POLICE BHAVAN KALABURAGI

POLICE BHAVAN KALABURAGI

16 November 2012

Gulbarga District Reported Crime


                                  ದರೋಡೆಕೊರರ ಬಂಧನ :

ಶಾಹಾಬಾದ ನಗರ ಠಾಣೆ :ದಿನಾಂಕ: 09/11/2012 ರಂದು 00.30 ಗಂಟೆಗೆ ಪಿರ್ಯಾದಿ ಶ್ರೀ ಸುಭಾಷ ತಂದೆ ಗೀರೆಪ್ಪಾ ಬಾಲಖೆಡ ವ: 47 ಜಾ: ಲಿಂಗಾಯತ ಉ: ಆನಂದ ಚೊಂಚೊಳಿ ರವರ ಹತ್ತಿರ ಮುನೀಮ್ ಕೆಲಸ ಸಾ:ರೇವಣಸಿದ್ದೇಶ್ವರ ಕಾಲೋನಿ ಮನೆ ನಂ: 3-1305/96 ಗುಲ್ಬರ್ಗಾ ರವರು  ಠಾಣೆಗೆ ಹಾಜರಾಗಿ ಪಿರ್ಯಾದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ದಿನಾಂಕ:08/11/2012 ರಂದು ಮುಂಜಾನೆ 10.00 ಗಂಟೆಗೆ ನಮ್ಮ ಮಾಲೀಕರ ಟ್ಯಾಂಕರ ನಂ.ಎಮ್‌.ಹೆಚ್‌-11, ಎಮ್‌‌-3991 ನೇದ್ದರಲ್ಲಿ ಕೇರೊಸಿನನ್ನು ನಂದೂರ ಡಿಪೋದಲ್ಲಿ ತುಂಬಿಕೊಂಡು ಚಿತ್ತಾಪುರ ತಾಲ್ಲೂಕಿನ ಹಳ್ಳಿಗಳಿಗೆ ಹೋಗಿ ಕೇರೊಸಿನ ಕೊಟ್ಟು ವಾಪಾಸ ಗುಲಬರ್ಗಾಕ್ಕೆ ವಾಡಿ ಬೈಪಾಸ ರೋಡಿನಿಂದ  ರಾವೂರ ಮುಖಾಂತರ ಹೋಗುವಾಗ ಶಾಹಾಬಾದ ಭಂಕೂರ ಕ್ರಾಸ ದಾಟಿ ಬ್ರೀಡ್ಜ ಹತ್ತಿರ  ದಿನಾಂಕ: 8/11/2012 ರಾತ್ರಿ 10.30 ಗಂಟೆ ಸುಮಾರಿಗೆ ಹೋಗುವಾಗ ಹಿಂದುಗಡೆಯಿಂದ 4 ಮೋಟಾರ ಬೈಕ ಮೇಲೆ 7-8 ಜನರು ಬಂದು ಟ್ಯಾಂಕರ ಎದರುಗಡೆ ಬಂದು ಟ್ಯಾಂಕರ ತಡೆದು ಹೆದರಿಸಿ ಮಚ್ಚು ತೊರಿಸಿ ಕೈಯಿಂದ ಹೊಡೆದು ಒಂದು ಖಾಕಿ ಕಲರ ಬ್ಯಾಗಿನಲ್ಲಿದ್ದ 1,85,500/-ರೂ ಹಣ, 3 ಮೊಬೈಲ ಸೆಟಗಳು ಅ.ಕಿ.3700/- , ಒಂದು  ಕ್ಯಾಲಕುಲೇಟರ ಅ.ಕಿ. 80/-  ಒಂದು ಚಸಮಾ ಅ.ಕಿ. 400/- ರೂ ನೇದ್ದವುಗಳನ್ನು  ಹೀಗೆ ಒಟ್ಟು 1,89,680/- ರೂ. ನೇದ್ದವುಗಳನ್ನು ದರೂಡೆ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 147/2012 ಕಲಂ: 395 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
                   ಸದರಿ ಕೇಸಿನ ತನಿಖೆಯನ್ನು ಮುಂದುರೆಸಿದಂತೆ, ಇಂದು ದಿನಾಂಕ: 15/11/2012 ರಂದು  ಆರೋಪಿತರಾದ 1. ಕೃಷ್ಟಾ ತಂದೆ ಗೊವಿಂದ ದಾಸರಪ್ಪಾ ವ:22 ವರ್ಷ ಜಾ: ಗೊಲ್ಲೂರ ಸಾ: ಗೊಲ್ಲುರ ಓಣಿ ಗುಲ್ಬರ್ಗಾ 2. ರಾಜು ತಂದೆ ಬಾಪುರಾವ ಧನೇಕರ್ ವ:28 ಜಾ: ಹರಿಜನ ಉ: ಲಾರಿ ಕ್ಲೀನರ್ ಕೆಲಸ ಸಾ: ಪ್ರಗತಿ ಕಾಲೋನಿ ಗುಲ್ಬರ್ಗಾ 3. ರಾಹುಲ ತಂದೆ ಶೆಂಕ್ರಪ್ಪಾ ಗದ್ದಿ ವ:23 ಜಾ: ಹರಿಜನ ಸಾ; ಗುಬ್ಬಿ ಕಾಲೋನಿ ಗುಲ್ಬರ್ಗಾ. 4. ವಿಶ್ವನಾಥ ತಂದೆ ಹುಲಗೇಪ್ಪಾ ದಿವಳಗುಡ್ಡ ವ: 22 ಜಾ: ಮಾದರ ಉ: ಗೌಂಡಿ ಕೆಲಸ ಸಾ: ಜೊಪಡಪಟ್ಟಿ ಗುಬ್ಬಿ ಕಾಲೋನಿ ಗುಲ್ಬರ್ಗಾ 5.ಕಪೀಲ ತಂದೆ ರಾಯಪ್ಪಾ ಶಿರಮನೂರ ವ: 22 ಜಾ: ಹರಿಜನ ಉ: ವೈನ್ಸಶಾಪನಲ್ಲಿ ಕೆಲಸ  ಸಾ: ಗುಬ್ಬಿ ಕಾಲೋನಿ ಗುಲ್ಬರ್ಗಾ ಇವರನ್ನು ಇಂದು ದಿನಾಂಕ: 15/11/2012 ರಂದು ಬೆಳ್ಳಿಗ್ಗೆ 5 ಗಂಟೆಗೆ ದೇವನ ತೇಗನೂರ ದಾಟಿ 1 ಕಿ.ಮಿ. ಮೇಲೆ ರೋಡಿನ ಮೇಲೆ ಹೀರೊ ಹುಂಡಾ ಪ್ಯಾಶನ ಪ್ಲಸ್ ನಂಬರ: ಕೆಎ-02/ಇಎಫ್- 1047 ಮತ್ತು ಬಜಾಜ ಪ್ಲಾಟಿನಾ ನಂಬರ: ಕೆ.ಎ-36/ಕ್ಯೂ-7355 ನೇದ್ದರ ಮೇಲೆ  ಶಹಾಬಾದ ಕಡೆಗೆ ಬರುವಾಗ ನಮ್ಮನ್ನು ನೋಡಿ ವಾಪಸ್ಸು ಗುಲ್ಬರ್ಗಾ ಕಡೆಗೆ  ಹೋಗುವಾಗ ಹಿಡಿದು ವಿಚಾರಣೆ ಮಾಡಿದ್ದು ತಮ್ಮ ತಮ್ಮ ಹೆಸರು ಮೇಲಿನಂತೆ ಹೇಳಿದ್ದು ಅಲ್ಲದೇ ದಿನಾಂಕ: 8/11/2012 ರಂದು ರಾತ್ರಿ 10.30 ಗಂಟೆಗೆ ಟ್ಯಾಂಕರ್ ನಂ: ಎಮ್.ಎಚ್. 11/ಎಮ್-3991 ನೇದ್ದನ್ನು ಗೊವಿಂದ ಶಿವರಾಲ್ ಮತ್ತು ಸಂಗಡ 4 ಜನರು ಕೂಡಿ ಕ್ಲೀನರ್ ರಾಜು ಸಲಹೆಯಂತೆ ತಡೆದು ನಿಲ್ಲಿಸಿ ಹಣ ಮತ್ತು ಮೊಬೈಲ ಕ್ಯಾಲೂಲೇಟರ್ ಒಂದು ಚಸ್ಮಾ ಹೀಗೆ ಒಟ್ಟು 1,89,680/- ರೂಪಾಯಿ ದರೊಡೆ ಮಾಡಿದ್ದು ಒಪ್ಪಿಕೊಂಡಿರುತ್ತಾರೆ. ಸದರಿಯವರಿಂದ ಎರಡು ಮೊ/ಸೈ ಗಳನ್ನು ಜಪ್ತಿ ಪಡಿಸಿಕೊಂಡಿದ್ದು ಮತ್ತು ಅವರಿಂದ 35,000/- ರೂಪಾಯಿ ನಗದು ಹಣ ಮತ್ತು ಒಂದು ಮಚ್ಚು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ.  

Gulbarga District Reported Crimes

ಅಪಘಾತ ಪ್ರಕರಣಗಳು :
ಸೇಡಂ ಠಾಣೆ :ಶ್ರೀ ಬಾಲಾಜಿ ತಂದೆ ರಾಹುಸಾಬ ಪವಾರ ಸಾ:ಝಾಕಾಪೂರ ತಾ:ಬಂದಾರ, ಜಿಲ್ಲಾ:ನಾಂದೇಡಮಹಾರಾಷ್ಟ್ರರಾಜ್ಯ ಇವರು ದಿ:15-11-2012 ರಂದು ಬೆಳಗ್ಗೆ 08-30 ಗಂಟೆ ಸುಮಾರಿಗೆ ನನ್ನ ಹೆಂಡತಿ ತಂಗಿಯ ಮಗಳಾದ ಕ್ರಶಾ ಇವಳಿಗೆ ಆರಾಮವಿಲ್ಲದ ಕಾರಣ ಗುಲಬರ್ಗಾದಲ್ಲಿಯ ಡಾ:ಮೋರೆ ಇವರ ಹತ್ತಿರ ಚಿಕಿತ್ಸೆ ಕುರಿತುನಾನು ಮತ್ತು ನನ್ನ ಹೆಂಡಗಿಯ ತಂಗಿಯ ಗಂಡನಾದ ಅನಿಲ್ ವಾಚಾನಿ  ಮತ್ತು ಇತನ ಅಕ್ಕಳ ಮಗಳಾದ ಹೀಮಾ ಎಲ್ಲರೂ ಕೂಡಿಕೊಂಡು ಟಾಟಾ ಸುಮೋ ನಂ-ಕೆ.ಎ.32.ಎಮ್.ಎ.1122 ನೇದ್ದರಲ್ಲಿ ಕುಳಿತುಕೊಂಡು ಸೇಡಂದಿಂದ ಗುಲಬರ್ಗಾಕ್ಕೆ ಹೋಗುವಾಗ ಟಾಟಾ ಸುಮೊವನ್ನು ಅನಿಲ್ ವಾಚಾನಿ ಇತನು ಚಲಾಯಿಸುತ್ತಿದ್ದನುಸೇಡಂ ದಿಂದ ಆರು ಕಿಲೋ ಮೀಟರ್ ದೂರ ಬಂದ ಬಳಿಕ ಶೆಟ್ಟಿ ಹೂಡಾ ದಾಟಿದಾನೇಶ್ವರಿ ಗುಡಿ ಹತ್ತಿರ ಹೋಗುವಾಗಅನೀಲ ಇತನು ಟಾಟಾ ಸುಮೋವನ್ನು ಅತೀವೇಗದಿಂದ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸುತ್ತಿದ್ದನು. ರೋಡಿನ ಮೇಲೆ ಒಮ್ಮೆಲೆ ಆಕಳು ಬಂದಿದ್ದರಿಂದ ಅನಿಲ್ ಈತನುಒಮ್ಮೆಲೆ ಬ್ರೇಕ ಹಾಕಿದಾಗ ನಿಯಂತ್ರಣ ತಪ್ಪಿ ಟಾಟಾ ಸುಮೊ ರೋಡಿನ ಪಕ್ಕಕ್ಕೆ ಪಲ್ಟಿಯಾಗಿ ಬಿತ್ತು. ಆಗ ಒಳಗಡೆ ಇದ್ದ ನಾವುಗಳು ಒಬ್ಬರ ಮೇಲೆ ಒಬ್ಬರು ಬಿದ್ದು ಟಾಟಾ ಸುಮೊದ ಒಳಗಡೆ ಸಿಕ್ಕಿ ಹಾಕಿಕೊಂಡೇವು. ನಂತರ ನಮಗೆ ನಮ್ಮ ಟಾಟಾ ಸುಮೊ ಚಾಲಕ ಹಾಗೂ ಇತರರು ಕೂಡಿಕೊಂಡು ಹೊರಗಡೆ ತೆಗೆದರು. ಇದರಿಂದ ನನಗೆ ಎಡಗಾಲಿನ ತೊಡೆಗೆ ಹಾಗೂ ಪಕ್ಕೆಲೆಬಿಗೆ ಭಾರಿ ಗುಪ್ತಗಾಯವಾಗಿಹೀಮಾ ಇವಳಿಗೆ ಎಡಗಣ್ಣಿನ ಹತ್ತಿರ ರಕ್ತಗಾಯವಾಗಿದ್ದು, ಕ್ರಶಾ ಇವಳಿಗೆ ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯವಾಗಿ ತಲೆ ಒಡೆದಿದ್ದು ಇರುತ್ತದೆ. ಅನೀಲ್ ಇತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದುನಂತರ ನಮಗೆ ಒಂದು ಕ್ರಶರ್ ಗಾಡಿಯಲ್ಲಿ ಹಾಕಿಕೊಂಡು ಉಪಚಾರ ಕುರಿತು ಸೇಡಂ ಸರಕಾರಿ ಆಸ್ಪತ್ರೆಗೆ ತಂದರುಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಸರಕಾರಿ ಅಂಬ್ಯೂಲೆನ್ಸದಲ್ಲಿ ಹಾಕಿಕೊಂಡು ಬಸವೇಶ್ವರ ಆಸ್ಪತ್ರೆ ಗುಲಬರ್ಗಾದಲ್ಲಿ ತಂದು ಸೇರಿಕೆ ಮಾಡಿರುತ್ತಾರೆ. ಇಲ್ಲಿ ಉಪಚಾರ ಪಡೆಯುವಾಗ ಕ್ರಶಾ ಇವಳ ತಲೆಗೆ ಭಾರಿ ರಕ್ತಗಾಯ ವಾಗಿದ್ದರಿಂದಉಪಚಾರ ಫಲಿಸದೇ ಮದ್ಯಾಹ್ನ ಮೃತಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆ ಗುನ್ನೆ ನಂ 229/2012 ಕಲಂ. 279337338304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.  
ಗ್ರಾಮೀಣ ಠಾಣೆ :ಶ್ರೀ ನಾಗಪ್ಪ ತಂದೆ ಶಿವಪ್ಪಾ ಮಡ್ಯಾರ ವ: 21 ವರ್ಷ ಸಾ: ಲಿಂಗಸೂರ ತಾ: ಲಿಂಗಸೂರ ಜಿಲ್ಲಾ : ರಾಯಚೂರ  ಮತ್ತು ಅವನ ಸ್ನೇಹಿತ ತಿಮ್ಮಣ್ಣ ದಾಂಡೇಕರ  ಇಬ್ಬರೂ ಕೂಡಿ ದಿನಾಂಕ 14-11-2012 ರಂದು ದಿಪಾವಳಿ ಹಬ್ಬದ ಸಲುವಾಗಿ ಊರಿಗೆ ಬರುವ ಕುರಿತು  ಲಾರಿಯಲ್ಲಿ ಪೂನಾದಲ್ಲಿ ಕುಳಿತುಕೊಂಡು ಗುಲ್ಬರ್ಗಾದ ಆಳಂದ ಚೆಕ್ಕಪೋಸ್ಟ್‌‌‌ಗೆ ಬಂದು  ಲಾರಿಯಿಂದ ಕೆಳಗೆ ಇಳಿದು ನಡೆದುಕೊಂಡು ಹುಮನಾಬಾದ ರಿಂಗ ರೋಡ ಕಡೆಗೆ ಹೊಗುವಾಗ ಆಳಂದ ಚೆಕ್ಕ ಪೋಸ್ಟ್‌‌‌  ಹತ್ತಿರ ಸ್ವಲ್ಪ ಮುಂದುಗಡೆ ಬೆಳ್ಳಿಗ್ಗೆ  ಗಂಟೆ ಸುಮಾರಿಗೆ ಒಬ್ಬ ಆಟೋ ಚಾಲಕನು ತನ್ನ ಆಟೋವನ್ನು ಅತೀ ವೇಗದಿಂದ  ಮತ್ತು  ಅಲಕ್ಷತನ ದಿಂದ  ನಡೆಸುತ್ತಾ ಯಾವುದೇ ಹಾರ್ನ ವಗೈರೆ ಹಾಕದೆ ಚಲಾಯಿಸಿಕೊಂಡು ಬಂದವನೆ ನಡೆದುಕೊಂಡು ಹೋಗು ತ್ತಿದ್ದ ನನಗೆ ಜೋರಾಗಿ  ಡಿಕ್ಕಿ ಕೊಟ್ಟು ತನ್ನ ಆಟೋವನ್ನು  