POLICE BHAVAN KALABURAGI

POLICE BHAVAN KALABURAGI

11 June 2017

Kalaburagi District Reported Crimes

ಅಪಘಾತ ಪ್ರಕರಣಗಳು :
ಸೇಡಂ ಠಾಣೆ : ದಿನಾಂಕ:09-06-2017 ರಂದು ರಾತ್ರಿ ನಾನು ಮತ್ತು ನಮ್ಮ ತಂಗಿಯಾದ ಯಲ್ಲಮ್ಮ ಮನೆಯಲ್ಲಿದ್ದಾಗ ನಮ್ಮ ತಂದೆಯಾದ ಪಾಂಡರಂಗ ತಂದೆ ಭೀಮರಾಯ ರಾವುರ ಇವರು ಮನೆಯಲ್ಲಿ ಊಟ ಮಾಡಿದ ನಂತರ ಮೂತ್ರ ವಿಸರ್ಜನೆ ಕುರಿತು ನಮ್ಮ ಮನೆಯ ಎದುರುಗಡೆ ಇದ್ದ ಸೇಡಂ-ಕೊಡಂಗಲ್ ರೋಡ ದಾಟಿ ಹೊದರು, ಮೂತ್ರ ವಿಸರ್ಜನೆ ಮಾಡಿ ಮರಳಿ ಮನೆಗೆ ರೋಡ ದಾಟಿ ಬರುವಾಗ ಕೊಡಂಗಲ್ ಕಡೆಯಿಂದ ಒಬ್ಬ ಮೊಟಾರು ಸೈಕಲ್ ಚಾಲಕ ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ತಂದೆಗೆ ಡಿಕ್ಕಿಪಡೆಯಿಸಿದನು ಅಲ್ಲಿಯೇ ಇದ್ದ ನಾವು ಹೋಗಿ ನೋಡಲು ಮೊಟಾರು ಸೈಕಲ್ ನಂ-KA32 EM-6545 ನೇದ್ದು ಇತ್ತು. ಮೊಟಾರ ಸೈಕಲ್ ಸವಾರನು ವಾಹನ ನಿಲ್ಲಿಸದೇ ಅಲ್ಲಿಂದ ಓಡಿಹೋದನು. ಆತನಿಗೆ ನೋಡಲು ನಾವು ಗುರುತಿಸುತ್ತೇವೆ. ನಮ್ಮ ತಂದೆಗೆ ನೋಡಲು ಎಡ ಮೊಳಕಾಲ ಕೆಳಗೆ ಮುರಿದಿದ್ದು, ಬಲಹುಬ್ಬಿನ ಮೇಲೆ ಭಾರಿ ರಕ್ತಗಾಯ, ಮೂಗಿನ ಮೇಲೆ ತರಚಿದ ಗಾಯ, ಬಲಗಾಲ ಮೊಳಕಾಲಿಗೆ ತರಚಿದ ಗಾಯವಾಗಿತ್ತು. ನಂತರ 108 ಅಂಬ್ಯೂಲೆನ್ಸಗೆ ಕರೆಯಿಸಿ ಸೇಡಂ ಸರಕಾರಿ ಆಸ್ಪತ್ರೆಗೆ ನಂತರ ಇಲ್ಲಿಗೆ ತಂದು ಸೇರಿಕೆ ಮಾಡಿದ್ದು ಇಲ್ಲಿ ಉಪಚಾರ ಫಲಕಾರಿಯಾಗದೇ ಇಂದು ದಿನಾಂಕ:10-06-2017 ರಂದು 03-15 ಎ.ಎಮ್.ಕ್ಕೆ ಮೃತಪಟ್ಟಿರುತ್ತಾರೆ. ಅಂತಾ ಶ್ರೀ ಸುರೇಶ ತಂದೆ ಪಾಂಡರಂಗ ರಾವುರ ಸಾ:ಬಟಗೆರಾ (ಕೆ) ಗೇಟ್, ತಾ:ಸೇಡಂ. ರವರು ಸಲ್ಲಿಸಿದ  ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮುಧೋಳ ಠಾಣೆ : ದಿನಾಂಕ: 10-06-2017 ರಂದು ನಮ್ಮ ತಂದೆ ಮರಿಸ್ವಾಮಿ ಇವರು ಕಾನಾಗಡ್ಡಾ ಪಶು ಆಸ್ಪತ್ರೆಗೆ ಕರ್ತವ್ಯಕ್ಕೆ ಹೋಗುವದಾಗಿ ಹೇಳಿ ಮನೆಯಿಂದ ತಮ್ಮ ಮೊ/ಸೈ ನಂ ಕೆಎ/33-ಆರ್-6984 ನೇದ್ದರ ಮೇಲೆ ಹೋಗಿದ್ದು ಇರುತ್ತದೆ ನಂತರ ನಾನು ಹಾಗು ನಮ್ಮ ತಾಯಿ ಶಿವಮ್ಮ ಮತ್ತು ನಮ್ಮ ತಮ್ಮ ಸಿದ್ರಾಮೇಶ ಮನೆಯಲ್ಲಿದ್ದಾಗ ನಮ್ಮ ಮನೆಯ ಮಾಲಿಕರಾದ ನಾಗೇಶ ಚೌಧರಿ ಇವರು ನಮ್ಮ ಮನೆಯಲ್ಲಿ ಬಂದು ತಿಳಿಸಿದ್ದೆನೆಂದರೆ, ನಿಮ್ಮ ತಂದೆ ಮರಿಸ್ವಾಮಿ ಇವರಿಗೆ ಗುರುಮಠಕಲದಿಂದ ಕರ್ತವ್ಯಕ್ಕೆ ಹೋಗುವಾಗ ಚಂಡ್ರಕಿ ಕ್ರಾಸ ಸಮೀಪದಲ್ಲಿ ಅಪಘಾತವಾಗಿದೆ ಅಂತಾ ನಮಗೆ ಪರಿಚಯವಿರುವ ಬಸ್ಸರೆಡ್ಡಿ ಬುರುಗಪಲ್ಲಿ ಇವರು ನಮಗೆ ಫೋನ ಮಾಡಿ ತಿಳಿಸಿದ್ದಾರೆ ಅಂತಾ ಹೇಳಿದರು ನಂತರ ಹಾಗು ನಮ್ಮ ತಾಯಿ ಮತ್ತು ನಮ್ಮ ತಮ್ಮ ಎಲ್ಲರೂ ಕೂಡಿ ಇಂದು ಬೆಳಗ್ಗೆ 10:00 ಗಂಟೆ ಸುಮಾರಿಗೆ ಗುರುಮಠಕಲದಿಂದ ಯಾನಾಗುಂದಿಗೆ ಹೋಗುವ ಚಂಡ್ರಕಿ ಕ್ರಾಸ ಹತ್ತಿರ ಬಂದು ನೋಡಲಾಗಿ ನಮ್ಮ ತಂದೆ ಮರಿಸ್ವಾಮಿ ಇವರು ರಸ್ತೆಯ ಎಡಬದಿಯಲ್ಲಿ ಅಪಘಾತದಲ್ಲಿ ಬಾರಿ ಗಾಯಹೊಂದಿ ಮೃತ ಪಟ್ಟಿದ್ದು ನಮ್ಮ ತಂದೆಗೆ ತಲೆಯ ಹಿಂದುಗಡೆ ಭಾರಿ ರಕ್ತಗಾಯವಾಗಿ ಮೂಗಿನಿಂದ ರಕ್ತಬಂದಿದ್ದು ಹಾಗು ಎರಡು ಕಾಲುಗಳಿಗೆ ತರುಚಿದ ರಕ್ತಗಾಯಾಗಳಾಗಿದ್ದು ಇವರು ಮೃತ ಪಟ್ಟಿದ್ದು ಅಲ್ಲೆ ರಸ್ತೆಯ ಪಕ್ಕದಲ್ಲಿ ನಮ್ಮ ತಂದೆಯ ಮೊ/ಸೈ ಬಿದಿದ್ದು ಈ ಬಗ್ಗೆ ಅಲ್ಲಿದ್ದ ಜನರಿಗೆ ವಿಚಾರಿಸಲಾಗಿ ತಿಳಿಸಿದೆನೆಂದರೆ, ಇಂದು ಬೆಳಗ್ಗೆ 0930 ಗಂಟೆ ಸುಮಾರಿಗೆ ಸದರಿ ಮೃತ ಮರಿಸ್ವಾಮಿ ಇವರು ತಮ್ಮ  ಮೊ/ಸೈ ನಂಬರ ಕೆಎ33/ಆರ್-6984 ನೇದ್ದರ ಮೇಲೆ ಕುಳಿತು ಗುರುಮಠಕಲ ಕಡೆಯಿಂದ ಯಾನಾಗುಂದಿ ಕಡೆಗೆ ರಸ್ತೆಯ ಎಡಬದಿಯಿಂದ ಹೋಗುತ್ತಿದ್ದಾಗ ಹಿಂದುಗಡೆಯಿಂದ ಒಂದು ಜೀಪನ ಚಾಲಕನು ತನ್ನ ಜೀಪನ್ನು ಅತಿವೇಗ ಹಾಗು ನಿರ್ಲಕ್ಷತನದಿಂದ ನಡೆಯಿಸಿಕೊಂಡು ಬಂದು ರಸ್ತೆಯ ಎಡಬದಿಯಿಂದ ಹೋಗುತ್ತಿದ್ದ ನಿಮ್ಮ ತಂದೆ ಮರಿಸ್ವಾಮಿ ಇವರ ಮೊ/ಸೈಗೆ ಹಿಂದುಗಡೆಯಿಂದ ಡಿಕ್ಕಿ ಪಡಿಸಿದ್ದು ಸದರಿ ಜೀಪನಲ್ಲಿ ಪ್ರಯಾಣಿಕರಿದ್ದು ಸದರಿ ಜೀಪ ನಂಬರ ಸರಿಯಾಗಿ ಕಾಣಿಸಿರುವದಿಲ್ಲಾ ಅದನ್ನು ನೋಡಿದರೆ ಗುರುತಿಸುತ್ತೇವೆ ಸದರಿ ಜೀಪ ಚಾಲಕ ಅಪಘಾತ ಪಡಿಸಿ ತನ್ನ ಜೀಪನ್ನು ನಿಲ್ಲಿಸದೆ ಹಾಗೆ ಓಡಿಸಿಕೊಂಡು ಹೋಗಿರುತ್ತಾನೆ ಅಂತಾ ತಿಳಿಸಿರುತ್ತಾರೆ ಅಂತಾ ಶ್ರೀ ಮಹೇಶ ತಂದೆ ಮರಿ ಸ್ವಾಮಿ ಮೇದರ ಸಾ: ಜಗರಕಲ್ ತಾ:ಜಿ: ರಾಯಚುರ ಹಾವ|| ಲಕ್ಷ್ಮಿನಗರ ಗುರುಮಠಕಲ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 10.06.2017 ರಂದು ರಾತ್ರಿ-10-30 ಗಂಟೆ ಸುಮಾರಿಗೆ ಮೃತ ಅಣವೀರ ಇತನು ತನ್ನ ಗೆಳೆಯ ಶ್ರೀಕಾಂತ ಇತನಿಗೆ ಕೇಂಧ್ರ ಬಸ್ಸ ನಿಲ್ದಾಣಕ್ಕೆ ಬಿಟ್ಟು ಬರುವ ಸಲುವಾಗಿ ತಾನೂ ಚಲಾಯಿಸುತ್ತೀರುವ ಮೋಟಾರ ಸೈಕಲ ನಂ ಕೆಎ-32-ಇಎಲ್-5799 ನೇದ್ದರ ಹಿಂದುಗಡೆ ಶ್ರೀಕಾಂತ ಮತ್ತು ರಾಘವೇಂದ್ರ ಇತನನ್ನು ಕೂಡಿಸಿಕೊಂಡು ಖರ್ಗೆ ಪೆಟ್ರೊಲ ಪಂಪದಿಂದ ಎಸವಿಪಿ ಸರ್ಕಲ ಮುಖಾಂತರವಾಗಿ ಕೇಂದ್ರ ಬಸ್ಸ ನಿಲ್ದಾಣಕ್ಕೆ ಹೋಗುವಾಗ ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಹಾಗೂ ಅಲಕ್ಷತನದಿಂದ ಚಲಾಯಿಸಿ ರೋಡ ಎಡ ಬಲ ಕಟ್ ಹೊಡದು ಹೋಗಿ ದಾರಿ ಮದ್ಯ ಸರ್ಕಾರಿ  ಐಟಿಐ ಕಾಲೇಜ್ ಎದುರಿನ ರೋಡ ಡಿವೈಡರಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ತನ್ನ ಮೋಟಾರ ಸೈಕಲ ಹಿಂದುಗಡೆ ಕುಳಿತಿದ್ದ ಶ್ರೀಕಾಂತ ಮತ್ತು ರಾಘವೇಂಧ್ರ ಇವರಿಗೆ ಗಾಯಗೊಳಿಸಿ ತಾನೂ ಭಾರಿಗಾಯಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ.
