POLICE BHAVAN KALABURAGI

POLICE BHAVAN KALABURAGI

23 May 2015

Kalaburagi District Reported Crimes.

ಜೇವರ್ಗಿ ಪೊಲೀಸ್ ಠಾಣೆ : ದಿ  23-05-2015 ರಂದು ಮುಂಜಾನೆ 8.00 ಗಂಟೆಯ ಸುಮಾರಿಗೆ ಜೇವರಗಿಯಲ್ಲಿದ್ದಾಗ, ಜೇವರಗಿ ತಾಲೂಕಿನ ಮದರಿ  ಗ್ರಾಮ ಸೀಮಾಂತರದಲ್ಲಿ ಬೀಮಾ ನದಿಯ ದಂಡೆಯಿಂದ ಟ್ರ್ಯಾಕ್ಟರ್‌ಗ ಳಲ್ಲಿ ಸಂಬಂಧಪಟ್ಟ ಇಲಾಖೆಯ ಪರವಾನಿಗೆ ಇಲ್ಲದೆ ರಾಯಲ್ಟಿ ಪಡೆದುಕೊಳ್ಳದೆ ಮರಳು (ಉಸಕು) ಆಕ್ರಮವಾಗಿ ಕಳ್ಳತನದಿಂದ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮೀದಾರರಿಂದ ಪೊನ ಮೂಲಕ ಖಚಿತ ಬಾತ್ಮೀ ಬಂದಿದ್ದು ಇರುತ್ತದೆ. ನಂತರ ನಾನು ಜೇವರಗಿ ಪೊಲೀಸ್ ಠಾಣೆಗೆ ಬಂದು, ಮಾನ್ಯ ಶ್ರೀ ಪಂಡಿತ ವಿ ಸಗರ ಪಿಎಸ್ಐ ಜೇವರಗಿ ಪೊಲೀಸ್ ಠಾಣೆ ರವರಿಗೆ ಬಾತ್ಮೀ ವಿಷಯ ತಿಳಿಸಿ ದಾಳಿ ಮಾಡುವ ಕಾಲಕ್ಕೆ ತಮ್ಮ ಸಿಬ್ಬಂದಿಯವರೊಂದಿಗೆ ಹಾಜರಿದ್ದು ಸಹಕರಿಸಲು ಕೋರಿಕೊಂಡು ನಂತರ ಇಬ್ಬರೂ ಪಂಚ ಜನರಿಗೆ ಬರಮಾಡಿಕೊಂಡು ಅವರಿಗೂ ಮತ್ತು ಠಾಣೆಯ ಸಿಬ್ಬಂದಿಯವರಾದ ಶ್ರೀ ಬೀರಣ್ಣಾ ಸಿಪಿಸಿ 1187 ಶ್ರೀ ಶಿವರಾಯ ಸಿಪಿಸಿ 859, ಇವರಿಗೂ ದಾಳಿ ಮಾಡುವ ವಿಷಯ ತಿಳಿಸಿ ನಂತರ ನಾನು ಮತ್ತು ಪಿ.ಎಸ್.ಐ ಸಾಹೇಬರು ಮತ್ತು ಅವರ ಸಿಬ್ಬಂದಿ ಜನರು ಪಂಚರೊಂದಿಗೆ ಒಂದು ಖಾಸಗಿ ಜೀಪನಲ್ಲಿ ಕುಳಿತು ಎಲ್ಲರೂ ಜೇವರಗಿ ಪೊಲೀಸ್ ಠಾಣೆಯಿಂದ ಮುಂಜಾನೆ 8.30 ಗಂಟೆಗೆ ಮದರಿ ಗ್ರಾಮದ ಕಡೆಗೆ ಹೊರಟು ಮುಂಜಾನೆ 10.00 ಗಂಟೆಗೆ ಮದರಿ ಗ್ರಾಮದ ಹತ್ತಿರ ಭೀಮಾ ನದಿಯ ಕಡೆಗೆ ಹೊಗುವಾಗ ಭೀಮಾ ನದಿಯ ಕಡೆಯಿಂದ ರೊಡಿನಲ್ಲಿ ಬರುತ್ತಿದ್ದ ಮರಳು ತುಂಬಿದ ಟ್ರ್ಯಾಕ್ಟರಗಳಿಗೆ ನೋಡಿ ನಾವು ಜೀಪನ್ನು