POLICE BHAVAN KALABURAGI

POLICE BHAVAN KALABURAGI

19 February 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ಶ್ರೀ ಸಂತೋಷ ತಂದೆ ನವನಾಥ ಆಳಂಗೆ ಇವರು ಹುಮನಾಬಾದ ರೋಡಿಗೆ ಇರುವ ಕೆ.ಎಮ್.ಎಪ್. ಡೈರಿಯ ಎದರುಗಡೆ ರಸ್ತೆ ದಾಟುತ್ತಿದ್ದಾಗ ಆರೋಪಿ ಜಹೀರ ಅಹ್ಮದ @ ಜುಬೇರ ತಂದೆ ನಜೀರ ಅಹ್ಮದ ಸಾಃ ಮಕ್ಕಾ ಕಾಲೂನಿ ಕಲಬುರಗಿ ಈತನು ತನ್ನ ಮೋಟಾರ ಸೈಕಲ ಕೆ.ಎ 32 ಎಕ್ಸ 4402 ನೇದ್ದನ್ನು ಗಂಜ ಬಸ್ ನಿಲ್ದಾಣ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆ ದಾಟುತ್ತಿದ್ದ ಸಂತೋಷ ತಂದೆ ನವನಾಥ ಅಳಂಗೆ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿ ತಾನು ಸಹ ಮೋಟಾರ ಸೈಕಲ ಮೇಲಿಂದ ಕೆಳಗೆ ಬಿದ್ದು ಗಾಯಹೊಂದಿದ್ದು ಅಪಘಾತದಲ್ಲಿ ಫಿರ್ಯಾದಿಗೆ ತಲೆಯ ಹಿಂದೆ ಭಾರಿ ಪೆಟ್ಟಾಗಿ ರಕ್ತಗಾಯವಾಗಿದ್ದು ಆತನು ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುತ್ತಾನೆ ಅಂತಾ ಶ್ರೀ ಬಸವರಾಜ ತಂದೆ ಗೋಪಾಲರಾವ ಆಳಂಗೆ, ಸಾಃ ಮ. ನಂ. 376, ಅಹ್ಮದ ನಗರ ಆಳಂದ ಚೆಕ್ ಪೊಸ್ಟ ಹತ್ತಿರ ಕಲಬುರಗಿ. ರವರು ಸಲ್ಲಿಸಿದ ದೂರು ಸಾರಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಜೇವರ್ಗಿ ಠಾಣೆ : ದಿನಾಂಕ 17.02.2015 ರಂದು ಸಾಯಂಕಾಲ 05:00 ಗಂಟೆಯ ಸುಮಾರಿಗೆ ಶಹಾಪುರು ಜೇವರ್ಗಿ ಮೇನ್‌ ರೋಡ ಚಿಗರಳ್ಳಿ ಕ್ರಾಸ್‌ ಹತ್ತಿರ ರೋಡಿನಲ್ಲಿ ನಮ್ಮೂರ ಯಲ್ಲಪ್ಪ ಈತನು ನಡೆಸುತ್ತಿದ್ದ ಮೋಟಾರು ಸೈಕಲ್ ನಂ ಕೆ.ಎ 32 ಈ.ಹೆಚ್ 4205 ನೇದ್ದರ ಮೇಲೆ ಕುಳಿತುಕೊಂಡು ಬರುತ್ತಿದ್ದ ವೇಳೆಗೆ ನಮ್ಮ ಎದುರುಗಡೆ ಜೇವರ್ಗಿ ಕಡೆಯಿಂದ ಬಂದ ಟ್ರ್ಯಾಕ್ಟರ್ ನಂ KA32TA8315 ನೇದ್ದರ ಚಾಲಕನು ತನ್ನ ಟ್ರ್ಯಾಕ್ಟರ್ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ನಾವು ಕುಳಿತುಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್‌ ಗೆ ಎದುರುನಿಂದ ಡಿಕ್ಕಿ ಪಡಿಸಿ ನನಗೆ ಭಾರಿ ಗಾಯಗೊಳಿಸಿ ತನ್ನ ಟ್ರ್ಯಾಕ್ಟರ್ ಅನ್ನು ಸ್ಥಳದಲ್ಲೆ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ಶ್ರೀ ಭಗವಂತ್ರಾಯ ತಂದೆ ಈರಣ್ಣ ಹಡಪದ ಸಾ : ಇಜೇರಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.