POLICE BHAVAN KALABURAGI

POLICE BHAVAN KALABURAGI

27 May 2016

Kalaburagi District Reported Crimes

ಅಪಹರಣ ಮಾಡಿ ಅತ್ಯಾಚಾರ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಪುಷ್ಪಾವತಿ ಗಂಡ  ನರಸಿಂಗ ತಾಳಮಡಗಿ ಸಾ:ಚಂದಾಪೂರ ತಾ:ಚಿಂಚೋಳಿ ಇವರ ಮಗಳಾದ ಕುಮಾರಿ ಇವಳನ್ನು  ದಿನಾಂಕ 9-4-2016 ರಂದು 3 ಗಂಟೆಯ ಸುಮಾರಿಗೆ  ಕಾಲೇಜಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು ಮರಳಿ ಮನೆಗೆ ಬಂದಿರುವುದಿಲ್ಲಾ. ಸವಿತಾ  ಓದುವ ದಿಶಾ ಕಾಲೇಜಿಗೆ ಹೋಗಿ ವಿಚಾರಿಸಿದ್ದು  ಕಾಲೇಜಿಗೆ ಬಂದಿರುವುದಿಲ್ಲಾ   ನಮ್ಮ ಸಂಬಂಧಿಕರಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆ ಆಗಿರುವುದಿಲ್ಲಾ  ನನ್ನ ಅಪ್ರಾಪ್ತ ವಯಸ್ಸಿನ ಮಗಳನ್ನು ಯಾರೋ ಅಪಹರಣ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಿನಾಂಕ 26-05-2016 ರಂದು ಅಪಹರಣಕ್ಕೊಳಗಾದ ವಿದ್ಯಾರ್ಥಿಣಿ ಠಾಣೆಗೆ ಹಾಜರಾಗಿ ನನ್ನ ವಿದ್ಯಾಬ್ಯಾಸ ಸಲುವಾಗಿ ನಾನು ನನ್ನ ಅಕ್ಕ ಕೂಡಿ ಕಲಬುರಗಿಯ ಅಪ್ಪರ ಲೈನಗ ಸ್ಟೇಷನ ಬಜಾರ ಎರಿಯಾದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇರುತ್ತಿದ್ದು ಸುಮಾರು 6,7ತಿಂಗಳಿಂದ ನಾನು ಕಾಲೇಜಿಗೆ ಹೋಗುವಾಗ ಮತ್ತು ಮನೆಗೆ ಬರುವಾಗ ಶರಣು ಎಂಬುವ ಹುಡುಗ ನನ್ನ ಹಿಂದೆ ಹಿಂಬಾಲಿಸುವುದು.ನನಗೆ ಮಾತನಾಡಲು ಪ್ರಯತ್ನ ಮಾಡುತ್ತಿದ್ದನು.ಮತ್ತು ಆಗಾಗ ಶರಣು ಇತನು ನಾನು ನಿನಗೆ ತುಂಬಾ ಪ್ರೀತಿಸುತ್ತೇನೆ ನಿನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಕೂಡ ಹೇಳುತ್ತಿದ್ದನು. ಆಗ ನಾನು ಅವನಿಗೆ ನೀನು ಹೀಗೆ ನನಗೆ ಸತಾಯಿಸಿದರೆ ನಮ್ಮ ತಂದೆ ತಾಯಿಗೆ ಹೇಳುತ್ತೇನೆ ಅಂತಾ ಕೂಡ ಹೇಳಿದ್ದು ಇರುತ್ತದೆ, ದಿನಾಂಕ; 09.04.2016 ರಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ನಾನು ಕಾಲೇಜಿಗೆ ಹೋಗಬೇಕು ಅಂತಾ ನಮ್ಮ ಮನೆಯಿಂದ ಹೊರಗಡೆ ಬಂದು ರೋಡಿನ ಹತ್ತಿರ ಆಟೋಗಾಗಿ ನಿಂತುಕೊಂಡಾಗ ಶರಣು ಇತನು ಅಲ್ಲಿಗೆ ಬಂದು ನಾನು ನಿನಗೆ ಪ್ರೀತಿಸುತ್ತೇನೆ ಅಂತಾ ಹೇಳಿದರು ನೀನು ನನ್ನ ಮಾತು ಕೇಳದೆ ನಿರಾಕರಿಸುತ್ತಿದ್ದಿಯಾ ಇವತ್ತು ನಿನಗೆ ಬಿಡುವದಿಲ್ಲ ಅಂತಾ ಅಂದವನೇ ತನ್ನ ಆಟೋ ಕೆಎ 32 ಬಿ 4021 ನೇದ್ದರಲ್ಲಿ ಕೂಡಿಸಿಕೊಂಡು ತಮ್ಮ ಗ್ರಾಮವಾದ ಸಿರನೂರ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದು ಆಗ ಅವರ ಮನೆಯಲ್ಲಿ ಯಾರು ಇರಲಿಲ್ಲ  ಆಗ ಶರಣು ಇತನು ನನಗೆ ಪ್ರೀತಿ ಮಾಡು ಅಂತಾ ಹೇಳಿದರೆ ನನ್ನ ಮಾತು ಕೇಳದೆ ನನಗೆ ನಿರಾಕರಿಸುತ್ತಿದ್ದಿಯಾ ಇವತ್ತು ನಿನಗೆ ಬಿಡುವದಿಲ್ಲ ಅಂತಾ ಹೇಳಿ ನನಗೆ ಹೆದರಿಸಿ ನನ್ನೊಂದಿಗೆ ಜಬರದಸ್ತಿಯಿಂದ ದೈಹಿಕ ಸಂಬೋಗ ಮಾಡಿದನು. ಆಗ ನಾನು ಅಳುತ್ತಾ ಕುಳಿತುಕೊಂಡಾಗ ಶರಣು ಇತನು ನನಗೆ ಅಲ್ಲಿಂದ ಕೇಂದ್ರ ಬಸ್ಸ ಸ್ಟ್ಯಾಂಡಿಗೆ ಕರೆದುಕೊಂಡು ಅಲ್ಲಿಂದ ಬಸ್ಸ ಮುಖಾಂತರ ಬಿಜಾಪೂರಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ ಮತ್ತೋಂದು ಬಸ್ಸ ಮುಖಾಂತರ ಕೊಲ್ಲಾಪೂರಕ್ಕೆ ಕರೆದುಕೊಂಡು ಹೋದನು. ಅಲ್ಲಿ ಸಿಯಾಪೇಠದ ಅವನ ತಂಗಿಯ ಮನೆಯಲ್ಲಿ ನನಗೆ ಇಟ್ಟಿರುತ್ತಾನೆ. ಅಲ್ಲಿಂದ ಇಲ್ಲಿಯವರೆಗೆ ನನಗೆ ಜಬರದಸ್ತಿಯಿಂದ ದೈಹಿಕ ಸಂಬೋಗ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.