POLICE BHAVAN KALABURAGI

POLICE BHAVAN KALABURAGI

11 April 2017

Kalaburagi District Reported Crimes

ಅಪಘಾತ ಪ್ರಕರಣ :
ವಾಡಿ ಠಾಣೆ : ಶ್ರೀ ಶರಣಪ್ಪಾ ತಂದೆ ಭೀಮಣ್ಣಾ @ಭೀಮರಾಯ ಮಾಶ್ಯಾಳ ಸಾ: ಸೂಲಹಳ್ಳಿ ಗ್ರಾಮ ರವರು ದಿನಾಂಕ:10/04/2017 ರಂದು ಅಣ್ಣ ಚಂದಪ್ಪಾ ರವರ ಮಗಳಿಗೆ ವರ ನೋಡಿ ಹೋಗಿದ್ದರ ಪ್ರಯುಕ್ತ ವರ ನೋಡಿ ಬರವ ಸಲುವಾಗಿ ನಮ್ಮ ಅಣ್ಣ ಹಣಮಂತ , ಚಂದಪ್ಪಾ  ಹಾಗೂ ಆತನ ಹೆಂಡತಿ ಮಹಾದೇವಿ ಅಣ್ಣತಮ್ಮಕಿಯ ಸರಸ್ವತಿ, ನಮ್ಮ ಸಂಬಂದಿ ಮರೇಪ್ಪಾ ಹಾಗೂ ನಾನು ಕೂಡಿಕೊಂಡು ಆಲ್ಲೂರ ಗ್ರಾಮದ ಟಂ.ಟಂ. ನಂ: ಕೆ.-32/ಬಿ-9880 ನೇದ್ದರಲ್ಲಿ ಕುಳಿತುಕೊಂಡು ವಾಡಿ ಪಟ್ಟಣದ ಮುಖಾಂತರ ದಾಟಿ ನಾಲವಾರ ದಿಂದ ಕೊಲ್ಲೂರ ದಿಂದ ಹುಳಾಂಡಗೇರಾ ಗ್ರಾಮದ ಕಡೆಗೆ ಹೊರಟಾಗ ಟಂ.ಟಂ.ಚಾಲಕನು ತನ್ನಟಂ.ಟಂ.ನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹುಳಾಂಡಗೇರ ಇನ್ನೂ 1 ಕಿ.ಮಿ. ಅಂತರದಲ್ಲಿ ಸದರಿ ಟಂ.ಟಂ ಕ್ಕೆ ಒಮ್ಮೇಲೆ ಕಟ್ ಹೊಡೆಯಲು ಹೋಗಿ ಟಂ.ಟಂ. ವಾಹನವು ರೋಡಿನ  ಬಲ ಬದಿಗೆ ಬಿದ್ದಿತ್ತು. ಆಗ ನಾವೇಲ್ಲರೂ ಕೆಳಗೆ ಬಿದ್ದಿದ್ದು ನಾನು ಮತ್ತು ಚಂದಪ್ಪಾ ಹೊರಗಡೆ ಬಂದು ಟಂ.ಟಂ.ದಲ್ಲಿದ್ದ ಉಳಿದವರಿಗೆ ಹೊರಗಡೆ ತೆಗೆದು ನೋಡಲಾಗಿ ಅಣ್ಣ ಹಣಮಂತ ಇತನಿಗೆ ಎಡ ಟೊಂಕಕ್ಕೆ ಭಾರಿ ರಕ್ತಗಾಯವಾಗಿ, ಭಾರಿ ಒಳಪೆಟ್ಟಾಗಿದ್ದು ಸರಿಯಾಗಿ ಮಾತನಾಡುತ್ತಿರಲಿಲ್ಲಾ. ಹಾಗೂ ಉಳಿದವರಿಗೆ ಕೂಡಾ ಅಲ್ಲಲ್ಲಿ ಸಣ್ಣ ಪುಟ್ಟ ಮತ್ತು ಬಾರಿ ಗಾಯಾವಾಗಿದ್ದು ಟಂ.ಟಂ. ಚಾಲಕನು ತನ್ನ ಟಂ.ಟಂ.ನ್ನು ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿರುತ್ತಾನೆ. ನಾವು ಯಾವುದೊ ಒಂದು ವಾಹನದಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಕಲಬುರಿಯಲ್ಲಿ ಸೇರಿಕೆ ಆಗಿದ್ದು ನನ್ನ ಅಣ್ಣ ಹಣಮಂತ ಉಪಚಾರ ಹೊಂದುತ್ತಾ  ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ನಿಂಗಮ್ಮ ಗಂಡ ಶಿವಪುತ್ರಪ್ಪ ಓಳದೋಡ್ಡಿ ಸಾ:ಅಂತಪನಾಳ ಗ್ರಾಮ ತಾ:ಜಿ:ಕಲಬುರಗಿ ರವರ ಗಂಡ ಶಿವಪುತ್ರಪ್ಪ ಇವರ ಹೆಸರಿನಲ್ಲಿ ಅಂತಪನಾಳ ಗ್ರಾಮ ಸೀಮಾಂತರದಲ್ಲಿ ಹೋಲ ಸರ್ವೆನಂ.19 ಆಕಾರ ನೇದ್ದರಲ್ಲಿ 8 ಎಕರೆ ಜಮೀನಿದ್ದು. ನನ್ನ ಗಂಡನವರು ಒಕ್ಕಲುತನ ಕೆಲಸದೊಂದಿಗೆ ಕಲ್ಮೂಡ ಗ್ರಾಮ ಪಂಚಾಯತನಲ್ಲಿ ಪಂಪ ಆಪರೇಟರ ಕೆಲಸ ಮಾಡಿಕೊಂಡಿದ್ದರು. ನನ್ನ ಗಂಡನವರು ಈಗ್ಗೆ ಸೂಮಾರು 2 ವರ್ಷಗಳ ಹಿಂದೆ ಕಮಲಾಪೂರ ಗ್ರಾಮದ ಕೆನರಾ ಬ್ಯಾಂಕನಲ್ಲಿ ತಮ್ಮ ಹೆಸರಿನಲ್ಲಿರುವ ಹೋಲದ ಪಹಣಿ ಮೇಲೆ ಒಕ್ಕಲುತನದ ಸಲುವಾಗಿ 5 ಲಕ್ಷ ಸಾಲ ಪಡೆದುಕೊಂಡು ಮೇಲ್ಕಂಡ ಹೋಲದಲ್ಲಿ ಬಾವಿ ಹೋಡೆದಿದ್ದು. ನಿರು ಬಿದ್ದಿರುವುದಿಲ್ಲ. ಮತ್ತು ತಾನು ಬ್ಯಾಂಕಿನಿಂದ ಪಡೆದ ಸಾಲದಲ್ಲಿ ಇಲ್ಲಿಯವರೆಗೆ 2 ಕಂತುಗಳು ಬ್ಯಾಂಕಗೆ ಕಟ್ಟಿರುತ್ತಾರೆ. ಇನ್ನೂಳಿದ ಸಾಲವನ್ನು ಮುಟ್ಟಿಸಲು ಆಗದೆ ಇದ್ದರಿಂದ ಈಗ್ಗೆ ಸೂಮಾರು ದಿನಗಳಿಂದ ನನ್ನ ಗಂಡನವರು ಮನೆಯಲ್ಲಿ ಹಾಗೂ ನಮ್ಮೂರಿನವರಲ್ಲಿ ಯಾರೊಂದಿಗೆ ಸರಿಯಾಗಿ ಮಾತನಾಡದೆ ಮಂಕಾಗಿ ಕುಡುವುದು ಸರಿಯಾಗಿ ಊಟ ಮಾಡದೆ ಹಾಗೂ ಮಾತುಬಿಟ್ಟು ಮಾತನಾಡುವುದು ಮಾಡುತ್ತ ಮಾನಸಿಕ ಮಾಡಿಕೊಂಡಿದ್ದು ಇರುತ್ತದೆ. ನಿನ್ನೆ ದಿನಾಂಕ: 08.04.2017 ರಂದು ರಾತ್ರಿ ಮನೆಯಲ್ಲಿ ಊಟ ಮಾಡಿಕೊಂಡು ನನ್ನ ಹಿರಿಯ ಮಗ ಸಿದ್ದಪ್ಪ ಈತನು ಗುಂಡಗುರ್ತಿಗೆ ಹೋಗಿದ್ದರಿಂದ ನಮ್ಮ ಹೋಲದಲ್ಲಿರುವ ಕಬ್ಬಿನ ಬೆಳೆಯನ್ನು ನೋಡಿಕೋಳ್ಳುವ ಸಂಬಂಧ ನನ್ನ ಗಂಡ ರಾತ್ರಿ ಹೋಲದಲ್ಲಿ ಮಲಗುವುದಾಗಿ ತಿಳಿಸಿ ರಾತ್ರಿ 09.00 ಗಂಟೆಯ ಸೂಮಾರಿಗೆ ಮನೆಯಿಂದ ಹೋಗಿದ್ದು ಇಂದು ದಿನಾಂಕ: 09.04.2017 ರಂದು ಮುಂಜಾನೆ 08.00 ಗಂಟೆಯ ಸೂಮಾರಿಗೆ ನನ್ನ ಮಗ ಚಂದ್ರಕಾಂತ ಈತನು ನಮ್ಮ ಎಮ್ಮಿಗಳನ್ನು ಹೋಡೆದುಕೊಂಡು ನಮ್ಮ ಹೋಲಕ್ಕೆ ಹೋಗಿದ್ದು ನಂತರ ನಮ್ಮೂರ ಶ್ರೀಕಾಂತ ಈತನು ನಮ್ಮ ಮನೆಗೆ ಬಂದು ನಿಮ್ಮ ಮಗ ಚಂದ್ರಕಾಂತ ಈತನು ನನ್ನ ಮೋಬಾಯಿಲಗೆ ಫೊನ ಮಾಡಿ ತನ್ನ ತಂದೆ ಶಿವಪುತ್ರಪ್ಪ ಇವರು ನಿಮ್ಮ ಹೋಲದ ಬಂದಾರಿಯಲ್ಲಿರುವ ಬೆವಿನ ಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ್ದು. ನಂತರ ನಾನು ಗಾಬರಿಗೊಂಡು ಶ್ರೀಕಾಂತ ಹಾಗೂ ನನ್ನ ನೇಗೆಣಿ ಸಂಗೀತಾ ಕೂಡಿ ನಮ್ಮ ಹೋಲಕ್ಕೆ ಹೋಗಿ ನೋಡಲು ನನ್ನ ಗಂಡನ ಹೆಣ ಬೆವಿನ ಗಿಡದಿಂದ ಬಿಚ್ಚಿ ಹೋಲದಲ್ಲಿ ಮಲಗಿಸಿದ್ದು. ಅವರ ಕುತ್ತಿಗೆಯಲ್ಲಿ ಅಂದಾಜು ಒಂದು ಫಿಟನಷ್ಟು ಉದ್ದ ಹಗ್ಗ  ಕೋರಳಲ್ಲಿದ್ದು. ಬೆವಿನ ಗಿಡದಲ್ಲಿ ಕೂಡಾ ಅಂದಾಜು 2 ಫೀಟನಷ್ಟು ಉದ್ದವಾದ ಹಗ್ಗ ಇದ್ದು. ನನ್ನ ಗಂಡನ ಕುತ್ತಿಗೆಯ ಕೆಳಭಾಗದಲ್ಲಿ ಅರ್ಧ ಚಂದ್ರಾಕೃತಿಯಂತೆ ಕಂದುಗಟ್ಟಿದ ಗಾಯ ಇರುತ್ತದೆ. ನಂತರ ನನ್ನ ಮಗ ಚಂದ್ರಕಾಂತನಿಗೆ ವಿಚಾರ ಮಾಡಲು ಅವನು ತಿಳಿಸಿದ್ದೆನಂದರೆ. ಇಂದು ಮುಂಜಾನೆ ನಾನು ನನ್ನ ಎಮ್ಮಿಗಳನ್ನು ಹೋಡೆದುಕೊಂಡು ನನ್ನ ಹೋಲಕ್ಕೆ ಬಂದಾಗ ನನ್ನ ತಂದೆ ನಮ್ಮ ಹೋಲದಲ್ಲಿನ ಬಂದಾರಿಯಲ್ಲಿರುವ ಬೆವಿನ ಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಜೋತು ಬಿದ್ದಿದ್ದು ಅದನ್ನು ನೋಡಿ ನಾನು ಚಿರಾಡುತ್ತಿದ್ದಾಗ ನಮ್ಮ ಪಕ್ಕದ ಹೋಲದಲ್ಲಿ ಕೆಲಸ ಮಾಡುತ್ತಿದ್ದ ಪ್ರಭು ಮಾಗಾನೋರ ಮತ್ತು ಶ್ಯಾಮು ಮಾಳಗೆ ಇವರು ಬಂದು ನೋಡಿದ್ದು. ನಂತರ ಅವರಿಬ್ಬರೂ ಕೂಡಿ ನನ್ನ ತಂದೆಯ ಹೆಣವನ್ನು ಗಿಡದ ಮೇಲೆ ಏರಿ ಕುಡುಗೋಲಿನಿಂದ ಹಗ್ಗ ಕತ್ತರಿಸಿ ಕೆಳಗೆ ಇಳಿಸಿರುತ್ತಾರೆ ಅಂತಾ ಹೇಳಿದ್ದು. ನನ್ನ ಮಗ ಹೇಳಿದ ವಿಷಯ ನಿಜ ಇರುತ್ತದೆ. ನನ್ನ ಗಂಡನವರು ನಿನ್ನೆ ರಾತ್ರಿ 11.00 ಗಂಟೆಯಿಂದ ಬೆಳಿಗ್ಗೆ 05 ಗಂಟೆಯ ಅವಧಿಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರಬಹುದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.