POLICE BHAVAN KALABURAGI

POLICE BHAVAN KALABURAGI

26 August 2017

Kalaburagi District Reported Crimes

ಸಜಾಬಂಧಿ ಖೈದಿ ಸಾವು ಪ್ರಕರಣ :
ಫರತಾಬಾದ ಠಾಣೆ : ಶ್ರೀ ಕೃಷ್ಣಕುಮಾರ  ಮುಖ್ಯ ಅಧಿಕ್ಷಕರು  ಕೇಂದ್ರ ಕಾರಾಗೃಹ  ಕಲಬುರಗಿ ರವರು ಕಾರಾಗೃಹದ ಸಜಾ ಬಂಧಿ ಸಂಖ್ಯೆ 19992 ಪ್ರಕಾಶ ತಂದೆ ಮಲ್ಕಪ್ಪಾ ಕನ್ನಡಗಿ ಸಾ: ರಾಮನಗರ ಕಲಬುರಗಿ ಸದರಿಯವನು ಇಂದು ದಿನಾಂಕ 25/08/2017 ರಂದು ಎದೆ ನೋವು ಆಗುತ್ತಿದೆ ಎಂದು ತಿಳಿಸಿದ ಪ್ರಯುಕ್ತ  ಜೈಲಿನ ಒಳ ಆಸ್ಪತ್ರೆಯಲ್ಲಿ  ವೈದ್ಯಕೀಯ ಸಿಬ್ಬಂದಿ ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ತುರ್ತಾಗಿ  ಜಿಲ್ಲಾ ಆಸ್ಪತ್ರೆಗೆ ಕಳುಹಿಸಲು ಸಲಹೆ ನೀಡಿದ ಮೇರೆಗೆ ಜೈಲು ಸಿಬ್ಬಂದಿ ಬೆಂಗಾವಲು ಮೂಲಕ  ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕಳುಹಿಸಲಾಗಿರುತ್ತದೆ ಸದರಿ ಬಂದಿಗೆ ತಪಾಸಣೆ  ಮಾಡಿರುವ ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಯ ವೈದ್ಯರು ಸದರಿ ಬಂಧಿಯು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂದು ಬೆಂಗಾವಲು ಸಿಬ್ಬಂದಿಯವರು ಈ ಸಂಸ್ಥೆಯ  ಮುಖ್ಯ ದ್ವಾರಪಾಲಕರಿಗೆ ದೂರವಾಣಿ ಮೂಲಕ ತಿಳಿಸಿರುತ್ತಾರೆ. ಸದರಿ ಬಂಧಿಗೆ ಗೌರವಾನ್ವಿತ 1 ನೇ ಅಪರ ಜೆಎಮ್‌ಎಪ್‌‌ಸಿ ನ್ಯಾಯಾಲಯ ಕಲಬುರಗಿ ಇವರ ಸಿಸಿ ಸಂಖ್ಯೆ 1563/08 (ಕಮಲಾಪೂರ ಪೊಲೀಸ ಠಾಣೆಯ ಗುನ್ನೆ ಸಂಖ್ಯೆ 50/08) ರಲ್ಲಿ ದಿನಾಂಕ: 30/11/2016 ರಂದು 2 ವರ್ಷ 6 ತಿಂಗಳು ಕಠಿಣ ಶಿಕ್ಷೆ ಹಾಗೂ ದಂಡ ರೂ 10.000/- ರೂದಂಡ ಕಟ್ಟಲು ತಪ್ಪಿದಲ್ಲಿ 