POLICE BHAVAN KALABURAGI

POLICE BHAVAN KALABURAGI

21 February 2017

Kalaburagi District Daily Reported Crimes.

ಸೇಡಂ ಪೊಲೀಸ್ ಠಾಣೆ : ದಿನಾಂಕ:20-02-2017 ರಂದು 1600 ಗಂಟೆಗೆ ಕೊಡ್ಲಾ ಗ್ರಾಮದ ಹತ್ತಿರ ವಾಹನ ಅಪಘಾತದಲ್ಲಿ ರೋಡಿನಲ್ಲಿ ಒಬ್ಬನು ಮೃತಪಟ್ಟಿದ್ದು ಇದೆ ಅಂತ ಮಾಹಿತಿ ಮೇರೆಗೆ ನಾನು ಸ್ಥಳಕ್ಕೆ ಭೇಟಿ ಕೊಟ್ಟು ಅಲ್ಲಿ ರೋಡಿನಲ್ಲಿ ಬಿದ್ದ ಮೃತದೇಹವನ್ನು ಸರ್ಕಾರಿ, ಆಸ್ಪತ್ರೆಗೆ ಶೀಫ್ಟ ಮಾಡಿ ನಂತರ ಫಿರ್ಯಾದಿ, ಶ್ರೀಮತಿ, ಕಾಮಾಕ್ಷಿ ಗಂಡ ದೀಪಕ, ವಯ:30 ವರ್ಷ, ಜಾತಿ:ಕ್ರಿಶ್ಚಿಯನ್, ಉ:ಕೊಡ್ಲಾ P.H.C ಯಲ್ಲಿ ಸ್ಪಾಫ್ ನರ್ಸ ಕೆಲಸ, ಸಾ:ಚಿಟಗುಪ್ಪ, ಜಿ:ಬೀದರ, ಹಾ.ವ:ಕೊಡ್ಲಾ ಗ್ರಾಮ, ತಾ:ಸೇಡಂ ಇವರ ಹೇಳಿಕೆ ಪಡೆದುಕೊಂಡಿದ್ದು ಸಾರಂಶವೇನೆಂದರೆ, ಇಂದು ದಿ:20-02-2017 ರಂದು ಮದ್ಯಾಹ್ನ 1500 ಗಂಟೆಗೆ ನನ್ನ ಗಂಡ ದೀಪಕ ಇತನು ಸೇಡಂಕ್ಕೆ ಹೋಗಿ ಬರುತ್ತೇನೆ ಅಂತ ಹೇಳಿ ತನ್ನ ಮೊಟಾರು ಸೈಕಲ್ ನಂ-KA39-L-3852 ನೇದ್ದನ್ನು ತೆಗೆದುಕೊಂಡು ಹೋದರು ನಂತರ ಸ್ವಲ್ಪ ಸಮಯದಲ್ಲಿ ಮದ್ಯಾಹ್ನ 1515 ಗಂಟೆಯ ಸುಮಾರಿಗೆ ಕೊಡ್ಲಾ ಗ್ರಾಮದ ಜನರು ನಾನು ಕೆಲಸ ಮಾಡುವ ಆಸ್ಪತ್ರೆಗೆ ಬಂದು ಹೇಳಿದ್ದೇನೆಂದರೆ, ನನ್ನ ಗಂಡ ಸೇಡಂಕ್ಕೆ ಹೋಗುವಾಗ ಕೆ.ಇ.ಬಿ ಹತ್ತಿರ ಯಾದಗೀರ ಸೇಡಂ ರೋಡಿನ ಟರ್ನದಲ್ಲಿ ಯಾವುದೋ ವಾಹನ ನನ್ನ ಗಂಡನ ಮೊಟಾರು ಸೈಕಲಗೆ ಅಪಘಾತಪಡಿಸಿ ಹೋಗಿದ್ದು ನನ್ನ ಗಂಡ ರೋಡಿನನ ಮೇಲೆ ಬಿದ್ದು ಸತ್ತಿರುತ್ತಾನೆ ಅಂತ ತಿಳಿಸಿದರು, ಆಗ ನಾನು ಮತ್ತು ನಮ್ಮ ಆಸ್ಪತ್ರೆಯ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಗಂಡ ದೀಪಕ ರೋಡಿನ ಎಡಗಡೆ ಬೋರಲಾಗಿ ಬಿದ್ದಿದ್ದು ಅವರ ಮುಖಕ್ಕೆ ಬಾರಿ ರಕ್ತಗಾಯವಾಗಿದ್ದು ಮತ್ತು ಬಲಗಾಲು ಮುರಿದಿದ್ದು ಭಾರಿ ರಕ್ತಗಾಯಹೊಂದಿ ಸ್ಥಳದ್ಲಲಿಯೇ ಸತ್ತಿದನು. ನನ್ನ ಗಂಡನಿಗೆ ಯಾವುದೋ ವಾಹನದ ಚಾಲಕನು ತನ್ನ ವಾಹನ ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಮೊಟಾರು ಸೈಕಲಗೆ ಅಪಘಾಥಪಡಿಸಿ ವಾಹನ ನಿಲ್ಲಿಸದೇ ಓಡಿ ಹೋಗಿದ್ದು ಇರುತ್ತದೆ ಕಾರಣ ಅಪಘಾತಪಡಿಸಿ ಓಡಿಹೋದ ಸದರಿ ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಹೇಳಿಕೆಯನ್ನು ಠಾಣೆಗೆ 1900 ಗಂಟೆಗೆ ಬಂದು ಸದರಿ ಹೇಳಿಕೆ ಸಾರಂಶದ ಮೇಲಿಂದ ಪ್ರಕರಣ  ದಾಖಿಲಾದ ಬಗ್ಗೆ ವರದಿ.
ರಾಘವೇಂದ್ರ ನಗರ ಪೊಲೀಸ್ ಠಾಣೆ : ದಿನಾಂಕ 19/2/2017 ರಂದು ರಾತ್ರಿ 2 ಗಂಟೆಯ ವರೆಗೆ ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಸ್ಮೀತಾ ಮತ್ತು ನನ್ನ ಮಕ್ಕಳು ಇಬ್ಬರು  ಟಿವಿ ನೊಡಿ ಬೆಡ್ಡ  ರೂಮಿನಲ್ಲಿ ಮಲಗಿಕೊಂಡಿರುತ್ತೆವೆ.  ಬೆಳಿಗ್ಗೆ 9  ಗಂಟೆಯ ಸುಮಾರಿಗೆ   ನಾನು ಎದ್ದು ಹೊರಗೆ ಹೊಗಲು ನಮ್ಮ ಮನೆಯ ಅಡಿಗಿ ಮನೆಯ ಬಾಗಲು ತೆರೆದಿದ್ದು  ಇದ್ದು,   ನಾವು ಮಲಗಿಕೊಂಡಿರುವ ಬೆಡ್ ರೂಮಿನಲ್ಲಿದ್ದ  ಅಲಮಾರಾ ತೆರೆದಿದ್ದು ಇದ್ದು ನಾನು ಮತ್ತು ನನ್ನ ಹೆಂಡತಿ ಸ್ಮೀತಾ ಇಬ್ಬರು ನೊಡಲು ಅಲಮಾರಾದಲ್ಲಿದ್ದ ಬಂಗಾರದ ಆಭರಣಗಳು ಇರಲಿಲ್ಲಾ. ಅಲಮಾರಾದಲ್ಲಿದ್ದ 1) 40 ಗ್ರಾಂ ಬಂಗಾರದ ಒಂದು ಜೊತೆ ಪಾಟ್ಲಿಗಳು. ಅ||ಕಿ|| 110000/ 2)55 ಗ್ರಾಂ ಬಗಾರದ ಮಂಗಳಸೂತ್ರ ಚೈನ್ ಮಾದರಿ  ಅದರಲ್ಲಿ ಕರಿಮಣಿಗಳು ಹವಳ ಮುತ್ತು ಇದ್ದಿದ್ದು  ಅ||ಕಿ|| 151250/ 3)25 ಗ್ರಾಂ ಬಂಗಾರದ ಒಂದು ಜೊತೆ ಬಳೆಗಳು ಅ||ಕಿ|| 68750 /ರೂ 4) 20 ಗ್ರಾಂ ಬಂಗಾರದ ಒಂದು ಜೊತೆ ಬಳೆಗಳು ಅ||ಕಿ|| 55000/ರೂ 5) 20 ಗ್ರಾಂದಲ್ಲಿ ಎರಡು ಲಾಕೆಟಗಳು  ಅದರಲ್ಲಿ ಒಂದು ಹಲೊ ಚೈನ್ ಇನ್ನೊಂದು  ರೊಪ್ ಲಾಕೇಟಅ||ಕಿ||55000/ರೂ 6) 5 ಗ್ರಾಂ ಬಂಗಾರದ ಪದಕ ಅ||ಕಿ|| 13750/ 7) 10 ಗ್ರಾಂ ಬಂಗಾರ ಒಂದು ಸುತ್ತಉಂಗುರ ಅ||ಕಿ|| 27500/ರೂ 8) 5 ಗ್ರಾಂ ಬಂಗಾರದ ಲೀಪ್ ( ನವಿಲು ಮಾದರಿ)ಉಂಗುರು ಅ||ಕಿ|| 13750/ರೂ 9) 32 ಗ್ರಾಂದಲ್ಲಿ 4 ಜೊತೆ  ಗುಂಡು ಬೆಂಡೊಲಿಗಳು ಅ||ಕಿ|| 88000/ರೂ 10) 10 ಗ್ರಾಂ ಬಂಗಾರದ ಒಂದು ಮಂಗಳಸೂತ್ರ  ಕಟ್ಟಾಗಿದ್ದು ಅ||ಕಿ|| 27500/ರೂ ಹಾಗು ನಗದು ಹಣ 40 ಸಾವಿರ ರೂಪಾಯಿ  ಇರಲಿಲ್ಲಾ ಯಾರೊ ಕಳ್ಳರು ರಾತ್ರಿ ವೇಳೆಯಲ್ಲಿ ನಮ್ಮ ಮನೆಯ ಕಿಡಕೀಯ ಒಳಗಡೆಯಿಂದ ಕೈ ಹಾಕಿ ಒಳಗಿನ ಕೊಂಡಿ ತೆರೆದು ಒಳಗೆ ಪ್ರವೇಶ ಮಾಡಿ ಅಲಮಾರದಲ್ಲಿ ಇದ್ದ 23 ತೊಲೆಯ ಬಂಗಾರದ ಆಭರಣಗಳು ಒಟ್ಟು ಅ||ಕಿ|| 610500/-  ಹಾಗೂ ನಗದು ಹಣ 40000 ರೂ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಈ ಬಗ್ಗೆ ನಾನು ಮತ್ತು ನನ್ನ ಹೆಂಡತಿ ಕೂಡಿಕೊಂಡು ನನ್ನ ಅಣ್ಣನಾದ ಸಚೀನ ಸಾ|| ಐರವಾಡಿ ಕಲಬುರಗಿ ಇವರಿಗೆ ತಿಳಿಸಿ ವಿಚಾರ ಮಾಡಿ ಇಂದು ನಾನು ಠಾಣೆಗೆ ಬಂದು ದೂರು ಸಲ್ಲಿಸಿದ್ದು  ಪತ್ತೆ ಹಚ್ಚಿಕೊಡಲು ಹೇಳಿಕೆ ಸಾರಂಶದ ಮೇಲಿಂದ ಪ್ರಕರಣ  ದಾಖಿಲಾದ ಬಗ್ಗೆ ವರದಿ. 

