POLICE BHAVAN KALABURAGI

POLICE BHAVAN KALABURAGI

02 January 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ಶ್ರೀ ರಾಕೇಶ ತಂದೆ ದೇವಿಂದ್ರ ಮಡಿವಾಳ ಸಾ: ಸ್ಷೇಷನ ಏರಿಯಾ ಶಹಾಬಾದ ಇವರು ದಿನಾಂಕ: 31-12-2014 ತನ್ನ ಗೆಳೆಯನಾದ ಮಲ್ಲಿಕಾರ್ಜುನ ತಂದೆ ಶರಣಪ್ಪಾ ಸಾ: ಮಡ್ಡಿ ಏರಿಯಾ ಶಹಾಬಾದ ಇತನ ಮೊ/ಸೈ ನಂ: ಕೆ.ಎ-29/ಎಲ್-7034 ನೇದ್ದನ್ನು ತೆಗೆದುಕೊಂಡು ನನ್ನ ಹತ್ತಿರ ಬಂದು ಹೊಸ ವರ್ಷ ಆಚರಣೆ ಮಾಡೊಣ ಬಾ ಅಂತಾ ನನ್ನ ಜೊತೆಗೆ ಕರೆದುಕೊಂಡು ತಮ್ಮ ಮನೆಗೆ ಹೋಗಿ ಆತನ ಸಂಬಂದಿಕನಾದ ಮಲ್ಲಿಕಾರ್ಜುನ ರಾಜಾಪೂರ ಇತನನ್ನು ಕಲಬುರಗಿಗೆ ಬಿಟ್ಟು ಬರೊಣ ಅಂತಾ ಹೇಳಿ ಸದರಿ ಮೊ/ಸೈ ನನ್ನು ಮಲ್ಲಿಕಾರ್ಜುನ ಇತನು ಚಲಾಯಿಸಿಕೊಂಡು ಅದರ ಹಿಂದೆ ನಾನು ಮತ್ತು ಮಲ್ಲಿಕಾರ್ಜುನ ರಾಜಾಪೂರ ಕೂಡಿ ಸದರಿ ಮೊ/ಸೈ ಹಿಂದೆ ಕುಳಿತು ಕಲಬುರಗಿಯಲ್ಲಿ ಮಲ್ಲಿಕಾರ್ಜುನ ರಾಜಾಫೂರ ಇತನಿಗೆ ಬಿಟ್ಟು ಮರಳಿ ಶಹಾಬಾದಕ್ಕೆ 8.30 ಪಿಎಮ್ ಸುಮಾರಿಗೆ  ಸಣ್ಣೂರ ಕ್ರಾಸ ಮಾರ್ಗವಾಗಿ ಮುಗಳ ನಾಗಾಂವ ಕ್ರಾಸ ಹತ್ತಿರ ಸದರಿ ಮಲ್ಲಿಕಾರ್ಜುನ ತಂದೆ ಶರಣಪ್ಪಾ ಇತನು ತನ್ನ ಮೊ/ಸೈ ಅತೀವೇಗ ಮತ್ತು ನಿಷ್ಕಾಳಜಿ ತನಿಂದ ಚಲಾಯಿಸಿಕೊಂಡು ಮುಗಳನಾಗಾಂವ ಕ್ರಾಸ ಹತ್ತಿರ ಬ್ರೀಜಿನ ಕೆಳಗೆ ಒಂದು ಕಲ್ಲಿಗೆ ಡಿಕ್ಕಿ ಹೊಡೆದು ಕೆಳಗೆ ಬಿಳಿಸಿದ್ದರಿಂದ ನನಗೆ ಎಡಗಣ್ಣಿನ ಕೆಳಗೆ ರಕ್ತಗಾಯ , ಎಡ ಕಪಾಳಕ್ಕೆ ಗುಪ್ತ ಗಾಯ ಬಲಗೈ ಮುಂಗೈ ಹತ್ತಿರ ತರಚಿತ ರಕ್ತಗಾಯವಾಗಿ ಬೇವುಸ್ ಆಗಿ ಸ್ಥಳದಲ್ಲಿಯೇ ಬಿದ್ದೇನು. ನಂತರ ದಿನಾಂಕ: 01-01-2015 ರಂದು ಬೆಳ್ಳಿಗ್ಗೆ 6.30 ಗಂಟೆಗೆ ನನಗೆ ಎಚ್ಚರಾದಗ ಎದ್ದು ನೋಡಲು ಮಲ್ಲಿಕಾರ್ಜುನ ತಂದೆ ಶರಣಪ್ಪಾ ಇತನಿಗೆ ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ಕಿವಿಗಳಿಂದ ಭಾಯಿಯಿಂದ ರಕ್ತ ಬಂದು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.       
