POLICE BHAVAN KALABURAGI

POLICE BHAVAN KALABURAGI

25 October 2013

Gulbarga District Reported Crimes

ಜಾತಿ ನಿಂದನೆ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ಸಿದ್ದಪ್ಪ ತಂದೆ ತಿಪ್ಪಣ್ಣ ಗುರುಕಾರ  ಸಾ: ಯಾಳವಾರ ದಿನಾಂಕ: 24-10-2013 ರಂದು ಮುಂಜಾನೆ 11-00 ಗಂಟೆಗೆ ಯಾಳವಾರ ಗ್ರಾಮದ ವಾಲ್ಮಿಕಿ ಕಟ್ಟೆಯ ಹತ್ತಿರ ಪಿರ್ಯಾದಿ ಮತ್ತು ಪಿರ್ಯಾದಿ ತಾಯಿ ಮಲ್ಲಮ್ಮ ಗಂಡ ತಿಪ್ಪಣ್ಣ ಗುರುಕಾರ ಇಬ್ಬರು  ಅದೇ ಗ್ರಾಮದ ದಸ್ತಗಿರ ಸಾಬ ತಂದೆ ಸೈಪನ ಸಾಬ ಕೊಡಗೊಳಿ ಇವನಿಗೆ ಮೊನ್ನೆ ದಿನಾಂಕ: 22-10-2013 ರಂದು ಪಿರ್ಯಾದಿ ತಾಯಿಗೆ ಹೊಡೆದ ವಿಷಯದಲ್ಲಿ ಕೇಳಿದಕ್ಕೆ ಅರೋಪಿತರೂ ಪಿರ್ಯಾದಿಗೆ ಮತ್ತು ಅವನ  ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿ ತಾಯಿಗೆ ಕೈಯಿಂದ ಮತ್ತು ಚಪ್ಪಲಿಯಿಂದ ಹೊಡೆ ಬಡೆ ಮಾಡಿ  ಜಾತಿ ನಿಂದನೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಮಾಲಾಶ್ರೀ ಗಂಡ ಚೇತನ ಮಾನೆ  ಸಾ; ಕಮಲಾಪೂರ ತಾ; ಜಿ; ಗುಲಬರ್ಗಾ ರವರು ತನ್ನ ತವರು ಮನೆಯು ಮಹಾರಾಷ್ಟ್ರದ ರಾಜ್ಯದ ಲಾತುರ ಜಿಲ್ಲೆಯ ನಿಲಂಗಾದ ಶಿವಾಜಿ ನಗರ ಇದ್ದು,  ಈಗ ಸುಮಾರು 06 ವರ್ಷಗಳ ಹಿಂದೆ ಕಮಲಾಪೂರ ಗ್ರಾಮದ ಚೇತನ ಮಾನೆ ಇತನ ಸಂಗಡ ಮದುವೆಯಾಗಿದ್ದು, ತನ್ನಗೆ ಪ್ರೀತಮ ಅಂತ 04 ವರ್ಷದ ಗಂಡು ಮಗು ಇದ್ದು, ಮದುವೆಯಾದ ನಂತರ ಎರಡು ವರ್ಷದ ವರೆಗೆ ಗಂಡನ ಮನೆಯವರು ಚನ್ನಾಗಿ ನೊಡಿಕೊಂಡು, ನಂತರ ನಾನು ಕಾಣಲಿಕ್ಕೆ ಚನ್ನಾಗಿ ಇಲ್ಲ ಅಂತ ಸಂಶಯ ವ್ಯಕ್ತಪಡಿಸಿಸುತ್ತಿದ್ದರು ಹಾಗೂ ಸಮಯಕ್ಕೆ ಊಟ ಕೋಡದೆ ಹಿಂಸೆ ಕೊಡುತ್ತಿದ್ದರು ನಂತರ ನನ್ನ ತಂದೆಯವರು    ನಮ್ಮುರಿನಲ್ಲಿನ ಜಮೀನು ಮಾರಾಟ ಮಾಡಿದ್ದರಿಂದ ನನ್ನ ಗಂಡ ಹಾಗೂ ಮನೆಯವರು ಮೋಬೈಲ ಅಂಗಡಿಯಸಲುವಾಗಿ4 ಲಕ್ಷ ರೂ ತೆಗೆದುಕೊಂಡು ಬಾ ಅಂತ ಹೊಡೆಬಡೆಮಾಡಿ ತೊಂದರೆ ಕೊಟ್ಟರು ಸಹ ನಾನು ತವರು ಮನೆಯಿಂದ ನಾಲ್ಕು ಲಕ್ಷ ರೂ ತರದೆ ಇರುವದ್ದರಿಂದ ದಿನಾಂಕ 07-10-2013 ರಂದು