ನಿಲ್ಲಿಸಿ ಎಲ್ಲರೂ ಕೇಳಗೆ ಇಳಿದು ಟ್ರ್ಯಾಕ್ಟರ್‌ಗಳಿಗೆ ಕೈ ಮಾಡಿ ನಿಲ್ಲಿಸಲು ಸದರಿ ಮರಳು ತುಂಬಿ ಟ್ರ್ಯಾಕ್ಟರ್ ಚಾಲಕರು ಟ್ರ್ಯಾಕ್ಟರಗಳು ನಿಲ್ಲಿಸದೆ ಸ್ವಲ್ಪ ಮುಂದೆ ತೆಗೆದುಕೊಂಡು ಹೋಗಿ ರೊಡಿನಲ್ಲಿ ನಿಲ್ಲಿಸಿದರು. ಹಾಗೇಯೇ ತರಾತುರಿಯಲ್ಲಿ ಸದರಿ ಟ್ರ್ಯಾಕ್ಟರಗಳ ಚಾಲಕರು ತಮ್ಮ ತಮ್ಮ ವಾಹನಗಳಿಂದ ಇಳಿದು ಓಡಿ ಹೋಗುತ್ತಿದ್ದಾಗ ನಾನು ಮತ್ತು ಪೊಲೀಸರು ಕೂಡಿ ಅವರ ಹಿಂದೆ ಬೇನ್ನು ಹತ್ತಿ ಹಿಡಯಲು ಇಬ್ಬರೂ ಸಿಕ್ಕಿದ್ದು ಅವರ ಹೆಸರು ವಿಳಾಸ ಕೇಳಲಾಗಿ ಅವರಲ್ಲಿ ಒಬ್ಬನು ತನ್ನ ಹೆಸರು 1] ನಿಂಗಣ್ಣಾ ತಂದೆ ಅಮೃತ ಗೌನಳ್ಳಿ, ವಯಃ 23 ವರ್ಷ, ಜಾತಿಃ ಕುರುಬ ಉಃ ಟ್ರ್ಯಾಕ್ಟರ್ ಡ್ರೈವರ ಕೆಲಸ ಸಾಃ ಮದರಿ ತಾಃಜೇವರಗಿ ಜಿಃ ಕಲಬುರಗಿ, ಟ್ರ್ಯಾಕ್ಟರ್ ನಂ ಕೆ.ಎ.32-ಟಿ-4964 ನೇದ್ದರ ಚಾಲಕ ಅಂತಾ ಹೇಳಿದನು, ಮತ್ತೊಬ್ಬನಿಗೆ ಕೇಳಲು ಅವನು ತನ್ನ ಹೆಸರು 2] ಸತ್ತರ ತಂದೆ ಹಾಜೀ ಸೂಗೂರ ವಯಃ 20 ವರ್ಷ, ಜಾತಿಃ ಮುಸ್ಲಿಂ ಉಃ ಡ್ರೈವರ್ ಕೆಲಸ ಸಾಃ ಮದರಿ ಟ್ರ್ಯಾಕ್ಟರ್ ನಂ ಕೆ.ಎ-33-ಟಿಎ-2294 ಅಂತಾ ತಿಳಿಸಿದನು, ನಂತರ ಅವರಿಗೆ ಸದರಿ ಟ್ರ್ಯಾಕ್ಟರಗಳಲ್ಲಿ ಭೀಮಾ ನದಿಯಿಂದ ಮರಳು [ಉಸುಕು] ತುಂಬಿಕೊಂಡು ಸಾಗಾಣಿಕೆ ಮಾಡಲು ನೀಮ್ಮ ಹತ್ತಿರ ಸಂಬಂದಪಟ್ಟ ಇಲಾಖೆಯಿಂದ ಪರವಾನಿಗೆ ಪತ್ರ ರಾಯಲ್ಟಿ ವಗೈರೆ ಇದೇಯೇ ಅಂತಾ ಕೇಳಲಾಗಿ ಅವರು ನಮ್ಮ ಹತ್ತಿರ ಯಾವುದೇ ಪರವಾನಿಗೆ ಪತ್ರ ಮತ್ತು ರಾಯಲ್ಟಿ ಪತ್ರ ಇರುವುದಿಲ್ಲಾ ಕಳ್ಳತನದಿಂದ ಮರಳು [ಉಸುಕು] ತುಂಬಿಕೊಂಡು ಸಾಗಿಸುತ್ತಿದ್ದೆವೆ, ಅಂತಾ ತಿಳಿಸಿದರು. ಸದರಿ ಟ್ರ್ಯಾಕ್ಟರಗಳಲ್ಲಿ ಸಂಭಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪತ್ರಗಳು ಪಡೆಯದೆ ಕಳ್ಳತನದಿಂದ ಮರಳು (ಉಸಕು) ಸಾಗಿಸುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡ ನಂತರ ನಾನು ಮತ್ತು ಪಂಚರು ಪರೀಶಿಲಿಸಿ ನೊಡಲಾಗಿ 1] ಟ್ರ್ಯಾಕ್ಟರ್ ನಂ ಕೆ.