POLICE BHAVAN KALABURAGI

POLICE BHAVAN KALABURAGI

27 March 2014

Gulbarga District Reported Crimes

ಅಸ್ವಾಭಾವಿಕ ಸಾವು ಪ್ರಕರಣ :
ಮಾಹಾಗಾಂವ ಠಾಣೆ : ಲಲಿತಾಬಾಯಿ ಇವಳಿಗೆ ಕಳೆದ ಮೂರು ವರ್ಷಗಳಿಂದ ತನಗೆ ಹೃದಯ ಕಾಯಿಲೆ ಗುಣಮುಖವಾಗದೇ ಇದುದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 26-3-14 ರಂದು ಮಧ್ಯಾಹ್ನ 1-00 ಗಂಟೆ ಊರಿನಿಂದ ಕುರಿಕೋಟಾ ಗ್ರಾಮ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬರುತ್ತೇನೆಂದು ಹೇಳಿ  ಹೋದವಳು ಕುರಿಕೋಟಾ ಗ್ರಾಮದ ಹಳ್ಳದಲ್ಲಿ 5 ಪಿಎಂದ ಮಧ್ಯದ ಅವಧಿಯಲ್ಲಿ ಬಿದ್ದು ಮೃತಪಟ್ಟಿರುತ್ತಾಳೆ. ಅಂತಾ ರಾಮಚಂದ್ರ ತಂದೆ ಶಿವಶರಣಪ್ಪ ಕಣ್ಣೂರ ಸಾ : ಅಂಕಲಗಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಶಿವಕುಮಾರ ತಂದೆ ರಾಜಶೇಖರ ಕಛೇರಿ ಸಾ: ಕಮಲಾಪೂರ ಇವರು ಠಾಣೆಗೆ ದಿನಾಂಕ: 25/03/2104 ರಂದು ರಾತ್ರಿ 9-30 ಗಂಟೆಗೆ ಮನೆಯಲ್ಲಿ ನಾನು ಮತ್ತು ನನ್ನ ತಾಯಿಯಾದ ಶಾಂತಾಬಾಯಿ ಇಬ್ಬರು ಕೂಡಿಕೊಂಡು ಊಟ ಮಾಡಿ ಮನೆಯ ಮೊದಲನೇ ಮಹಡಿಯಲ್ಲಿ ಮಲಗಿಕೊಂಡು ಬೆಳಿಗ್ಗೆ 5-00 ಗಂಟೆಗೆ ಎದ್ದು ಕೆಳಗಡೆ ಬಂದುನೋಡಲಾಗಿ, ಮನೆಯ ಮುಖ್ಯ ದ್ವಾರದ ಕೀಲಿ ಮುರಿದಿದ್ದು. ಆಗ ನಾವು ಗಾಬರಿಗೊಂಡು ಮನೆಯ ಒಳಗಡೆ ಹೋಗಿ ನೋಡಲಾಗಿ, ಅಲ ಮಾರಿಯ ಡೋರ ತೆರೆದಿದ್ದು ಅಲಮಾರಿಯಲ್ಲಿಟ್ಟಿದ್ದ ಸೀರೆಗಳು ಚೆಲ್ಲಾಪಿಲ್ಲಿಯಾಗಿದ್ದವು ಆಗ ನಾವು ಅಲಮಾರ ಚಕ್ ಮಾಡಲಾಗಿ ಅಲಮಾರಿಯಲ್ಲಿಟ್ಟಿದ್ದ ಬಂಗಾರದ ಆಭರಣಗಳು, ಬೆಳ್ಳಿಯ ಆಭರಣಗಳು ಹೀಗೆ ಒಟ್ಟು 5,75,500-00 ರೂ. ಕಿಮ್ಮತ್ತಿನ ಬಂಗಾರ , ಬೆಳ್ಳಿಮತ್ತು ನಗದು ಹಣ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಮಳಖೇಡ ಠಾಣೆ : ಶ್ರೀಮತಿ ಲತಾಬಾಯಿ ಗಂಡ ಸೇವು ಪವಾರ್ ಸಾ|| ಸ್ಟೇಷನ್ ತಾಂಡಾ  ತಾ|| ಸೇಡಂ ರವರು ತನ್ನ ನೆಗಣೆಯಾದ  ಮಹಾದೆವಿ ಮನೆಯ ಮುಂದೆ ನಿಂತುಕೊಂಡಾಗ 1.ದೇವ್ಯಾ ತಂದೆ ಭಿಮಲಾ ಚವ್ಹಾಣ 2. ಶ್ಯಾಂತ್ಯಾ 3. ಆನಂದ  4. ನೀಲಾಬಾಯಿ  5. ಪಿಂಕಿ 6. ಸರೋಜಾ 7. ಲಕ್ಷ್ಮಿ  8. ಸುಮಿತ್ರಾಬಾಯಿ ಸಾ|| ಎಲ್ಲರು ಸ್ಟೇಷನ್ ತಾಂಡಾ  ತಾ||  ಸೇಡಂ ಎಲ್ಲರು ಕೊಡಿಕೊಂಡು ಅಕ್ರಮ ಕೂಟ ರಚಿಸಿಕೊಂಡು ಬಂದು ಫಿರ್ಯಾದಿಗೆ ಅವಾಚ್ಯವಾಗಿ ಬೈದು ಸಿರೆಯನ್ನು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನ ಮಾಡಿ ಫಿರ್ಯಾದಿದಾರಳಿಗೆ ಹೊಡೆ-ಬಡೆ ಮಾಡಿ  ದುಃಖಾಪಾತ ಗೋಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳಖೇಡ ಠಾಣೆ : ಶ್ರೀಮತಿ  ನೀಲಾಬಾಯಿ ಗಂಡ ದೇವಿಂದ್ರ ಚವ್ಹಾಣ ಸಾ|| ಸ್ಟೇಷನ್ ತಾಂಡಾ ಮಳಖೇಡ ಗ್ರಾಮ ತಾ|| ಸೇಡಂ ಫ್ಲ್ಯಾಟ್ ಹತ್ತಿರ ನಿಂತುಕೊಂಡಾಗ 1.ಶಂಕರ ತಂದೆ ಸುರೇಶ ಚವ್ಹಾಣ 2. ಕುಪೇಂದ್ರ ತಂದೆ ಭಿಮಲಾ ಪವಾರ್ 3. ಸಚೀನ್ ತಂದೆ ಶಂಕರ್ 4. ಆಶಿಕಾ 5. ಲತಾಬಾಯಿ 6. ಮಹಾದೇವಿ 7. ಲಲಿತಾಬಾಯಿ 8. ಶಂಕರ  ಸಾ|| ಎಲ್ಲರು ಸ್ಟೇಷನ್ ತಾಂಡಾ  ಎಲ್ಲರು ಕೂಡಿಕೊಂಡು  ಅಕ್ರಮ ಕೂಟ ರಚಿಸಿಕೊಂಡು ಬಂದು ಫಿರ್ಯಾದಿಗೆ ಅವಾಚ್ಯವಾಗಿ ಬೈದು ಸಿರೆಯನ್ನು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನ ಮಾಡಿ ಫಿರ್ಯಾದಿದಾರಳಿಗೆ ಹೊಡೆ-ಬಡೆ ಮಾಡಿ ದುಃಖಾಪಾತ ಗೋಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.