POLICE BHAVAN KALABURAGI

POLICE BHAVAN KALABURAGI

20 October 2012

GULBARGA DISTRICT REPORTED CRIME

ಕಳ್ಳತನ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:ಶ್ರೀ ಲಕ್ಷ್ಮಿಕಾಂತ ತಂದೆ ಗುರಣ್ಣ ಶೇಗಜಿ ಸಾ|| ಕೋಗನೂರ, ತಾ||ಅಫ್ಜಲಪೂರ, ಜಿ||ಗುಲಬರ್ಗಾ, ಹಾ||ವ||ದೇವಿ ನಗರ ಅಳಂದ ರೋಡ ಗುಲಬರ್ಗಾ ರವರು ದಿನಾಂಕ 20-09-2012 ರಂದು ರಾತ್ರಿ ವೇಳೆಯಲ್ಲಿ ನನ್ನ ಮನೆಯ ಮುಂದೆ ನಿಲ್ಲಿಸಿದ ಹಿರೋ ಹೊಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂ. ಕೆಎ-32 ವಿ-95 ನೇದ್ದನ್ನು ನಿಲ್ಲಿಸಿದ್ದು, ಬೆಳಿಗ್ಗೆ ಎದ್ದು ನೋಡಲು ನನ್ನ ಮೊಟಾರ್ ಸೈಕಲ್ ನಿಲ್ಲಿಸಿದ ಸ್ಥಳದಲ್ಲಿ ಕಾಣಿಸಲಿಲ್ಲಾ. ಎಲ್ಲಾ ಕಡೆ ಹುಡುಕಾಡಿದರೂ ಮೊಟಾರ್ ಸೈಕಲ್ ಸಿಕ್ಕರಿವದಿಲ್ಲ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 74/12 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.GULBARGA DISTRICT REPORTED CRIMES


ಹೆಂಡತಿಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನ:
ಮಹಿಳಾ ಪೊಲೀಸ್ ಠಾಣೆ:ಶ್ರೀ ಸಾಹೇಬ ಪಟೇಲ ತಂದೆ ಮಸ್ತಾನ ಪಟೇಲ  ಸಾ|| ಅಮೀನಾ  ಬೀ ಮಜೀದ ಹತ್ತಿರ ಇಸ್ಲಾಂಬಾದ ಕಾಲೋನಿ ಗುಲಬರ್ಗಾ ರವರು ನನ್ನ ಮಗಳಾದ ರಾಬೀಯಾ ಬೇಗಂ ಇವಳಿಗೆ ಜೇವರ್ಗಿ ತಾಲೂಕಿನ ಕೂಡಿ ಗ್ರಾಮದ ಗೂಡು ಪಟೇಲ್ ತಂದೆ ಅಮೀನ ಪಟೇಲ್ ಇತನೊಂದಿಗೆ ಸಂಪ್ರದಾಯದಂತೆ  ಮದುವೆ ಮಾಡಿದ್ದು ಮದುವೆ ಕಾಲಕ್ಕೆ 3 ತೊಲೆ ಬಂಗಾರ 25 ಸಾವಿರ ರೂ ಮತ್ತು ಗೃಹ ಬಳಿಕೆಯ ಸಾಮಾನುಗಳು ಕೊಟ್ಟು ಸುಮಾರು 11 ತಿಂಗಳ ಹಿಂದೆ ನಾವೇ ಮದುವೆ ಮಾಡಿಕೊಟ್ಟಿರುತ್ತವೆ.