POLICE BHAVAN KALABURAGI

POLICE BHAVAN KALABURAGI

11 November 2014

Kalaburagi District Reported Crimes

ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣ  :
ನರೋಣಾ ಠಾಣೆ :  ಕುಮಾರಿ ಇವಳು 5 ನೇ ತರಗತಿಯಲ್ಲಿ ವಿದ್ಯಾಭಾಸ ಮಾಡುತ್ತಿದ್ದು 10 ವರ್ಷದೊಳಗಿರುತ್ತಾಳೆ, ದಿನಾಂಕ 10/11/2014 ರಂದು ತನ್ನ ತಮ್ಮನ ಜೋತೆ ತನ್ನ ಅಮ್ಮನನ್ನು ನೋಡಲು ಬಾಬು ಹಿರೆಂ ಶೆಟ್ಟಿಯವರ ಹೊಲದ ಪಕ್ಕದ ರಸ್ತೆಯಿಂದ ಗುಡ್ಡದ ಕಡೆ ಕಾಲನಡಿಗೆಯಿಂದ ಚಿನ್ನುವಾರ ನಾಲಾದ ಫೂಲ್ ಹತ್ತಿರ ರಸ್ತೆಯ ಮೇಲಿಂದ ಸಂಜೆ 05.00 ಗಂಟೆಯ ಸುಮಾರಿಗೆ ಹೋಗುತ್ತಿರುವಾಗ ಹಿಂದುಗಡೆಯಿಂದ ಒಬ್ಬ ಅಪರಿಚಿತ ವ್ಯಕ್ತಿಯು ಮೋಟಾರ ಸೈಕಲನ್ನು ತಳ್ಳಿಕೊಂಡು ಹಿಂದುಗಡೆಯಿಂದ ಬಂದು ತಮ್ಮ ಹಾಗೂ ಅಕ್ಕಳಿಗೆ  ತಡೆದು ನಿಲ್ಲಿಸಿ ಅವನ ಮೋಟಾರ ಸೈಕಲನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ತನ್ನ ಕೈಯಲ್ಲಿದ್ದ ಚಾಕುವನ್ನು ತೋರಿಸಿ ಬಾಯಿ ಒತ್ತಿ ಹಿಡಿದು ಅವಳನ್ನು ಎತ್ತಿಕೊಂಡು ನಾಲಾದಲ್ಲಿ ತೆಗೆದುಕೊಂಡು ಹೋಗಿ ಅವಳನ್ನು ಕೆಳಗೆ ಹಾಕಿ ಅವಳ ಮೈ ಮೇಲಿನ ಬಟ್ಟೆ ತೆಗೆದು ನಂತರ ಅವನ ಪ್ಯಾಂಟ ಹಾಗೂ ಚಡ್ಡಿ ಕಳೆದು ಒತ್ತಾಯಪೂರ್ವಕವಾಗಿ ಅವಳ ಮೇಲೆ ಬಿದ್ದು ಸಂಭೋಗ ಮಾಡುತ್ತಿರುವಾಗ ನನ್ನ ಅಕ್ಕ ಮತ್ತು ನಾನು ಒಂದೆ ಸಮನೆ ಚೀರಾಡುತ್ತಿರುವಾಗ ಹೊಲದಿಂದ ಊರ ಕಡೆಗೆ ಬರುತ್ತಿರುವ ಹೆಣ್ಣು ಮಕ್ಕಳು ಹೋಗಿ ಬಿಡಿಸುವಷ್ಟರಲ್ಲಿ ಆ ವ್ಯಕ್ತಿಯು ಆತನ ಮೋಟಾರ ಸೈಕಲನ್ನು ಅಲ್ಲೆ ಬಿಟ್ಟು ನಲವೇರಿ ಓಡಿ ಹೋಗಿರುತ್ತಾನೆ ಆ  ವ್ಯಕ್ತಿಯು ಸುಮಾರು 21 ರಿಂದ 26 ವರ್ಷದವನಿದ್ದು ತೆಳುವಾದ ಮೈಕಟ್ಟು ಹೊಂದಿದ್ದು ಸಾದಾಗಪ್ಪು ಬಣ್ಣ ಉಳ್ಳವನಾಗಿರುತ್ತಾನೆ ಅವನು ತಂದಿರುವ ಮೋಟಾರ ಸೈಕಲ್ ನಂ ಎಪಿ 28 ಸಿ 3216 (ಟಿವಿಎಸ್ ಕಂಪನಿ) ಅಂತಾ ಗೊತ್ತಾಯಿತು, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ :  ದಿನಾಂಕ 11-11-2014 ರಂದು ಘತ್ತರಗಾ ಗ್ರಾಮದ ಅಂಬೆಡ್ಕರ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಮಹೇಶ ತಂದೆ ವಸಂತ್ರಾವ ಕುಲಕರ್ಣಿ ಸಾ||ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1160/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

Kalaburgi District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ 07-11-2014 ರಂದು ಠಾಣಾ ವ್ಯಾಪ್ತಿಯಲ್ಲಿಯ ತಿಮ್ಮಾಪೂರ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬನು ಮಟಕಾ ಜೂಜಾಟ ಬರೆದುಕೊಳ್ಳತ್ತಿದ್ದಾನೆ ಅಂತಾ ಖಚಿತ ಬಾತ್ಮೀ ಬಂದದ ಮೇರೆಗೆ  ಶ್ರೀ ಎಸ್.ಎಸ್ ದೊಡ್ಡಮನಿ ಪಿ.ಎಸ್.ಐ(ಕಾಸು) ಸ್ಟೇಷನ ಬಜಾರ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಪಿ.ಐ. ಸ್ಟೇಷನ ಬಜಾರ  ರವರ ಮಾರ್ಗದರ್ಶನದಲ್ಲಿ ತಿಮ್ಮಾಪೂರ ಸರ್ಕಲ ಹತ್ತಿರ ಹೋಗಿ ದೂರದಿಂದ ನೋಡಲು  ಒಬ್ಬ ವ್ಯಕ್ತಿ ಹೋಗಿ ಬರುವ ಜನರ ಹತ್ತಿರ ಹೋಗಿ ಮಟಕಾ ನಂಬರ ಬರೆಸುವಂತೆ ಮತ್ತು 1 ರೂಪಾಯಿಗೆ 80 ರೂಪಾಯಿ ಸಿಗುತ್ತವೆ ಅಂತಾ ಹೇಳಿ ಬಾಂಬೇ ಮಟಕಾ ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಖಾತ್ರಿ ಪಡಿಸಿಕೊಂಡು ದಾಳಿ ಮಾಡಿ ಮಟಕಾ ಜೂಜಾಟದಲ್ಲಿ ತೋಡಗಿದ ಆಸಾಮಿಯನ್ನು ಹಿಡಿದುಕೊಂಡು ವಿಚಾರಿಸಲು ಅವನು ತನ್ನ ಹೆಸರು ಮಹ್ಮದ ನಸೀರ ತಂದೆ ಮಹ್ಮದ ಮೌಲಾಸಾಬ ಸಾ|| ಸ್ಟೇಷನ ಏರಿಯಾ ಓನವೇ ಕಲಬುರಗಿ  ಅಂತಾ ಹೇಳಿದ್ದು ಇವನನ್ನು ಹಿಡಿದು