POLICE BHAVAN KALABURAGI

POLICE BHAVAN KALABURAGI

30 March 2015

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಜೇವರ್ಗಿ ಠಾಣೆ : ದಿನಾಂಕ 29-03-2015 ಕೂಡಿ ಗ್ರಾಮದ  ಬಾಬಾಸಾಬ ದರ್ಗಾದ ಪಕ್ಕದಲ್ಲಿ   ಸಾರ್ವಜನಿಕ ಸ್ಥಳದಲ್ಲಿ 5 ಜನರು ಗುಂಪಾಗಿ ಕುಳಿತುಕೊಂಡು  ಇಸ್ಪೇಟ ಎಲೆಗಳ ಸಹಾಯದಿಂದ ಹಣ ಪಣಕ್ಕೆ ಹಚ್ಚಿ ಅಂದರ ಬಾಹರ ಅಂತಾ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಪಿ.ಎಸ್.ಐ. ಜೇವರ್ಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮೇಲೆ ದಾಳಿ ಮಾಡಿ ಹಿಡಿದುಕೊಂಡು ವಿಚಾರಿಸಲು 1) ರಾಮು ತಂದೆ ದರ್ಮು ರಾಠೋಡ  2) ಮಲ್ಲಿಕಾರ್ಜುನ ತಂದೆ ಚರಂತಯ್ಯ  ಹಿರೇಮಠ  3]  ಚಂದ್ರಕಾಂತ ತಂದೆ ಅಮರಪ್ಪ ಕೊಣಿನ  4] ದೇವಿಂದ್ರಪ್ಪ ತಂದೆ ಸಿದ್ದಪ್ಪ ನಾಟೀಕರಾ  5] ಬಾಬು ತಂದೆ ಸೈದ್ ಸಾಬ ಬಿದನೂರ ಸಾಃ ಎಲ್ಲರು ಮಿಣಜಗಿ ಅಂತಾ ತಿಳಿಸಿದ್ದು ಸದರಿಯವರು ಜೂಜಾಟಕ್ಕೆ ಬಳಸಿದ 52 ಇಸ್ಪೇಟ ಎಲೆಗಳು ಮತ್ತು ಹಣ 4090/-ನೇದ್ದು ಜಪ್ತಿ  ಮಾಡಿಕೊಂಡು ಸದರಿಯವರೊಂದಿಗ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ  ಸೈಯದ್ ಪಟೇಲ ತಂದೆ ಅಕ್ಬರಪಟೇಲ  ಮಾಲಿ ಪಾಟೀಲ ಸಾಃ ಯಾಳವಾರ ಇವರಿಗೆ ದಿನಾಂಕ 12.04.2014 ರಂದು ಮಧ್ಯಾಹ್ನ ರಾಜಾ ಪಟೇಲ ತಂದೆ ಮೈಹಿಬೂಬ ಪಟೇಲ ಸಂಗಡ 4 ಜನರು ಸಾಃ ಯಾಳವಾರ,ಕೂಡಿಕೊಂಡು ನನ್ನ ಹೋಲ ಸರ್ವೇ ನಂ 201/ಬಿ ನೇದ್ದರಲ್ಲಿ ಅತಿಕ್ರಮ ಪ್ರವೇಶ ಮಾಡಿ ನನಗೆ ಮತ್ತು ನನ್ನ ಅಣ್ಣ ದಸ್ತಗೀರ ಈವರೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ, ಬಡಿಗೆಯಿಂದ ಮತ್ತು ಕೊಡಲಿಯಿಂದ ಹೊಡೆ-ಬಡೆ ಮಾಡಿ ಜೀವದ ಬೇದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.