POLICE BHAVAN KALABURAGI

POLICE BHAVAN KALABURAGI

02 February 2014

Gulbarga District Reported Crimes

ಅಪಹರಣ ಪ್ರಕರಣ :
ಮಳಖೇಡ ಠಾಣೆ : ಶ್ರೀ ಅರ್ಜುನಪ್ಪಾ ತಂದೆ ಕಾಶಪ್ಪಾ ಕೊಳ್ಳಿ ಸಾ: ಹೂಡಾ (ಕೆ) ತಾ: ಸೇಡಂ ರವರು ದಿನಾಂಕ : 31.01.2014 ರಂದು ರಾತ್ರಿ 10.00 ಗಂಟೆಯ ಸುಮಾರಿಗೆ ನಾನು & ಹೆಂಡತಿ & ಮಕ್ಕಳೊಂದಿಗೆ  ರಾತ್ರಿ ಊಟಮಾಡಿ ಮಲಗಿಕೊಂಡಾಗ ರಾತ್ರಿ 10.00 ಗಂಟೆಗೆ ನನ್ನ ಪೂನಿಗೆ ಒಂದು ಕರೆ ಬಂದಿತು ಆಗ ನನ್ನ ಮಗಳು ಪೋನಿನಲ್ಲಿ ಮಾತಾಡಿ ಪೋನ್ ಇಟ್ಟಳು ನಾವು ಸಹಜವಾಗಿ ಮಲಗಿಕೊಂಡೆವು. ನಂತರ ರಾತ್ರಿ 11.00 ಗಂಟೆಗೆ ನಾನು ಎದ್ದು ನೋಡಲಾಗಿ ನನ್ನ ಮಗಳು ಶ್ರುತಿ ಇರಲಿಲ್ಲ  ನಂತರ ನನ್ನ ಹೆಂಡತಿ ಎಬ್ಬಿಸಿ ಊರಲ್ಲಿ ತಿರುಗಾಡಿದೆವು, ನನ್ನ ಮಗಳುಪತ್ತೆಯಾಗಲಿಲ್ಲ  ನಂತರ ನಾನು ಬೆಳ್ಳಗ್ಗೆ ಊರಲ್ಲಿ ವಿಚಾರ ಮಾಡಲಾಗಿ  ನನ್ನ ಮಗಳಾದ ಶೃತಿ  ವ: 17 ವರ್ಷ ಇವಳೆಗೆ ರಾತ್ರಿ 11.00 ಗಂಟೆಯ ಸಮಯಕ್ಕೆ ನಮ್ಮೂರ ಈಶಪ್ಪಾ ತಂದೆ ಚೆನ್ನಬಸಪ್ಪಾ ಇತನು ನನ್ನ ಮಗಳಿಗೆ  ಮದುವೆ ಮಾಡಿಕೊಳ್ಳುತ್ತೆನೆ. ಅಂತಾ ಪುಸಲಾಯಿಸಿ ಅಪಹರಸಿಕೊಂಡು ಹೋಗಿರುತ್ತಾನೆ. ಅಂತಾ ನನಗೆ ಗೊತ್ತಾಯಿತು ನನ್ನ ಮಗಳಿಗೆ ಈಶಪ್ಪಾ ಇತನು  ಅಪಹರಣ   ಮಾಡಿಕೊಂಡು ಹೊಗಲು ನಮ್ಮೂರ ಭೀಮರಾಯ ತಂದೆ ದೇವಣ್ಣ ಗೋವಿಂದನವರ ಇತನು ತನ್ನ ಮೋಟರ ಸೈಕಲ್ ನಂ ಕೆ.ಎ. 32. ಇ.ಸಿ 5101 ನೇದ್ದರ ಮೇಲೆ ಅಪಹರಿಸಿಕೊಂಡು ಹೊಗಿರಿ ಅಂತಾ ಮೋಟರ ಸೈಕಲ್ ಕೊಟ್ಟಿರುತ್ತಾನೆ & ಬಸವರಾಜ ತಂದೆ ಹಣಮಂತ ಸಾಲಿ ವಿಷ್ಣು ತಂದೆ ದೇವಪ್ಪ ಮೂಡಬೋಳ ಸಾ: ಹೂಡಾ(ಕೆ) ಇವರುಗಳು ಸದರಿ ಈಶಪ್ಪಾ ನವರಿಗೆ ಅಪಹರಿಸಿಕೊಂಡು ಹೋಗಲು ಪ್ರಚೋದನೆ ನೀಡಿರುತ್ತಾರೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಮಳಖೇಡ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸಯ್ಯದ ಮಹಿಬೂಬ ಅಲಿ ತಂದೆ ಸಯ್ಯದ ಅಲಿ ರವರು ದಿನಾಂಕ:  01-02-2014 ರಂದು  ರಾತ್ರಿ 20-45 ಗಂಟೆಗೆ ಶೇಖ ರಪೀಕ್ ಈತನು  ಅಟೋರೀಕ್ಷಾ ನಂ: ಕೆಎ 32 ಎ 16 ನೆದ್ದನ್ನು ಎಸ್.ವಿ.ಪಿ.ಸರ್ಕಲ್ ದಿಂದ ಜಗತ ಸರ್ಕಲ್ ಕಡೆಗೆ ಹೋಗುತ್ತಿದ್ದಾಗ ರಪೀಕ ಈತನು ಮಿನಿ ವಿಧಾನ ಸೌಧ ಎದುರಿನ ರೋಡಿನ ಮೇಲೆ ಅಟೋರೀಕ್ಷಾ ವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಒಮ್ಮೇಲೆ ಬ್ರೇಕ್ ಹಾಕಿ ಅಟೋರಿಕ್ಷಾ ಪಲ್ಟಿ ಮಾಡಿ ಗಾಯ ಹೊಂದಿ ಅಟೋರೀಕ್ಷಾ ಡಾಮೇಜ ಮಾಡಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ದೇವಲಗಾಣಗಾಪೂರ ಠಾಣೆ : ದಿನಾಂಕ:31-01-2014ರಂದು ರಾತ್ರಿ 8:30 ಗಂಟೆಯ ಸುಮಾರಿಗೆ ಶ್ರೀಮತಿ ಕಸ್ತೂರಬಾಯಿ ಗಂಡ ಶಂಕರ ಆಲಕುಂಟಿ ಸಾ||ಚವಡಾಪುರ ತಾ||ಅಫಜಲಪೂರ ರವರ ತಮ್ಮ ನಾದನಿಯ ಮಗ ಮನೆಗೆ ಬರುವಾಗ ರಸ್ತೆಯ ನೀರಿನಲ್ಲಿ ಬಿದ್ದಿದ್ದಕ್ಕೆ ನಾನು ನೀವು ದಾರಿಯ ಮೇಲೆ ಟಿಪ್ಪರ ನಿಲ್ಲಿಸಿದ್ದರೆ ನಾವು ಹೇಗೆ ತಿರುಗಾಡಬೇಕು ಅಂದಿದ್ದಕ್ಕೆ ಮಲ್ಲು ಮಂಜಳಕರ ಇವರ ರೋಡ ನಿಮ್ಮ ಅಪ್ಪಂದು ಆದ ಏನು ಅಂದಾಗ ತಾನು ನಮ್ಮ ಅಪ್ಪಂದು ಯಾಕ ಇರತಾದ ಈಗ ಹುಡುಗ ನೀರಲ್ಲಿ ಬಿದ್ದಿಲೇನ ಸ್ವಲ್ಪ ಟಿಪ್ಪರ ರಸ್ತೆಯಲ್ಲಿ ತಿರುಗಾಡಲು ಜಾಗ ಬಿಟ್ಟು ನಿಲ್ಲಿಸಿರಿ ಅಂದಾಗ ಮಲ್ಲು ಜಂಜಳಕರ್ ಇವನು ಅವಾಚ್ಯ ಶಭ್ದಗಳಿಂದ ಬೈದು ನನ್ನ  ತಲೆಗೂದಲು ಹಿಡಿದು ಜಗ್ಗಾಡಿ ಬೆನ್ನಾಗ ಕೈಯಿಂದ ಹೊಡೆಯುತ್ತಿದ್ದಾಗ ಹುಲಗೆಮ್ಮ ಬಿಡಿಸಲು ಬಂದರೆ ಅವಳಿಗೆ ಶಾಂತಾಬಾಯಿ ನೀ ಇದರಾಗ್ಯಾಕ ಬರತಿ ಬೋಸಡಿ ಅಂತಾ ಬೈಯ್ದು ಶರಣಪ್ಪನು ಕೈಯಿಂದ ತನ್ನ ಬೆನ್ನಿಗೆ ಹೊಡೆದಿದ್ದುಮಲ್ಲು ಇವನು ಅಲ್ಲೇ ಬಿದ್ದ ಕಟ್ಟಿಗೆಯಿಮದ ಹುಲಗಮ್ಮ ಇವಳಿಗೆ ಎಡಗಾಲು ಕಪಿಗಂಡಿಗೆ ಹೊಡೆದು ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಲಗಾಣಗಾಪೂರ ಠಾಣೆ : ದಿನಾಂಕ:31-01-2014 ರಂದು ರಾತ್ರಿ 8:30 ಗಂಟೆಯ ಸುಮಾರಿಗೆ ಮಲ್ಲು ತಂದೆ ವೆಂಕಪ್ಪ ಮಂಜಳಕರ ಸಾ||ಚವಡಾಪುರ ತಾ||ಅಫಜಲಪೂರ ಮತ್ತು ನನ್ನ ಹೆಂಡತಿ ಶಾಂತಾಬಾಯಿ ಹಾಗೂ ತಂದೆ ವೆಂಕಪ್ಪ ಎಲ್ಲರೂ ಕೂಡಿ ತಮ್ಮ ಮನೆಯಲ್ಲಿ ಟಿವಿ ನೋಡುತ್ತಾ ಕುಳಿತಾಗ ತಮ್ಮ ಮನೆಯ ಮುಂದಿನ ಮನೆಯ ಶಂಕರ ತಂದೆ ತಿಪ್ಪಣ್ಣ ಅಲಕುಂಟಿ ಇವನು ತಮ್ಮ ಮನೆಯ ಮುಂದೆ ನಿಂತು ಒದರಾಡುತ್ತಿರುವಾಗ ತಾನು ಶಂಕರ ಇವನಿಗೆ ಈಗ್ಯಾಕ ಒದರಾಡುತ್ತಿದ್ದಿ ನಾಳೆ ಕೇಳಮ್ಮ ಅಂತಾ ಅಂದು ತಾನು ಬಸ್ ಸ್ಟಾಂಡ ಕಡೆಗೆ ಹೋರಟಾಗ ಶಂಕರ ತಂದೆ ತಿಮ್ಮಣ್ಣ ಅಲಕುಂಟಿ, ಹಣಮಂತ ತಂದೆ ಶಂಕರ ಅಲಕುಂಟಿ, ತಿಮ್ಮಣ್ಣ ತಂದೆ ಶಂಕರ ಅಲಕುಂಟಿ, ಲಕ್ಷ್ಮಿಕಾಂತ ಅಲಕುಂಟಿನಾನಾಸಾಬ ಅಲಕುಂಟಿ, ಶಂಕರ ತಂದೆ ಭೀಮಶ್ಯಾ ಅಲಕುಂಟಿ, ದತ್ತಪ್ಪ ಬನಪಟ್ಟಿ, ಮಹಾಂತಪ್ಪ ಬನಪಟ್ಟಿ, ಪಂಡಿತ ಬನಪಟ್ಟಿ, ಮರೆಪ್ಪ ಬನಪಟ್ಟಿ, ಸುನೀಲ ಬನಪಟ್ಟಿ, ಸಾ||ಎಲ್ಲರೂ ಚವಡಾಪುರ ಇವರ ತಮ್ಮ ಕೈಯಲ್ಲಿ ಬಡಿಗೆ ಮತ್ತು ಕಲ್ಲುಗಳನ್ನು ಹಿಡಿದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು  ತೆಕ್ಕಿಕುಸ್ತಿ ಕಟ್ಟಿಗೆಯಿಂದ ತಲೆಗೆ ಹೊಡೆದು ಭಾರಿಗಾಯಗೊಳಿಸಿರುತ್ತಾರೆ  ಜಗಳ ಬಿಡಿಸಲು ಬಂದ ನನ್ನ  ತಂದೆಯ ತಲೆಗೆ ಹೊಡೆದು ರಕ್ತಗಾಯ ಮಾಡಿದ್ದು ನೂಕಿ ಕೊಟ್ಟಿದ್ದರಿಂದ ತನ್ನ ತಂದೆ ರಸ್ತೆಯ ಮೇಲೆ ಬಿದ್ದು ಎರಡು ಮೋಳಕಾಲುಗಳಿಗೆ ರಕ್ತಗಾಯವಾಗಿರತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.