ಅವನಿಂದ ನಗದು ಹಣ 1850/-  ರೂಪಾಯಿ ಮತ್ತು ಒಂದು ಬಾಲ ಪೆನ್ನು. ಹಾಗು ಒಂದು ಮಟಕಾ ಬರೆದ ಚೀಟಿ ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ಸ್ಟೇಷನ ಬಜಾರ ಠಾಣೆಗೆ ಬಂದು ಪ್ರಕಣ ದಾಖಲಿಸಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಶ್ರೀಕಾಂತ ತಂದೆ ವೈಜನಾಥ ಯಾದೊಲಿ ಸಾಃ ಇ/11/3509/2 ಮಾತಾ ಮಾಣಿಕೇಶ್ವರ ಕಾಲೋನಿ ಬ್ರಹ್ಮಪೂರ ಕಲಬುರಗಿ ರವರು ದಿನಾಂಕ  07-11-2014 ರಂದು ತನ್ನ ದ್ವಿಚಕ್ರ ವಾಹನ ಹಿರೋ ಸ್ಪ್ಲಂಡರ್‌ ಪ್ಲಸ್  ನಂ. ಕೆಎ 32 ಇಡಿ 9307 ನೇದ್ದು ಸರದಾರ ವಲ್ಲಾಭಾಯಿ ಪಟೇಲ ಸರ್ಕಲ ಹತ್ತಿರ ಇರುವ ಎಸ್.ಬಿ.ಹೆಚ್ ಬ್ಯಾಂಕ ಎದುರುಗಡೆ ನಿಲ್ಲುಗಡೆ ಮಾಡಿ ಬ್ಯಾಂಕಿನಲ್ಲಿ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಬಂದು ನೋಡಲಾಗಿ ನನ್ನ ದ್ವಿಚಕ್ವ ವಾಹನ ಇರಲಿಲ್ಲಾ ನನ್ನ ವಾಹನವನ್ನು ಹುಡುಕಾಡಿದರು ಸಿಕ್ಕಿರುವುದಿಲ್ಲಾ ಆದ್ದರಿಂದ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನನ್ನ ದ್ವಿಚಕ್ರ ವಾಹನ ಹಿರೋ ಸ್ಪ್ಲಂಡರ್‌ ಪ್ಲಸ್  ನಂ ಕೆಎ 32 ಇಡಿ 9307 ಚೆಸ್ಸಿ ನಂ. MBLHA10AMDHF17023, ಇಂಜಿನ್ ನಂ.HA10EJDHF28417 ಅ.ಕಿ 35,000/- ರೂ ನೇಧ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಪೀರಪಶಾ ತಂದೆ ಅಬ್ದುಲ್ ಮಜೀದ್ ಅಕ್ಕಲಕೋಟ  ಸಾ: ಮಂಗಲಬಜಾರ ರಂಗಂಪೇಟ ಸುರಪೂರ ಜಿ: ಯಾದಗಿರಿ ಇವರು ದಿನಾಂಕ: 15/10/2014 ರಂದು ಸಂಜೆ 6-30 ಗಂಟೆಗೆ ಎಮ್.ಹೆಚ್.-13 ಆರ್-3272 ನೇದ್ದನ್ನು ಮಿಜಬಾನಗರ ಕ್ರಾಸನ ಮದೀನಾ ಚಿಕನ್ ಸೆಂಟರ್ ಪಕ್ಕದಲ್ಲಿ ನಿಲ್ಲಿಸಿ  ಲಾಕ ಮಾಡಿಕೊಂಡು ಮನೆಗೆ ಹೋಗಿದ್ದು  ದಿನಾಂಕ 16-10-2014 ರಂದು ಬಂದು ನೋಡಲಾಗಿ ಲಾರಿ ಕಾಣಿಸಲಿಲ್ಲಾ ನಮ್ಮ ಲಾರಿ ನಂ ಎಮ್ ಹೆಚ್-13 ಆರ್-3277 ಅ.ಕಿ= 200000/-ರೂ ನೇದ್ದನ್ನು ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಲಾರಿ ಕಳ್ಳತನವಾದ  ವಿಷಯ  ಸಂಬಂಧಿಕರಿಗೆ  ಸ್ನೇಹಿತರಿಗೆ ತಿಳಿಸಿದ್ದು ನಾವೆಲ್ಲರೂ ಕೂಡಿಕೊಂಡು  ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಮಳಖೇಡ ಠಾಣೆ : ಶ್ರೀ ಮೋಹನ ತಂದೆ ಅಮೃತರಾವ ಚವ್ಹಾಣ ಸಾ: ಲಕ್ಷ್ಮಣ ನಾಯಕ ತಾಂಡಾ ಮಳಖೇಡ ತಾ: ಸೇಡಂ  ರವರ ತಂದೆಯವರಾದ ಮೃತ ಅಮೃತರಾವ ರವರು ದಿನಾಂಕ 09-11-2014 ರಂದು ಮುಂಜಾನೆ ಮನೆಯಿಂದ ಹುಡಾ(ಬಿ) ಗ್ರಾಮಕ್ಕೆಹೋಗಿ ಬರುವದಾಗಿ ಹೇಳಿಹೋಗಿದ್ದು  ಸುಮಾರು 11:15 ಎ.ಎಂಕ್ಕೆ ನನ್ನ ತಂದೆಯವರ ಪರಿಚಯದವರಾದ ಅಬ್ದುಲ್ ರಹೀಮ್ ಚಿಕನ್ ಸೆಂಟರ ರವರು ಮನೆಗೆ ಓಡುತ್ತ ಬಂದು ತಿಳಿಸಿದೆನೆಂದರೆ, ತಾನು ಇಂದು ದಿನಾಂಕ: 09-11-2014 ರಂದು 11:00 ಎ.ಎಂ ಸುಮಾರಿಗೆ ಸ್ಟೇಷನ ತಾಂಡಾ ಕ್ರಾಸನ ಸತ್ಯನ್ ಕಾಂಪಲೆಕ್ಸ ಎದರುಗಡೆ ಇದ್ದಾಗ ಮಳಖೇಡ ಗ್ರಾಮದ ಕಡೆಯಿಂದ ಆರ್.ಸಿ.ಎಫ ಲಾರಿ ಯಾರ್ಡ ಕಡೆಗೆ ಹೋಗುವ ಒಂದು ಲಾರಿ ನಂಬರ ಎಪಿ/29-ಟಿಸಿ-0597 ನೇದ್ದರ ಚಾಲಕನು ತನ್ನ ಲಾರಿಯನ್ನು ಅತಿ ವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಅದೇ ವೇಗದಲ್ಲಿ ಎಡತಿರುವಿನಲ್ಲಿ ಕಟ್ ಮಾಡಿದಾಗ ರೋಡಿನ ಎಡಗಡೆ ನಡೆದುಕೊಂಡು ಹೋಗುತ್ತಿದ್ದ ಅಮೃತರಾವ ಇವರ ಮೇಲೆ ಲಾರಿ ಹಾಯಿಸಿ ಅವರ ಮೇಲೆ ಹಾದುಹೊಗಿದ್ದರಿಂದ ಶರೀರ ಪೂರ್ತಿ ಚಪ್ಪಟೆಯಾಗಿ ಹೊಟ್ಟೆ ಹರಿದು, ಭಾರಿ ರಕ್ತಗಾಯದಿಂದ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ. ಲಾರಿ ಚಾಲಕನು