ಎ.32-ಟಿ-4964 ನೇದ್ದರಲ್ಲಿ 1 ಬ್ರಾಸ್ [ಉಸುಕು] ಮರಳು ಅ.ಕಿ. 500=00 ರೂ  ಮತ್ತು ಟ್ರ್ಯಾಕ್ಟರ್ ಅ.ಕಿ. 1,00,000=00 ರೂ 2] ಟ್ರ್ಯಾಕ್ಟರ್ ನಂ ಕೆ.ಎ.-33-ಟಿ-2294 ನೇದ್ದರಲ್ಲಿ 1 ಬ್ರಾಸ್ ಮರಳು [ಉಸುಕು] ಅ.ಕಿ. 500=00 ರೂ ಟ್ರ್ಯಾಕ್ಟರ್ ಅ.ಕಿ.1,00,000=00 ರೂ ಇದ್ದು ಸದರಿ  2 ಟ್ರ್ಯಾಕ್ಟರಗಳಲ್ಲಿನ ಒಟ್ಟು 2 ಬ್ರಾಸ್ ಮರಳು ಅ.ಕಿ 1000/-ರೂ ಕಿಮ್ಮತ್ತಿನದ್ದು ಮತ್ತು ಸದರಿ ಟ್ರ್ಯಾಕ್ಟರಗಳನ್ನು ಸ್ಥಳದಲ್ಲಿಯೇ ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆ ಮೂಲಕ ವಶಪಡಿಸಿಕೊಳಲಾಯಿತು, ಸದರಿ ಜಪ್ತಿ ಪಂಚನಾಮೆಯನ್ನು ದಿ 23-05-2015 ರಂದು ಮುಂಜಾನೆ 11.00 ಗಂಟೆಯಿಂದ 12.00 ಗಂಟೆಯವರೆಗೆ ಜಪ್ತಿ ಪಂಚನಾಮೆ ಬರೆದು ಮುಗಿಸಲಾಯಿತು. ನಂತರ ಪೊಲೀಸ್ ಸಿಬ್ಬಂದಿಯವರ ಸಹಾಯದಿಂದ ಮೇಲೆ ನಮೂದಿಸಿದ 2 ಟ್ರ್ಯಾಕ್ಟರಗಳನ್ನು ಹಾಗೂ ಇಬ್ಬರು ಆರೊಪಿತರೊಂದಿಗೆ ಮರಳಿ ಪೊಲೀಸ್ ಠಾಣೆಗೆ ಮದ್ಯಾಹ್ನ 02.00 ಗಂಟೆಗೆ ಬಂದು ಮೇಲೆ ನಮೂದಿಸಿದ ಟ್ರ್ಯಾಕ್ಟರ್‌ಗಳ ಚಾಲಕರ ವಿರುದ್ದ ಮುಂದಿನ ಕಾನೂನು ಕ್ರಮ ಕೈಕೊಳ್ಳಲು ಜಪ್ತಿ ಪಂಚನಾಮನೆಯೊಂದಿಗೆ ವರದಿ ಸಲ್ಲಿಸಲಾಗಿದೆ.ಅಂತ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 143/2015 ಕಲಂ 379 ಐಪಿಸಿ ಮತ್ತು 21 (1) ಎಮ್.ಎಮ್.ಡಿ.