09 ತಿಂಗಳು 15 ದಿನ ಶಿಕ್ಷೆ ಅನುಭವಿಸುವಂತೆ ಆದೇಶವಿರುತ್ತದೆ. ಸದರಿ ಬಂಧಿಯು ಮೃತಪಟ್ಟ ವಿಷಯವನ್ನು ಮೃತ ಬಂಧಿಯ ಸಂಬಂಧಿಕರಿಗೆ ದೂರವಾಣಿ ಮೂಲಕ ತಿಳಿಸಲಾಗಿದೆ ಹಾಗೂ ಈ ವಿಷಯವನ್ನು ಕಮಲಾಪೂರ ಪೊಲೀಸ ಠಾಣೆ ಅಧಿಕಾರಿಗಳಿಗೂ ಸಹ ದೂರವಾಣಿ ಮೂಲಕ ತಿಳಿಸಲಾಗಿರುತ್ತದೆ. ಮೃತ ಬಂಧಿಯ ಶವವನ್ನು ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದು ಶವದ ಮರಣೊತ್ತರ ಪರೀಕ್ಷೆ, ಶವ ಪಂಚನಾಮೆ, ಮಾಡಿಸಲು ಕೋರಿದ ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಹಲ್ಲೆ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀಮತಿ ಜೈನಾಬಾಯಿ ಗಂಡ ಶಿವಾಜಿ ಚವ್ಹಾಣ ಸಾ:ಭೀಮನಾಳ  ತಾಂಡಾ ತಾ:ಜಿ:ಕಲಬುರಗಿ ಇವರ ಗಂಡನಿಗೆ ಕುಷ್ಟರೋಗ ಆಗಿದ್ದು  ಈಗ ಸೂಮಾರು 8 ವರ್ಷಗಳ ಹಿಂದೆ ನಾವು ಮತ್ತು ನಮ್ಮ ತಾಂಢಾದ ಕಾರಬಾರಿ ಖಾಂದಾನದವರು ಕೂಡಿಕೊಂಡು ನಮ್ಮ ತಾಂಡಾದ ಎದುರಿಗೆ ಲೋಕಮಾಸಂದ ಮತ್ತು ಮಹಾಂಕಾಳಿ ಸಣ್ಣ ಗುಡಿಯು ಕಟ್ಟಿ ಪ್ರತಿ ಶ್ರಾವಣ ಮಾಸದ ಅಮವಾಸೆಯ ದಿವಸ ತಾಂಡಾದ ಎಲ್ಲರೂ ಜನರು ಕೂಡಿ ಜಾತ್ರೆ ಮಾಡುತ್ತಾ ಬಂದಿರುತ್ತೆವೆ. ಇದೆ ಸೋಮವಾರ ಖಾಂಡ ಮಾಡಿ ಮಂಗಳವಾರದ ದಿವಸ ಮಹಾಂಕಾಳಿ ದೇವಿಯ ಪೂಜೆ ಮಾಡಿ ದಿವಸ ತಾಂಢಾದ ಎಲ್ಲಾ ಜನರಿಗೆ ಊಟ ಪ್ರಸಾದ ಕೋಟ್ಟಿರುತ್ತೆವೆ. ಅಂದಿನಿಂದ ನಮ್ಮ ತಾಂಢಾದ ಸಂಜುಕುಮಾರ ತಂದೆ ತುಕಾರಾಮ ಚವ್ಹಾಣ ನಮ್ಮ ಮೇಲೆ ವೈಷಮ್ಯ ಸಾಧಿಸಿ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದನು. ಹಿಗಿದ್ದು ಇಂದು ದಿನಾಂಕ:24.08.2017 ರಂದು ಬೆಳಿಗ್ಗೆ 08.30 ಗಂಟೆಗೆ ನಾನು ನನ್ನ ಗಂಡ ಮಗನಾದ ಚಂದ್ರಕಾಂತ ಎಲ್ಲರೂ ರೇಖು ಪೂಜಾರಿ ಅಂಗಡಿಯ ಎದುರಿಗೆ ನಿಂತುಕೊಂಡಾಗ ಅಲ್ಲಿಗೆ ಬಂದ ಸಂಜುಕುಮಾರ ಈತನು ನನ್ನ ಗಂಡನಿಗೆ ನೋಡಿ ಕುಷ್ಟ ರೋಗ ಇದೆ ಅವನಿಗ್ಯಾರು ಮುಟ್ಟಿಸಿಕೋಳ್ಳಬಾರದು ಆದರು ಸಹ ಮಹಾಂಕಾಳಿ ಜಾತ್ರೆಯಲ್ಲಿ ಓಡಾಡಿರುತ್ತಾನೆ ಅಂತಾ ಬೈಯ ತೊಡಗಿದನು ಆಗ ನಾನು ಯಾಕ ನನ್ನ ಗಂಡನಿಗೆ ಬೈಯುತ್ತಿ ದೇವರು ತಂದ ವೇಳೆ ಇದೆ ಅಂದರು ಸಂಜುಕುಮಾರ ಈತನು ನನಗೆ ರಂಡಿ ನನಗೆ ಎದುರು ಮಾತನಾಡುತ್ತಾಳೆ ಅಂತಾ ಬೈದು ಅಲ್ಲೆಬಿದ್ದಿದ್ದ ಕಟ್ಟಿಗೆ ತೆಗೆದುಕೊಂಡು ನನ್ನ ಎಡಗೈ ಹಸ್ತದ ಮೇಲ್ಬಾದಲ್ಲಿ ಹೋಡೆದು ರಕ್ತಗಾಯ ಪಡಿಸಿದನು. ಅಲ್ಲದೆ ಅದೇ ಕಟ್ಟಿಗೆಯಿಂದ ನನ್ನ ಬೆನ್ನಿಗೆ ಎರಡು ಛಪ್ಪಿಯ ಮೇಲೆ ಹೋಡೆದು ಗುಪ್ತ ಪೆಟ್ಟು ಮಾಡಿರುತ್ತಾನೆ ಆಗ ನನ್ನ ಮಗ ಚಂದ್ರಕಾಂತ ಜಗಳ ಬಿಡಿಸಲು ಬಂಧಾಗ ಅವನಿಗು ಕೈಯಿಂದ ಹೋಡೆಬಡೆ ಮಾಡಿರುತ್ತಾನೆ. ಆಗ ಅಲ್ಲೆಇದ್ದ ನನ್ನ ಗಂಡ, ನನ್ನ ಭಾವ ತುಕಾರಾಮ,ಮೋನು ಚವ್ಹಾಣ ಎಲ್ಲರೂ ಕೂಡಿಕೊಂಡು ನನಗೆ ಹೋಡೆಯುವುದನ್ನು ಬಿಡಿಸಿಕೊಂಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀ ಸಂಜುಕುಮಾರ ತಂಧೆ ತುಕಾರಾಮ ಚವ್ಹಾಣ ಸಾ:ಭೀಮನಾಳ ತಾಂಡಾ ತಾ:ಜಿ:ಕಲಬುರಗಿ ರವರು ತಾಂಡಾದಲ್ಲಿ ಲೋಕಮಸಾಂದ ಮತ್ತು ಮಹಾಂಕಾಳಿ ದೇವಿಯ ಸಲುವಾಗಿ ತಾಂಡಾದವರೆಲ್ಲರು ಕೂಡಿ 65.65 ಜಾಗವನ್ನು ಕೋಟ್ಟಿದ್ದು ಜಾಗದಲ್ಲಿ ತುಕಾರಾಮ ಮತ್ತು ಅವರ ತಮ್ಮ ಶಿವಾಜಿ ಆಜಾಗವನ್ನು ತಮ್ಮ ಕಬ್ಜೆಯಲ್ಲಿ ತೆಗೆದುಕೊಂಡಿದ್ದು. ನಮ್ಮ ತಾಂಢಾದವರೆಲ್ಲರೂ ದೇವರಿಗೆ ಕೋಟ್ಟ ಜಾಗ ಬಿಟ್ಟು ಕೋಡಿರಿ ಅಂತಾ ಹೇಳಿದಾಗ ಅವರು ಜಾಗ ಬಿಟ್ಟುಕೊಡದೆ ಅವರೆ ಬಳಸಿಕೋಳ್ಳುತ್ತಿದ್ದಾರೆ. ಹಿಗಿದ್ದು