ಗೂಡು ಪಟೇಲ್ ಇತನು ನನ್ನ ಮಗಳ ಶೀಲದ ಮೇಲೆ ಸಂಶಯ ಪಡುತ್ತಾ ನೀನು ಅವರಿಗೆ ಏಕೆ ನೋಡುತ್ತಿಯಾ ಅಂತಾ ದಿನಾಲು ಜಗಳ ತೆಗೆಯುತ್ತಾ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ಕೊಡುತ್ತಾನೆ ಅಂತಾ ಮಗಳು ನಮಗೆ ತಿಳಿಸಿದ್ದಾಗ ಇವತ್ತು ಇಲ್ಲಾ ನಾಳೆ ಸರಿ ಹೋಗಬಹುದು ಅಂತಾ ತಿಳಿದು ಮಗಳಿಗೆ ಬುದ್ದಿವಾದ ಹೇಳುತ್ತಾ ಬಂದೇವು. ಮಗಳು ರಾಬೀಯಾ ಬೇಗಂ ಇವಳು 7 ತಿಂಗಳ ಗಭಿರ್ಣಿಯಾಗಿರುತ್ತಾಳೆ. ದಿನಾಂಕ: 18.10.2012 ರಂದು ಸಾಯಂಕಾಲ್ 7.30 ಗಂಟೆ ಸುಮಾರಿಗೆ  ಅಳಿಯ ಗೂಡು ಪಟೇಲ್ ನಮ್ಮ ಮನೆಗೆ ಬಂದಿದ್ದು ನಾನು ಮತ್ತು  ನಾನು ಮತ್ತು  ನನ್ನ  ಹೆಂಡತಿ ಸಾಬೇರ ಬೇಗಂ ಅಳಿಯನಿಗೆ ಊಟ ಮಾಡು ಅಂತಾ  ಹೇಳಿದರೆ ಊಟ ಮಾಡಲಿಲ್ಲಾ ತನ್ನ ಗಂಡ ಊಟ ಮಾಡಿರುವುದಿಲ್ಲಾ ಅಂತಾ ಮಗಳು ರಾಬೇಯಾ ಕೂಡ ಊಟ ಮಾಡಲಿಲ್ಲಾ ನಂತರ ಅವರಿಬ್ಬರೂ ತನ್ನ ಕೋಣೆಯಲ್ಲಿ ಹೋದರು. ಅಲ್ಲಿ ಇಬ್ಬರ ಮದ್ಯ ತಕರಾರು ನಡೇದಿತ್ತು ನಾವು ಗಂಡ ಹೆಂಡತಿ ಇರುತ್ತಾರೆ ಸಣ್ಣ ಪುಟ್ಟ  ವಿಷಯ ಇರುತ್ತದೆ . ಅಂತಾ ನಾವು ನಮ್ಮ ಕೋಣೆಗೆ ಹೋಗಿ ಮಲಗಿಕೊಂಡೆವು. ನಂತರ 9.00 ಗಂಟೆ  ಮಗಳು ಮತ್ತು ಅಳಿಯ ಮಲಗಿರುವ ಕೋಣೆಯಿಂದ ದೊಡ್ಡ ಬೆಂಕಿಯ ಬೆಳಕು ಕಾಣಿಸಿತ್ತು ನಾನು ನನ್ನ ಹೆಂಡತಿ ಸಾಬೇರ  ಮಗ ಹಬೀಬ ಪಟೇಲ್ ಕೂಡಿ ನಾವು ನಮ್ಮ ರೂಮಿನ ಒಳಗಿನ ಬಾಗಿಲು ಮುರಿದು ನೋಡಲಾಗಿ ಮಗಳ ಮೈಗೆ ಬೆಂಕಿ ಹತ್ತಿ ಉರಿಯುತ್ತಿತ್ತು. ಆಗ ಅಳಿಯ ಕೂಣೆಯಿಂದ ಹೊರಗೆ ಹೋಗಿ ನಿಂತನು. ನಾನು ಮತ್ತು ನನ್ನ ಮಗ ಕೂಡಿ ನೀರು ಹಾಕಿ ಬೆಂಕಿ ಹಾರಿಸಿದೇವು ನಂತರ ನಮ್ಮ ಅಳಿಯ ಮನೆಯಿಂದ ಓಡಿ  ಹೋದನು. ನಾವು ಉಪಚಾರ ಕುರಿತು ರಾಬೀಯಾ ಇವಳಿಗೆ ಬಸವೇಶ್ವರ ಆಸ್ಪತ್ರೆ ಸೇರಿಕೆ ಮಾಡಿದೇವು ಅಲ್ಲಿ ವೈದ್ಯರು ನೋಡಿ ಹೆಚ್ಚಿನ ಪ್ರಮಾಣದಲ್ಲಿ ಸುಟ್ಟ ಗಾಯವಾಗದರಿಂದ ಇಲ್ಲಿ ಉಪಚಾರ ಆಗುವ ಸಾದ್ಯತೆ ಇಲ್ಲಾ ನೀವು ಬೇರೆ ಕಡೆ ತೆಗೆದುಕೊಂಡು ಹೋಗಿ ಅಂತಾ  ಹೇಳಿದಕ್ಕೆ ರಾತ್ರಿನೆ ಹೆಚ್ಚಿನ ಉಪಚಾರ ಕುರಿತು ಮಿರಜ ಆಸ್ಪತ್ರೆಗೆ ನನ್ನ ಹೆಂಡತಿ ಸಾಹೇಬರ ಮತ್ತು ಮಗ ಹಬೀಬ ಪಟೇಲರೊಂದಿಗೆ ಕಳುಹಿಸಿಕೊಟ್ಟೆನು. ನಮ್ಮ ಅಳಿಯ ಗೂಡು ಪಟೇಲ ಇತನು ನಮ್ಮ ಮಗಳ ಮೈ ಮೇಲೆ  ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:74/2012 ಕಲಂ 498(ಎ),307 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು  ತನಿಖೆ ಕೈಕೊಂಡಿರುತ್ತಾರೆ.
ದೋಣಿ ಮುಗುಚಿ 9 ಸಾವು:
ವಿಶ್ವವಿದ್ಯಾಲಯ ಪೊಲೀಸ್ ಠಾಣೆ: ಶ್ರೀ ಮಹ್ಮದ ಇಸ್ಮಾಯಿಲ ತಂದೆ ಮಹ್ಮದ ಇಬ್ರಾಹಿಂ ಖಾನ ಸಾ: ನಯಾ ಮೋಹಲ್ಲಾ ಹಜ್  ಕಮೀಟಿ ದಿನಾಂಕ:19/10/2012 ರಂದು ಮದ್ಯಾಹ್ನ 2-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿಯಾದ ಬಿಲಕಿಸಬಾನೂ ಹಾಗೂ ಮಕ್ಕಳಾದ ಉಜ್ಮಾ ಬೇಗಂ ಶಮಾ ಅಫ್ರೀನ ಹಾಗೂ  ನಮ್ಮ ರಕ್ತ ಸಂಬಂಧಿಕರಾದ ನಾಸಿರ ಖಾನ ತಂದೆ ರಹೀಂ ಖಾನ , ಮಹ್ಮದ  ಅಲ್ತಾಫ, ಮಹ್ಮದ ಅಶ್ಪಾಕ, ನಿಖಿತ ಸೂರಯ್ಯ, ಮುನ್ನಾ, ಆಯೇಶಾ, ರಹೇನಾ, ಗಂಡ ಶಬ್ಬರ ಖಾನ ಸನಾಬಾನು ತಂದೆ ಫಿರೋಜ ಅಲಿಶಮೀನಾ ಬೆಗಂ ಗಂಡ ನಾಸೀರ ಖಾನ ಅನೀಸ ಬೇಗಂ ಗಂಡ ಮುನ್ನಾ ಖಾಜಾಮಿಯಾ ತಂದೆ ಮುನ್ನಾ  ನೇಹಾ ತಂದೆ ಹಾಜಿ ಅಲಿ  ಎಲ್ಲರೂ ಕೂಡಿಕೊಂಡು ಗುಲಬರ್ಗಾದಿಂದ ಖಾಜಾ ಕೋಟನೂರ ಗ್ರಾಮದ ಹತ್ತಿರದ ಕೆರೆಗೆ ಪಿಕನಿಕ್ ಅಂತಾ ಖಾಜಾ ಕೋಟನೂರ ಕೆರೆಗೆ ಮದ್ಯಾಹ್ನ 2-30 ಗಂಟೆಗೆ ಹೋಗಿ ನಾವೆಲ್ಲರೂ ತೆಗೆದುಕೊಂಡು ಹೋಗಿದ್ದ ಊಟ ನಾವೆಲ್ಲರೂ ಒಟ್ಟಿಗೆ ಕುಳಿತುಕೊಂಡು ಉಟ ಮಾಡಿದೆವು.ನಂತರ ಕೆರೆಯಲ್ಲಿಯೇ ಇದ್ದ ಮೀನುಗಾರರು ತೆಪ್ಪ (ದೋಣಿ) ಹಾಕುತ್ತಿದ್ದು ಆ ವೇಳೆಗೆ ನಮ್ಮ ಸಂಬಂಧಿಕರು ದೋಣಿಯಲ್ಲಿ ಕೂಡಲು ಇಚ್ಛಿಸಿದ್ದು ದೋಣಿ ನಾವಿಕನಿಗೆ ಕರೆದು ನಮಗೆ ದೋಣಿಯಲ್ಲಿ  ಕೂಡಿಸಿಕೊಂಡು ಕೆರೆಯಲ್ಲಿ ಸುತ್ತಾಡಿಸಿ  ಕೊಂಡು ಬರುವಂತೆ ಕೇಳಿದ್ದು ಅದಕ್ಕೆ ನಾವಿಕನು 300/ರೂ ಹಣ ಕೊಟ್ಟರೆ ದೋಣೀ (ತೆಪ್ಪ) ದಲ್ಲಿ ಕೂಡಿಸಿ  ತಿರುಗಾಡಿಸಿಕೊಂಡು ಬರುತ್ತೆನೆ ಅಂತಾ ಹೇಳಿದಾಗ ಅದಕ್ಕೆ  ನಾವು 200/ ರೂ ಕೊಡುತ್ತೆವೆ ಅಂದಾಗ ಅದಕ್ಕೆ  ಅವನು ಒಪ್ಪಿಕೊಂಡು ಮೊದಲಿಗೆ ಅದರಲ್ಲಿ ಶಮೀನಾ ಬೇಗಂ ಮಹ್ಮದ ಅಲ್ತಾಫ , ಮಹ್ಮದ ಅಸ್ಪಾಕ , ನಿಖಿತ ಸೂರಯ್ಯಆಯೇಶಾ  ಸೂರಯ್ಯ, ಮುನ್ನಾ ಇವರನ್ನು ಕೂಡಿಸಿಕೊಂಡು  ಒಂದು ಸಲ ಕೆರೆಯಲ್ಲಿ ಸುತ್ತಾಡಿಸಿಕೊಂಡು  ಬಂದನು.