ಆರ್ ಆಕ್ಟ್ 1957 ನೇದ್ದರಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಗ್ರಾಮೀಣ ಪೊಲೀಸ್ ಠಾಣೆ : ದಿನಾಂಕ|| 03/03/2015 ರಂದು ರಾತ್ರಿ 9-15 ಗಂಟೆಯ ಸುಮಾರಿಗೆ ಮೃತ ಖಂಡಪ್ಪ ಹಾಗೂ ಫಿರ್ಯಾದಿ ಶರಣಮ್ಮ ಇವರು ಕಲಬುರಗಿ ಹುಮ್ನಾಬಾದ ರೋಡಿನ ತಾವರಗೇರಾ ಕ್ರಾಸ್ ಹತ್ತಿರ ಇರುವ ಬಜಾಜ ಸಾವಳ ಫ್ಯಾಕ್ಟ್ರೀಯ ಮುಂದುಗಡೆ ಇಳಿದು ಮೃತನು ರೋಡಿನ ಎಡಗಡೆ ನಿಂತು ಆಟೋ ಚಾಲಕನಿಗೆ ಹಣ ಕೊಡುವಾಗ ಅದೆ ಸಮಯಕ್ಕೆ ಕಲಬುರಗಿ ಕಡೆಯಿಂದ ಮೋ.ಸೈ ನಂ-ಕೆಎ-32-ಇಸಿ-5355 ನೇದ್ದರ ಚಾಲಕನಾದ ರಶೀಧ ಸಾ|| ಕಡಬೂರ ಈತನು ತನ್ನ ಮೋಟಾರ್ ಸೈಕಲನ್ನು ಅತಿವೇಗ & ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮೃತ ಖಂಡಪ್ಪನಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ತಲೆಗೆ ಒಳಪೇಟ್ಟಾಗಿ ಬಲ ಮೆಲಕಿಗೆ ತರಚಿದ ಭಾರಿ ರಕ್ತಗಾಯವಾಗಿ ಬೆಹೋಷವಾಗಿದ್ದು, ಉಪಚಾರ ಕುರಿತು ಜಿಲ್ಲಾಸರ್ಕಾರಿ ಆಸ್ಪತ್ರೆ ಕಲಬುರಗಿಗೆ ಸೇರಿಕೆ ಮಾಡಿ ಹೆಚ್ಚಿನ ಉಪಚಾರ ಕುರಿತು ಗಂಗಾಮಯಿ ಆಸ್ಪತ್ರೆ ಸೋಲಾಪೂರ, ಬಸವೇಶ್ವರ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದ್ದು, ಆರಾಮವಾಗದ ಕಾರಣ ಹಣದ ಅಭಾವದಿಂದ ಮನೆಗೆ ಕರೆದುಕೊಂಡು ಹೋಗಿದ್ದು, ದಿನಾಂಕ||22/05/2015 ರಂದು ಮಧ್ಯಾಹ್ನದ ವೇಳೆಯಲ್ಲಿ ಅಪಘಾತದಲ್ಲಿ ಆದ ಗಾಯದ ಬಾಧೆಯಿಂದ ನರಳಾಡುವಾಗ ಉಪಚಾರ ಕುರಿತು ಕಾಳಗಿ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬರುವಾಗ ದಾರಿಯ ಮಧ್ಯ 2 ಪಿ,ಎಂಕ್ಕೆ ಮೃತ ಪಟ್ಟಿರುತ್ತಾನೆ ಅಂತಾ ಫಿರ್ಯಾದಿರಾಳು ಪುರವಣಿ ಹೇಳಿಕೆ ನೀಡಿದ್ದು, ಆದ್ದರಿಂದ ಈ ಪ್ರಕರಣದಲ್ಲಿ ಕಲಂ: 304() ಐಪಿಸಿ ಅಳವಡಿಸಿಕೊಂಡು ಗುನ್ನೆ ದಾಖಲಾಗಿರುತ್ತದೆ. 

KALABURAGI DISTRICT REPORTED CRIMES.

ಗ್ರಾಮೀಣ ಪೊಲೀಸ್ ಠಾಣೆ : ಫಿರ್ಯಾದಿ ಮಚೇಂದ್ರ ತಂದೆ ಮಲ್ಲಿಕಾರ್ಜುನ ಕಾಳನೂರ ವಯ;30 ವರ್ಷ ಜ್ಯಾತಿ;ಪ.ಜಾ. ಉ;ಗೌಂಡಿಕೆಲಸ /ಕೂಲಿಕೆಲಸ ಸಾ; ಉಪಳಾಂವ ತಾ;ಜಿ; ಕಲಬುರಗಿ ಇತನು ಗುಲಬರ್ಗಾ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಕೊಟ್ಟ ಫಿರ್ಯಾದಿ ಸಾರಂಶ ದಿನಾಂಕ. 21-5-2015 ರಂದು ರಾತ್ರಿ 11-00 ಗಂಟೆಯ ಸುಮಾರಿಗೆ ಗ್ರಾಮಪಂಚಾಯತ ಚುನಾವಣೆಯ ನಾಮಿನೇಷನ ಹಾಕುವ ವಿಷಯದಲ್ಲಿ 1) ಸಂಜುಕುಮಾರ  ತಂದೆ ಅಣ್ಣಪ್ಪಾ  ಅಟ್ಟೂರ  ಸಾ;ಉಪಳಾಂವ 2)  ಸುಧೀರ ತಂದೆ  ಚಂದ್ರಪ್ಪಾ ಗಾದಗೆ  ಸಾ;ಆರ್.ಎಸ್.ಕಾಲೂನಿ ಕಲಬುರಗಿ 3) ಪಾಂಡು ತಂದೆ ತುಳಸೀರಾಮ ಸಿಂಧೆ,4) ಪುಂಡಲಿಕ  ತಂದೆ ಹಿರಗೆಪ್ಪಾ ಕೋರವಾರ 5) ಆನಂದ ತಂದೆ ಮಲ್ಕಪ್ಪಾ ಸೂಗುರ ಸಾ;ಕೆ.ಕೆ.ನಗರ ಕಲಬುರಗಿ  ಹಾಗೂ ಟವೇರ ವಾಹನ ಚಾಲಕ 6) ಶರಣಪ್ಪಾ ಕೆ.ಕೆ. ನಗರ  ಕಲಬುರಗಿ   ಎಲ್ಲರೂ ಕೂಡಿಕೂಡಿ ಟವೇರಾವಾಹನ ನಂ.ಕೆ.ಎ.35 ಎ-0946 ನೆದ್ದರಲ್ಲಿ ಆಪಾದಿತರೆಲ್ಲರೂ ಗುಂಪು ಕಟ್ಟಿಕೊಂಡು ಉಪಳಾಂವ ಗ್ರಾಮಕ್ಕೆ ಹೋಗಿ ಫಿರ್ಯಾದಿದಾರರ ಮೇಲೆ ಹಲ್ಲೆ ಮಾಡುವ  ಮತ್ತು ಹಣ್ಣಮಂತನಿಗೆ ಕೊಲೆ ಮಾಡುವ ಉದ್ದೇಶದಿಂದ ಆಪಾದಿತರೆಲ್ಲರೂ ಫಿರ್ಯಾದಿದಾರರೊಂದಿಗೆ ಜಗಳ ತೆಗೆದು ಚಾಕುದಿಂದ, ರಾಡಗಳಿಂದ ಹೊಡೆ ಬಡಿ ಮಾಡಿದ್ದು, ಅಲ್ಲದೆ ಸುಧೀರನು  ಫಿರ್ಯಾದಿ ದಾರರಿಗೆ ಜ್ಯಾತಿ ನಿಂದನೆ ಮಾಡಿ  ಬೈಯ್ದು ರಾಡದಿಂದ  ಚಾಕುದಿಂದ ಹೊಡೆಬಡಿಮಾಡಿ ಭಾರಿಗಾಯಗೊಳಿಸಿ ಜೀವ ಬೆದರಿಕೆ ಹಾಕಿದ್ದು,  ಹಾಗೂ ಜಗಳ ಬಿಡಿಸಲು ಜಗದೇವಿ ಹಾಗೂಜೈಶ್ರೀ. ಇವರಿಗೆ ಆಪಾದಿತ ಸಂಜೀಕುಮಾರ ಮತ್ತು ಸುಧೀರ ಗಾದಗೆ ಇವರು ಕೈಹಿಡಿದು ಎಳದಾಡಿ ಹೊಡೆಬಡ ಮಾಡಿದ್ದು ಅಲ್ಲದೆ ಸಂಜೀವಕುಮಾರನು ಹಣಮಂತ ತಂದೆ ಮಲ್ಲಿಕಾರ್ಜುನ ಕಾಳನೂರ ಇತನ ಸಂಗಡ ಈ ಮೋದಲು ಜಗಳ ಮಾಡಿದ್ದು ಅದೇ ವೈಷಮ್ಯದಿಂದ ಮತ್ತು  ಸಂಜೀವಕುಮಾರನ ವಿರುದ್ದ  ಮಚೇಂದ್ರನ ಹೆಂಡತಿ ಜಗದೇವಿ ಇವಳನ್ನು  ಚುನಾವಣೆಗೆ ನಿಲ್ಲಿಸುವ ವಿಷಯದಲ್ಲಿ ಹಣಮಂತನಿಗೆ ಕೊಲೆ ಮಾಡವ ಉದ್ದೇಶದಂತೆ ಚಾಕು, ರಾಡಗಳನ್ನು ತೆಗೆದುಕೊಂಡು ಬಂದು ಫಿರ್ಯಾದಿಗೆ , ಹಣಮಂತನಿಗೆ ಹೊಡೆದು ಭಾರಿಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ . ಕಾರಣ 1) ಸಂಜುಕುಮಾರ  ತಂದೆ ಅಣ್ಣಪ್ಪಾ  ಅಟ್ಟೂರ  ಸಾ;ಉಪಳಾಂವ 2) ಸುಧೀರ ತಂದೆ  ಚಂದ್ರಪ್ಪಾ ಗಾದಗೆ  ಸಾ;ಆರ್.ಎಸ್.ಕಾಲೂನಿ ಕಲಬುರಗಿ 3) ಪಾಂಡು ತಂದೆ ತುಳಸೀರಾಮ ಸಿಂಧೆ ,4) ಪುಂಡಲಿಕ  ತಂದೆ ಹಿರಗೆಪ್ಪಾ ಕೋರವಾರ 5) ಆನಂದ ತಂದೆ ಮಲ್ಕಪ್ಪಾ ಸೂಗುರ ಸಾ;ಕೆ.ಕೆ.ನಗರ ಕಲಬುರಗಿ  ಹಾಗೂ ಟವೇರ ವಾಹನ ಚಾಲಕ 6) ಶರಣಪ್ಪಾ ಕೆ.ಕೆ. ನಗರ  ಕಲಬುರಗಿ  ಇವರುಗಳ  ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಸಾರಂಶದ ಮೇಲಿಂದ ನಮ್ಮ ಠಾಣೆಯ ಗುನ್ನೆ ನಂ. 219/2015 ಕಲಂ.143, 147, 148, 323, 324, 354 504, 506, 307 ಸಂಗಡ 149 ಐಪಿಸಿ ಮತ್ತು 3 (1) (10), (11) .2 (5) ಎಸ್.ಸಿ.ಎಸ್.ಟಿ. ಪಿ.ಎ ಎಕ್ಟ.ನೆದ್ದರ  ಪ್ರಕಾರ ದಾಖಲಾಗಿರುತ್ತದೆ.