POLICE BHAVAN KALABURAGI

POLICE BHAVAN KALABURAGI

26 July 2014

Gulbarga District Reported Crimes

ಸುಲಿಗೆಕೋರರ ಬಂಧನ :
ಬ್ರಹ್ಮಪೂರ ಠಾಣೆ : ದಿನಾಂಕ 16/07/2014 ರಂದು ಕಲ್ಯಾಣಿ ಪೆಟ್ರೋಲ್ ಬಂಕ ಹತ್ತಿರ ಶ್ರೀಮತಿ. ಸರೋಜಾ ಸಾವಳೇಶ್ವರ ಸಾ|| ದೇವಿ ನಗರ ಆಳಂದ ರೋಡ ಗುಲಬರ್ಗಾ ಇವರು ನಡೆದುಕೊಂಡು ಹೋಗುತ್ತಿರುವಾಗ ಅಪರಿಚಿತ ಮೋಟಾರ ಸೈಕಲ್ ಸವಾರರು ಅವರ ಕೊರಳಿಗೆ ಕೈ ಹಾಕಿ 20 ಗ್ರಾಂ ಬಂಗಾರದ ಮಂಗಳ ಸೂತ್ರ ಅ.ಕಿ. 58.000/- ಬೆಲೆಯುಳ್ಳದನ್ನು ಕಸಿದುಕೊಂಡು ಹೋದ ಆರೋಪಿತರು ಗುಲಬರ್ಗಾ ನಗರದ ಪಬ್ಲಿಕ್ ಗಾರ್ಡನದಲ್ಲಿ ಇದ್ದ ಬಗ್ಗೆ ಖಚಿತ ಬಾತ್ಮಿ ಬಂದ ಪ್ರಕಾರ ಶ್ರೀ. ಅಮಿತ್ ಸಿಂಗ್ ಐಪಿಎಸ್ ಜಿಲ್ಲಾ ಪೊಲೀಸ ಅಧೀಕ್ಷಕರು ಹಾಗು ಶ್ರೀ.ಎಮ್.ಬಿ.ನಂದಗಾವಿ ಡಿಎಸ್ಪಿ ಎ ಉಪ-ವಿಭಾಗರವರ ಮಾರ್ಗದರ್ಶನದಲ್ಲಿ ಬ್ರಹ್ಮಪೂರ ಪೊಲೀಸ್ ಠಾಣೆಯ ಶ್ರೀ.ಕೆ.ಎಂ.ಸತೀಶ ಪೊಲೀಸ್ ಇನ್ಸಪೆಕ್ಟರ್ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಹಿಡಿದು 1) ಲಕ್ಷ್ಮಿಕಾಂತ @ ದೋನಿ ತಂದೆ ರಮೇಶ ಮುದ್ದಡಗಿ ಸಾ:ಮುದ್ದಡಗಾ ಹಾಲವಸ್ತಿ ಬಸವ ನಗರ ಗುಲಬರ್ಗಾ. 2) ಸಂದೀಪ್ @ ನಿಪ್ಪಲ್ ತಂದೆ ಜಗನ್ನಾಥ ಗುತ್ತೆದಾರ ಸಾ:ವಿಜಯ ನಗರ ಬ್ರಹ್ಮಪೂರ ಗುಲಬರ್ಗಾ, 3)ರಿತೇಶ ತಂದೆ ದೂಳಪ್ಪಾ ಮೋರಂಬಿಕಾರ್ ಸಾ:ವಿಜಯ ನಗರ ಬ್ರಹ್ಮಪೂರ ಗುಲಬರ್ಗಾ, ಇವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ 25 ಗ್ರಾಂ ಬಂಗಾರ ಅ.ಕಿ. 72.000/- ಬೆಲೆಯುಳ್ಳದ್ದು ಮತ್ತು ಗುನ್ನೆಗೆ ಉಪಯೋಗಿಸಿದ ಒಂದು ಬಜಾಜ ಪಲ್ಸರ್ ಮೋಟಾರ ಸೈಕಲ್ ಜಪ್ತ ಮಾಡಿಕೊಂಡಿದ್ದು ಈ ವಿಷಯದ ಕುರಿತು ಮಾನ್ಯ ಎಸ್.ಪಿ.ಸಾಹೇಬ ಗುಲಬರ್ಗಾ ರವರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.
