POLICE BHAVAN KALABURAGI

POLICE BHAVAN KALABURAGI

19 May 2017

KALABURAGI DISTRICT REPORTED CRIMES

ವರದಕ್ಷಿಣೆ ಕಿರುಕುಳ ಪ್ರಕರಣ:
ಶಹಾಬಾದ ನಗರ ಠಾಣೆ: ದಿನಾಂಕ: 18/05/2017 ರಂದು ಶ್ರಿಮತಿ ಸೈಯದಾ ಮತಿನ ಬೇಗಂ ಗಂಡ ಸೈಯದ ಅಹ್ಮೆದ ಸಾ: ಶಹಾಬಾದ ಇವರು ಠಾಣೆಗೆ ಹಾಜರಾಗಿ ತಂಗಿಯಾದ ರುಬೀನಾ ಬೇಗಂ ಇವಳಿಗೆ 02 ವರ್ಷಗಳ ಹಿಂದೆ ಸೈಯದ ನಜಮುಲ್ಲಾ ಹಸನ ಸಾ: ಉಮರ ಫಾರೂಕ ಕಾಲೋನಿ ಶಹಾಬಾದ ಇತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಮದುವೆ ಕಾಲಕ್ಕೆ 50 ಸಾವಿರ ರೂಪಾಯಿ ನಗದು 2 ತೊಲೆ ಬಂಗಾರ 3 ಜೊತೆ ಕಿವಿಯೋಲೆ ಮತ್ತು ಇತರೆ ಗೃಹ ಉಪಯೋಗಿ ವಸ್ತುಗಳು ಕೊಟ್ಟು ಮದುವೆ ಮಾಡಿಕೊಟ್ಟಿದ್ದು ಮದುವೆಯಾದ ಸ್ವಲ್ಪ ದಿವಸಗಳು ಗಂಡನ ಮನೆಯವರು ತಂಗಿಗೆ ಸರಿಯಾಗಿ ನೋಡಿಕೊಂಡು ನಂತರ ದಿನಗಳಲ್ಲಿ ತಂಗಿಯ ಗಂಡನಾದ ಸೈಯದ ನಜಮುಲ್ಲಾ ಹಸನ ಇತನು ಹೊರದೇಶ ಸೌದಿಗೆ ಹೋಗಿದ್ದು  ನಂತರ ತಂಗಿಯ ಗಂಡ ಮತ್ತು ಭಾವನಾದ ಸೈಯದ ಆಸೀಪ ಜಾನಿ , ನೆಗೆಣಿ ರೈಸ ಬೇಗಂ , ಅತ್ತೆಯಾದ ಸೈಯದಾ ಅಫಜಲಬಾನು , ಹಾಗೂ ನಾಂದಿನಿ ರಫಾದ ಜಹಾ ಇವರೆಲ್ಲಾರೂ ಕೂಡಿ ತಂಗಿಗೆ  ಅವಾಚ್ಯವಾಗಿ ಬೈದು ನಿಮ್ಮ ತವರು ಮನೆಯಿಂದ ಇನ್ನೂ  ಲಕ್ಷ ರೂ ಹಣ ತಂದು ಕೊಡಬೇಕು ಇಲ್ಲದಿದ್ದರೆ ನಮ್ಮ ಮನೆಯಲ್ಲಿ ಇರಬೇಡ ಅಂತಾ  ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದರಿಂದ  ನನ್ನ ತಂಗಿಯು ತವರು ಮನೆಯಲ್ಲಿ ಬಂದು ವಾಸವಾಗಿದ್ದು   ದಿನಾಂಕ: 18/05/2017 ರಂದು ನನ್ನ ತಂಗಿ ರುಬಿನಾ ಬೇಗಂ ತವರು ಮನೆಯಿಂದ ಗಂಡನ ಮನೆಗೆ ಹೋಗಿದ್ದಳು  ನನ್ನ ತಂಗಿಯ ಗಂಡನ ಮತ್ತು ಭಾವ ಅತ್ತೆ ನಾಂದಿನಿ ಮತ್ತು ನೆಗಣಿಯವರ ಮಾನಸಿಕ ಮತ್ತು ದೈಹಿಕ ಕಿರುಕುಳ ತಾಳಲಾರದೆ ನನ್ನ ತಂಗಿಯು ಅವರ ಮನೆಯಲ್ಲಿ ಪ್ಯಾನಿಗೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ  ಕಾರಣ ಅವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಅಂತಾ ಇದ್ದ ಹೇಳಿಕೆ ಪಿರ್ಯಾದಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂಬರ 85/2017 ಕಲಂ 498 (ಎ) 504 , 306  ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು
ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ ಕಲಬುರಗಿ:    ದಿನಾಂಕ. 17-5-2017 ರಂದು ಶ್ರೀಮತಿ ಮಮತಾ ಗಂಡ ಕಾಶೀನಾಥ ಗೋಳಾ ವಿಳಾಸ; ಕೆರಿಬೋಸಗಾ ಇವರು ಠಾಣೆಗೆ ಹಾಜರಾಗಿ ದಿನಾಂಕ.10-5-2017 ರಂದು ತನ್ನ ಗಂಡ ಕಾಶೀನಾಥ ತಂದೆ ಕುಮಾರ ಗೋಳ್ಯಾ ಇವರು ಕೂಲಿಕೆಲಸಕೆಂದು ತನ್ನ ಹೀರೋ ಹೊಂಡಾ.ಕೆ.ಎ.32.ಇಬಿ-2703 ಇದರ ಮೇಲೆ ಒಬ್ಬನೆ ಹೋಗಿದ್ದು  ಮರಳಿ ಬರುವಾಗ ನನ್ನ ಗಂಡ ಕಾಶೀನಾಥ ಗೋಳ್ಯಾ ಇವರು ಶಾರದಾಬಾಯಿ ತಳಕೇರಿ ಇವರ ಮನೆಯ ಎದರುಗಡೆ ತನ್ನ ಮೋಟಾರ ಸೈಕಲ್ ಸ್ಕಿಡಾಗಿ ಬಿದ್ದು ತೆಲೆಯ ಹಿಂದುಗಡೆ ಭಾರಿ ರಕ್ತಗಾಯ, ಹಾಗೂ ಬಲಕಿವಿಯಿಂದ ರಕ್ತಸ್ರಾವ ಆಗುತಿತ್ತು ಹಾಗೂ ತರಚಿದ ಗಾಯಗಳಾಗಿರುತ್ತವೆ. ಉಪಚಾರ ಕುರಿತು ಕಲಬುರಗಿ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿ  ನಂತರ ಹೆಚ್ಚಿನ ಉಪಚಾರ ಕುರಿತು ಸೋಲಾಪೂರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ಡಿಸಚಾರ್ಜ ಮಾಡಿಕೊಂಡು ಇಂದು ದಿನಾಂಕ.17-5-2017 ರಂದು ಸೋಲಾಪೂರದಿಂದ ಕೆರಿಬೋಸಗಾಕ್ಕೆ ಕರೆದುಕೊಂಡು ಬರುತ್ತಿರುವಾಗ ಮದ್ಯಾ ಮಾರ್ಗದಲ್ಲಿ ಮೃತ ಪಟ್ಟಿರುತ್ತಾನೆ.

            ಆದುದರಿಂದ ನನ್ನ ಗಂಡ ಕಾಶಿನಾಥ ತಂದೆ ಕುಮಾರ ಗೋಳ್ಯಾ ಸಾ; ಕೆರಿಬೋಸಗಾ ತನ್ನ ಮೋಟಾರ ಸೈಕಲನ್ನು ಬಹಳ ವೇಗವಾಗಿ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿದ್ದರಿಂದ ಈ ಘಟನೆ ಸಂಭವಿಸಿರುತ್ತದೆ. ಸದರಿ ಅಪಘಾತದಿಂದ ಆದ ಗಾಯಗಳಿಂದ ಸಾವು ಸಂಭವಿಸಿರುತ್ತದೆ, ಕಾರಣ ಮುಂದಿನ ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.