POLICE BHAVAN KALABURAGI

POLICE BHAVAN KALABURAGI

03 April 2016

Kalaburagi District Reported Crimes

ಕೊಲೆ ಪ್ರಕರಣ :
ಕಾಳಗಿ ಠಾಣೆ : ಶ್ರೀ ಶಿವಾನಂದ ತಂದೆ ಶಾಮಯ್ಯ ಗುತ್ತೆದಾರ ಸಾ:ಕುಡ್ಡಳ್ಳಿ ತಾ:ಚಿಂಚೋಳಿ ರವರ ತಂಗಿಯಾದ ಜ್ಯೋತಿ ಇವಳಿಗೆ ಈಗ ಸುಮಾರು 2 ವರ್ಷಗಳ ಹಿಂದೆ ತಾವರಗೇರಾ ಗ್ರಾಮದ ಆರೋಪಿತನಾದ ಶಿವಕುಮಾರ ತಂದೆ ಅಂಬಾರಾಯ ಗುತ್ತೇದಾರ ಇತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇವಳಿಗೆ ವರ್ಷಾ ಎಂಬುವವಳು 1 ವರ್ಷದ ಮಗು ವಿದ್ದು ಫಿರ್ಯಾದಿಯ ತಂಗಿ ಇವಳು ಮದುವೆಯಾದ ನಂತರ 5-6 ತಿಂಗಳ ಚೆನ್ನಾಗಿಯ ತನ್ನ ಅತ್ತೆ ಗಂಡನೊಂದಿಗೆ ವಾಸವಾಗಿದ್ದು ನಂತರ ಫಿರ್ಯಾದಿಯ ಮಾವ ಇತನು ಫಿರ್ಯಾದಿಯ ತಂಗಿಯ ಶೀಲದ ಶಂಕೆ ಕುರಿತು ಅನುಮಾನ ಮಾಡಿ ಫಿರ್ಯಾದಿಯ ತಂಗಿಯ ಜೋತೆಯಲ್ಲಿ ನೀನು ಚೆನ್ನಾಗಿಲ್ಲ ನಿನಗೆ ಒಂದಲ್ಲಾ ಒಂದು ದಿವಸ ನಿನ್ನ ಕತೆ ಮುಗಿಸಿ ಬೀಡುತ್ತೆನೆ ನಿನ್ನ ನಡತೆ ಸರಿ ಇಲ್ಲ ನೀನು ನನಗೆ ಚೆನ್ನಾಗಿ ನೋಡಿಕೊಂಡಿರುವುದಿಲ್ಲ ಅಂತಾ ಕಿರಕುಳ ಕೊಟ್ಟು ತಂಟೆ ತಕರಾರು ಮಾಡುತ್ತಿದ್ದಾ, ಈ ವಿಷಯದ ಬಗ್ಗೆ ನನ್ನ ತಂಗಿ  ಹಾಗೂ ನನ್ನ ತಮ್ಮ ನನ್ನ ತಂದೆ ತಾಯಿ ನಾವೆಲ್ಲಾರೂ ಅವಳ ಹತ್ತಿರ ಊರಿಗೆ ಹೋದಾಗ ಹೇಳುತ್ತಿದ್ದಳು, ನಾವು ನಮ್ಮ ತಂಗಿಗೆ ಅಲ್ಲಿಂದ ನಮ್ಮ ಊರಿಗೆ ಕರೆದುಕೊಂಡು ಬಂದೇವು, ನಂತರ 1 ತಿಂಗಳವಾದ ನಂತರ ನನ್ನ ತಂಗಿಯ ಗಂಡ ನಮ್ಮ ಊರಿಗೆ ಬಂದು ನಿಮ್ಮ ತಂಗಿಗೆ ಸರಿಯಾಗಿ ನೋಡಿಕೊಳ್ಳುತ್ತೆನೆ ನನ್ನ ಜೋತೆಗೆ ಕಳಿಸಿ ಕೊಡಿ ಅಂತಾ ಹೇಳಿದ ಮೇರೆಗೆ ನಾವು ಅದಕ್ಕೆ ಒಪ್ಪಿ ನನ್ನ ತಂಗಿಗೆ ಅವರ ಜೋತೆ ಕಳಿಸಿಕೊಟ್ಟೆವು, ನಂತರ ಕೆಲವು ದಿವಸಗಳ ನಂತರ ಹಾಗೇ ಕಿರಕುಳ ಕೊಡುತ್ತಿರುವದರಿಂದ ನಾವು ನನ್ನ ತಂಗಿಗೆ ತಾಳ್ಮೆ ಹೇಳಿ ಹಾಗೆ ಜೀವನ ಸಾಗಿಸು ಅಂತಾ ಇಂದಲ್ಲಾ ನಾಳೆ ನಿನ್ನ ಗಂಡ ಸರಿ ದಾರಿಗೆ ಬರುತ್ತಾನೆ ಅಂತಾ ತಾಳ್ಮೆ ಹೇಳಿ ಬರುತ್ತಿದ್ದೆವೆ, ಅದೇ ರೀತಿಯಾಗಿ ಪುನಃ ನನ್ನ ತಂಗಿಯ ಗಂಡ ನನ್ನ ತಂಗಿಯ ಜೋತೆಯಲ್ಲಿ ಕಿರಕುಳ ಕೊಡುವುದು ಶುರು ಮಾಡಿದ್ದರಿಂದ ನನ್ನ ತಂಗಿ ನಮಗೆ ಫೋನ ಮಾಡಿ ತಾವು ಊರಿಗೆ ಬಂದು ನನ್ನ ಗಂಡನಿಗೆ ಬುದ್ದಿವಾದ ಹೇಳಿ ಹೋಗಿ ಅಂತಾ ತಿಳಿಸಿದ ಮೇರೆಗೆ ಈಗ ಸುಮಾರು 3 ತಿಂಗಳ ಹಿಂದೆ ನಾನು ಮತ್ತು ನನ್ನ ತಮ್ಮ, ನನ್ನ ತಾಯಿ ಕೂಡಿಕೊಂಡು ತಾವರಗೇರಾ ಗ್ರಾಮಕ್ಕೆ ಹೋಗಿ ನನ್ನ ತಂಗಿಯ ಗಂಡನಿಗೆ ಈ ರೀತಿ ಮಾನಸಿಕ ಹಾಗೂ ದೈಹಿಕವಾಗಿ ಕಿರಕುಳ ಕೊಡುವುದು ಸರಿ ಇಲ್ಲಾ ಸಂಸಾರ ಕೇಟ್ಟು ಹೋಗುತ್ತಿದೆ ಅಂತಾ ಬುದ್ದಿವಾದ ಹೇಳಿ ಹೊರಟು ಹೋಗಿದ್ದೇವೆ, ದಿನಾಂಕ 02/04/2016 ರಂದು 07-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ತಮ್ಮ ತಾಯಿ ಮನೆಯಲ್ಲಿದ್ದಾಗ ಸೂಗೂರ ಗ್ರಾಮದ ನಮ್ಮ ಮಾವ ಕತ್ತಲಯ್ಯಾ ಇವರು ಫೋನ ಮಾಡಿ ನಮ್ಮ ಗ್ರಾಮದ ನಾಗಯ್ಯ ತಂದೆ ಮಲ್ಲಯ್ಯ ಗುತ್ತೇದಾರ ಇವರು ಮನೆಗೆ ಬಂದು ತಿಳಿಸಿದೇನೆಂದೆರೆ ಸದರಿಯವನು ಖಾಸಗಿ ಕೆಲಸದ ನಿಮಿತ್ಯ ಮೋಟರ ಸೈಕಲ ಮೇಲೆ ಚಿಂಚೋಳಿ (ಹೆಚ್) ಗ್ರಾಮಕ್ಕೆ ಹೋಗಿ ಮರಳಿ ಸಾಯಂಕಾಲ 06-30 ಪಿ.ಎಂಕ್ಕೆ ಊರಿಗೆ ಬರುವಾಗ ಬಸಣ್ಣ ಮಾಸ್ತರ ಇವರ ಹೊಲದ ರೋಡಿನ ಪಕ್ಕದ ತೆಗ್ಗಿನಲ್ಲಿ ಒಂದು ಹೆಣ್ಣುಮಗಳಿಗೆ ಚಾಕುವಿನಿಂದ ಹೊಡೆದು ಕೊಲೆ ಮಾಡಿ ನನ್ನನ್ನು ನೋಡಿ ಆ ವ್ಯಕ್ತಿ ಮೋಟರ ಸೈಕಲ ಸಮೇತ ಓಡಿ ಹೋಗಿದ್ದು ನಾನು ಸಮೀಪ ಹೋಗಿ ನೋಡಲಾಗಿ ಸದರಿ ಹೆಣ್ಣುಮಗಳು ನಮ್ಮ ಗ್ರಾಮದ ಕತ್ತಲಯ್ಯಾ ಇತನ ಸೊಸೆ ಇದ್ದಿದ್ದನು ನೋಡಿ ಗುರುತಿಸಿ ಮನೆಗೆ ಬಂದು ನನಗೆ ವಿಷಯ ತಿಳಿಸಿರುತ್ತಾನೆ, ನಿನ್ನ ತಂಗಿ ಜ್ಯೋತಿ ಇವಳಿಗೆ ಅವಳ ಗಂಡ ತಾವರಗೇರಾ ಗ್ರಾಮದಿಂದ ಮೋಟರ ಸೈಕಲ ಮೇಲೆ ಕುಡಿಸಿಕೊಂಡು ತವರೂರಿಗೆ ಬರುತ್ತಿರುವಾಗ ಸೂಗೂರ ಹಾಗೂ ಚಿಂಚೋಳಿ (ಹೆಚ್) ಮಾರ್ಗ ಮಧ್ಯದ ರೋಡಿನ ಪಕ್ಕದಲ್ಲಿದ್ದ ಸುಗೂರ ಸೀಮಾಂತರದ ಬಸಣಪ್ಪ ಮಾಸ್ತರ ಇವರ ಹೊಲದ ರೋಡಿನ ತೆಗ್ಗಿನಲ್ಲಿ ಚಾಕುವಿನಿಂದ ಹೊಡೆದು ಕೊಲೆ ಮಾಡಿ ಬೀಸಾಕಿ ಮೋಟರ ಸೈಕಲ ಸಮೇತ ಹೋಗಿರಬಹುದು ತಾವು ಬೇಗ ಬನ್ನಿ ಅಂತಾ ತಿಳಿಸಿದಾಗ ಆಗ ನಾವು ಗಾಬರಿಗೊಂಡು ನಾನು ಮತ್ತು ನನ್ನ ತಾಯಿ ಶಕುಂತಲಾ, ತಮ್ಮ ಆನಂದ, ತಂದೆ ಶಾಮಯ್ಯಾ ಹಾಗೂ ನಮ್ಮ ಸಮಾಜದ ಅಶೋಕ ಗುತ್ತೇದಾರ ನಾವೆಲ್ಲಾರು ಒಂದು ಖಾಸಗಿ ವಾಹನ ಮಾಡಿಕೊಂಡು ಸುಗೂರ (ಕೆ) ಗ್ರಾಮಕ್ಕೆ ಬಂದು ನನ್ನ ಅಕ್ಕ ಮಾಹಾನಂದ ಹಾಗೂ ಮಾವ ಕತ್ತಲಯ್ಯಾ ಹಾಗೂ ಸುಗೂರ ಗ್ರಾಮದ ನಾಗಯ್ಯ ತಂದೆ ಮಲ್ಲಯ್ಯ, ರವಿ ತಂದೆ ಶೀವಯ್ಯಾ, ಸಂಜು ತಂದೆ ಕಾಳು ರಾಠೋಡ, ಶಿವಪ್ಪ ತಂದೆ ಸಿದ್ದಣ್ಣ ಕುಂಬಾರ ಎಲ್ಲಾರೂ ಕೂಡಿ ರಾತ್ರಿ 09-00 ಪಿ.ಎಂ ಸುಮಾರಿಗೆ ಘಟನಾ ಸ್ಥಳಕ್ಕೆ ಹೋಗಿ ಬ್ಯಾಟ್ರಿ ಹಾಕಿ ನನ್ನ ತಂಗಿಗೆ ನೋಡಲಾಗಿ ನನ್ನ ತಂಗಿ ರೋಡಿನ ಎಡಭಾಗದ ತೆಗ್ಗಿನಲ್ಲಿ ಬಲ ಮಗ್ಗಲಾಗಿ ಸತ್ತು ಬಿದ್ದಿದ್ದು ಅವಳಿಗೆ ಹಣೆ ಮೇಲೆ, ಎರಡು ಕಣ್ಣಿನ ಹುಬ್ಬಿನ ಮೇಲೆ ಚಾಕುವಿನಿಂದ ಹೊಡೆದ ಭಾರಿ ರಕ್ತಗಾಯವಾಗಿದ್ದು ಮತ್ತು ಮೂಗಿನ ಮೇಲೆ ಎಡಪಕ್ಕದಲ್ಲಿ ಭಾರಿ ರಕ್ತಗಾಯವಾಗಿದ್ದು ನಂತರ ಹೊಟ್ಟೆಯ ಬಲ ಎಡ ಭಾಗಕ್ಕೆ ಚಾಕುವಿನಿಂದ ತೀವಿದ್ದು ಭಾರಿ ರಕ್ತಗಾಯವಾಗಿದ್ದು ಎರಡು ತೊಡೆಯ ಮೇಲೆ ಚಾಕುವಿನಿಂದ ಚುಚ್ಚಿ ಭಾರಿ ರಕ್ತಗಾಯವಾಗಿದ್ದು ಇರುತ್ತದೆ, ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ನೆಲೋಗಿ ಠಾಣೆ : ದಿನಾಂಕ 01.04.2016 ರಂದು ರಾತ್ರಿ 11-00 ಗಂಟೆಯಿಂದ 02.04.2016 ರ ಬೆಳಿಗ್ಗೆ 01-30 ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿಯ ಮನೆಯ ಬೆಡ್ ರೂಮ ನೂಗ್ಗಿ ಬೆಡ್ ರೂಮಿನ ಅಲಮಾರಿಯಲ್ಲಿ ಇಟ್ಟಿದ್ದ ಒಂದುವರೆ ತೊಲೆ ಬಂಗಾರದ ಉಂಗುರ ಅ;ಕಿ: 22,000=00 ರೂಪಾಯಿ, ಹಾಗೂ ಮನೆಯ ತೆಲೆ ದೂಂಬಿನಲ್ಲಿ ಇಟ್ಟಿದ್ದ ಎರಡು ಮೊಬೈಲಗಳು ಅ:ಕಿ: 2900=00 ರೂಪಾಯಿ ಹೀಗೆ ಒಟ್ಟು 24,900=00 ರೂಪಾಯಿ ಕಿಮ್ಮತ್ತಿನವುಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀಮಂತ ತಂದೆ ತಿಪ್ಪಣ್ಣಾ ಜಿಡಗಿ ಸಾ : ಮಂದೇವಾಲ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.