POLICE BHAVAN KALABURAGI

POLICE BHAVAN KALABURAGI

21 May 2011

GULBARGA DIST REPORTED CRIMES

ಹುಡುಗ ಕಾಣೆಯಾದ ಪ್ರಕರಣ :-
ಸ್ಟೇಷನ ಬಜಾರ ಠಾಣೆ :
ಶ್ರೀ ಶಂಕರ್ ಸಿಂಗ್ ತಂದೆ ಉಮಾಸಿಂಗ್ ರಜಪೂತ ಸಾ|| ಉದಯನಗರ ಗುಲಬರ್ಗಾ ರವರು, ನನ್ನ ಮಗ ಅಮರಸಿಂಗ್ ನು ಟ್ಯೂಷನ್ ಗೆ ಹೋಗಿ ಬರುತ್ತೇನೆ. ಅಂತಾ ಹೇಳಿ ಹೋದವನು ಮನೆಗೆ ವಾಪಸ್ಸು ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ. ಕಾರಣ ಪತ್ತೆ ಮಾಡಿ ಕೊಡಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ :-
ರೋಜಾ ಠಾಣೆ :
ಶ್ರೀ ನಾಗರಾಜ ತಂದೆ ಶಾಂತಲಿಂಗಪ್ಪಾ ದುಕಾನಂದಾರ ಸಾ|| ಗಾಂದಿ ನಗರ ಗುಲಬರ್ಗಾ ರವರು, ದಿ:19-05-11 ರಂದು ರಾತ್ರಿಯ ಸಮಯದಲ್ಲಿ ಯಾರೋ ಅಪರಿಚಿತ ಕಳ್ಳರು ನಮ್ಮ ಕಿರಾಣಿ ಅಂಗಡಿಯ ಶೇಟರ ಪಟ್ಟಿ ಬೆಂಡ್ ಮಾಡಿ ಒಳಗಡೆ ಹೋಗಿ ಅಂಗಡಿಯಲ್ಲಿದ್ದ ಗೋಲ್ಡಪ್ಲಾಕ್, ಬ್ರಿಸ್ಟಲ್, ಕಿಂಗಸೈಜ್ ಗೋಲ್ಡ ಪ್ಲಾಕ್, ವೀಲ್ಸ್ ಸಿಗರೆಟ ಮತ್ತು ಮಾಣಿಕಚಂದ ಗುಟಕಾ ಹೀಗೆ ಒಟ್ಟು 24,060/- ರೂ. ಬೆಲೆಬಾಳುವದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.