POLICE BHAVAN KALABURAGI

POLICE BHAVAN KALABURAGI

05 June 2015

Kalaburagi District Reported Crimes

ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ಜೇವರಗಿ ಠಾಣೆ : ದಿನಾಂಕ 04.06.2015 ರಂದು ಮುದಬಾಳ ಕೆ ಗ್ರಾಮದ ಅಂಬೇಡ್ಕರ್ ಮೂರ್ತಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ. ಜೇವರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮುದಬಾಳ ಕೆ ಗ್ರಾಮದ ಅಂಬೇಡ್ಕರ್ ಮೂರ್ತಿಯ ಹತ್ತಿರ ಹೋಗಿ ದಾಳಿ ಮಾಡಿ ಹಿಡಿದು ಅವನ ಹೆಸರು ವಿಚಾರಿಸಲು ನಿಂಗಪ್ಪ ತಂದೆ ಜಟ್ಟೆಪ್ಪ ಹೊಸಮನಿ ಸಾ : ಮುದಬಾಳ ಕೆ ಅಂತಾ ತಿಳಿಸಿದ್ದು ಸದರಿವನ ವಶದಿಂದ ಒಟ್ಟು 1.500/- ರೂ ಕಿಮ್ಮತ್ತಿ ಮಧ್ಯದ ಪೌಚ್‌ಗಳನ್ನು ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಡಾ|| ಸುಹೀಬ ಅಹ್ಮದ ತಂದೆ ಮಹ್ಮದ ಶಾಹೇದ ಅಲಿ ಲಾಂಡಗೆ, ಸಾ|| ಮನೆ ನಂ: 5-993/31/49  ಅಹ್ಮದ ನಗರ ಕಾಲೋನಿ ಕಲಬುರಗಿ ರವರು ದಿನಾಂಕ:03-06-2015 ರಂದು ಸಾಯಾಂಕಾಲ ರುಕ್ಮೋದ್ದಿನ್ ತೋಲಾ ದರ್ಗಾದ ಜಾತ್ರೆ ಇದ್ದ ಪ್ರಯುಕ್ತ ಮನೆಯವರೆಲ್ಲರು ಕೂಡಿ ಕೊಂಡು ಜಫರಾಬಾದ ಗ್ರಾಮಕ್ಕೆ ಮನೆಯ ಕೀಲಿಯನ್ನು ಹಾಕಿಕೊಂಡು ಹೋಗಿದ್ದು, ಜಾತ್ರೆ  ಮುಗಿಸಿಕೊಂಡು ಇಂದು ದಿನಾಂಕ:04-06-2015 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಮನೆಗೆ ಬಂದು ನೋಡಲು ಮನೆಯ ಬಾಗಿಲಿಗೆ ಹಾಕಿದ ಕೀಲಿ ಇರಲಿಲ್ಲಾ. ಮನೆಯ ಬಾಗಿಲು ಖುಲ್ಲಾ ಇದ್ದು ಒಳಗೆ ಹೋಗಿ ನೋಡಲು ಮನೆಯಲ್ಲಿರುವ ಬೆಡ್ ರೂಮಿನಲ್ಲಿಯ ಅಲಮಾರಿ ಕೀಲಿ ಮುರಿದು ಅಲಮಾರಿಯಲ್ಲಿದ್ದ 70 ಗ್ರಾಂ ಬಂಗಾರದ ಆಭರಣಗಳು ಅ.ಕಿ. 1,75,000/- ಮತ್ತು 50,000/- ರೂ. ನಗದು ಹಣ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಾರಣ ನಮ್ಮ ಮನೆ ಕೀಲಿ ಮುರಿದು ಮನೆಯ ಒಳಗೆ ಅಲಮಾರಿಯಲ್ಲಿಟ್ಟ ಬಂಗಾರ, ನಗದು ಹಣ ಒಟ್ಟು 2,25,000/- ಕಳವು ಮಾಡಿಕೊಂಡು ಹೋರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.