ದರೋಡೆ ಮಾಡಲು ಪ್ರಯತ್ನಿಸುತ್ತಿದ್ದವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 24/07/2014 ರಂದು ರಾಘವೇಂದ್ರ ನಗರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ 11-30 ಗಂಟೆಯಿಂದ ಶ್ರೀ ಹೇಮಂತಕುಮಾರ ಎಂ ಪಿ.ಎಸ್.ಐ ಹಾಗು ಠಾಣೆಯ ಸಿಬ್ಬಂದಿಜನರಾದ  ಶೀವಲಿಂಗ ಸಿ.ಪಿ.ಸಿ 1241 ಜೀಪಚಾಲಕ, ಅಶೋಕ ಹೆಚ್.ಸಿ 157, ನಿಲಪ್ಪ ಪಿ.ಸಿ 562 ನಿತ್ಯಾನಂದ ಸಿಪಿಸಿ 1021, ಇವರೊಂದಿಗೆ  ಠಾಣೆಗೆ ಒದಗಿಸಿದ ಸರಕಾರಿ ಜಿಪ್ ನಂ ಕೆ.ಎ 20 ಜಿ 68 ನೇದ್ದರಲ್ಲಿ ರಾತ್ರಿಗಸ್ತು  ಚಕ್ಕಿಂಗ ಕರ್ತವ್ಯ ಮಾಡುತ್ತಾ ದಿನಾಂಕ 25/07/14 ರಂದು 00-30 ಗಂಟೆಯ ಸುಮಾರಿಗೆ ಖಾದ್ರಿಚೌಕ ಹತ್ತಿರ ಇದ್ದಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ ರಾಘವೇಂದ್ರ ನಗರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಬರುವ ರಿಂಗ ರೋಡ ಹತ್ತಿರದ ಚೋರ ಗುಂಬಜದಿಂದ ಸ್ವಲ್ಪ ದೂರದಲ್ಲಿ ಡಬರಾಬಾದ ಕ್ರಾಸದಿಂದ ಸಂತೋಷ ಕಾಲೊನಿಗೆ ಹೋಗುವ ರೋಡಿನ ಹತ್ತಿರ ಕಟ್ಟಡ ನಿರ್ಮಾಣಕ್ಕಾಗಿ ಬುನಾದಿ ಹಾಕಿ ಬಿಟ್ಟಿರುವ ತಗ್ಗಿನಲ್ಲಿ ಕೆಲವು ಜನರು ದರೋಡೆ ಮತ್ತು ಸುಲಿಗೆ ಮಾಡುವ ಉದ್ದೇಶದಿಂದ ಸಂಚುರೂಪಿಸಿ ಮಾರಕಾಸ್ತ್ರಗಳಿಂದ ಸುಸಜ್ಜಿತವಾಗಿ ಅಡಗಿ ಕುಳಿತುಕೊಂಡಿರುತ್ತಾರೆ ಅಂತ ಬಾತ್ಮಿ ಬಂದ ಮೇರೆಗೆ  ಸದರಿ ವಿಷಯವನ್ನು  ರೌಡಿ ನಿಗ್ರಹದಳದ ಅಧಿಕಾರಿಯಾದ ಶ್ರೀ.ಸಿದ್ದೇಶ್ವರ ಪಿ.ಐ ಡಿ.ಎಸ್‌.