ನಿನ್ನೆ ದಿನಾಂಕ:24.08.2017 ರಂದು  ಬೆಳಿಗ್ಗೆ 08.30 ಗಂಟೆಯ ಸೂಮಾರಿಗೆ ನಾನು ರೇಖು ಪುಜಾರಿ ಅಂಗಡಿಯ ಎದುರಿಗೆ ನಿಂತಾಗ 1. ಚಂದ್ರಕಾಂತ ತಂದೆ ಶಿವಾಜಿ ಚವ್ಹಾಣ 2. ತುಕಾರಾಮ ತಂದೆ ಮೇಗು ಚವ್ಹಾಣ ಪಂಡಿತ ತಂದೆ ತುಕಾರಾಮ ಚವ್ಹಾಣ ಜೈನಾಬಾಯಿ ಗಂಡ ಶಿವಾಜಿ ಚವ್ಹಾಣ ಸಾ:ಎಲ್ಲರೂ ಭೀಮನಾಳ ತಾಂಡಾ ಇವರೆಲ್ಲರೂ ನಾನು ಇದ್ದಲ್ಲಿಗೆ ಬಂದು ಅವರಲ್ಲಿ ಚಂಧ್ರಕಾಂತ ಈತನು ನಗೆ ಭೋಸಡಿ ಮಗನೆ ದೇವಿಯ ಜಾಗ ಯಾರು ಕೇಳುತ್ತಿಲ್ಲ ನಿನೆಕೆ ಕೇಳುತ್ತಿ ಅಂತಾ ಬೈದು ತನ್ನ ಕೈಯಲ್ಲಿದ್ದ ಬಿಡಿಗೆಯಿಂದ ನನ್ನ ತಲೆಯ ಮೇಲೆ ಹೋಡೆದು ರಕ್ತಗಾಐ ಪಡಿಸಿದನು ತುಕಾರಾಮ ಈತನು ರಂಡಿ ಮಗನಿಗೆ ಬಹಾಳಸೋಕ್ಕು ಆದಾ ಅಂತಾ ಬೈದು ಚಂಧ್ರಕಾಂತನ ಕೈಯಲ್ಲಿದ್ದ ಬಡಿಗೆಯನ್ನು ಕಸಿದುಕೊಂಡು ನನ್ನ ಬಲಗೈ ಬೆರಳುಗಳ ಮೇಲೆ ಹೋಡೆದು ರಕ್ತಗಾಯ ಮಾಡಿದನು. ನನ್ನ ಹೆಬ್ಬರಳಿಗೆ, ಹೆಬ್ಬರಳಿನ ಪಕ್ಕದ ಬೆರಳಿಗೆ ಹೋಡೆದಿದ್ದರಿಂದ ಮುರಿದಂತೆ ಆಗಿದೆ ಪಂಡಿತ ಈತನು ನನಗೆ ಕೈಯಿಂದ ಹೋಟ್ಟೆಗೆ ಬೆನ್ನಿಗೆ ಹೋಡೆದು ಗುಪ್ತ ಪೆಟ್ಟು ಮಾಡಿರುತ್ತಾನೆ. ಜೈನಾಬಾಯಿ ಇವಳು ಹಾಟ್ಯಾ ಯಾವಾಗಲು ನನಗೆ ಜಾಗದ ವಿಷಯದಲ್ಲಿ ತಕರಾರು ಮಾಡುತ್ತಾನೆ. ಇವನಿಗೆ ಬಿಡಬ್ಯಾಡರಿ ಖಲಾಸ ಮಾಡರಿ ಅಂತಾ ಒದರಾಡಿರುತ್ತಾಳೆ. ಅಲ್ಲೆಇದ್ದ ಭೋಜು ತಂಧೆ ಸೋಮು ನಾಯಕ ಮಾರುತಿ ತಂದೆ ಪೋಮು ಚವ್ಹಾಣ ಗೇಮು ತಂದೆ ಶಿವರಾಮ ಚವ್ಹಾಣ ಮೋನು ತಂದೆ ಢಾಕು ಚವ್ಹಾಣ ಇವರುಗಳು ಜಗಳವನ್ನು ಬಿಡಿಸಿಕೊಂಡಿರುತ್ತಾರೆ ಕಾರಣ ನನಗೆ ಹೋಡೆಬಡೆ ಮಾಡಿದ ಚಂಧ್ರಕಾಂತ ಹಾಗೂ ಇತರರ ವಿರುದ್ದ ಕಾನೂನ ರೀತಿ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.