POLICE BHAVAN KALABURAGI

POLICE BHAVAN KALABURAGI

14 April 2012

GULBARGA DIST REPORTED CRIME

ಗೃಹಿಣಿಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನ:

ಸೇಡಂ ಪೊಲೀಸ ಠಾಣೆ: ಶ್ರೀಮತಿ ಕಾಶಮ್ಮಾ ಗಂಡ ಕಾಶಪ್ಪ ಮುಗಟಿ ಸಾ:ಸಣ್ಣ ಅಗಸಿ ಸೇಡಂ ತಾ:ಸೇಡಂ ರವರು ನನ್ನ ಮಗಳಾದ ಹಣಮವ್ವ ಇವಳಿಗೆ 10 ವರ್ಷಗಳ ಹಿಂದೆ ಮಹೇಶ ತಂದೆ ಬಸಣ್ಣ ರನಟಲಾ ಸಾ:ಸಣ್ಣ ಅಗಸಿ ಸೇಡಂ ಇತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಮದುವೆ ಆದಾಗಿನಿಂದಲೇ ಆಗಾಗ ಜಗಳ ಮಾಡುತ್ತಾ ಬಂದಿರುತ್ತಾರೆ, ನಮ್ಮ ಅಳಿಯ ಮತ್ತೊಂದು ಮದುವೆ ಮಾಡಿಕೊಳ್ಳುತ್ತೇನೆ ಅಂತ ದಿನಾಲು ಜಗಳ ಮಾಡುತ್ತಿದ್ದನು. ಈ ವಿಷಯವನ್ನು ಅವನ ತಂದೆ ಬಸಣ್ಣ ರನಟಲಾ ತಾಯಿ ಸಿದ್ದಮ್ಮ ಇವಳಿಗೆ ತಿಳಿಸಿದರೂ ಕೂಡಾ ಸದರಿಯವರು ತನ್ನ ಮಗನಿಗೆ ಬುದ್ದಿವಾದ ಹೇಳಿ ಜಗಳ ಬಿಡಿಸದೇ ಅವನಗೆ ಜಗಳ ಮಾಡಲು ಪ್ರಚೋದನೆ ನೀಡುತ್ತಿದ್ದರು. ದಿನಾಂಕ:14-04-2012 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ಪೋನ ಮೂಲಕ ತಿಳಿದ್ದೆನೆಂದರೆ, ನನ್ನ ಮಗಳಾದ ಹಣಮವ್ವ ಇವಳಿಗೆ ಅವಳ ಗಂಡ ಮಹೇಶ ಇತನು ಸೀಮೆ ಎಣ್ಣೆ ಮೈಮೇಲೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾನೆ ಅಂತ ತಿಳಿಸಿದ್ದರಿಂದ ನಾನು ಸೇಡಂ ಸರಕಾರಿ ಆಸ್ಪತ್ರೆಗೆ 12-00 ಗಂಟೆಗೆ ಬಂದು ನನ್ನ ಮಗಳಿಗೆ ವಿಚಾರಿಸಲಾಗಿ ಅವಳು ನನ್ನ ಗಂಡನಾದ ಮಹೇಶ ಇತನು ತನ್ನ ಸಂಗಡ ವಿನಾಕಾರಣ ಜಗಳ ತೆಗೆದು , ಅವಾಚ್ಯ ಶಬ್ದಗಳಿಂದ ಬೈದು ತನಗೆ ಕೈಯಿಂದ ಹೊಡೆಬಡೆ ಮಾಡುವಾಗ ತನ್ನ ಅತ್ತೆ ಸಿದ್ದಮ್ಮ ಹಾಗೂ ಮಾವನಾದ ಬಸಣ್ಣ ಇವರು ಕೂಡ ಮನೆಯಲ್ಲಿದ್ದು ಅವರು ಜಗಳ ಬಿಡಿಸದೇ ಅವಳಿಗೆ ಸೀಮೆ ಎಣ್ಣೆಯನ್ನು ಸುರಿಯುತ್ತಿರುವದನ್ನು ನೋಡಿ ಬಸಣ್ಣ ರನಟಲಾ ಇವನು ತನ್ನ ಮಗನಿಗೆ ಕಡ್ಡಿಪೆಟ್ಟಿಗೆ ನೀಡಿ ಬೆಂಕಿ ಹಚ್ಚುವಂತೆ ಪ್ರೇರಣೆ ನೀಡಿದ್ದಾನೆ ಅತ್ತೆಯಾದ ಸಿದ್ದಮ್ಮ ಇವಳು ನನಗೆ ಎರಡೂ ಕೈ ಹಿಡಿದು ಬೆಂಕಿ ಹಚ್ಚುವಂತೆ ಸಹಾಯ ಮಾಡಿರುತ್ತಾಳೆ, ಮಹೇಶ ಇತನು ಬೆಂಕಿ ಕೊರೆದು ನನಗೆ ಬೆಂಕಿ ಹಚ್ಚಿದ್ದು ನನ್ನ ಮೈಮೇಲೆ ಬಟ್ಟೆ ಬರೆ ಸುಟ್ಟು ಕುತ್ತಿಗೆಗೆ ಎದೆಗೆ ಬೆನ್ನಿಗೆ ಹಾಗೂ ಎರಡೂ ಕೈ ರಟ್ಟೆಗೆ ಸುಟ್ಟ ಗಾಯಗಳಾಗಿರುತ್ತವೆ. ನಮ್ಮ ಮನೆಯ ಮುಂದೆ ಇದ್ದ ನಮ್ಮಣ್ಣ ಶೇಖಪ್ಪ ಮುಗಟಿ, ದ್ಯಾವಣ್ಣ ಮುಗಟಿ ಹಾಗೂ ದತ್ತು ಮುಗುಟಿ ಇವರು ಬೆಂಕಿ ಆರಿಸಿ ಉಪಚಾರ ಕುರಿತು ನನಗೆ ಸೇಡಂ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ ಅಂತ ತಿಳಿಸಿರುತ್ತಾಳೆ. ನನ್ನ ಮಗಳಿಗೆ ಹೊಡೆಬಡೆ ಮಾಡಿ ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನ ಮಾಡಿದವರ ವಿರುದ್ಧ ಹಾಗೂ ಕೊಲೆಗೆ ಪ್ರಚೋದನೆ ನೀಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:78/2012 ಕಲಂ. 498 (ಎ), 323, 504, 307 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ದರೋಡೆ ಪ್ರಕರಣ:
ಸ್ಟೇಶನ ಬಜಾರ ಪೊಲೀಸ್ ಠಾಣೆ:
ಶ್ರೀ ವಿಷ್ಣು ತಂದೆ ಮಾಣಿಕರಾವ ಕಂದಗೋಳೆ ಸಾ ಬಾತಂಬ್ರಾ ತಾ ಭಾಲ್ಕಿ ಹಾ ವ ಸಿ.ಟಿ ಸೆಂಟರ್ ಕಾಂಪ್ಲೇಕ್ಸ್ ಕೆ.ಬಿ.ಎನ್ ಆಸ್ಪತ್ರೆಯ ಎದುರುಗಡೆ ಮೇನ್ ರೋಡ ಗುಲಬರ್ಗಾ ರವರು ನಾನು ಮಹಾರಾಷ್ಟ್ರ ರಾಜ್ಯದ ಪೋನಾದಲ್ಲಿರುವ ಪಪ್ಪು ಇಂಟೆಲ್ ಕಂಪನಿಯವರು ನನಗೆ ಎರಡು ಲಕ್ಷದ ಹನ್ನೆರಡು ಸಾವಿರ ರೂಪಾಯಿಗಳ ಬೆಲೆಯ ಪರ್ನಿಚರಗಳನ್ನು ಮಾರಾಟಕ್ಕಾಗಿ ಕೊಟ್ಟಿದ್ದರು ಅದರಂತೆ ನಾನು ಹಣಮಂತ ಎಂಬ ಗ್ರಾಹಕನಿಗೆ ಇದರಲ್ಲಿಯ ಒಂದು ಸೆಟ್ ಫರ್ನಿಚರ ಮಾರಾಟ ಮಾಡಿದೆನು. ಹಣಮಂತ ಎಂಬಾತನು ಫರ್ನಿಚರಸ್ಸ ಸರಿ ಇಲ್ಲಾ ಕಳಪೆ ಸಾಮಾನುಗಳಿವೆ ಅಂತಾ ಹೇಳಿ ಹಿಂದುರುಗಿಸಿದನು.ಆ ಪ್ರಯುಕ್ತವಾಗಿ ನಾನು ಕಂಪನಿಯವರಿಗೆ ಉಳಿದ ಎಲ್ಲಾ ಸಾಮಾನುಗಳನ್ನು ಹಿಂತಿರುಗಿಸಿದೆನು.