ಬಿ  ಘಟಕರವರಿಗೆ ಮಾಹಿತಿ ನೀಡಿ  ಖಾದ್ರಿ ಚೌಕ್ ಹತ್ತಿರ ಬರಲು ಹೇಳಿದ್ದು, ಸದರಿಯವರು  ಹೀರಾಪೂರಕ್ರಾಸ ಹತ್ತಿರ ನಮ್ಮಸಿಬಂದಿಯವರೊಂದಿಗೆ ಇದ್ದು ಬರುತ್ತೇನೆ. ಎಂದು ತಿಳಿಸಿದರು ಹಾಗು ಎರಡ ಜನ ಪಂಚರನ್ನು ಕರೆದುಕೊಂಡು ಖಾದ್ರಿ ಚೌಕ ಹತ್ತಿರ ನಿಮ್ಮ ಸಿಬ್ಬಂದಿಯೊಂದಿಗೆ ನಿಲ್ಲು ಅಂತ ಹೇಳಿದರು. ಆಗ ನಾನು ಹಾಗು ಪಂಚರೊಂದಿಗೆ ಖಾದ್ರಿಚೌಕಗೆ ಹೋಗಿ ಶ್ರೀ ಸಿದ್ದೇಶ್ವರ ಪಿ. ಐ ಸಾಹೇಬರು ರೌಢಿ ನಿಗ್ರಹದಳದ ಸಿಬ್ಬಂದಿಜನರಾದ ಅಣ್ಣಪ್ಪ ಹೆಚ್‌ಸಿ 332 ಶೀವಯೋಗಿ ಹೆಚ್‌ಸಿ 220, ರಫೀಕ್ ಸಿಪಿಸಿ 370, ರಾಮು ಪವಾರ ಸಿಪಿಸಿ- 761, ದೇವೆಂದ್ರ ಸಿಪಿಸಿ- 212, ಗಜೇಂದ್ರ ಸಿಪಿಸಿ - 108, ಗುರುಮೂರ್ತಿ ಸಿಪಿಸಿ- 269, ಪ್ರವೀಣಕುಮಾರ ಸಿಪಿಸಿ- 907, ಜೀಪ್ ಚಾಲಕ ಚನ್ನಬಸವ ಎಪಿಸಿ - 130 ಇವರೊಂದಿಗೆ ಅವರಿಗೆ ಒದಗಿಸಿದ ಸರಕಾರಿ ಜೀಪ್ ನಂ ಕೆ.ಎ 32 ಜಿ 456 ನೇದ್ದರೊಂದಿಗೆ ಖಾದ್ರಿ ಚೌಕ್ಹತ್ತಿರ ಬಂದಿದ್ದು, ಸದರಿ ಬಾತ್ಮಿ ಬಂದ ವಿಷಯದ ಬಗ್ಗೆ ಪಂಚರಿಗೆ ಮತ್ತು ಪಿ.ಐ ಸಾಹೇಬರಿಗೆ ಮತ್ತು ಸಿಬ್ಬಂದಿರವರಿಗೆ ತಿಳಿಸಿ ಪಂಚರೊಂದಿಗೆ ಎಲ್ಲರೂ ಕೂಡಿಕೊಂಡು ಖಾದ್ರಿ ಚೌಕ್ದಿಂದ ಸುಮಾರು 01.00 ಗಂಟೆಗೆ ಬಿಟ್ಟು ಡಬರಾಬಾದ ಕ್ರಾಸ ಹತ್ತಿರ ಹೋಗಿ ನಮ್ಮ ವಾಹನಗಳನ್ನು ಒಂದು ಕಟ್ಟಡದ ಮರೆಯಲ್ಲಿ ನಿಲ್ಲಿಸಿ ಡಬರಾಬಾದ ಕ್ರಾಸದಿಂದ ಸಂತೋಷ ಕಾಲೊನಿಗೆ ಹೊಗುವ ರೋಡಿಗೆ ಎಲ್ಲರೂ ನಡೆದುಕೊಂಡು ಬಂದು ಅಡಗಿಕೊಂಡು ನೋಡಲು, ಸಂತೋಷ ಕಾಲೊನಿಗೆ ಹೋಗುವ ರೋಡಿನ ಹತ್ತಿರ ಕಟ್ಟಡ ನಿರ್ಮಾಣಕ್ಕಾಗಿ ಬುನಾದಿ ಹಾಕಿ ಬಿಟ್ಟಿರುವ ತಗ್ಗಿನಲ್ಲಿ ಒಂದು ಹಳೆಯ ರೂಮ್ ಹತ್ತೀರ ಕೆಲವು  ದರೋಡೆಕೊರರು ಗುಜುಗುಜು ಮಾತಾಡುವ ಶಬ್ದ ಕೆಳಿಸಿತು ಆಗ ನಾವೆಲ್ಲರೂ ಆ ಶಬ್ದದ ಜಾಡು ಹಿಡಿದು ಬುನಾದಿ ತೊಡಿದ ತೆಗ್ಗನ್ನು ಸುತ್ತುವರೆದಿದ್ದು. ನಮ್ಮನ್ನು ನೋಡಿ ದರೋಡೆಕೊರರು ಓಡರೋ ಓಡರೋ ಅನ್ನುತ್ತಾ ಒಂದೇ ಸವನೆ ಓಡ ತೊಡಗಿದರು. ಕೂಡಲೆ ನಾವೆಲ್ಲರು ಪಂಚರೊಂದಿಗೆ ಅವರ ಬೆನ್ನಟಿ ಅವರ ಮೇಲೆ ರಾತ್ರಿ ಸುಮಾರು 1.45 ಎಎಂ, ಕ್ಕೆ ದಾಳಿಮಾಡಿ ಒಟ್ಟು 6 ಜನರಿಗೆ ಹಿಡಿದುಕೊಂಡಿದ್ದು, ಹಿಡಿದ 6 ಜನರನ್ನು  ಸಂತೋಷ ಕಾಲೋನಿಗೆ ಹೊಗುವ ರಸ್ತೆಯ ಮೇಲೆ ಕರೆದುಕೊಂಡು ಬಂದು ಠಾಣೆಗೆ ಒದಗಿಸಿದ ಪವರ್ಪೂಲ್ ಟಾರ್ಚ ಬೆಳಕಿನಲ್ಲಿ ಪಂಚರ ಸಮಕ್ಷಮ ಅವರ ಹೇಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ, ಒಬ್ಬನು  ತನ್ನ ಹೆಸರು 1] ರಾಜೇಂದ್ರ @ ಚೋಳರಾಜ ತಂದೆ ರವಿಚಂದ್ರ ಕಾವಳೆ ಸಾ: ರೈಲ್ವೆ ಗೇಟ್ ಹತ್ತಿರ ಗುಲಬರ್ಗಾ 2] ರಾಜಶೇಖರ @ ದಾದು ತಂದೆ ದೇವಿಂದ್ರ ಮೇಲಿನಕೇರಿ ಸಾ : ವಿಧ್ಯಾನಗರ ಗುಲಬರ್ಗಾ 3] ಆಕಾಶ ತಂದೆ ಮಾರುತಿ ಜಗದಾಳೆ ಸಾ:  ವಿಜಯನಗರ ಕಾಲೋನಿ ಗುಲಬರ್ಗಾ 4] ಯುವರಾಜ @ ಹುಸೇನಿ ತಂದೆ ರಾಜು ಸರಡಗಿ ಸಾ : ಕೊಟನೂರು [ಡಿ] 5] ಪಾಸರ್ಿಕ ತಂದೆ ರಾಜೇಂದ್ರ ಸಿಂದೆ ಸಾ :  ಬಸವನಗರ ಗುಲಬರ್ಗಾ 6] ರೇವಣಸಿದ್ದಯ್ಯ @ ಮಿ,ಬಿನ್ ತಂದೆ ಶೀವಕುಮಾರ ಸಾ: ಜೇವರ್ಗಿ ಕಾಲೋನಿ ಗುಲಬರ್ಗಾ ಅಂತಾ ತಿಳಿಸಿದರು.  ನಂತರ 6 ಜನ ದರೊಡೆ ಮಾಡಲು ಸಂಚು ರೂಪಿಸಿದವರನ್ನು ಅಂಗ ಶೋದನೆ ಪ್ರತೇಕವಾಗಿ ಮಾಡಲಾಗಿ 1] ರಾಜೇಂದ್ರ @ ಚೋಳರಾಜ ತಂದೆ ರವಿಚಂದ್ರ ಕಾವಳೆ ಸಾ:  ರೈಲ್ವೆ ಗೇಟ್ ಹತ್ತಿರ ಗುಲಬರ್ಗಾ ಇತನ ಹತ್ತಿರ ಒಂದು ನಾಡ ಪಿಸ್ತೂಲ್ ಮತ್ತು ಒಂದು ಜೀವಂತ ಗುಂಡು, 2] ರಾಜಶೇಖರ @ ದಾದು ತಂದೆ ದೇವಿಂದ್ರ ಮೇಲಿನಕೇರಿ ಸಾ: ವಿಧ್ಯಾನಗರ ಗುಲಬರ್ಗಾ ಇತನ ಹತ್ತಿರ ಒಂದು ತಲವಾರ 3] ಆಕಾಶ ತಂದೆ ಮಾರುತಿ ಜಗದಾಳೆ ಸಾ: ವಿಜಯನಗರ ಕಾಲೋನಿ ಗುಲಬರ್ಗಾ ಇತನ ಹತ್ತಿರ ಒಂದು ಕಬ್ಬಿಣದ ರಾಡು ಮತ್ತು ಹಗ್ಗ, 4] ಯುವರಾಜ @ ಹುಸೇನಿ ತಂದೆ ರಾಜು ಸರಡಗಿ ಸಾ: ಕೊಟನೂರು [ಡಿ] ಗುಲಬರ್ಗಾ ಇತನ ಹತ್ತಿರ ಒಂದು ಜಂಬ್ಯಾ 5] ಪಾಸರ್ಿಕ ತಂದೆ ರಾಜೇಂದ್ರ ಸಿಂದೆ ಸಾ: ಬಸವನಗರ ಗುಲಬರ್ಗಾ ಇವನ ಹತ್ತಿರ ಒಂದು ಜಂಬ್ಯಾ 6] ರೇವಣಸಿದ್ದಯ್ಯ @ ಮಿ,ಬಿನ್ ತಂದೆ ಶೀವಕುಮಾರ ಸಾ: ಜೇವರ್ಗಿ ಕಾಲೋನಿ ಗುಲಬರ್ಗಾ ಈತನ ಹತ್ತಿರ ಖಾರದ ಪುಡಿ ದೊರತವು. ಇವುಗಳನ್ನು ಹಾಗು ದರೋಡೆ ಕೃತ್ಯಕ್ಕೆ ಉಪಯೋಗಿಸಲು ತಂದಿದ್ದ ಮೂರು ಮೋಟಾರು ಸೈಕಲ್ಗಳಾದ 1] ಒಂದು ಕಪ್ಪು ಬಣ್ಣದ ಬಜಾಜ ಪಲ್ಸರ 180 ಸಿಸಿ ಬೈಕ್ ಅದರ ರೆಜಿಷ್ಟ್ರೇಷನ ನಂಬರ ಕೆ.ಎ-32 ಇಇ-5719 ಅ.ಕಿ 50,000/- 2] ಒಂದು ಕಪ್ಪು ಬಣ್ಣದ ಬಜಾಜ ಪಲ್ಸರ 150 ಸಿಸಿ ಬೈಕ್ ಅದರ ರೆಜಿಷ್ಟ್ರೇಷನ ನಂಬರ ಕೆ.ಎ-32 ಡಬ್ಲ್ಯೂ 8153 ಅ.ಕಿ 40,000/- ರೂ, 3] ಒಂದು ಕಪ್ಪು ಬಣ್ಣದ ಹಿರೊಹೊಂಡಾ ಹಂಕ್ ಮೊಟಾರು ಸೈಕಲ್ ರೆಜಿಸ್ಟ್ರೇಷನ ನಂ ಕೆ.ಎ 32 ವ್ಹಿ. 6140 ಅ.ಕಿ 40,000/- ರೂ  ಇದ್ದು  ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ತಾಜೂದ್ದಿನ ತಂದೆ ಮಹ್ಮದ ಖಾಜಾ ಮೈನೂದ್ದಿನ ಸಾಃ ಮನೆ ನಂ. 4-601/76ಎ, ಎಂ.ಬಿ ನಗರ ಗುಲಬರ್ಗಾ ಇವರು ಹಾಗು ಕುಟುಂಬದವರು ಮನೆಗೆ ಬೀಗ ಹಾಕಿಕೊಂಡು ರಂಜಾನ್ ಇಫ್ತಿಹಾರ್ ಬಿಡುವ ಸಲುವಾಗಿ ಸಂಬಂಧಿಕರ ಮನೆಗೆ ಹೋಗಿದ್ದು ದಿನಾಂಕ 25/07/2014 ರಂದು 05:30 ಪಿ.ಎಂ. ಕ್ಕೆ ನಮ್ಮ ಮನೆಯ ಪಕ್ಕದವರು ಫೋನ್ ಮಾಡಿ ತಿಳಿಸಿದ್ದೇನೆಂದರೇ, ಕೆಲವು ಜನರು ಬಂದು ನಿಮ್ಮ ಮನೆಯ ಬೀಗ ಮುರಿದು ಮನೆಯೊಳಗೆ ಪ್ರವೇಶ ಮಾಡಿರುತ್ತಾರೆ ಅಂತಾ ತಿಳಿಸಿದ ಮೇರೆಗೆ ನಾನು ಮನೆಗೆ ಬಂದು ನೋಡಲು 1) ಮಹ್ಮದ ಫೆರೋಜ್ ಅಹ್ಮದ ಇಬ್ರಾಹಿಂ ತಂದೆ ಮಹ್ಮದ ಇಸ್ಮಾಯಿಲ್ 2) ಅಫ್ರೋಜ್ ಅಹ್ಮದ ತಂದೆ ಇಬ್ರಾಹಿಂ 3) ಶ್ರೀನಿವಾಸ ಮಾಗವಾಡಿ ಹಾಗು ಇತರರು ಬಂದು ಮನೆಯ ಕೀಲಿ ಮುರಿದು ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಮನೆಯಲ್ಲಿದ್ದ ನಗದು ಹಣ 10,000/- ರೂ. 2) 03 ಗ್ರಾಂ ಬಂಗಾರದ ಚೈನ್ 3) ಸೋಫಾ & ಅಲೆಮಾರಿ ಸಾಮಾನುಗಳನ್ನು ಲೋಡ್ ಮಾಡಿಕೊಂಡು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 
ಹೆಣ್ಣು ಮಗಳು ಕಾಣೆಯಾದ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ. ಶರಣಬಸಪ್ಪ ತಂದೆ    ಅಣವೀರಪ್ಪ ಸೂಗೂರ  ಸಾ: ಕಮಲಾಪೂರ  ತಾ: ಜಿ: ಗುಲಬರ್ಗಾ  ಇವರ  ಹೆಂಡತಿಯಾದ  ಶ್ರೀಮತಿ. ಪೂಜಾ  : 22 ವರ್ಷ  ಇವಳು ದಿನಾಂಕ: 24/07/14 ರಂದು ರಾತ್ರಿ 11-30 ಗಂಟೆಯಿಂದ ದಿನಾಂಕ: 25/07/14 ರ ಬೆಳಗಿನ ಜಾವ 02-00 ಗಂಟೆಯ  ಮಧ್ಯದ ಅವಧಿಯಲ್ಲಿ  ಯಾವುದೋ  ಕಾರಣಕ್ಕೆ  ತನ್ನ  ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು  ಮನೆಯಲ್ಲಿ  ಯಾರಿಗೂ ಹೇಳದೇ ಕೇಳದೇ  ಮನೆಬಿಟ್ಟು  ಹೋಗಿದ್ದು, ಎಲ್ಲಾ ಕಡೆಗೆ  ಹುಡುಕಾಡಲಾಗಿ   ಪತ್ತೆ  ಹತ್ತಿರುವುದಿಲ್ಲಕಾರಣ  ಕಾಣೆಯಾದ ನನ್ನ  ಹೆಂಡತಿ  ಪೂಜಾ  ಇವಳನ್ನು  ಪತ್ತೆ  ಹಚ್ಚಿ ಕೊಡಬೇಕು    ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಟಾಣೆಯಲ್ಲಿ ಪ್ರಕರಣ ದಾಖಲಾಗಿದೆ.