POLICE BHAVAN KALABURAGI

POLICE BHAVAN KALABURAGI

04 March 2015

KALABURAGI DIST REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಅಫಜಲಪೂರ ಠಾಣೆ : ದಿನಾಂಕ 03-03-2015 ರಂದು ಅಫಜಲಪೂರ ಪಟ್ಟಣದ ನ್ಯಶನಲ್ ಪಂಕ್ಷಶನ್ ಹಾಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದ ಬಗ್ಗೆ  ಬಾತ್ಮಿ ಬಂದ ಮೇರೆಗೆ ನಾನು ಮತ್ತು ಡಿ.ಸಿ.ಐ.ಬಿ ಘಟಕದ ಶ್ರೀ ಹೇಮಂತ ಕುಮಾರ ಪಿ.ಎಸ್.ಐ ರವರು ಹಾಗೂ ಅವರ ಸಿಬ್ಬಂದಿ ಹಾಗು ನಮ್ಮ ಠಾಣೆಯ ಸಿಬ್ಬಂದಿಯೊಂದಿಗೆ ಮಾನ್ಯ ಎಸ್.ಪಿ.ಸಾಹೇಬರು ಕಲಬುರಗಿ ರವರ ಹಾಗೂ ಮಾನ್ಯ ಡಿ.ಎಸ್.ಪಿ ಸಾಹೇಬರು ಆಳಂದ ರವರ ಮಾರ್ಗದರ್ಶನದಲ್ಲಿ ಸ್ಥಳಕ್ಕೆ ಹೋಗಿ ನ್ಯಾಶನಲ್ ಪಂಕ್ಷಶನ್ ಹಾಲದಿಂದ ಸ್ವಲ್ಪ ಮರೆಯಾಗಿ ನಿಂತು ನೊಡಲು ನ್ಯಾಶನಲ್ ಪಂಕ್ಷಶನ್ ಹಾಲ ಪಕ್ಕದಲ್ಲಿರುವ ಖುಲ್ಲಾ ಜಾಗದಲ್ಲಿ ಗುಂಪು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದು ಖಚಿತ ಪಡಿಸಿಕೊಂಡು ದಾಳಿ ಮಾಡಿ, ಜೂಜಾಡುತ್ತಿದ್ದ ಎಲ್ಲರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1. ಚಂದು ತಂದೆ ಶ್ರೀಮಂತ ದೇಸಾಯಿ ಸಾ|| ಬಸವೇಶ್ವರ ಚೌಕ ಹತ್ತಿರ ಅಫಜಲಪೂರ 2. ಸೋಮನಾಥ ತಂದೆ ಶರಣಪ್ಪ ನೂಲಾ ಸಾ|| ಸಿದ್ದೇಶ್ವರ ನಗರ ಅಫಜಲಪೂರ 3. ಶ್ರೀಕಾಂತ ತಂದೆ ಹಣಮಂತ ಮ್ಯಾಳೇಸಿ ಸಾ|| ರಾಜುಗಾಂದಿ ನಗರ ಅಫಜಲಪೂರ 4. ಸಂತೋಷ ತಂದೆ ಪಂಚಪ್ಪ ದೇವಾನಿ ಸಾ|| ಮಲ್ಲಿಕಾರ್ಜುನ ಚೌಕ ಅಫಜಲಪೂರ 5. ನಾಗರಾಜ ತಂದೆ ದರ್ಮಣ್ಣ ಭುಜರಿ ವ|| ಸಾ|| ಅಳ್ಳಗಿ (ಬಿ) ಹಾ|||| ರೇವಣ ಸಿದ್ದೇಶ್ವರ ಕಾಲೋನಿ ಅಫಜಲಪೂರ 6. ಮಾಹಾವೀರ ತಂದೆ ಕುಲಭೂಷಣ ವರ್ದಮಾನ ಸಾ|| ಅಫ್ಜಲಖಾನ ಚೌಕ ಹತ್ತಿರ ಅಫಜಲಪೂರ 7. ಶಿವಾನಂದ ತಂದೆ ಗುರುಲಿಂಗಪ್ಪ ಕುಲಕರ್ಣಿ ಸಾ|| ಸಿದ್ದೇಶ್ವರ ಕಾಲೋನಿ ಅಫಜಲಪೂರ ಇಒವರುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 65,600/- ರೂ ಮತ್ತು 52 ಇಸ್ಪೆಟ ಎಲೆಗಳು ಜಪ್ತ ಮಾಡಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಹರಣ ಪ್ರಕರಣಗಳು :
ಮಹಿಳಾ ಠಾಣೆ : ಶ್ರೀ ಸೂರಜ ತಂದೆ ಮಾನಸಿಂಗ ಚಿಂಡಾಲಿಯಾ ಸಾ; 9 ನೇ ಕ್ರಾಸ ತಾರಫೈಲ ಸ್ಟೇಷನ ಎರಿಯಾ ಕಲಬುರಗಿ ಇವರ ಮಗಳಾದ ಸುಮನ ವಯ 15 ವರ್ಷ ಇವಳಿಗೆ ಮಂಜುನಾಥ ಇವನು ಚುಡಾಯಿಸುವುದು ಮಾಡುತ್ತಿದ್ದನು. ಆಗ ನಾನು ಮಂಜುನಾಥನಿಗೆ ಸಮಜಾಯಿಸಿದ್ದು ದಿನಾಂಕ 02.03.2015 ರಂದು ಮುಂಜಾನೆ 10 ಗಂಟೆಯ ಸುಮಾರಿಗೆ ಮಂಜುನಾಥ ಇತನು ನನ್ನ ಮಗಳು ಸುಮನ್ ಇವಳಿಗೆ ಜಬರದಸ್ತಿಯಿಂದ ಅವನ ದ್ವೀ ಚಕ್ರ ವಾಹನದ ಮೇಲೆ ಕರೆದುಕೊಂಡು ಹೋಗಿರುತ್ತಾನೆ ಅಂತಾ ನನ್ನ ತಾಯಿಯಾದ ಲತಾಬಾಯಿ ಇವರು ಹೇಳಿರುತ್ತಾರೆ. ಅಪ್ರಾಪ್ತ ವಯಸ್ಸಿನ ನನ್ನ ಮಗಳಾದ ಸುಮನ್ ಇವಳಿಗೆ ಮಂಜುನಾಥ ಇತನು ದುರುದ್ದೇಶದಿಂದ ಒಯ್ದಿರುವದರಿಂದ ಅವನ ವಿರುದ್ದ ಸೂಕ್ತ ಕಾನುನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ ೦1.03.2015 ರಂದು ಸಾಯಂಕಾಲ ನನ್ನ ಮಗನಾದ ಕುಮಾರ ಅಕ್ಷಯಕುಮಾರ ತಂದೆ ಸಿದ್ದಣ್ಣ ಹೊಸಮನಿ ವಯಾ : 13 ವರ್ಷ ಸಾ :  ಮುರಗಾನೂರ ಈತನು ಕೆಲ್ಲೂರದಲ್ಲಿನ ಮನೆಯಿಂದ ಸಂಡಾಸಕ್ಕೆ ಹೋಗಿದ್ದಾಗ ಯಾರೋ ಯಾವುದೋ ಉದ್ದೇಶದಿಂದ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಸಿದ್ದಣ್ಣ ತಂದೆ ಮರಳೆಪ್ಪ ಹೊಸಮನಿ ಸಾ : ಮುರಗಾನೂರ ತಾ : ಜೇವರ್ಗಿ  ರವರು ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಭಗವಂತ ತಂದೆ ಲಕ್ಷ್ಮಣ್ಣ ಕೋಗನೂರ ಸಾ: ಕೋಗನೂರ ಹಾ:ವ ಇಂದಿರಾ ನಗರ ಕಲಬುರಗಿ ರವರು ದಿನಾಂಕ 02-03-2015 ರಂದು ನಾನು ನನ್ನ ಹೆಂಡತಿ ಮತ್ತು ಮಗ ಕುಲಾಲಿ ರೇಲ್ವೆ ಸ್ಟೇಶನ್ ದಿಂದ ಯಳಸಂಗಿ ಗ್ರಾಮಕ್ಕೆ ಒಂದು ಖಾಸಗಿ ಜೀಪಿನಲ್ಲಿ ಪ್ರಯಾಣಿಸುತ್ತಿದ್ದಾಗ ಕುಲಾಲಿ ಸ್ಟೇಶನ್ ದಿಂದ ಸ್ವಲ್ಪ ದೂರಲ್ಲಿ ತಿರುವಿನಲ್ಲಿ ಜೀಪ ಚಾಲಕನು ತನ್ನ ಜೀಪನ್ನು ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿ ಹೊಲದ ಬಾಂದಾರಿಗೆ ಗುದ್ದಿ ಪಲ್ಟಿ ಹೊಡೆಸಿ ಜೀಪನ್ನು ಅಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ ಸದರಿ ಅಪಘಾತದಲ್ಲಿ ನನ್ನ  ತಲೆಗೆ ರಕ್ತಗಾಯ, ಕಪಾಳಕ್ಕೆ, ತೋಡೆಗೆ, ಬಲಬುಜಕ್ಕೆ ತರಚಿತ ಗಾಯ ಮತ್ತು ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಕಿರುಕಳ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀಮತಿ   ಶೀತಲ ಗಂಡ ನಾರಾಯಣ ಸಾಲುಂಕೆ ಸಾ|| ದುತ್ತರಗಾಂವ ಇವರಿಗೆ 19/05/2014 ರಂದು ನಾರಾಯಣ ತಂದೆ ಕಿಶನ ಸಾಲುಂಕೆ ಸಾ|| ದುತ್ತರಗಾಂವ ಇತನೊಂದಿಗೆ ಮದುವೆಯಾಗಿದ್ದು, ಮದುವೆಯಾದ 6 ತಿಂಗಳವರೆಗೆ ನನ್ನ ಗಂಡನು ನನ್ನೊಂದಿಗೆ ಸರಿಯಾಗಿದ್ದು ನಂತರ ನನಗೆ ಸರಿಯಾಗಿ ಅಡುಗೆ ಮಾಡಲು ಬರುವದಿಲ್ಲ, ನೀನು ನೋಡಲು ಚೆನ್ನಾಗಿಲ್ಲ ಅಂತ ನೆಪ ಹೇಳಿ ದಿನಾಲು ನನಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವದು ಮತ್ತು ಕೈಯಿಂದ ಹೊಡೆ ಬಡೆ ಮಾಡುತ್ತಾ ಬಂದು ನಿನ್ನೆ ದಿನಾಂಕ 02/03/2015 ರಂದು ಸಾಯಂಕಾಲ ನಾನು ನಮ್ಮ ಮನೆಯಲ್ಲಿದ್ದಾಗ ನನ್ನ ಗಂಡನು ಏ ರಂಡಿ ಇವತ್ತು ನೀನು ಅಡುಗೆ ಚೆನ್ನಾಗಿ ಮಾಡಿಲ್ಲ ಅಂತ ಅವಾಚ್ಯವಾಗಿ ಬೈದು ತಲೆಯ ಮೇಲಿನ ಕೂದಲು ಹಿಡಿದು ಜಗ್ಗಾಡಿ ಕೈಯಿಂದ ಬೆನ್ನ ಮೇಲೆ ಹೊಡೆ ಬಡೆ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.