POLICE BHAVAN KALABURAGI

POLICE BHAVAN KALABURAGI

10 January 2012

GULBARGA DIST REPORTED CRIME

ಅಪಘಾತ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ:
ಶ್ರೀ ನಾಗಪ್ಪಾ ತಂದೆ ಭೀಮಣ್ಣಾ ಜಮಖಂಡಿ ಸಾ: ಗುಗ್ಗರಿಹಾಳ ತಾ: ಸೂರಪೂರ ರವರು ನನ್ನ ಮಗನಾದ ಭೀಮಣ್ದ ಇತನು ದಿನಾಂಕ 9/1/2012 ರಂದು ರಾತ್ರಿ 8:00 ಗಂಟೆಯ ಸುಮಾರಿಗೆ ಮೊ.ಸೈ ನಂ ಕೆಎ-33 ಜೆ-6465 ನೇದ್ದರಲ್ಲಿ ತನ್ನ ಹೆಂಡತಿಯಾದ ಮಲ್ಲಮ್ಮ ಇವಳಿಗೆ ಬೇಟಿಯಾಗುವ ಕುರಿತು ಗುಗ್ಗರಿಹಾಳದಿಂದ ಗುಲಬರ್ಗಾಕ್ಕೆ ಹೋಗುತ್ತೆನೆ ಅಂತಾ ಹೋಗಿದ್ದು ದಿನಾಂಕ 10/1/2012 ರಂದು ರಾತ್ರಿ 2:00 ಗಂಟೆಯ ಸುಮಾರಿಗೆ ದೂರವಾಣಿ ಮುಖಾಂತ ತಿಳಿದು ಬಂದಿದ್ದನೆಂದರೆ. ಭೀಮಣ್ದ ಇತನು ಗುಲಬರ್ಗಾ ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯ ಸರಡಗಿ ಪೆಟ್ರೋಲ ಬಂಕ ಮುಂದೆ ರಸ್ತೆಯ ಮೆಲೆ ತನ್ನ ಮೊಟಾರ ಸೈಕಲ ಮೇಲಿಂದ ಬಿದ್ದು ಮೃತ್ತ ಪಟ್ಟಿರುತ್ತಾನೆ. ಅಂತಾ ಸುದ್ದಿ ತಿಳಿದ ಕೂಡಲೆ ನಾನು ಮತ್ತು ನನ್ನ ಹೆಂಡತಿ ಸೊಸೆ ಮಲ್ಲಮ್ಮ ಸಂಬಂಧಿಕರಾದ ಅಳ್ಳೆಪ್ಪಾ ಬೈಮನಿ. ನಿಂಬಣ್ಣಾ ತಂದೆ ಶರಣಪ್ಪಾ ಇವರೊಂದಿಗೆ ಘಟನಾ ಸ್ಥಳಕ್ಕೆ ಹಾಗು ಜಿಲ್ಲಾ ಸರಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ಭೆಟಿ ನೀಡಿ ಮಗನ ಮೃತ್ತ ದೇಹವನ್ನು ಗುರುತಿಸಿ ನೋಡಲಾಗಿ ಭೀಮಣ್ಣಾ ಇತನು ಅತಿವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ವೇಗದ ಹತೋಟಿ ತಪ್ಪಿ ಮೊಟಾರ ಸೈಕಲನಿಂದ ಬಿದ್ದು ಮುಖಕ್ಕೆ ಮತ್ತು ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತ್ತ ಪಟ್ಟಿರುತ್ತಾನೆ, ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 4/2011 ಕಲಂ 279.304(ಎ) ಐ.ಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

Gulbarga Dist Reported Crimes

ಆತ್ಮಹತ್ಯೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ :
ಶ್ರೀ ಗೌತಮ ತಂದೆ ಬಾಬುರಾವ ಹೋಳಕರ ವ: 25 ವರ್ಷ ಜಾ: ಎಸ್‌ಸಿ ಉ: ಖಾಸಗಿ ಶಾಲೆ ಶಿಕ್ಷಕ ಸಾ; ಕಾಳ ಮೈಂದರ್ಗಿ ತಾ: ಜಿ: ಗುಲಬರ್ಗಾ ಇವರು ದಿನಾಂಕ: 8/1/2012 ರಂದು ಸಾಯಂಕಾಲ 5 ರಿಂದ 6 ಗಂಟೆಯ ಅವಧಿಯಲ್ಲಿ ಸಿದ್ದರಾಮೇಶ್ವರ ಶಾಲೆಯ ಕೋಣೆಯಲ್ಲಿ ಒಳ ಕೊಂಡಿ ಹಾಕಿಕೊಂಡು ಕೋಣೆಯ ಛತ್ತಿನ ಪೈಪಿಗೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮ,ಹತ್ಯೆ ಮಾಡಿಕೊಂಡಿರುತ್ತಾರೆ ಇವರ ಸಾವಿನ ಬಗ್ಗೆ ಸಂಶಯವಿರುತ್ತದೆ ಅಂತಾ ಶ್ರೀಹುಸನಪ್ಪ ತಂದೆ ಸಂತಪ್ಪ ನಡುಕರ ಸಾ; ಹಿಪ್ಪರಗಾ ಭಾಗ ತಾ: ಬಸವಕಲ್ಯಾಣ ಜಿ: ಬೀದರ ರವರು ಸಲ್ಲಿಸಿದ ದೂರು ಸಾರಂಶದ ಮೇಲಿಂದ ಯು.ಡಿ.ಅರ್. ಸಂ: 2/2012 ಕಲಂ 174 (ಸಿ) ಸಿ.ಅರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಆತ್ಮಹತ್ಯೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ :
ಶ್ರೀ ಶಶಿಕಾಂತ ತಂದೆ ಗಿರೇಪ್ಪ ವಾಮನಕರ ಸಾ: ಯಳವಂತಗಿ (ಬಿ) ತಾ: ಜಿ: ಗುಲಬರ್ಗಾರವರು ನನ್ನ ತಾಯಿಯಾದ ಶ್ರೀಮತಿ ಗಂಗಮ್ಮ ಇವರು ದಿನಾಂಕ:7/1/2012 ರಂದು ಮದ್ಯಾಹ್ನ ಸುಮಾರಿಗೆ ಮನೆಯ ಬಾಟಿಯ ಮೇಲೆ ಇಟ್ಟಿದ್ದ ತೋಗರಿ ಬೆಳೆ ಡಬ್ಬಿಯನ್ನು ತೆಗೆದುಕೊಳ್ಳಲು ಹೋಗಿ ಅದರ ಪಕ್ಕದಲ್ಲಿದ್ದ ತೋಗರಿ ಬೆಳೆಗೆ ಹೊಡೆಯುವ ಕ್ರಿಮೀನಾಶಕ ಜೌಷದ ಡಬ್ಬಿ ಒಮ್ಮೇಲೆ ಸಿಡಿದು ಮೈಮೇಲೆ ಹಾಗು ಬಾಯಿಯಿ ಮೂಲಕ ಹೋಗಿದ್ದು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಉಪಚಾರ ಹೊಂದುತ್ತಾ ದಿನಾಂಕ 9/1/2011 ರಂದು ಮದ್ಯಾಹ್ನ ಮೃತಪಟ್ಟಿದ್ದು. ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಯು.ಡಿ.ಅರ್. ನಂ: 3/.2012 ಕಲಂ 174 ಸಿ.ಅರ್.ಪಿ ಸಿ್ ಪ್ರಕಾರ ಪ್ರಕರಣ ದಾಖಲ ಮಾಡಿ ಕೈಕೊಂಡಿರುತ್ತಾರೆ.