ಅದೇ ವೈಮನ್ಸಿನಿಂದ ಪೂನಾದ ಪಪ್ಪು ಇಂಟೆಲ್ ಕಂಪನಿಯ ಮಾಲಿಕನಾದ ಪಪ್ಪು ಎಂಬಾತನು.ಮಹ್ಮದ ಆರೀಫ ಸಂಗಡ ಐದು ಜನರಿಗೆ ನನಗೆ ಮುಗಿಸುವಂತೆ ಸೂಫಾರಿ ನೀಡಿ ದಿನಾಂಕ:13-04-2012 ರಂದು ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ ಜಾಜಿ ಕಲ್ಯಾಣ ಮಂಟಪದ ಮುಂದಿನ ರಸ್ತೆಯಲ್ಲಿ ಸೈಕಲ್ ಮೋಟಾರ ನಂಬರ ಕೆಎ 32 ಇಎ 2136 ನೇದ್ದರ ಮೇಲೆ ಹೋಗುತ್ತಿರುವಾಗ ನನ್ನ ಎದುರುಗಡೆ ಟವೇರಾ ಕಂಪನಿಯ ವಾಹನ ನಂಬರ ಕೆಎ 35 ಎ 1986 ನೇದ್ದರಿಂದ ನಾಲ್ಕು ಜನರು ಇಳಿದು ನನಗೆ ನಿಲ್ಲಿಸಿ ನಾಲ್ಕು ಜನರು ಕೂಡಿ ನನ್ನನೂ ಜಬರ ದಸ್ತಿಯಿಂದ ಟವೆರಾ ಗಾಡಿ ಒಳಗೆ ಕುಡಿಸಿದಾಗ ಗಾಡಿಯಲ್ಲಿದ್ದ ಎರಡು ಜನರು ಅಲ್ಲದೆ ಉಳಿದ ನಾಲ್ಕು ಜನರು ಸಹ ಚಾಕುಗಳನ್ನು ತೋರಿಸಿ ನನಗೆ ಪ್ರಾಣ ಬೇದರಿಕೆ ಹಾಕಿ ಅದರಲ್ಲಿಯ ಮಹ್ಮದ ಆರೀಫ್ ಎಂಬುವವನು ನನ್ನ ಬಲಗೈ ಹಸ್ತಕ್ಕ ಚಾಕುವಿನಿಂದ ತಿವಿದು ರಕ್ತಗಾಯ ಮಾಡಿದ್ದು, ಆಗ ನನಗೆ ಅಪಹರಣ ಮಾಡುವುದನ್ನು ಗೊತ್ತಾಗಿ ನಾನು ಜೋರಾಗಿ ಚಿರುವುದನ್ನು ಆಜು-ಬಾಜು ಜನರು ನೋಡಿ ಪೊಲೀಸ ಕಂಟ್ರೋಲ್ ರೂಮಿಗೆ ಸಾರ್ವಜನಿಕರು ಪೋನ ಮಾಡಿ ತಿಳಿಸಿದರು. ನನಗೆ ಅದೇ ವಾಹನದಲ್ಲಿ ಕೆ.ಬಿ.ಎನ್ ಆಸ್ಪತ್ರೆ ಮುಂದುಗಡೆ ರಸ್ತೆಯ ಮುಖಾಂತರ ಗಾರ್ಡನ ಒಳಗಡೆಯ ರಸ್ತೆಯಿಂದ ಎಮ್.ಎಸ್.ಕೆ ಮೀಲ್ ರಸ್ತೆಯ ಮುಖಾಂತರ ವಾಹನದಲ್ಲಿ ನನಗೆ ಹಾಕಿಕೊಂಡು ಹೋಗುವಾಗ ನನ್ನನೂ ನಾಲ್ಕು ಜನರು ಬಿಗಿಯಾಗಿ ಹಿಡಿದಾಗ ಅದರಲ್ಲಿಯ ಮಹ್ಮದ ಆರಿಫ್ ಮತ್ತು ಇನ್ನೊಬ್ಬ ಕೂಡಿ ನನ್ನ ಕೋರಳಲ್ಲಿದ್ದ ಮೂರು ತೋಲಿ ಬಂಗಾರದ ಸರವನ್ನು ಕಿತ್ತುಕೊಂಡರು. ಅಲ್ಲದೆ ಎಲ್ಲರೂ ಕೂಡಿ ನನ್ನ ಬಲಗೈಯನ್ನು ಗಾಡಿಯ ಡೋರಿಗೆ ಬಡಿಸಿ ಗುಪ್ತಗಾಯ ಪಡಿಸಿರುತ್ತಾರೆ. ಮಹ್ಮದ ಆರಿಫ್ ಇತನ ಜೋತೆಗಿದ್ದ ಇನ್ನೂಳಿದ ಐದು ಜನರ ಹೆಸರು ವಿಳಾಸ ಗೋತ್ತಿಲ್ಲ ಅವರನ್ನು ನೋಡಿದರೆ ಗುರುತಿಸುತ್ತೆನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 51/2012 ಕಲಂ 395, 397 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:
ಶ್ರೀ ಕುಪೇಂದ್ರ ತುಕಾರಾಮ ಚವ್ಹಾಣ ಸಾ: ಶೇರಿ ತಾಂಡಾ ತಾ; ಚಿಂಚೋಳಿರವರು ನಾನು ದಿನಾಂಕ: 13-04-2012 ರಂದು ಮಧ್ಯಾಹ್ನ 3-00 ಗಂಟೆಯ ಸುಮಾರಿಗೆ ಆಟೋರಿಕ್ಷಾ ನಂ ಕೆಎ-32 ಬಿ-6338 ನೇದ್ದರಲ್ಲಿ ಕುಳಿತು ಜಿ.ಜಿ.ಹೆಚ್ ಸರ್ಕಲದಿಂದ ಎಸ್.ಟಿ.ಬಿ.ಟಿ ಕ್ರಾಸ್ ಕಡೆಗೆ ಬರುತ್ತಿದ್ದಾಗ ಆಟೋರಿಕ್ಷಾ ಚಾಲಕನಾದ ಶಂಕರ ತಂದೆ ಜಗನಾಥ ದೇವಿನಗರ ಇತನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿ ಕಟ್ಟ ಹೊಡೆಯಲು ಗೋಗಿ ತನ್ನಿಂದ ತಾನೆ ಆಟೋರಿಕ್ಷಾ ಪಲ್ಟಿಗೊಳಿಸಿ ಆಟೋರಿಕ್ಷಾದಲ್ಲಿ ಕುಳ್ಳಿತ್ತಿದ್ದ ನನಗೆ ಮತ್ತು ಚಾಲಕನಿಗೆ ಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 43/2012 ಕಲಂ: 279 ,337 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪಡಿಸಿದನ್ನು ವಿಚಾರಿಸಲು ಹೋದಾಗ ಹಲ್ಲೆ ಮಾಡಿದ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ :
ಶ್ರೀ ಮಲ್ಲಿಕಾರ್ಜುನ ತಂದೆ ಶಿವಲಿಂಗಪ್ಪ ದೊಡ್ಡಮನಿ ಸಾ: ಮೇಳಕುಂದಾ (ಕೆ) ಗ್ರಾಮ ಹಾ:ವ: ತಾಜ ಸುಲ್ತಾನಪೂರ ಕ್ರಾಸ ಗುಲಬರ್ಗಾರವರು ನಾನು ದಿನಾಂಕ:- 12/4/12 ರಂದು ಸಾಯಂಕಾಲ 6:30 ಗಂಟೆಗೆ ನನ್ನ ಮಾವನ ಟಾಟಾ ಎಸಿಇ ವಾಹನಕ್ಕೆ ಅಫಘಾತ ಪಡಿಸಿ ಹಾಗೇ ಬರುತ್ತಿದ್ದ 407 ಟೆಂಪೊ ಚಾಲಕನಿಗೆ ವಿಚಾರಿಸಲು ಹೋದಾಗ ಧಾನಮ್ಮ ಪೆಟ್ರೋಲ ಪಂಪ ಮಾಲಿಕನ ಮಗ ಕೃಷ್ಣಾ ಹಾಗೂ ಅವನ ಜೊತೆ 2 ಜನರು ಸಾ: ತಾಜಸುಲ್ತಾನಪೂರ ಕ್ರಾಸ ರವರು ನನಗೆ ಅವಾಚ್ಯವಾಗಿ ಬೈದು ಕೈ ಮುಷ್ಠಿಮಾಡಿ ಬಾಯಿ ಮೇಲೆ ಹೊಡೆದಿದ್ದರಿಂದ ಎರಡು ಹಲ್ಲುಗಳು ಅಲುಗಾಡುತ್ತಿದ್ದು ಅವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 111/2012 ಕಲಂ 509, 341, 323, 326, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.