POLICE BHAVAN KALABURAGI

POLICE BHAVAN KALABURAGI

28 January 2014

Gulbarga District Reported Crimes

ಹಲ್ಲೆ ಪ್ರಕರಣಗಳು :
ಚಿಂಚೋಳಿ ಠಾಣೆ : ಶ್ರೀಮತಿ ಚಂದ್ರಕಲಾ ಗಂಡ ಜಗನ್ನಾಥ ದೇಗಲಮಡಿ ಸಾ|| ಬಡಿದರ್ಗಾ ಚಿಂಚೋಳಿ ರವರು ಒಂದು ವರ್ಷದಿಂದ ನಮ್ಮ ಓಣೆಯ ಜಗನ್ನಾಥ ತಂದೆ ತಿಪ್ಪಣ್ಣ ದೇಗಲಮಡಿ ಎಂಬುವವನೊಂದಿಗೆ ಪ್ರೀತಿ ಮಾಡುತ್ತಾ ಬಂದಿರುತ್ತೆನೆ ಹೀಗಿದ್ದು ನಮ್ಮ ಪ್ರೀತಿಯು ಗಾಢವಾಗಿ ಬೆಳೆದಿದ್ದು ದಿನಾಂಕ 26.01.2014 ರಂದು ನಾನು ಮತ್ತು ನಾನು ಪ್ರೀತಿಸಿದ ಜಗನ್ನಾಥ ಇಬ್ಬರೂ ಕೂಡಿ ಪರಸ್ಪರ ಸ್ವ-ಇಛ್ಚೆಯಿಂದ ಇಬ್ಬರು ಪ್ರೌಢ ವಯಸ್ಕರಾದ್ದರಿಂದ ಪ್ರೇಮ ವಿವಾಹವಾಗಿರುತ್ತೆವೆ. ಹೀಗಿದ್ದು ಇಂದು ದಿನಾಂಕ 28.01.2014 ರಂದು ಬೆಳಿಗ್ಗೆ 09.00 ಗಂಟೆ ಸುಮಾರಿಗೆ ನಾನು ನನ್ನ ಗಂಡನ ಮನೆಯಿಂದ ಬಟ್ಟೆಗಳನ್ನು ತೊಳೆದುಕೊಂಡು ಬರಲೆಂದು ನಮ್ಮೂರ ಹತ್ತಿರ ಹರಿಯುವ ಮುಲ್ಲಾಮಾರಿ ಹಳ್ಳಕ್ಕೆ  ಹೋಗಿ ಬಟ್ಟೆಗಳನ್ನು ತೊಳೆಯುತ್ತಿದ್ದೆನು. ನನ್ನಂತೆಯೆ ಲಕ್ಷ್ಮೀ ಗಂಡ ಝರಣಪ್ಪ ಘಾಲಿ ಎಂಬುವವಳು ಸಹ ಬಂದು ಅದೇ ಹಳ್ಳದಲ್ಲಿ ಬಟ್ಟೆಗಳನ್ನು ತೋಳೆಯುತ್ತಿದ್ದಳು ನನಗೆ ಪರಿಚಯಸ್ತನಾದ ಸಂಜೀವಕುಮಾರ ತಂದೆ ಬೀಮಶಾ ಐನೋಳ್ಳಿ ಎಂಬುವವನು ತನ್ನ ಕ್ರೂಸರ ವಾಹನವನ್ನು ಹಳ್ಳದಲ್ಲಿ  ತೊಳೆಯುತಿದ್ದೆನು.. ಹಳ್ಳದಲ್ಲಿ ಬಟ್ಟೆ ತೊಳೆಯುತ್ತಿದ್ದಾಗ ನನ್ನ ತಂದೆಯಾದ ಸೂರ್ಯಕಾಂತ ತಂದೆ ನಾಗಪ್ಪ ಐನೋಳ್ಳಿ ರವರು ನಾನು ಬಟ್ಟೆ ತೊಳೆಯುವಲ್ಲಿಗೆ ಬಂದು ಏ ರಂಡಿ ಸೂಳೀ ನೀನು ನಮ್ಮ ಇಛ್ಚೆಯ ವಿರುದ್ಧ ನಮಗೆ ಬೇಡವಾದ ಹುಡುಗನೊಂದಿಗೆ ವಿವಾಹ ಆಗಿದ್ದು ಅಂತಾ ಅಂದವನೇ ನನಗೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲಿದ್ದ ಕೋಯ್ತಾದಿಂದ ಹೊಡೆದನು ಆಗ ನಾನು ತಪ್ಪಿಸಿಕೊಳ್ಳಲು ಹೋದಾಗ ನನ್ನ ಬಲ ಕುಂಡಿಗೆ ಕೋಯ್ತಾದ ಹೊಡೆತ ಬಿದ್ದು ಭಾರಿ ರಕ್ತಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಚೌಕ ಠಾಣೆ : ಶ್ರೀ ಸಲಿಮ ತಂದೆ ಮತ್ತೆಸಾಬ ಶೇಖ ಸಾಃ ಕೈಲಾಸ ನಗರ ಮಲ್ಲಿಕಾರ್ಜುನ ಗುಡಿಯ ಹತ್ತಿರ ಗುಲಬರ್ಗಾ ರವರು  ದಿನಾಂಕ 27.01.2014 ರಂದು ರಾತ್ರಿ 11.45 ಗಂಟೆಗೆ ಆಸ್ಮಾ ಇವಳು ಪೋನ ಮಾಡಿ ಅರ್ಜಂಟ ಮನೆಗೆ ಬರಬೇಕು ಇಲ್ಲವಾದರೆ ನಾನೆ ನಿಮ್ಮ ಮನೆಗೆ ಬರುತ್ತೇನೆ ಅಂತ ಹೇಳಿದ್ದರಿಂದ ನಾನು ನನ್ನ ಗಳೆಯನಾದ ಶ್ರೀಕಾಂತ ರಡ್ಡಿ ಇವನ ಮನೆಗೆ ಹೋಗಿ ಅವನಿಗೆ ಕರೆದುಕೊಂಡು ಆಸ್ಮಾ ಇವಳ ಮನೆಗೆ ಹೋಗಿ ಶ್ರೀಕಾಂತ ಇತನು ನನಗೆ ಬಿಟ್ಟು ಒಳಗೆ ಹೋದನು. ಆಗ ನಾನು ಅವರ ಮನೆಗೆ ಹೋಗಿ ಯಾಕೆ ಈ ರೀತಿ ಪೋನ ಮಾಡಿ ಕರೆದಿದ್ದಿ ಅಂತ ಕೇಳಲು ಆಸ್ಮಾ ಇವಳು ಏ ರಂಡಿ ಮಗನೆ ರಾಂಡಕೆ ಬೇಟೆ ನನ್ನ ಸಂಗಡ ಪ್ರಿತಿ ಮಾಡಿ ಈಗ ದೂರವಾಗಿದ್ದಿ ಯಾಕೆ ನನ್ನ ಸಂಗಡ ಮಾತನಾಡುವದಿಲ್ಲ ಮನೆಗೆ ಬರುತ್ತಿಲ್ಲ ಬೈಯ್ಯುತ್ತಿದ್ದಾಗ ಅವಳ ಮನೆಯಲ್ಲಿದ್ದ ಆರೋಪಿತರ ಕೂಡಿ ಬಂದು ಅವರಲ್ಲಿ ಮುಸ್ತಫಾ ಇತನು  ಅವಾಚ್ಯವಾಗಿ ಬೈದು ಎದೆಯ ಮೇಲಿನ ಅಂಗಿ ಹಿಡಿದು ಕಪಾಳಕ್ಕೆ ಹೊಡೆದನು. ಅಹ್ಮದ ಇತನು ಬಡಿಗೆಯಿಂದ ಎಡಗಾಲ ಮೊಣಕಾಲ ಕೆಳಗೆ ಎಡಬಲ ಭುಜದ ಮೇಲೆ ಹೊಡೆದು ರಕ್ತಗಾಯ ಪಡಿಸಿದನು. ಸಲ್ಮಾ ಮತ್ತು ಮೆಹರುನ್ನಿಸಾ ಇವರು ಮಾರು ಏ ರಾಂಡಕೆ ಬೆಟೆಕೊ ಅಂತ ಬೈದು ಎಲ್ಲರು ಕೂಡಿ ಹೊಡೆಬಡೆ ಮಾಡುತ್ತಿದ್ದಾಗ ಆಸ್ಮಾ ಇವಳ ಕಡೆಯಿಂದ ವಿನಾಯಕ ಎಂದು ಬರೆದ ಕಾರಿನಲ್ಲಿ 4 ಜನರು ಕೈಯಲ್ಲಿ ತಲ್ವಾರ, ರಾಡ, ಜಂಬ್ಯಾ ಹಿಡಿದುಕೊಂಡು ಬಂದಾಗ ಆಸ್ಮಾ ಇವಳು ಏ ರಾಂಡಕೆ ಬೇಟೆಕೊ ಖತಮ ಕರೊ ಅಂತ ಅಂದಾಗ 4 ಜನರ ಪೈಕಿ ಒಬ್ಬನು ರಾಡಿನಿಂದ ತಲೆಗೆ ಹೊಡೆದು ಭಾರಿ ರಕ್ತಗಾಯ ಪಡಿಸಿದನು. ಮತ್ತೊಬ್ಬನು ರಾಡಿನಿಂದ ಎಡಬಲ ಕೈ, ನಡುವ ಮತ್ತು ಉಂಗುರು ಬೆರಳಿಗೆ ಹೊಡೆದು ಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಗೌಸ್ ಪಟೇಲ್ ತಂದೆ ಹುಸೇನ್ ಪಟೇಲ್  ಸಾ: ಮುಸ್ಲಿಂ ಸಂಘ ತಾಜನಗರ ಗುಲಬರ್ಗಾ ರವರ ತಮ್ಮ ಮೋಬಿನ್ ಪಟೇಲ್ ಇತನು ಕೆಲಸಕ್ಕೆ ಹೋಗುತ್ತೆನೆ. ಅಂತಾ ಹೇಳಿ ಮನೆಯಿಂದ ಹೋದನು, ನಂತರ ಮಧ್ಯಾಹ್ನ 12:30 ಗಂಟೆಗೆ ನನ್ನ ಮೊಬೈಲಿಗೆ ನನ್ನ ತಾಯಿ ಹುಸೇನ್ ಬೀ ಇವಳು ಫೋನ ಮಾಡಿ ತಿಳಿಸಿದ್ದೇನೆಂದರೆ, ಮೋಬೀನ್ ಪಟೇಲ್ ಗ್ಯಾರೇಜದಲ್ಲಿ ಕೆಲಸ ಮಾಡುವಾಗ ಹೈಡ್ರೋಲಿಕ ಜಾಕ್ ಸ್ಟ್ರೀ ಜಾರಿ ಆತನ ಮೈಮೇಲೆ ಬಿದ್ದು ಗಾಯವಾಗಿರುತ್ತದೆ. ಅದಕ್ಕೆ ಆಸ್ಪತ್ರೆಗೆ ಉಪಚಾರ ಕುರಿತು ಗ್ಯಾರೇಜ್ ಮಾಲೀಕ ನಬೀ ಇತನು ತೆಗೆದುಕೊಂಡು ಬರುತ್ತಿರುವುದಾಗಿ ತಿಳಿಸಿರುತ್ತಾನೆ. ನಂತರ ನಾನು ನೇರವಾಗಿ ಹುಮ್ನಾಬಾದ ರೋಡ ಕಡೆಗೆ ಹೋಗುವಾಗ ಎದರುಗಡೆಯಿಂದ ಆಟೋದಲ್ಲಿ ನನ್ನ ತಮ್ಮನಿಗೆ ತೆಗೆದುಕೊಂಡು ಬರುತ್ತಿದ್ದುದ್ದನ್ನು ನೋಡಿ ಅದರ ಹಿಂದೆಯೆ ಬಸವೇಶ್ವರ ಆಸ್ಪತ್ರೆಗೆ ಬಂದು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಉಪಚಾರ ನೀಡದ ಕಾರಣ ಗುಲ್ಬರ್ಗಾ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ನನ್ನ ತಮ್ಮನಿಗೆ ನೋಡಿ ಈಗಾಗಲೆ ಮೃತ  ಪಟ್ಟಿರುವುದಾಗಿ ತಿಳಿಸಿದರು. ಅಲ್ಲಿಯೇ ಹಾಜರಿದ್ದ ನಬೀಸಾಬ ಇವರಿಗೆ ವಿಚಾರಿಸಲಾಗಿ ಅವನು ತಿಳಿಸಿದ್ದೆನೆಂದೆರೆ ಮಧ್ಯಾಹ್ನ 12-15 ಗಂಟೆ ಸುಮಾರಿಗೆ ಗುಲ್ಬರ್ಗಾ ಹುಮನಾಬಾದ ಹತ್ತಿರ ಇರುವ ನಭೀ ಗ್ಯಾರೇಜ್ ನಲ್ಲಿ ಟಿಪ್ಪರ ನಂ ಕೆಎ 38-4891ನೇದ್ದರ ಹೈಡ್ರೋಲಿಕ್ ಚಾಕಾವನ್ನು ರಿಪೇರಿ ಮಾಡುವ ಕಾಲಕ್ಕೆ ಸದರಿ ಟಿಪ್ಪರ ಚೆಸ್ಸಿಯ ಮೇಲೆ ನಿಂತು ನಿಮ್ಮ ತಮ್ಮ ಮೋಬಿನ ಪಟೇಲ್ ಇತನು ಟಿಪ್ಪರ ಹೈಡ್ರೋಲಿಕ್ ಜಾಕ್ ರಿಪೇರಿ ಮಾಡುವಾಗ ಸದರಿ ಟಿಪ್ಪರ ಚಾಲಕನು ಟಿಪ್ಪರ ಚಾಲು ಮಾಡಿ ಟಿಪ್ಪರನ್ನು ಹಿಂದಕ್ಕೆ ಮುಂದಕ್ಕೆ ತೆಗೆದುಕೊಳ್ಳುವಾಗ ಅಲಕ್ಷತನದಿಂದ ಒಮ್ಮೇಲೇ ಟಿಪ್ಪರ ಹೈಡ್ರೋಲಿಕ್ ಜಾಕ್ ಕೆಳಗೆ ಇಳಿಸಿದಾಗ ಕೆಳಗೆ ಕೆಲಸ ಮಾಡುತ್ತಿದ್ದ ನಿಮ್ಮ ತಮ್ಮನ ಮೇಲೆ ಟಿಪ್ಪರನ ಬಾಡಿ ಆತನ ಮೇಲೆ ಬಿದ್ದಿದ್ದರಿಂದ ಅವನ ತಲೆಗೆ ಗುಪ್ತ ಗಾಯವಾಗಿ ಎಡಕಿವಿಯಿಂದ ರಕ್ತ ಸೋರಿದ್ದು ಮೂಗಿನಿಂದ ರಕ್ತಸ್ರಾವವಾಗಿದ್ದು ಎರಡು ಎದೆಗೆ ಹೊಟ್ಟೆಗೆ ಭಾರಿ ಗುಪ್ತಗಾಯವಾಗಿ ಕಂದುಗಟ್ಟಿದಂತಾಗಿ ಬೇಹೋಶ ಆಗಿದ್ದನ್ನು ಸದರಿ ಟಿಪ್ಪರನ ಚಾಲಕನು ಘಟನೆ ಸಂಭವಿಸಿದ ನಂತರ ಅಲ್ಲಿಂದ ಓಡಿ ಹೋಗಿರುತ್ತಾನೆ ತಿಳಿಸಿದ್ದು ಸದರಿ ಟ್ಟಿಪ್ಪರ ಚಾಲಕನ ವಿರುದ್ಧ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ಶ್ರೀ ವಿಜಯಕುಮಾರ ತಂ ಶರಣಪ್ಪ ಪಾಟೀಲ ಸಾ|| ಕಿಣ್ಣಿ ಸಡಕ ಹಾ|||| ರೇವಣಸಿದ್ದೇಶ್ವರ ಕಾಲೋನಿ  ಗುಲಬರ್ಗಾ ದಿನಾಂಕ 26-01-2014 ರಂದು  ವೀರಭದ್ರೇಶ್ವರ ಜಾತ್ರಿ ಕುರಿತು ಹುಮನಾಬಾದಕ್ಕೆ ಹೋಗಿದ್ದು ವಾಪಸ ತನ್ನೂರಾದ ಕಿಣ್ಣಿ ಸಡಕಿಗೆ ಬಂದು ಅಲ್ಲಿಂದ ತನ್ನ ಮೋಟಾರ ಸೈಕಲ ನಂ ಬಜಾಜ ಪ್ಲಾಟೀನ ಕೆ,, 32 ಎಸ್, 3101 ನೇದ್ದು ತೆಗೆದುಕೊಂಡು 4.30 ಪಿ,ಎಮ್,ಕ್ಕೆ ಊರಿಂದ ಹೊರಟು ಗುಲಬರ್ಗಾಕ್ಕೆ ಬರುವಾಗ ಸಿದ್ದಭಾರತಿ ಶಾಲೆಯ ಹತ್ತಿರ 5.30 ಪಿ,ಎಮ್,ಕ್ಕೆ ಬರುತ್ತಿರುವಾಗ ಎದುರುಗಡೆಯಿಂದ ಅಂದರೆ ಗುಲಬರ್ಗಾ ಕಡೆಯಿಂದ ಒಬ್ಬ ಟಂಟಂ ಗೂಡ್ಸ ವಾಹನ ನಂ ಕೆ,, 32 ಬಿ,5578 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಬಂದವನೆ ಪಿರ್ಯಾದಿ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಮೋಟಾರ ಸೈಕಲ ಸಮೇತಾ ಕೆಳಗೆ ಬಿದ್ದಾಗ ತನ್ನ ಎರಡು ಕಾಲುಗಳಿಗೆ ಮತ್ತು ಕೈಗಳಿಗೆ ಭಾರಿ ರಕ್ತಗಾಯಗಳಾಗಿ ಕಾಲು ಹಾಗೂ ಕೈಗಳು ಮುರಿದಂತೆ ಆಗಿರುತ್ತವೆ ಅಪಘಾತದ ನಂತರ ಚಾಲಕ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ವಿಜಯಕುಮಾರ ತಂದೆ ಯಲ್ಲಪ್ಪಾ ದಿವೇಕರ,  ಸಾಃ ಮಾಲಗತ್ತಿ ಕ್ರಾಸ್ ಹಾಗರಗಾ, ಗುಲಬರ್ಗಾ ರವರು ದಿನಾಂಕ  26-01-2014 ರಂದು 07-30 ಪಿ.ಎಮ್ ಕ್ಕೆ ಗಣೇಶ ಮಂದರ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಯಾವುದೊ ಒಂದು ಅಟೋ ರಿಕ್ಷಾ ಚಾಲಕನು ತನ್ನ ಅಟೋರಿಕ್ಷಾವನ್ನು ಸರಾಫ ಬಜಾರ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಅಟೋರಿಕ್ಷಾ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಲಕ್ಷ್ಮಿಕಾಂತ ತಂದೆ ಹಣಮಂತ್ರಾಯ ಬಿರಾದಾರ ಸಾಃ ಶಹಾಬಜಾರ ಗುಲಬರ್ಗಾ ರವರು ದಿನಾಂಕ 01.09.2013 ರಂದು 8.30 ಪಿ.ಎಂಕ್ಕೆ ಸೈಯ್ಯದ ಚಿಂಚೋಳಿ ಕ್ರಾಸದ ಹತ್ತಿರು ಇರುವ ಬಾಲಾಜಿ ಹೊಟೇಲ ಹತ್ತಿರ ತನ್ನ ಮೊಟಾರ ಸೈಕಲ ನಿಲ್ಲಿಸಿ  ಹೊಟೇಲದಲ್ಲಿ ಚಹಾ ಕುಡಿದು ಮರಳಿ ಪಿ.ಎಂಕ್ಕೆ ಬಂದು ನೋಡಲಾಗಿ ತನ್ನ ಮೊಟಾರ ಸೈಕಲ ನಂ. ಕೆಎ-32-ಇಇ-0740 ಅಃಕಿಃ 30000=00 ರೂ. ನೇದ್ದು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಾಡಿದರು ಪತ್ತೆ ಆಗಿರುವದಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಮಾಹಂತಪ್ಪ ತಂದೆ ಗಾಮಣ್ಣ ಕುಂಬಾರ ಸಾ|| ಕೆರಕನಹಳ್ಳಿ ಇವರಿಗೆ ಮಾರುತಿ ತಂದೆ ಮಲ್ಲಪ್ಪ ಜಮಾದಾರ ಇತನು  ವಿನಾ ಕಾರಣ ಲಕ್ಷ್ಮಿ ಗುಡಿ ಹತ್ತಿರ ತಡೆದು ನಿಲ್ಲಿಸಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ರಾಡಿನಿಂದ ಹೊಡೆದು ರಕ್ತ ಗಾಯ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.