ನಿಲ್ಲಿಸದೇ ಹಾಗೇಯೇ  ಓಡಿಸಿಕೊಂಡು  ಹೋಗಿದ್ದು ಇದರಿಂದ ನನಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆ ಗುನ್ನೆ ನಂ 367/12 ಕಲಂ 279 337 ಐಪಿಸಿ ಸಂ/ 187 ಐಎಂವಿ ಎಕ್ಟ್‌‌ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಗ್ರಾಮೀಣ ಠಾಣೆ : ಶ್ರೀ ಸೂರ್ಯಕಾಂತ ತಂದೆ ಶ್ರೀಮಂತ ತಳಕೇರಿ ವ:26 ವರ್ಷ ಸಾ: ಆಶ್ರಯ ಕಾಲನಿ ಫೀಲ್ಟರ ಬೇಡ ಗುಲಬರ್ಗಾ ರವರು ದಿನಾಂಕ 15-11-12 ರಂದು ಮಾಣಿಕ ಪರಿಚಯದವರು ಕಮಲಾಪುರದಲ್ಲಿ ಸತ್ತಿದ್ದರಿಂದ ಮಣ್ಣಿಗೆ ಸಿದ್ದಾರೂಢನ ಹಿರೋ ಹೊಂಡಾ ಸಿಡಿ 100 ಕೆಎ 32 ಕೆ 2421 ನೇದ್ದರ ಮೇಲೆ ಕುಳಿತುಕೊಂಡು ಕಮಲಾಪೂರಕ್ಕೆ ಹೊರಟಿದ್ದು. ಮೋಟಾರ ಸೈಕಲ ಮಾಣಿಕ ನಡೆಸುತ್ತಿದ್ದು ಮಧ್ಯದಲ್ಲಿ ಕುಳಿತಿದಿದ್ದು, ಹಿಂದೆ ಸಿದ್ದಾರೂಢ ಇತನು ಕುಳಿತಿದಿದ್ದು,  ಉಪಳಾಂವ ಕ್ರಾಸ ದಾಟಿ ಬಿರಾದಾರ  ಪೆಟ್ರೋಲ ಪಂಪಿಗೆ ಹೋಗಿ  ಪೆಟ್ರೋಲ ಹಾಕಿಸಿಕೊಂಡು ಕಮಲಾಪೂರಕ್ಕೆ ಹೋಗಬೇಕೆಂದು ರೋಡ ಕ್ರಾಸ ಮಾಡುತ್ತಿದ್ದಾಗ ಅದೇ ಸಮಯಕ್ಕೆ ಹುಮನಾಬಾದ ರೋಡ  ಕಡೆಯಿಂದ ಒಬ್ಬ ಕ್ರರ್ಜುರ ಕೆಎ 32 ಬಿ 5390 ಚಾಲಕ ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಯಾವುದೇ ಮನ್ಸೂಚನೇ ನೀಡದೆ ಮತ್ತು ಹಾರ್ನ ಹಾಕದೇ ವೇಗದಿಂದ ನಡೆಸುತ್ತಾ ಬಂದವನೇ ರೋಡ ಕ್ರಾಸ ಮಾಡುತ್ತಿದ್ದ  ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದು ಸ್ಥಳದಲ್ಲಿ ಕ್ರೋಜರ ನಿಲ್ಲಿಸಿ, ಓಡಿ ಹೋಗಿದ್ದು,  ಮಾಣಿಕ ಮತ್ತು ಸಿದ್ದಾರೂಢ ಇವರಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮಿಣ ಠಾಣೆ ಗುನ್ನೆ 368/2012 ಕಲಂ 337,279,304 ಎ ಐಪಿಸಿ ಸಂಗಡ 187 ಐಎಮ್ ವಿ  ಆ್ಯಕ್ಡ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಗ್ರಾಮೀಣ ಠಾಣೆ :ದಿ: 15-11-2012ರಂದು 6 ಪಿ.