ತನ್ನ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಕೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ಶ್ರೀ ಶರಣಪ್ಪ ತಂದೆ ಪರಶುರಾಮಪ್ಪ ನಾಯ್ಕಲ್ ಸಾ: ಗೋರೆ ಬಿಹಾಳ ತಾ: ಕುಷ್ಠಗಿ ಇವರು ದಿನಾಂಕ: 5-11-2014 ರಂದು ಮದ್ಯಾಹ್ನ ಸಮಯದಲ್ಲಿ ನಾನು ಮತ್ತು ನ್ನ ನ್ನ ಅಕ್ಕನ ಮಗ ಮಾಸನಗೌಡ ಇಬ್ಬರು ಶರಣಗೌಡ ತಂದೆ ಅಮರೆಗೌಡ ಪೊಲೀಸ್ ಪಾಟೀಲ ಸಾ: ವೆಂಟಗಿರಿ ಇವರ ನಂಬರ ಇಲ್ಲದ ಹೊಸ ಹೊಡಾ ಶೈನ್ ಮೊಟಾರ ಸೈಕಲ ಮೇಲೆ ಕುಳಿತು ಕೊಂಡು ಔರದ ತಾಲೂಕಿಗೆ ಹೋಗುತ್ತಿದ್ದೇವು. ಮೊಟಾರ ಸೈಕಲ ಶರಣಗೌಡ ಇತನು ನಡೆಯಿಸುತ್ತಿದ್ದನು ನಾನು ಮತ್ತು ನನ್ನ ಅಕ್ಕನ ಮಗ ಹಿಂದೆ ಕುಳಿತಿದ್ದೇವು. ಮದ್ಯಾಹ್ನ 2-00 ಗಂಟೆ ಸುಮಾರಿಗೆ ಜೇವರಗಿ ತಾಲೂಕಿನ ಮುದಬಾಳ (ಕೆ) ಕ್ರಾಸ ಸಮೀಪ ಬರುತ್ತಿದಂತೆ ಜೇವರಗಿ ಕಡೆಯಿಂದ ಒಂದು ಲಾರಿ ನಂ ಎ.ಪಿ-04, ಟಿ.ಯು-1359 ನೇದ್ದರ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಮೊಟಾರ ಸೈಕಲಕ್ಕೆ ಎದುರಾಗಿ ಡಿಕ್ಕಿ  ಪಡಿಸಿದ್ದು ಸದರ ಅಪಘಾತದಲ್ಲಿ ಎಲ್ಲರಿಗು ಭಾರಿ ಗಾಯಗಳಾಗಿದ್ದು ಅದರಲ್ಲಿ ನಮ್ಮ ಅಕ್ಕನ ಮಗ ಮಾಸನಗೌಡ ತಂದೆ ಭೀಮಪ್ಪ ಕಬ್ಬೇರ್  ಸಾ: ಗೊರೆ ಬಿಹಾಳ ತಾ: ಕುಷ್ಟಗಿ ಇವಿಗೆ ಭಾರಿ ಗಾಯಗಳಾಗಿ ಉಪಚಾರ ಹೊಂದುತ್ತಾ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಮಲಾಪೂರ ಠಾಣೆ : ಶ್ರೀ ಸದ್ದಾಂಹುಷೇನ ತಂದೆ ಖಾಸಿಂಸಾಬ ಸಾ:ಅಣಕಲ ರವರು ದಿನಾಂಕ: 09-11-2014 ರಂದು ಮದ್ಯಾಹ್ನದ  ಸಮಯದಲ್ಲಿ  ತಮ್ಮ ಹೊಂಡಾ ಸಯನ ಮೋಟರ ಸಯಕಲ ನಂ.