ಜೇವರ್ಗಿ ಠಾಣೆ : ದಿನಾಂಕ: 01.01.2015 ರಂದು ಶಿವರಾಜ ಕಟ್ಟಿಮನಿ ಈತನು ಮೋಟಾರ ಸೈಕಲ್‌ ನಂ ಕೆ.ಎ32ಇ.ಎಫ್‌9625 ನೇದ್ದರ ಮೇಲೆ ಜೇವರ್ಗಿಯಿಂದ ಊರಿಗೆ ಬರುತ್ತಿದ್ದಾಗ ಬಾಪುಗೌಡ ಹತ್ತಿ ಮಿಲ್‌ ಹತ್ತಿರ ಜೇವರ್ಗಿ ಶಹಾಪುರ ರೋಡಿನಲ್ಲಿ ಲಾರಿ ನಂ ಕೆಎ01ಎ2836 ನೇದ್ದರ ಚಾಲಕನು ತನ್ನ ಲಾರಿಯನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ಹಿಂದುಗಡೆ ವಾಹನಗಳು ಬರುವದನ್ನು ನೋಡದೆ ಹತ್ತಿ ಮಿಲ್‌ ಒಳಗಡೆ ಲಾರಿಯನ್ನು ತೆಗೆದುಕೊಂಡು ಹೋಗಲು ಒಮ್ಮೆಲೆ ಲಾರಿಯನ್ನು ಹೊರಳಿಸಿದಾಗ ನಮ್ಮ ಅಣ್ಣನ ಮೋಟಾರ ಸೈಕಲ್‌ ಲಾರಿಗೆ ಡಿಕ್ಕಿಯಾಗಿ ಭಾರಿ ರಕ್ತಗಾಯ ವಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಬಸಪ್ಪ ತಂದೆ ಪೀರಪ್ಪ ಕಟ್ಟಿಮನಿ ಸಾ : ಮುದಬಾಳ ಕೆ ತಾ : ಜೇವರ್ಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಜೇವರ್ಗಿ ಠಾಣೆ : ದಿನಾಂಕ 29.12.2014 ರಂದು ರಾತ್ರಿ ಜೇವರ್ಗಿ ಪಟ್ಟಣದ ರೈಸ ಧಾಬಾ ಹತ್ತಿರ ಜೇವರ್ಗಿ ಕಲಬುರಗಿ ಹೈವೆ ರೋಡಿನ ಮೇಲೆ ಶ್ರೀ ಚೆನ್ನನಗೌಡ ತಂದೆ ಸಿದ್ದಣ್ಣಗೌಡ ಸಿರವಾಳ ಸಾ : ಸಿರವಾಳ ತಾ : ಶಹಾಪುರ ರವರ ಟಿಪ್ಪರ್ ನಂ ಕೆ.ಎ33ಎ2754 ನೇದ್ದರ ಚಾಲಕನು ಟಿಪ್ಪರ್‌ನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರೊಡಿನ ಮೇಲೆ ಹೋಗಿತ್ತಿದ್ದ ಎಮ್ಮೆಗಳಿಗೆ ಡಿಕ್ಕಿ ಪಡಿಸುವದನ್ನು ತಪ್ಪಿಸಲು ಹೋಗಿ ಟಿಪ್ಪರ್‌ ಅನ್ನು ಪಲ್ಟಿ ಮಾಡಿ ಅಪಘಾತ ಮಾಡಿ ವಾಹನ ಜಖಂ ಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.