ಎಂ.ಕ್ಕೆಪಿ,ಎಸ್.ಐ. (ಕಾ&ಸೂ) ಮತ್ತು ಸಿಬ್ಬಂದಿಯವರು  ಬೇಲೂರ ಕ್ರಾಸ  ನಿಂತಿರುವಾಗ ಅದೇವೇಳೆಗೆ ಕ್ರೋಜರ ನಂ.ಕೆ.ಎ.36-5042 ನೆದ್ದರ ಚಾಲಕ ಆಪಾದಿತ ಶಾಂತಕುಮಾರ ಶಟಗಾರ ಇತನು ತನ್ನ ಕ್ರೋಜರ ವಾಹನದ ಟಾಪ ಮೇಲೆ ಮತ್ತು ಫೂಟ ರೆಸ್ಟ ಮೇಲೆ ಪ್ರಯಾಣಿಕರನ್ನು  ಕೂಡಿಸಿಕೊಂಡು ಅತೀವೇಗ ಮತ್ತು ಮಾನವ ಜೀವಕ್ಕೆ ಅಪಾಯ ವಾಗುವ ರೀತಿಯಲ್ಲಿ   ನಿಸ್ಕಾಳಜಿತನದಿಂದ ನಡೆಯಿಸಿ ಕೊಂಡು ಪರವಾನಿಗೆ ನಿಯಮ ಉಲ್ಲಂ ಘಿಸಿ ಹೋಗುತ್ತಿರುವಾಗ ನಿಲ್ಲಿಸಿ  ಸದರಿ ಆಪಾದಿತನ ಮೇಲೆ  ಗ್ರಾಮೀಣ ಠಾಣೆ ಗುನ್ನೆ ನಂ 369/12 ಕಲಂ 279,336 ಐಪಿಸಿ.  ಸಂಗಡ 192 (ಎ) ಐಎಂವಿ ಅ್ಯಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.  
ಗ್ರಾಮೀಣ ಠಾಣೆ :ದಿ: 15-11-2012 ರಂದು 8-00 ಪಿ.ಎಂ.ಕ್ಕೆ  ಪಿ,ಎಸ್.ಐ. (ಕಾ&ಸೂ) ಮತ್ತು ಸಿಬ್ಬಂದಿಯವರು  ಕಪನೂರ ಕ್ರಾಸ ಹತ್ತಿರ  ನಿಂತಿರುವಾಗ ಅದೇವೇಳೆಗೆ ಕ್ರೋಜರ ನಂ.ಕೆ.ಎ.28-ಎ 0163 ನೆದ್ದರ ಚಾಲಕ ಆಪಾದಿತ ಶಾಂತು ಧನವಂತ್ರಿ  ಇತನು ತನ್ನ ಕ್ರೋಜರ ವಾಹನದ ಟಾಪ ಮೇಲೆ ಮತ್ತು ಫೂಟ ರೆಸ್ಟ ಮೇಲೆ  ಪ್ರಯಾಣಿಕರನ್ನು  ಕೂಡಿಸಿಕೊಂಡು ಅತೀವೇಗ ಮತ್ತು ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ   ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಪರವಾನಿಗೆ ನಿಯಮ ಉಲ್ಲಂಘಿಸಿ ಹೋಗುತ್ತಿರುವಾಗ ನಿಲ್ಲಿಸಿ  ಸದರಿ ಆಪಾದಿತನ ಮೇಲೆ ಗ್ರಾಮೀಣ ಠಾಣೆ ಗುನ್ನೆ ನಂ 370/12 ಕಲಂ 279,336 ಐಪಿಸಿ.  ಸಂಗಡ 192 (ಎ) ಐಎಂವಿ ಎಕ್ಟ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.  
ವಂಚನೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ :ದಿನಾಂಕಃ 02/11/2012 ರಂದು 07:00 ಪಿ.ಎಮ ಕ್ಕೆ ಫಿರ್ಯಾದಿ ಶ್ರೀ ಪೃತ್ವಿರಾಜ ತಂದೆ ಶಿವರಾಯ ಜವಳಗಿ ವಯಃ 41 ವರ್ಷ ಸಾಃ ಲೇಂಗಟಿ ಗ್ರಾಮ ತಾಃ ಆಳಂದ ಜಿಃ ಗುಲಬರ್ಗಾ ಇವರು ಮತ್ತು ಇತರರಿಗೆ 1) ಸುರೇಶ ತಂದೆ ಮನ್ನು ರಾಠೊಡ ವಃ 30 ವರ್ಷ ಜಾಃ ಲಮಾಣಿ ಸಾಃ ಹೋದ್ಲೂರ  ತಾಂಡಾ ತಾಃ ಆಳಂದ ಜಿಃ ಗುಲಬರ್ಗಾ 2)ಮಹ್ಮದ ಅಲಿ @ ಮಾಮು @ ಮಹ್ಮದ ತಂದೆ ನೂರ ಭಾಯಿ ಪಲಾಸರಾ ವಃ 62 ವರ್ಷ ಉಃ ವ್ಯಾಪಾರ ಸಾಃ ಮನೆ ನಂ 8- 4 ನೇ ಕ್ರಾಸ ನಂಜಪ್ಪಾ ಸರ್ಕಲ್ ಶಾಂತಿ ನಗರ ಬೆಂಗಳೂರ ಹಾವಃ ಗುಜರಾತ್,3) ಮೋಯಿಸ್ ಅಲಿ ತಂದೆ ಮಹ್ಮದ ಅಲಿ @ ಮಾಮು @ ಮಹ್ಮದ ಪಲಾಸರಾ ವಃ 27  ವರ್ಷ ಜಾಃ ಮುಸ್ಲಿಂ ಉಃ ಮೊಬೈಲ್  ರಿಪೇರಿ  ಸಾಃ ಮನೆ ನಂ 8- 4 ನೇ ಕ್ರಾಸ  ನಂಜಪ್ಪಾ ಸರ್ಕಲ್ ಶಾಂತಿ ನಗರ ಬೆಂಗಳೂರ, 4) ಇರ್ಫಾನ ಅಲಿ ತಂದೆ ಮಹ್ಮದ ಅಲಿ @ ಮಾಲು @ ಮಹ್ಮದ ಪಲಾಸರಾ  ಸಾಃ ಮನೆ  8- 4 ನೇ ಕ್ರಾಸ ನಂಜಪ್ಪಾ ಸರ್ಕಲ್ ಶಾಂತಿ ನಗರ ಬೆಂಗಳೂರ  ಇವರು ಫಿರ್ಯಾದಿದಾರರಿಗೆ ಮತ್ತು ಅವರ ಗ್ರಾಮದವರಿಗೆ ಹೀಗೆ ಒಟ್ಟು 12 ಜನರಿಗೆ ಹೊರದೇಶಕ್ಕೆ ಅಂದರೆ ಮಲೇಶಿಯಾಕ್ಕೆ ಕಳುಹಿಸುತ್ತೇವೆ ಅಂತಾ ನಂಬಿಸಿ ಸುಳ್ಳು ದಾಖಲಾತಿ ಸೃಷ್ಟಿಸಿ ಪ್ರತಿಯೊಬ್ಬರಿಂದ 55,000/- ರೂ. ನಂತೆ ಒಟ್ಟು  6,60,000/- ರೂ ಮೋಸದಿಂದ ಹಣ ತೆಗೆದುಕೊಂಡು ಮಲೇಶಿಯಾ ದೇಶಕ್ಕೆ ಕೆಲಸಕ್ಕೆ ಕಳುಹಿಸುತ್ತೇವೆ ಅಂತಾ ಹೇಳಿ ಮೋಸ ಮಾಡಿರುತ್ತಾರೆ ಸದರಿಯವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಠಾಣಾ ಗುನ್ನಾ ನಂ 116/2012 ಕಲಂ 406, 417, 420, 468, 471 ಸಂ. 34 ಐಪಿಸಿ ಪ್ರಕಾರ ಪ್ರಕರಣ  ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಇಸ್ಪೀಟ ಜುಜಾಟದ ಪ್ರಕರಣಗಳು :