ಕೆಎ-32 ಇಎಪ-9011 ನೇದ್ದರ ಮೇಲೆ ಖಾಸಗಿ ಕೆಲಸ ಕುರಿತು ಸಮಗಡ ಅವರ ಗೆಳೆಯ ಅಹ್ಮದ ತಂದೆ ಅಬ್ದುಲಗಫೂರ ಇವರನ್ನು ಕರೆದುಕೊಂಡು ಮರಗುತ್ತಿಗೆ ಹೋಗಿದ್ದು ಸಾಯಂಕಾಲ 07-00 ಗಂಟೆಯ ಸುಮಾರಿಗೆ ತಮ್ಮ ಕೆಲಸ ಮುಗಿಸಿಕೊಂಡು ತಮ್ಮ ಮೋಟರ ಸೈಕಲ ಮೇಲೆ ಮರಗುತ್ತಿಯಿಂದ ಕಲಬುರಗಿಗೆ ಹೋರಟಿದ್ದು ಪಿಯಾ್ಧಿಗೆ ತಲೆ ನೋವು ಆಗುತ್ತಿದ್ದರಿಂದ ತನ್ನ ಮೋಟರ ಸೈಕಲನ್ನು ಅಹ್ಮದನಿಗೆ ನಡೆಸಲು ಕೋಟ್ಟಿದ್ದು. ಸಾಯಂಕಾಲ 07-30 ಗಂಟೆಯ ಸುಮಾರಿಗೆ ಹೆದ್ದಾರಿಯ ಚಿಂದಿ ಬಸವಣ್ಣ ಗುಡಿಯ ಸಮೀಪ ತಿರುವಿನಲ್ಲಿ  ಬರುತ್ತಿದ್ದಾಗ ಅಹ್ಮದನು ತಾನು ನಡೆಸುತ್ತಿದ್ದ ಮೋಟರ ಸಯಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಮೋಟರ ಸೈಕಲನ್ನು ಸ್ಕೀಡ್ಡಾಗಿ ಕೆಡವಿದ್ದು ನಂತರ ಎದ್ದು ನೋಡಲು ಫಿರ್ಯಾದಿಯ ಬಲ ಮೋಣಕಾಲಿಗೆ ತರಚಿದ ಗಾಯ ಬಲಗೈ ಮುಂಗೈಗೆ ರಕ್ತಗಾಯ ತಲೆಯ ಹಿಂದೆ ರಕ್ತಗಾಯ ಮುಗಿಗೆ ರಕ್ತಗಾಯ ಬಲಹುಬ್ಬಿನ ಮೇಲೆ ರಕ್ತಗಾಯ ಮತ್ತು ತುಟಿಗೆ ರಕ್ತಗಾಯವಾಗಿದ್ದು. ಚಾಲಕನಿಗೆ ದವಾಕಾನೆಗೆ ತೋರಿಸುವಂತ ಗಾಯಗಳಾಗಿರುವುದಿಲ್ಲ ಮತ್ತು ಅಪಘಾತದಲ್ಲಿ ಮೋಟರ ಸೈಕಲ ಜಖಂಗೊಂಡಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶರಣಯ್ಯಾ ತಂದೆ ಬಸಯ್ಯಾ ಮಠಪತಿ ಸಾ: ಯಲಕಪಳ್ಳಿ ತಾ: ಚಿಂಚೋಳಿ ಹಾ:ವ: ವಿರೇಂದ್ರ ಪಾಟೀಲ ಬಡಾವಣೆ ಸೇಡಂ ರೋಡ ಕಲಬುರ್ಗಿ ಇವರು ದಿನಾಂಕ: 08/11/2014 ರಂದು ಬೆಳಿಗ್ಗೆ 7=45 ಗಂಟೆ ಸುಮಾರಿಗೆ ಫಿರ್ಯಾದಿಯು ತನ್ನ ಮೋ/ಸೈಕಲ್ ನಂ: ಕೆಎ 32 ಇಎಫ್ 6423 ನೆದ್ದರ ಮೇಲೆ ರೈಲ್ವೆ ಸ್ಟೇಶನ ದಿಂದ ಮನೆಗೆ ಹೋಗುವ ಕುರಿತು ಎಸ್.ವಿ.ಪಿ.ಸರ್ಕಲ್ ಮುಖಾಂತರ ಜಗತ ಸರ್ಕಲ್ ರೋಡಕಡೆಗೆ ಹೋಗುತ್ತಿದ್ದಾಗ ಪಂಜಾಬ ಫೂಟ ವ್ಹೆರ ಶೋ ರೂಮ ಎದುರಿನ ಎಸ್.