POLICE BHAVAN KALABURAGI

POLICE BHAVAN KALABURAGI

24 November 2013

Gulbarga District Reported Crimes

ಅಪಘಾತ ಪ್ರಕರಣ :
ಸಂಚಾರಿ ಠಾಣೆ : ಶ್ರೀ ಶಾಂತಕುಮಾರ ತಂದೆ ಮಡೆಪ್ಪಾ ಹಳ್ಳಿಖೇಡ, ಸಾಃ ಸಂತೋಷ ಕಾಲೂನಿ ಆಳಂದ ರೋಡ ಗುಲಬರ್ಗಾ ರವರು  ದಿನಾಂಕ 23-11-2013  ಆತನ ಗೆಳೆಯ ಶ್ರೀಧರ ಇಬ್ಬರು ಕೂಡಿ ವಿಜಯ ನಗರ ಕಾಲೂನಿಯಲ್ಲಿ ಒಂದು ಕಾರ್ಯಕ್ರಮಕ್ಕೆ ಹೋಗಿ ಮರಳಿ ಇಬ್ಬರು ಕೂಡಿ ತನ್ನ ಮಾವನವರ ಹೊಸ ಹೀರೊ ಹೊಂಡಾ ಸ್ಪ್ಲೆಂಡರ ಮೋಟಾರ ಸೈಕಲ ಮೇಲೆ ವಿಜಯ ನಗರ ಕಾಲೂನಿಯಲ್ಲಿರುವ ಹಿರಿಯ ಪ್ರಾಥಮಿಕ ಶಾಲೆ ಹತ್ತಿರ 7-50 ಪಿ.ಎಮ್ ಬರುತ್ತಿದ್ದಾಗ ಒಂದು ಕ್ರೂಜರ ಜೀಪ ನಂ. ಕೆ.ಎ 32 ಎಮ್. 4494 ನೇದ್ದರ ಚಾಲಕನು ತನ್ನ ಕ್ರೂಜರ ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಚಲಾಯಿಸುತ್ತಿದ್ದ ಹೊಸ್ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿ ತನ್ನ ಕ್ರೂಜರ ಜೀಪ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಅಪಘಾತದಿಂದ ಭಾರಿಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣಗಳು :
ಚಿಂಚೋಳಿ ಠಾಣೆ : ಶ್ರೀ ದೇವಿಂದ್ರಪ್ಪ ತಂದೆ ಸಿದ್ದಪ್ಪ ಅಪ್ಪಣ್ಣೋರ ಸಾ:ಕೋಳ್ಳೂರು ಗ್ರಾಮ ತಾ :ಚಿಂಚೋಳಿ ಇವರು ದಿನಾಂಕ 22-11-2013 ರಂದು ಸಾಯಾಂಕಾಲ 04.00 ಗಂಟೆಗೆ ನಾನು ನಮ್ಮ ಆಕಳನ್ನು ಮೇಯಿಸಲೇಂದು ನಮ್ಮ ಹೋಲಕ್ಕೆ ನಮ್ಮೂರಿನ ಶ್ರೀ ಹನುಮಾನ ದೇವಾಲಯದ ಹತ್ತೀರ ಸಾರ್ವಜನಿಕ ರಸ್ತೆಯ ಮೇಲೆ  ಹೋಡೆದುಕೊಂಡು ಹೋಗುತ್ತಿದ್ದಾಗ ನಮ್ಮೂರಿನ ಗಣಪತಿ ತಂದೆ ಅಂಜಣ್ಣ ಕಪ್ಪಡ  ಎಂಬುವವನು ಬಂದು ನನಗೆ ತಡೆದು ನಿಲ್ಲಿಸಿ ಈ ಹಿಂದೆ ನಿನ್ನ ಆಕಳು ನಮ್ಮ ಹೋಲದಲ್ಲಿ ಬೆಳೆ ಮೈಯಿದಿರುತ್ತದೆ. ಈಗಲಾದರೂ ಸರಿಯಾಗಿ ಹೋಡೆದುಕೊಂಡು ಹೋಗು ಅಂತಾ ಅಂದನು ಅದಕ್ಕೆ ನಾನು ನಾನೇನು ಬೇಕಂತಲೇ ಮೇಯಿಸಿದ್ದೀನಿ ಏನೋ ಕಣ್ಣ ತಪ್ಪಿ ಹೋಗಿ ಮೈದಿದೆ ಅಂತಾ ಅಂದೇನು ಅದಕ್ಕೆ ಅವನು ಪತ್ರಿಯಾಗಿ ಬೇಳೆ ಮೈಸದಂತೆ ಸರಿಯಾಗಿ ಹೋಡೆದುಕೊಂಡು ಹೋಗು ಈ ಮೋದಲು ಬೇಳೇ ಮೈಯಸಿದ್ದಿ ಅಂತಾ ಅಂದರೆ ವಾಪಸ್ ನನಗೆ ತಕರಾರು ಮಾಡುತ್ತಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ನನಗು ಮತ್ತು ನನ್ನ ಹೆಂಡತಿಗೆ ಹೊಡೆ ಬಡೆ ಮಾಡಿ ಗಾಯಗೊಳಿಸಿ ಜೀವದ ಭಯ ಹಾಇರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ಶ್ರೀ ಅರ್ಜುನ ತಂದೆ ಮರೆಪ್ಪ ಕೊಬಾಳ ಸಾ: ಕೊಬಾಳ ಹಾ.ವ ವಿದ್ಯಾನಗರ ಜೇವರಗಿ ಇವರು ದಿನಾಂಕ: 21-11-13 ರಂದು ಕೊಬಾಳ ಸಿಮಾಂತರದ ಫಿರ್ಯಾದಿ ಹೊಲ ಸರ್ವೆ ನಂ 20  ವಿಸ್ತಿರ್ಣ 3 ಎಕರೆ 6 ಗುಂಟೆ ಜಮಿನಿನಲ್ಲಿ ಆರೋಪಿ ಬಾಬಾ ತಂದೆ ಜಾಫರ್ ಇತನು ಹೊಲದಲ್ಲಿ ಅತಿ ಕ್ರಮ ಪ್ರವೇಶ ಮಾಡಿ ಹೊಲದಲ್ಲಿ ಬಿತ್ತಿದ ಜೋಳದ ಬೆಳೆಗೆ ಯಾವುದೋ ಕ್ರಿಮಿನಾಶಕ ಎಣ್ಣೆ  ಹೊಡೆದು ಜೊಳದ ಬೆಳೆ ಪೂರ್ತಿ ನಾಶ ಮಾಡಿದ್ದು ಅದನ್ನು ಫಿರ್ಯಾದಿ ಮತ್ತು ಅವನ ಮಗ ಮರೆಪ್ಪ ಇವರು ಬಾಬಾ ಇತನಿಗೆ ಕೇಳುವಷ್ಟರಲ್ಲಿ ಉಳಿದ ಆರೋಪಿತರಾದ 1. ರಜಾಕಪಟೇಲ ತಂದೆ ಮಹ್ಮದ ಹುಸೇನಿ ಅವನ ಮಗ ಮಹ್ಮದ ಹುಸೇನಿ ಹಾಗೂ ಅಲ್ಲಾಮೊಲಿಸಾಬ ಇವರು ಕೂಡ ಸದರ ಹೊಲಕ್ಕೆ ಬಂದು ಫಿರ್ಯಾದಿಗೆ ಮತ್ತು ಅವನ ಮಗನಿಗೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಇದು  ನಮ್ಮ ಹೊಲ ಇರುತ್ತದೆ ಈ ಹೊಲದಲ್ಲಿ ಬಂದರೆ ಖಲಾಸ ಮಾಡಿಯೇ ಬಿಡುತ್ತೇವೆ ಅಂತ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಹುಡುಗ ಕಾಣೆಯಾದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಫಯಾಜ್‌ ಅಫ್ಜಲ್‌ ತಂದೆ ಹುಸ್ಮಾನ ಅಫ್ಜಲ್‌ ಸಾ|| ಎಕ್ಬಾಲ ಕಾಲೋನಿ ಎಮ್‌ಎಸ್‌ಕೆ ಮೀಲ್‌ ಗುಲಬರ್ಗಾ ಇವರ ಹಿರಿಮಗನಾದ  ಕು. ಅಫಾನ್‌ ಅಫ್ಜಲ್‌ ವಯಾ|| 15 ವರ್ಷ ಇವನು ಗುಲಬರ್ಗಾ ನಗರದ ನ್ಯೂ ನೋಬೆಲ್‌ ಸ್ಕೂಲ್‌ ನಲ್ಲಿ 9 ನೇ ತರಗತಿ ವಿಧ್ಯಾಭ್ಯಾಸ ಮಾಡುತ್ತಿದ್ದು ಸದರಿಯವನು ದಿನಾಂಕ : 19-11-2013 ರಂದು ಎಂದಿನಂತೆ ಬೆಳೀಗ್ಗೆ 9.00 ಗಂಟೆಗೆ ಶಾಲೆಗೆ ಹೊಗುತ್ತೆನೆಂದು ಹೇಳಿ ಹೊಗಿ ಸಾಯಂಕಾಲ 16.30 ಗಂಟೆಗೆ ಮನಗೆ ಬಂದಿದ್ದನು ಅವನು. ಸ್ವಲ್ಪ ಸಮಯದ ನಂತರ ಮತ್ತೆ ಮನೆಯಿಂದ ತನ್ನ ಸ್ಕೂಲ್‌ ಬ್ಯಾಗ್‌ ತೆಗೆದುಕೊಂಡು ಹೊದನು ನಾನು ಹಲಮಾರದಲ್ಲಿ ಇಟ್ಟಿದ್ದ 25000/- ರೂ ಕೂಡ ತೆಗೆದುಕೊಂಡು ಹೊಗಿರುತ್ತಾನೆ. ಅವನು ಮನೆಯಲ್ಲಿ ನನ್ನ ಹೆಂಡತಿ ಬೀಲ್‌ಖೀಜ್‌ ಬೇಗಂ ಇವಳಿಗೆ ಮಾತನಾಡದೆ ಹೊಗಿರುತ್ತಾನೆ ಅಂತಾ ನನ್ನ ಹೆಂಡತಿ ನನಗೆ ತಿಳಿಸಿರುತ್ತಾಳೆ ನಾನು ರಾತ್ರಿ 10.00 ಗಂಟೆಗೆ ನನ್ನ ಮಗ ಅಫಾನ್‌ ಎಕೆ ಬಂದಿರುವದಿಲ್ಲಾ ಅಂತಾ ಆತನ ಹತ್ತೀರ ಇದ್ದ ಮೋಬೈಲ್‌ ನಂ 7259710580 ನೆದ್ದಕ್ಕೆ ಫೋನ್‌ ಮಾಡಿ ಸಂಪರ್ಕಿಸಿದ್ದು ಅವನು ನನ್ನ ಕರೆ ಸ್ವಿಕರಿಸಿ ಮಾತನಾಡಿರುವದಿಲ್ಲಾ. ನನ್ನ ಅಳಿಯ ಅಬ್ದುಲ್‌ ಅಲೀಮ್‌ ಇತನು ಕರೆ ಮಾಡಿ ಮಾತನಾಡಿದ್ದು ಅವನು ತನ್ನ ಗೇಳೆಯನ ಹತ್ತೀರ ಇರುವದಾಗಿ ತಿಳಿಸಿದನುಆದರೆ ಎಲ್ಲಿ ಇದ್ದೆನೆ ಎನ್ನುವ ಬಗ್ಗೆ ತಿಳಿಸಿಲ್ಲಾ. ಆಗ ನಾನು ಕಣ್ಣಿ ಮಾರ್ಕೆಟ್‌ ಶಾಂತಿ ನಗರ ಹತ್ತೀರ ಹೋಗಿ ನೊಡಲು ಸಿಕ್ಕಿರುವದಿಲ್ಲಾ. ಆದರೆ ಅವನ ಹತ್ತೀರ ಮೊಬೈಲ್‌ ನಂಬರ 19-11-2013 ರಂದು ರಾತ್ರಿವರೆಗೆ ಕಾರ್ಯನಿರ್ವಹಿಸುತ್ತಿದ್ದು ನಂತರ ಸ್ವಿಚ್‌ ಆಫ್‌ ಅಂತಾ ತೊರಿಸುತ್ತಿದೆ. ಇಲ್ಲಿಯವರೆಗೆ ಹುಡುಕಾಡಿದರು ಅವನು ಸಿಕ್ಕಿರುವುದಿಲ್ಲಾ ಆಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.