POLICE BHAVAN KALABURAGI

POLICE BHAVAN KALABURAGI

18 November 2014

Kalaburagi District Reported Crimes

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ 17-11-2014 ರಂದು ರಾತ್ರಿ ರುಕ್ಮೋದ್ದಿನ್ ತಂದೆ ಬಾಶುಮಿಯ್ಯಾ ಬಳೆಗಾರ್ ಸಾ|| ಆಶ್ರಯ ಕಾಲೋನಿ ಗುಲ್ಬರ್ಗಾ  ಇವನು ತನ್ನ ಮನೆಗೆ ಹೋಗುವ ಸಂಬಂಧ ಆಳಂದ ಚೆಕ್ ಪೋಸ್ಟ ಹುಮ್ನಾಬಾದ ರೋಡಿನ ಆಟೋ ನಗರದ ಹಳೆಯ ಕಲ್ಯಾಣ ಮಂಟಪದ ಹತ್ತೀರ ನಿಂತಾಗ ಅದೆ ವೇಳೆಗೆ ಮೋಟಾರ್ ಸೈಕಲ್ ನಂ: ಕೆಎ-25-ಇಡಿ-8219 ನೇದ್ದ ಚಾಲಕನಾದ ಚಾಂದ ಪಾಶಾ ಈತನು ತನ್ನ ಮೋಟಾರ್ ಸೈಕಲನ್ನು ಅತಿ ವೇಗ & ನಿಸ್ಕಾಳಜಿತನದಿಂದ ಚಲಾಯಿಸಿ ರುಕ್ಮೋದ್ದಿನನಿಗೆ ಡಿಕ್ಕಿ ಹೊಡೆದಿದ್ದರಿಂದ ತಲೆಯ ಹಿಂಭಾಗ ಮತ್ತು ಗದ್ದಕ್ಕೆ ಭಾರಿ ರಕ್ತಗಾಯವಾಗಿದ್ದು ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರಲು ಉಪಚಾರ ಪಡೆಯುತ್ತಾ ಮೃತ ಪಟ್ಟಿರುತ್ತಾನೆ. ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಸಾಹೀದಾ ಬೇಗಂ ಗಂಡ ಜಾನಿಮೀಯಾ ಸಾ: ಮದರಿ (ಕೆ) ಇವರು  ದಿನಾಂಕ 17-11-2014 ರಂದು ಬೇಳಿಗ್ಗೆ 10-00  ಗಂಟೆ ಸುಮಾರಿಗೆ ಕೆ,ಎಸ,ಆರ,ಟಿ,ಸಿ ಬಸ್ಸ ನಂ ಕೆಎ-33-ಎಫ್-0133 ರ ಬಸ್ಸಿನಲ್ಲಿ ಗುಲಬರ್ಗಾ ಕಣ್ಣಿ ಮಾರ್ಕೆಟ ಹತ್ತೀರ ಪ್ರಯಾಣಿಕರು ಇಳಿಯುವ ಸಂಬಂದ ನಿಲ್ಲಿಸಿದ ಬಸ್ಸನ್ನು ಪ್ರಯಾಣಿಕರು ಇಳಿಯುವರಿದ್ದು ನಾನು ಬಸ್ಸಿನಿಂದ ಇಳಿಯುವಾಗ ಒಮ್ಮಲೇ ಬಸ್ಸ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಬಸ್ಸಿನ ಬಾಗಿಲಿನಿಂದ ಕೆಳೆಗೆ ಕೆಡವಿ ಅಪಘಾತ ಮಾಡಿ ಫಿರ್ಯಾದಿಗೆ ಎಡಗಾಲ ತೊಡೆಗೆ ಮತ್ತು ಟೋಂಕಿಗೆ ಗುಪ್ತಪೆಟ್ಟು ಮಾಡಿ ಬಸ್ಸ ಸಮೇತ ಚಾಲಕ ಹೊರಟುಹೋಗಿದ್ದು ಇರುತ್ತದೆ ಅಂತಾ  ಸಲ್ಲಿಸಿದ ದೂರು ಸಾರಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ. ಮೊನಮ್ಮ ಗಂಡ ಅರವಿಂದ ಸಣ್ಣಿಂಗೇರ ಸಾ: ಹಂದರಕಿ ಗ್ರಾಮ ಇವರನ್ನು 4 ವರ್ಷಗಳ ಹಿಂದೆ ನಮ್ಮ ತಂದೆ-ತಾಯಿಯವರು ಹಂದರಕಿ ಗ್ರಾಮದ ಅರವಿಂದ ತಂದೆ ದೇವಿಂದ್ರಪ್ಪ ಸಣ್ಣಿಂಗೇರ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಮದುವೆ ಕಾಲಕ್ಕೆ ವರೋಪಚಾರ ಮಾಡಿ ಒಂದು ಲಕ್ಷ ರೂಪಾಯಿ, ಒಂದು ಮೋಟಾರು ಸೈಕಲ್, ಅರ್ಧ ತೊಲೆ ಬಂಗಾರ ಕೊಟ್ಟು ನಮ್ಮೂರ ಹುಳಗೋಳ ಗ್ರಾಮದಲ್ಲಿ ಮದುವೆ ಮಾಡಿದ್ದು. ಮದುವೆಯಾದ ಒಂದು ವರ್ಷದವರೆಗೆ ನನಗೆ ನನ್ನ ಗಂಡ ಮತ್ತು ಅತ್ತೆಯಾದ ಸಾಬಮ್ಮ ಇಬ್ಬರೂ ಸರಿಯಾಗಿ ನೋಡಿಕೊಂಡು ನಂತರ ನಮ್ಮ ಗೌರವಕ್ಕೆ ತಕ್ಕಂತೆ ವರದಕ್ಷಿಣೆ ಕೊಟ್ಟಿಲ್ಲ ಅಂತ ಇನ್ನೂ ಒಂದು ಲಕ್ಷ ರೂಪಾಯಿ ಎರಡು ತೊಲೆ ಬಂಗಾರ ನಿಮ್ಮ ತವರು ಮನೆಯಿಂದ ತೆಗೆದುಕೊಂಡುಬಾ ಅಂತ ಕಿರಕಿರಿ ಮಾಡಿ ಆಗಾಗ ಹೊಡೆಬಡೆ ಮಾಡಿ ಮಾನಸೀಕ ಮತ್ತು ದೈಹಿಕ ಕಿರುಕುಳ ನೀಡುತ್ತಾ ಬಂದಿದ್ದು ಈ ವಿಷಯ ನಮ್ಮ ತಂದೆ-ತಾಯಿಗೆ ತಿಳಿಸಿದ್ದು ಅವರು ಬುದ್ದಿವಾದ ಹೇಳಿ ಅನುಕೂಲವಾದಗ ಕೊಡುತ್ತೇವೆ ಅಂತ ಸಮಾಧಾನ ಮಾಡಿದ್ದರು. ಆದರೂ ಸಹಾ ಹಾಗೇಯೆ ಕಿರುಕುಳ ನೀಡುತ್ತಾ ಬಂದು ದಿ:13-11-2014 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ನನ್ನ ಗಂಡ ಮತ್ತು ಅತ್ತೆ ಇಬ್ಬರೂ ಕೂಡಿ ಜಗಳತೆಗೆದು ಏ ಭೋಸಡಿ ನಾವು ಹೇಳಿದ್ದಂಗ ನೀನು ಕೇಳುತ್ತಾ ಇಲ್ಲ ನಿನಗೆ ಕೊಂದು ಹಾಕುತ್ತೇವೆ ಅಂತ ನನ್ನ ಗಂಡ ಕುತ್ತಿಗೆ ಹಿಡಿದು ಹಿಚಿಕಿ ಸಾಯಿಸಲು ಪ್ರಯತ್ನಿಸಿದ್ದು ನಾನು ಬಿಡಿಸಿಕೊಂಡಿದ್ದು ಆಗ ಕಾಲಿನಿಂದ ಒದ್ದು ಕೈಯಿಂದ ಮತ್ತು ಬಡಿಗೆಯಿಂದ ಹೊಡೆಬಡೆ ಮಾಡಿ ಗುಪ್ತಗಾಯ ಮಾಡಿದ್ದು ಇರುತ್ತದೆ. ನಮ್ಮ ಅತ್ತೆ ಕೈಯಿಂದ ಹೊಡೆಬಡೆ ಮಾಡಿ ಗುಪ್ತಗಾಯ ಮಾಡಿದ್ದು ಅವರಿಬ್ಬರೂ ನನಗೆ ಸಾಯಿಸಲು ಕುತ್ತಿಗೆಗೆ ಹಗ್ಗ ಬಿಗಿದು ಉರಲು ಹಾಕಿ ಸಾಯಿಸಲು ಪ್ರಯತ್ನಿಸಿದ್ದು ಅವರಿಂದ ಬಿಡಿಸಿಕೊಂಡು ಚೀರಾಡುತ್ತಿದ್ದಾಗ ಅಕ್ಕಪಕ್ಕದ ಮನೆಯವರು ಬಂದು ಜಗಳ ಬಿಡಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.