ವಾಡಿ ಪೊಲೀಸ ಠಾಣೆ : ದಿನಾಂಕ:19/02/2017 ರಂದು 9.00 ಎಎಮ್ ಸುಮಾರಿಗೆ  ಪಿರ್ಯಾದಿಯ  ಗಂಡನಿಗೆ ದಾದರಾವ ತಂದೆ ಬಾಬುರಾವ , ಭಗವಾನ ತಂದೆ ಬಾಬುರಾವ, ಮಾರುತಿ ತಂದೆ ಬಾಬುರಾವ, ಬಲರಾಮ ತಂದೆ ಬಾಬುರಾವ ಹಾಗೂ ಸುಭಾಷ ತಂದೆ ದಾದರಾವ ರವರು ಕೂಡಿಕೊಂಡು ಏ ರಂಡಿ ಮಗನೇ ನೀನು ನಮಗೆ ಹಣ ಕೊಡು ಅಂತಾ ಊರಲ್ಲಿ ಎಲ್ಲರ ಮುಂದೆ ಹೇಳುತ್ತಾ ತಿರುಗಡುತ್ತಿದ್ದ ನಮ್ಮ ಮರ್ಯಾದೆ ಕಳಿತಾ ಇದ್ದಿ ರಂಡಿ ಮಗನೇ ನೀನು ಇನ್ನೂ ಮುಂದೆ ಊರಲ್ಲಿ ಯಾರ ಮುಂದೆ ನಾವುಹಣ ಕೊಡುವ ಬಗ್ಗೆ ಹೇಳಿದರೆ ನೀನಗೆ ಖಲಾಸ ಮಾಡುತ್ತೇವೆ. ನೀನು ಊರಲ್ಲಿ ಇರಬೇಡ ಸಾಯಿ ಮಗನೇ ಅಂತಾ ಧಮಕಿ ಹಾಕಿ ಹೊರಟು ಹೊದ ನಂತರ ಪಿರ್ಯಾದಿ ಗಂಡನು ಅಂಜಿ ಅದೇ ಮನಸ್ಸಿಗೆ ಬೇಜಾರು ಮಾಡಿಕೊಂಡು ಮನೆಯಲ್ಲಿ ದೇವರ ಕೊಣೆಯಲ್ಲಿ ಬಾಗಿಲು ಮುಚ್ಚಿ ಪ್ಲಾಸ್ಟಿಕ ಹಗ್ಗದಿಂದ ಜಂತಿಗೆ ನೇಣು ಬಿಗಿದುಕೊಂಡು ಮೃತ ಪಟ್ಟಿದ್ದು ಇದಕ್ಕೆ ಕಾರಣ ಈ ಮೇಲ್ಕಂಡವರು ಪಿರ್ಯಾದಿ ಗಂಡನಿಗೆ ಬೈದು ಧಮಕಿ ಹಾಕಿದ್ದರಿಂದ ಮೃತ ಪಟ್ಟಿದ್ದು ಇರುತ್ತದೆ. ಪಿರ್ಯಾದಿಯು ಮನೆಯಲ್ಲಿ ಹಿರಿಯರಿಗೆ ಹೇಳಿ ಕೇಳಿ ತಡವಾಗಿ ಠಾಣೆಗೆ ಬಂದು ಪಿರ್ಯಾದಿ ಸಲ್ಲಿಸಿದ್ದು ಇರುತ್ತದೆ  ಅಂತಾ ಇತ್ಯಾದಿ ವಗೈರೆ ಪಿರ್ಯಾದಿ ಅರ್ಜಿಯ ಸಾರಾಂಶದ ಮೇಲಿಂದ ಪ್ರಕರಣ  ದಾಖಿಲಾದ ಬಗ್ಗೆ ವರದಿ.