿ ಮನೆಗೆ ಬಂದು ಸದರಿ ನೋವು ಕಡಿಮೆಯಾಗದ್ದಿಂದ ಪುನಃ ದಿನಾಂಕ 06/06/2012 ರಂದು ಗುಲಬರ್ಗಾ ಸರ್ಕಾರಿ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದ್ದಾಗ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 08/06/2012 ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ನನ್ನ ಗಂಡನು ತೋಟಕ್ಕೆ ನೀರು ಬಿಟ್ಟು ಮನೆಗೆ ಬರುವಾಗ ದಿನಾಂಕ:30/05/2012 ರಂದು ಮೊಟಾರ ಸೈಕಲನ್ನು ಅತೀವೇಗದಿಂದ ಚಲಾಯಿಸಿ  ಮೋಟಾರ ಸೈಕಲ ಸ್ಕೀಡ ಆಗಿ ಬಿದ್ದಿದ್ದರಿಂದ ತಲೆಗೆ ಭಾರಿ ರಕ್ತಗಾಯವಾಗಿ ಕಿವಿಯಿಂದ ರಕ್ತಸ್ರಾವವಾಗಿ ಚಿಕಿತ್ಸೆ ಪಡೆಯುತ್ತಿರುವಾಗ ಮೃತಪಟ್ಟಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ. 45/2012 ಕಲಂ 279, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.