ಶಾಹಾಬಾದ ನಗರ ಠಾಣೆ :ಶ್ರೀ ಎಸ್‌.ಎಸ್‌.ಹುಲ್ಲೂರ ಪಿಐ ಡಿಸಿಐಬಿ ಗುಲಬರ್ಗಾ ಮತ್ತು ಸಿಬ್ಬಂದಿಯವರು ಕುಡಿಕೊಂಡು ದಿನಾಂಕ:14/11/2012 ರಂದು 7.00 ಪಿಎಂಕ್ಕೆ ಶಹಾಬಾದದ ಶ್ರೀ ಗುರು ಏಜನ್ಸಿ ಎದರುಗಡೆ ಖುಲ್ಲಾ ಜಾಗೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಣಪತಿ ತಂದೆ ಮೇಲಗೀರಿ ಪವಾರ ಸಂ:4 ಜನರು ಸಾ:ಎಲ್ಲರೂ ಶಹಾಬಾದ ಇವರು ಅಂದರ-ಬಾಹರ ಎಂಬ ಇಸ್ಪೀಟ ಜೂಜಾಟದಲ್ಲಿ ತೊಡಗಿದವರನ್ನು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವರಿಂದ 23030/-ರೂ ನೇದ್ದನ್ನು ಹಣ ಮತ್ತು 52 ಇಸ್ಪೀಟ ಎಲೆಗಳು ಜಪ್ತಿಪಡಿಸಿಕೊಂಡಿದ್ದರ ಪಂಚನಾಮೆ ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯ ಗುನ್ನೆ ನಂ 150/2012 ಕಲಂ:87 ಕೆ.ಪಿ ಆಕ್ಟ್‌‌ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಶಾಹಾಬಾದ ನಗರ ಠಾಣೆ :ಶ್ರೀ ಎಸ್‌.ಎಸ್‌.ಹುಲ್ಲೂರ ಪಿಐ ಡಿಸಿಐಬಿ ಗುಲಬರ್ಗಾ ರವರು ಮತ್ತು ಸಿಬ್ಬಂದಿಯವರು ಕುಡಿಕೊಂಡು ಶಹಾಬಾದದ ಶ್ರೀ ರಾಜು ಮೇಸ್ತ್ರೀರವರ ಮನೆಯ  ಎದರುಗಡೆ ಖುಲ್ಲಾ ಜಾಗೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಂದರ-ಬಾಹರ ಎಂಬ ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದ  ಹೊನ್ನಪ್ಪಾ  ತಂದೆ ಮರೇಪ್ಪಾ ತೆಗನೂರ  ಸಂ:6 ಜನರು ಸಾ:ಎಲ್ಲರೂ ಶಹಾಬಾದ  ಇವರನ್ನು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಅದರಲ್ಲಿ ಒಬ್ಬನು ಓಡಿ ಹೋಗಿದ್ದು  ಸದರಿಯವರಿಂದ 2450/-ರೂ  ಹಣ ಮತ್ತು 52 ಇಸ್ಪೀಟ ಎಲೆಗಳು ಜಪ್ತಿಪಡಿಸಿಕೊಂಡಿದ್ದರ ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆ ಗುನ್ನೆ ನಂಬರ 151/2012 ಕಲಂ:87 ಕೆ.ಪಿ ಆಕ್ಟ್‌‌ ಪ್ರಕಾರ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.