ಶ್ರೀ ಶ್ರೀಕಾಂತ ತಂದೆ ಅನಂತಯ್ಯಾ ಗುತ್ತೇದಾರ ಸಾ: ಲಕ್ಷ್ಮಿ ಟೆಂಪಲ ಹತ್ತೀರ ರಾಮ ನಗರ ಹುಮನಾಬಾದ ರೋಡ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಚೇಂದ್ರ ತಂದೆ ಮಲ್ಲಿಕಾರ್ಜುನ @ ಗ್ರಾಮೀಣ ಠಾಣೆ : ಶ್ರೀ ಮಲ್ಲಪ್ಪ ಕಾಳನೂರ ಸಾ : ಉಪಳಾಂವ ತಾ:ಜಿ: ಕಲಬುರಗಿ ರವರು ದಿನಾಂಕ 09/06/2017 ಸಂಜೆ ಕಾರ ಹುಣ್ಣಿಮೆ ನಿಮಿತ್ಯ ತಮ್ಮಕಾಕಾ ನಾಗೇಂದ್ರ ತಂದೆ ಭೀಮಶ್ಯಾ ಕಾಳನೂರ ಇವರ ಎತ್ತುಗಳು ಮೆರವಣಿಗೆ ಮಾಡಿಸಲು ನಮ್ಮೂರಿನ ಲಕ್ಷ್ಮೀ ಗುಡಿ ಎದುರುಗಡೆ ಎತ್ತುಗಳು ಮೆರವಣಿಗೆ ಮಾಡಲು ಹೋದಾಗ ಮಾಹಾಂತಪ್ಪ ಟೆಂಗಳಿ ಇತನು  ನೋಡಿ ಫಿರ್ಯಾದಿಗೆ ಎ ಹೊಲೆ ಸೂಳೆ ಮಗನೇ ನಿಮ್ಮ ಎತ್ತುಗಳು ಊರಲ್ಲಿ ಮೆರವಣಿಗೆ ಮಾಡಬೇಡಾ ಅಂತಾ ಹೇಳಿದನು. ಅದಕ್ಕೆ ಫಿರ್ಯಾದಿ ನಾವೇಕೆ ಮೆರವಣಿಗೆ ಮಾಡಬಾರದು ಅಂದಿದ್ದಕ್ಕೆ ಮಾಹಾಂತಪ್ಪ ಟೆಂಗಳಿ ಇತನು ನನಗೆ ಹೊಲೆ ಸೂಳೇ ಮಗನೇ ನನಗೆ ಎದುರು ಮಾತಾಡುತ್ತೀ ಭೋಸಡಿ ಮಗನೇ ಅಂತಾ ಬೈದು ಅಲ್ಲೇ ಹತ್ತಿರದಲ್ಲಿ ಇರುವ ತನ್ನ ಮನೆಯಲ್ಲಿ ಹೋಗಿ ಒಂದು ರಾಡು ತೆಗೆದುಕೊಂಡು ಬಂದು ನನ್ನ ಬಲ ಟೊಂಕದ ಮೇಲೆ ಮತ್ತು ಕೆಳೆಗಡೆ ಹೊಡೆದು ಗುಪ್ತಗಾಯಗೊಳಿಸಿದೆನು. ತಮ್ಮ ಅವನ ತಮ್ಮಂದಿರರಾದ ಪೀರಪ್ಪ,ಆಶ್ವಿನ, ರಾಜು ಇವರು ಕೂಡಾ ಬಡಿಗೆ ಮತ್ತು ಬೆಲ್ಟನಿಂದ  ಎಡ ಮತ್ತು ಬಲ ಬೆನ್ನ ಮೇಲೆ ಎಡ ತಲೆಯ ಕಿವಿಯ ಮೇಲೆ ಹೊಡೆದು ಗುಪ್ತಗಾಯಗೊಳಿಸಿ, ಇನ್ನೊಮ್ಮೆ ನಾವು ಹೇಳಿದ ಮಾತು ಕೇಳದೇ ಹೋದರೆ ಜೀವ ಸಹಿತ ಬಿಡುವುದಿಲ್ಲಾ ಜೀವ ಭಯ ಹಾಕಿ ಹೋದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಪಿಂಟು ತಂದೆ ಹರಿಶ್ಚಂದ್ರ ಪವಾರ  ಸಾ; ಖಣದಾಳ ತಾಂಡಾ ರವರು ದಿನಾಂಕ 09-03-2017 ರಂದು ತನ್ನ ಮೋ ಸೈಕಲ ಮೇಲೆ ತಾಂಡಾಕ್ಕೆ ಹೊಗುತ್ತಿದ್ದಾಗ ಊರ ಇನ್ನೂ 1 ಕಿಮಿ ದೂರವಿದ್ದಾಗ  1) ರಾಮು ಪವಾರ  2) ಸುಸೀಲಾಬಾಯಿ ಗಂಡ ರಾಮು ಪವಾರ  3) ವೆಂಕಟೇಶ ತಂದೆ ರಾಮು ಪವಾರ ಸಾ; ಎಲ್ಲರೂ ಖಣದಾಳ ತಾಂಡ ರವರು ಫಿರ್ಯಾದಿಗೆ ತಡೆದು ನಿಲ್ಲಿಸಿ ದಿನಾಲು ನಮ್ಮ ಮನೆಯ ಮುಂದೆ ಹೋಗುವಾಗಿ ನನ್ನ ಮಗಳಿಗೆ ಕೇಣಕುತ್ತಿ ರಂಡಿ ಮಗ ನೇ ಅಂತಾ ಅವ್ಯಾಚ್ಚವಾಗಿ ಬೈದು ಕೈಗಳಿಂದ ಹೊಡೆದು ನೆಲಕ್ಕೆ ಹಾಕಿ ಕಾಲಿನಿಂದ ಒದ್ದು  ಹೊಡೆ ಬಡೆ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.