POLICE BHAVAN KALABURAGI

POLICE BHAVAN KALABURAGI

01 April 2014

Gulbarga District Reported Crimes

ಮಾಂಗಲ್ಯ ಸರ ಕಿತ್ತುಂಕೊಂಡು ಹೋದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಸ್ನೇಹಲತಾ ಗಂಡ ಅನೀಲಕುಮಾರ ಸಾ|| ರಾಮ ನಗರ ಗುಲಬರ್ಗಾ ರವರು ದಿನಾಂಕ 01-04-2014 ರಂದು ಬೆಳಗ್ಗೆ ನಾನು ನನ್ನ ಕೆಲಸದ ನಿಮಿತ್ಯ ಶಾಮಸುಂದರ ನಗರದಿಂದ ಕಾಲೇಜಗೆ ಬರುತ್ತಿದ್ದಾಗ 09-30 ಗಂಟೆ ಸುಮಾರಿಗೆ ನಡೆದುಕೊಂಡು ಬರುತ್ತಿರುವಾಗ ಯಾರೊ ಇಬ್ಬರು ಅಪರಿಚಿತರು ವ್ಯಕ್ತಿಗಳು ಮೋಟಾರ ಸೈಕಲ ಮೇಲೆ ನನ್ನ ಪಕ್ಕದಿಂದ ಮುಂದೆ ಹೊಗಿ ಮರಳಿ ದರು ಗಡೆಯಿಂದ ಮೋಟಾರ ಸೈಕಲ ಮೇಲೆ ಬಂದು ನನ್ನ ಕೊರಳ್ಳಿಲಿದ್ದ 35 ಗ್ರಾಂ ಬಂಗಾರದ ಮಂಗಳ ಸೂತ್ರ ಕಿತ್ತಿಕೊಂಡು ಹೋಗಿದ್ದು .ಕಿ 1 ಲಕ್ಷ 5 ಸಾವಿರ ರೂ /- ಇದ್ದು ಸದರಿ ಮಂಗಳ ಸೂತ್ರ ಪತ್ತೆ ಮಾಡಿಕೊಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಉದಯಕುಮಾರ ತಂದೆ ಶಿವಯೋಗಿ ಸಾ: ಕೋರಿ ಮಠದ ಹತ್ತಿರ ಧನಗರಗಲ್ಲಿ ಬ್ರಹ್ಮಪೂರ  ಗುಲಬರ್ಗಾ ರವರು ದಿನಾಂಕ 01-04-2014 ರಂದು ಬೆಳಿಗ್ಗೆ 5-30 ಗಂಟೆಗೆ ಜಗತ ಸರ್ಕಲದಿಂದ ಎಸ್.ವಿ.ಪಿ ಸರ್ಕಲ ಮೇನ ರೋಡಿನಲ್ಲಿ ಬರುವ ಮಿನಿ ವಿಧಾನ ಸೌಧ ಮೇನ ಗೇಟ ಎದುರು ರೋಡಿನ ಮೇಲೆ ಫಿರ್ಯಾದಿಯು ತನ್ನ ಮೋಟಾರ ಸೈಕಲ ನಂಬರ ಕೆಎ-32 ಇಎ-0026  ಮೇಲೆ ಹಿಂದುಗಡೆ ಸಂಗಮೇಶ ಇತನಿಗೆ ಕೂಡಿಸಿಕೊಂಡು ಹೋಗುತ್ತಿದ್ದಾಗ ಕಾರ ನಂಬರ ಎಪಿ-25 ಎಸಿ-4951  ಚಾಲಕನು ಜಗತ ಸರ್ಕಲ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋಟಾರ ಸೈಕಲಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ಫಿರ್ಯಾದಿಗೆ ಮತ್ತು ಸಂಗಮೇಶ ಇತನಿಗೆ ಗಾಯಗೊಳಿಸಿ ತನ್ನ ಕಾರ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ವರದಕ್ಷಣೆ ಕಿರುಕಳ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀಮತಿ ಪ್ರಬಾವತಿ ಗಂಡ ಜಗದೀಶ ಮಡಿವಳ ಸಾ|| ರಾಮ ಮಂದಿರ ಹತ್ತಿರ ಜೆ.ಪಿ. ಕಾಲೋನಿ ಶಹಾಬಾದ ಇವರು ದಿನಾಂಕ  28.03.2014 ರಂದು 1.30 ಪಿ.ಎಮ್. ಸುಮಾರಿಗೆ  ನನ್ನ ಗಂಡ ಜಗದೀಶ ಇವನು ಏ ರಂಡಿ ನೀನು ನೋಡಲು  ಚನ್ನಾಗಿರುವದಿಲ್ಲಾ, ನೀನು ದರಿದ್ರದವಳು, ನಿನಗೆ ಅಡುಗೆ  ಮಡಲು ಬರುವದಿಲ್ಲಾ. ಮತ್ತು  ನನ್ನ ತಂದೆ , ತಾಯಿ ಹಾಗೂ  ಮೈದುನ ಮತ್ತು ನಾದಿನಿಗೆ ಚನ್ನಾಗಿ ನೋಡಿಕೊಳ್ಳುವದಿಲ್ಲಾ. ನನಗೆ  ಹೊರದೇಶಕ್ಕೆ ಹೋಗಲು ನಿನ್ನ ತವರು ಮೆನಯಿಂದ ವರದಕ್ಷಿಣೆ ರೂಪದಲ್ಲಿ 2 ಲಕ್ಷ ರೂಪಾಯಿ  ತೆಗೆದುಕೊಂಡು ಬಾ ಅಂತಾ ಬೈಯ್ದು ಕೈಯಿಂದ ಕಪಾಳದ ಮೇಲೆ   ಹೊಡೆದನು.  ಮತ್ತು  ಅತ್ತೆ ಮಾವ, ಮೈದುದುನ, ನಾದಿನಿ,  ರವರು  ಅಕ್ರಮ ಕೂಟ  ಕಟ್ಟಿಕೊಂಡು ಏಕೋದ್ದೇಶದಿಂದ ನನಗೆ  ತಡೆದು ನಿಲ್ಲಿಸಿ ಕೈಯಿಂದ ಹೊಡೆದು ಅವಾಛ್ಯವಾಗಿ ಬೈಯ್ದು ಜಿವ ಬೆದರಿಕೆ ಹಾಕಿ ತವರು ಮನೆಯಿಂದ ಹೆಚ್ಚಿಗೆ ವರದಕ್ಷಿಣೆ ರೂಪದಲ್ಲಿ ಹಣವನ್ನು ತೆಗೆದುಕೊಂಡು ಬಾ ಎಂದು ದೈಹೀಕವಾಗಿ ಮತ್ತು ಮಾನಸೀಕವಾ ಗಿ  ಕಿರುಕುಳ  ಕೊಟ್ಟರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ನಾರಾಯಣ ತಂದೆ ಭೀಮರಾವ ಗರಡಕರ  ಸಾ|| ಲಾಲಗೇರಿ ಬ್ರಹ್ಮಪೂರ ಗುಲಬರ್ಗಾ ಇವರು 15 ದಿವಸಗಳ ಹಿಂದೆ ದಿನೇಶ ಇವನು ಮೋಟಾರ ಸೈಕಲನಿಂದ ನಮ್ಮ ಬಡಾವಣೆಯ ಮನಸೂರ ಇವರ ಒಂದು ಕೋಳಿಯ ಮೇಲೆ ಹಾಯಿಸಿದ್ದರಿಂದ ಕೊಳಿ ಸತ್ತಿದಕ್ಕೆ ಮನಸೂರ ಇವನು ನನ್ನ ಅಳಿಯ ದಿನೇಶ ಇವನಿಗೆ 300/- ರೂ. ದಂಡ ತೆಗೆದುಕೊಂಡಿದರು ಆ ಸಮಯದಲ್ಲಿ  ಮನಸೂರ ಮತ್ತು ನನ್ನ ಸಂಗಡ ಬಾಯಿಮಾತಿನ ತಕರಾರು ಆಗಿದ್ದು ದಿನಾಂಕ: 31-03-2014  ರಂದು ರಾತ್ರಿ 11 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಸಂಬಂಧಿಕ ವಿಕಾಸ ಮತ್ತು ನಮ್ಮ ಮನೆಯ ಬಾಡಿಗೆಯಲ್ಲಿದ್ದ ನಾಗರಾಜ ನಾವೆಲ್ಲರೂ ಒಬ್ಬರಿಗೊಬ್ಬರು ಮಾತನಾಡುತ್ತ ನಿಂತಿದ್ದರು ಅದೇ ವೇಳೆಯಲ್ಲಿ ಮನಸೂರ ಇವನು ತನ್ನ ಜೊತೆಯಲ್ಲಿ ರಬ್ಬಾನಿ ಇವರೊಂದಿಗೆ ಬಂದವನೆ ಮನಸೂರ ಇವನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಏ ರಾಂಡ ಕೇ ಬೇಟೆ ತುಮ್ ಉಸ್ ದಿನ ಮೇರೆಸಾತ ಜಗಳ ಕ್ಯೂಕರೆ ಅಂದವನೆ ತನ್ನ ಕೈಯಲ್ಲಿದ್ದ ಒಂದು ಚಾಕುವಿನಿಂದ ನನ್ನ ಎಡಗೈ ಮೇಲೆ ಹೊಡೆದು ರಕ್ತಗಾಯ ಮಾಡುತ್ತಾನೆ ರಬ್ಬಾನಿ ಇವನು ಕಲ್ಲಿನಿಂದ ನನ್ನ ಹಣೆಯ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶಬ್ಬೀರ ತಂದೆ ನಬಿ ಸಾಬ ನದಾಫ ಸಾ: ಮದಿಕಾಲೋನಿ ಎಮ್.ಎಸ್.ಕೆ. ಮಿಲ್  ಗುಲಬರ್ಗಾ ರವರು  ದಿನಾಂಕ: 31-03-2014  ರಂದು ಮಧ್ಯಾಹ್ನ 2  ಗಂಟೆಗೆ ಫಿರ್ಯಾದಿಯು ತನ್ನ ದೊಡ್ಡಪ್ಪನ ಮಗನಾದ ಮಹಿಮೊದ್ದಿನ ಈತನ ಅಟೋರೀಕ್ಷಾ ನಂ: ಕೆಎ 32  8636 ನೆದ್ದರಲ್ಲಿ ಕುಳಿತು ಸುಪರ ಮಾರ್ಕೇಟಕ್ಕೆ ಬಂದು ವಾಪಸ ಮನೆಗೆ ಹೋಗುವ ಕುರಿತು ಸುಪರ ಮಾರ್ಕೇಟ ದಿಂದ ಜಗತ ಸರ್ಕಲ್ ಮುಖಾಂತರ ಅಟೋರೀಕ್ಷಾದಲ್ಲಿ ಹೋಗುತ್ತಿದ್ದಾಗ ಮಹಿಮೋದ್ದಿನ ಈತನು ಜಗತ ಸರ್ಕಲ್ ಹತ್ತಿರ ತನ್ನ ಅಟೋರೀಕ್ಷಾವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋ/ಸೈಕಲ್ ಕ್ಕೆ ಕಟ್ ಹೊಡೆಯಲು ಹೋಗಿ ಒಮ್ಮೇಲೆ ಬ್ರೇಕ್ ಹಾಕಿ ಅಟೋರೀಕ್ಷಾ ಪಲ್ಟಿ ಮಾಡಿ ರಕ್ತಗಾಯ ಮಾಡಿ[[ಟರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.