ಬಿ. ಪೆಟ್ರೋಲ್ ಪಂಪ್ ಕ್ರಾಸ್ ನಲ್ಲಿ ಮೋ/ಸೈಕಲ್ ನಂ: ಕೆಎ 32 ವಿ 4307 ರ ಸವಾರನು ಜಗತ ಸರ್ಕಲ್ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಇಂಡಿಕೇಟರ ಹಾಕದೆ ಯಾವುದೇ ಸನ್ನೆ ಮಾಡದೆ ಕೋರ್ಟ ರೋಡ ಕಡೆಗೆ ಹೋಗುವ ಕುರಿತು ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋ/ಸೈಕಲ್ ಕ್ಕೆ ಡಿಕ್ಕಿ ಪಡಿಸಿ ಅಪಘಾತಮಾಡಿ ಫಿರ್ಯಾದಿಗೆ ನಡು ಹಣೆಯ ಮೇಲೆ ಗುಪ್ತ ಪೆಟ್ಟು ತರಚೀದಗಾಯ , ಬಲ ಕಪಾಳದ ಮೇಲೆ ಗುಪ್ತ ಪೆಟ್ಟು ಹಾಗು ಬಲ ಭುಜಕ್ಕೆ ಗುಪ್ತ ಪೆಟ್ಟು  ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ  ಅನೀಲ ತಂದೆ ಲೋಕು ಚವ್ಹಾಣ ಸಾ: ಮರಗುತ್ತಿ ತಾಂಡಾ ರವರು ದಿನಾಂಕ: 09-11-2014 ರಂದು ಸಾಯಂಕಾಲ 06-00 ಗಂಟೆಯ ಸೂಮಾರಿಗೆ ನಾನು ಮತ್ತು ನನ್ನ ಅಣ್ಣ ತುಕಾರಾಮ ಚವ್ಹಾಣ ಕೂಡಿ ನಮ್ಮ ಹೋಲದಲ್ಲಿ ತಿಪ್ಪಿಯ ಹತ್ತಿರ ಇಟ್ಟ ಅರಗಲ್ಲುಗಳನ್ನು ತೆಗೆಯುತ್ತಿದ್ದಾಗ ಬಾಬು ತಂದೆ ರೆಖು ರಾಠೊಡ ಅನೀಲ ತಂದೆ ಬಾಬು ರಾಠೋಡ ನಂದು ತಂದೆ ಬಾಬು ರಾಠೋಡ ಹಾಗೂ ಗೋರಕನಾಥ ತಂದೆ ಬಾಬು ರಠೋಡ ಇವರು ಕೈಯಲ್ಲಿ ಬಡಿಗೆ ಕಲ್ಲು ಹಿಡಿದುಕೊಂಡು ಏ ರಂಡೀ ಮಕ್ಕಳೆ ಅನ್ಯಾ ತುಕ್ಯಾ ನಿನ್ನವುನ ತುಲ್ಲ ನಾವು ನಿಮ್ಮ ಹೋಲಕ್ಕ ಹತ್ತಿ ಸಂಡಾಸ ಕಟ್ಟುತ್ತಿವಿ  ಏನು ಕಿತ್ತುಕೊತಿರಿ ಸೂಳೆ ಮಕ್ಕಳೆ ಅಂತ ಬೈಯುತ್ತ ನಮ್ಮ ಹೋಲದಲ್ಲಿ ಜಬರದಸ್ತಿಯಿಂದ ಬಂದವರೆ ಅನೀಲ ನನಗೆ ಬಡಿಗೆಯಿಂದ ತಲೆಯ ಹಿಂದೆ ಹೋಡೆದು ರಕ್ತಗಾಯ ಮಾಡಿದ್ದು. ಜಗಳ ಬಿಡಿಸಲು ಬಂದ ನನ್ನ ಅಣ್ನ ತುಕಾರಾಮನಿಗೆ ಬಾಬು ತಡೆದು ನಿಲ್ಲಸಿದ್ದು. ಗೋರಕನಾಥ ಕಲ್ಲಿನಿಂದ ನನ್ನ ಅಣ್ಣನ ತಲೆಯ ಮೇಲೆ ಮತ್ತು ತಲೆಯ ಹಿಂದೆ ಹೋಡೆದು ರಕ್ತಗಾಯ ಮಾಡಿದನು. ಅನೀಲನು ಬಡಿಗೆಯಿಂದ ತುಕಾರಮನ ಟೊಂಕಕ್ಕೆ ಎದೆಗೆ ಎಡಕಾಲಿಗೆ ಹೋಡೆದು. ಅದೇ ಬಡಿಗೆಯಿಂದ ನನಗೆ ತಲೆಯ ಮುಂದೆ ಹೋಡೆದು ರಕ್ತಗಯ ಮಾಡಿದ್ದು. ಅಲ್ಲದೆ ಬೆನ್ನಿಗೆ ಮತ್ತು ಬಲಗೈಗೆ ಅಲ್ಲಲ್ಲಿ ಹೋಡೆದನು ನಂದು ಇವನು ನನ್ನ ಕುಂಡಿಯ ಮೇಲೆ ಜಾಡಿಸಿ ಒದ್ದನು. ನಂತರ ನಾವು ತ್ರಾಸ ತಾಳಲಾರದೆ ಚಿರಾಡುತ್ತಿರುವಾಗ ಅಲ್ಲೆ ನಿಂತು ಜಗಳ ನೋಡುತ್ತಿದ್ದ ವಿಜಯಕುಮಾರ ತಂದೆ ಕಮಲು ಜಾಧವ ಮತ್ತು ಸೇವು ತಂದೆ ಲಚ್ಚಮು ಚವ್ಹಾಣ ಇವರು ಬಂದು ಜಗಳ ಬಿಡಿಸಿ ಕಳಿಸುತ್ತಿರುವಾಗ ಬಾಬು ಇವನು ನಮ್ಗೆ ರಮಡೀ ಮಕ್ಕಳೆ ನಾವು ಸಂಡಾಸ ಕಟ್ಟಾ ಸಂಭಂದ ಮುಂದೆ ನಮ್ಮ ಜೋತೆ ಜಗಲಾ ಮಾಡಿದರೆ ನಿಮಗೆ ಖಲಾಸೆ ಮಾಡ್ತಿವಿ ಹುಸ್ಸಾರ ಅಂತಾ ಜೀವ ಬೆದರಿಕೆ ಹಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 08.11.2014 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ 09.11.14 ರ ಮುಂಜಾನೆ ೦5:00 ಗಂಟೆಯ ಅವಧಿಯ ಮಧ್ಯದಲ್ಲಿ ಯಾರೋ ಅಪರಿಚಿತ ಕಳ್ಳರು ಜೇವರ್ಗಿ ಪಟ್ಟಣದ ಎ.ಪಿ.ಎಮ್.ಸಿ ಯಾರ್ಡ ಎರಿಯಾದಲ್ಲಿ ಇರುವ ಶರಣಬಸಪ್ಪ ಎಸ್ ಗುಗ್ಗರೆ ಟ್ರೇಡರ್ಸ ಯಾರ್ಡ ನಂ 38 ನೇದ್ದರ ಅಡತಿ ಅಂಗಡಿಯಲ್ಲಿ ಇದ್ದ 2.20.000/- ಹಣ ಮತ್ತು, ಸಿದ್ದಣ್ಣಗೌಡ ತಂದೆ ಗುರಪ್ಪಗೌಡ ಇವರ ಟ್ರೇಡರ್ಸ ನಂ 76 ನೇದ್ದರ ಅಡತಿ ಅಂಗಡಿಯಲ್ಲಿನ 87.000/- ರೂ ಮತ್ತು ಶ್ರೀ.ಗುರು ಸಿದ್ಧ ತೊಟೆಂದ್ರ ಟ್ರೇಡರ್ಸ ಯಾರ್ಡ ನಂ 31 ಅಡತಿ ಅಂಗಡಿಯಲ್ಲಿನ 48.500/- ರೂ ಮತ್ತು ವಿಶ್ವ ಬಸವಾಂಬೆ ಇಂಡಸ್ಟ್ರೀ ಯಾರ್ಡ ನಂ 74 ಅಂಗಡಿಯಲ್ಲಿನ 49.000/- ರೂ ಹಿಗೆ ಒಟ್ಟು 4.04.500/- ರೂ ಗಳನ್ನು ಯಾರೋ ಅಪರಿಚಿತ ಕಳ್ಳರು ಸದರಿ ಅಡತಿ ಅಂಗಡಿಯ ಶೆಟರ್ ಕೀಲಿಗಳನ್ನು ಮುರಿದು  ಅಂಗಡಿ ಪ್ರವೇಶ ಮಾಡಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ವಿಶ್ವನಾಥ ತಂದೆ ಮಹಾದೇವಪ್ಪ ಪೊಲೀಸ್‌ ಪಾಟೀಲ್‌ ಸಾ :  ರಾಜವಾಳ  ತಾ: ಜೇವರ್ಗಿ  ರವರುಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.