ಬೆಳಗ್ಗೆ 07-00 ಗಂಟೆಗೆ ಮನೆಯಲ್ಲಿ ಕಸಗುಡುಸುತ್ತಿದ್ದಾಗ ಗಂಡ ,ಅತ್ತೆ,ನಾದಿನಿ, ಮಾವ, ಮೈದುನ ಎಲ್ಲರು ಕೂಡಿ ತನ್ನ  ಮೈ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಮಲ್ಲಿಕಾರ್ಜುನ ತಂ ಸಿದ್ರಾಮಪ್ಪ ಪಾಟೀಲ  ಸಾ : ಜಾಂತಿ ತಾ :ಬಾಲ್ಕಿ ಜಿ : ಬೀದರ  ರವರು ದಿನಾಂಕ 22-10-2013 ರಂದು  ಬೆಳಗ್ಗೆ 11.30 ಎ,ಎಮ್,ಕ್ಕೆ ಮೋಟಾರ ಸೈಕಲ ನಂ ಕೆ,, 39 ಜೆ9962 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಕೊಂಡು ಬಂದು ಕುರಿಕೋಟ ಬ್ರಿಡ್ಜ ಸಮೀಪ ಸ್ಕಿಡಾಗಿ ಕೆಳಗೆ ಬಿದ್ದಾಗ ಮೋಟಾರ ಸೈಕಲನ ಹಿಂದಿನ ಟೈರ ಬಲಗಾಲಿನ ಮೋಳಕಾಲ ಕೆಳಗೆ ಹೋಗಿ ಬಲಗಾಲ ಮುರಿದಂತೆ ಆಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂಔ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಚೌಕ ಠಾಣೆ : ಶ್ರೀ ಚಂದ್ರಕಾಂತ ತಂದೆ ಸೈಬಣ್ಣ ಪೊಲೀಸ್ ಪಾಟೀಲ ಜೆ.ಆರ್ ನಗರ ಆಳಂದರೋಡ ಗುಲಬರ್ಗಾ ದೇವಿಂದ್ರಪ್ಪ & ಕಂಪನಿ ಅಡತಿಯ ಅಂಗಡಿಯಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದಾಗ ಹಣಮಂತ ತಂದೆ ಅಂಬಣ್ಣ ಅಣ್ಣಿಗೇರಿ  ಸಾಃ ದಿಗ್ಗಾಂವ ತಾಃಜಿಃ ಗುಲಬರ್ಗಾ ಅಲ್ಲಿಗೆ ಬಂದು ನಿನ್ನ ಗೆಳೆಯನಾದ ಸಿದ್ರಾಮಯ್ಯ ಸ್ವಾಮಿ ಇತನು ನನಗೆ ಕೊಡಬೇಕಾದ ಹಣ ಕೊಡದೆ ಸತಾಯಿಸುತ್ತಿದ್ದು,  ನೀನು ಅವನು ಕೂಡಿ ನನಗೆ ಕೊಡಬೇಕಾದ ಹಣ ಮುಳಗಿಸಬೇಕು ಅಂತ ಮಾಡಿರಿ ಅಂತ ಅಂದವನೆ ತನ್ನ ಹತ್ತಿರ ಇದ್ದ ಮಚ್ಚು  ತೆಗೆದು ನನಗೆ ಹಿಡಿದು ಮಗನೆ ನಿನಗೆ ಇವತ್ತು ಖಲಾಸ ಮಾಡುತ್ತೇನೆ ಅಂತ ಎಡಭಾಗದ ಕುತ್ತಿಗೆಗೆ ಹೊಡೆಯಲು ಬಂದಾಗ ಎಡಗೈ ಅಡ್ಡ ತಂದಿದ್ದಕ್ಕೆ ಎಡಗೈ ಅಂಗೈಗೆ ಭಾರಿ ರಕ್ತಗಾಯ, ಕುತ್ತಿಗೆಗೆ ತರಚೀದಗಾಯ ಪಡಿಸಿದ್ದು ಸದರಿಯವನು ಕೊಲೆ ಮಾಡುವ ಉದ್ದೇಶದಿಂದ ನೆಲಕ್ಕೆ ಹಾಕಿ ಹೊಡೆಯಬೇಕೆನ್ನುವಷ್ಟರಲ್ಲಿ ಅಲ್ಲಿಯ ಜನ ಬಿಡಿಸಿಕೊಂಡಿದ್ದು  ಇರುತ್ತದೆ. ನನಗೆ ಕೊಲೆ ಮಾಡಲು ಪ್ರಯತ್ನ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.