ನಂತರ ಎರಡನೆ ಸುತ್ತಿಗೆ ನಾವು ಹೆಚ್ಚಿಗೆ ಜನರಿದ್ದೆವೆ ಈಗ 5 ಜನರಿಗೆ ಕೂಡಿಸಿಕೊಂಡು ಸುತ್ತಾಡಿಸಿಕೊಂಡು ಬಾ ನಂತರ 3 ನೇ ಸುತ್ತಿಗೆ ಉಳಿದವರಿಗೆ ತೆಗೆದುಕೊಂಡು ಹೋಗು ಅಂತಾ ನಾವಿಕನಿಗೆ ಹೇಳಿದಾಗ ಇಲ್ಲ ಎಲ್ಲರನ್ನೂ ಒಟ್ಟಿಗೆ ಕೂಡಿಸಿಕೊಂಡು ಹೋಗುತ್ತೆನೆ ಏನೂ ಆಗಲ್ಲ ಅಂತಾ ಹೇಳಿ ಒತ್ತಾಯದಿಂದ ಅದರಲ್ಲಿ ನನಗೆ ಮತ್ತು ಬಿಲಕಿಸಬಾನೂ, ಉಜ್ಮಾ ಹೂರಾ ಬೇಗಂ  ಅನೀಸಾ ಬೆಗಂ ಖಾಜಾಮಿಯಾ , ನೇಹಾ , ಆಯೇಶಾಸನಾಬಾನೂ, ಶಮಾ, ನಾಸೀರ, ರಹೇನಾ ಮತ್ತು ಹೂರಾ ಬೇಗಂ ಎಲ್ಲರನ್ನೂ ಒಟ್ಟಿಗೆ ತೆಪ್ಪದಲ್ಲಿ ಕೂಡಿಸಿಕೊಂಡು  ಕೆರೆಯಲ್ಲಿ ತೆಪ್ಪ (ದೋಣಿ) ಚಲಾಯಿಸುತ್ತಾ ನಾವಿಕನು ಹೊರಟಾಗ ದೋಣೀ ಹೆಚ್ಚಿನ ಭಾರ ತಾಳದೆ ಆ ಕಡೆ ಈ ಕಡೆ ಹೊರಳಾಡಿದಂತೆ ಆಗುತ್ತಿದ್ದಾಗ ನಾನು ನಾವಿಕನಿಗೆ  ಬೇಡ  ಮರಳಿ ವಾಪಸ ತಗೆದುಕೊಂಡು ಹೋಗು ಅಂತ ಕೇಳಿಕೊಂಡಾಗ  ಅವನು ನಮ್ಮ  ಮಾತು ಕೇಳದೆ ಇಲ್ಲ ಏನೂ  ಆಗಲ್ಲ   ಅಂತಾ ಹೇಳಿ  ಕೆರೆಯಲ್ಲಿ ದೋಣಿ  ಚಲಾಯಿಸುತ್ತಾ  ಹೋಗುತ್ತಿರುವಾಗ ದೋಣಿ ಮುಗುಚಿ ಪಲ್ಟಿಯಾಗಿದ್ದರಿಂದ ಅದರಲ್ಲಿ ಕುಳಿತಿದ್ದ ನನ್ನ ಹೆಂಡತಿ ಬಿಲಕಿಷ್ ಬಾನು, ಹೂರಾ ಬೆಗಂ , ಅನೀಸ ಬೇಗಂ, ಖಾಜಾಮೀಯಾಆಯೇಶಾಸನಾಬಾನು , ಶಮಾ, ನಾಸೀರ, ರೆಹಾನಾ ಗಂಡ ಶಬ್ಬೀರ ಖಾನ , ಇವರೆಲ್ಲರೂ  ನೀರಿನಲ್ಲಿ ಮುಳಿಗಿದ್ದು ನಾನು ಮತ್ತು  ನೇಹಾ  ಇಬ್ಬರು ಕೆರೆಯಲ್ಲಿದ್ದ ಬೇರೆ ಸಣ್ಣ  ತೆಪ್ಪ ಹಿಡಿದುಕೊಂಡು ದಡಕ್ಕೆ ಬಂದಿದ್ದು, ಉಳಿದವರು ನೀರಿನಲ್ಲಿ ಮುಳುಗಿ ನೀರು ಕೂಡಿದು ಉಸಿರುಗಟ್ಟಿ ಮೃತಪಟ್ಟಿದ್ದು. ನೇಹಾ ಇವಳು ನೀರು ಕುಡಿದು ಬೇಹೊಸ ಸ್ಥಿತಿಯಲ್ಲಿರುತ್ತಾಳೆ.  ಅಲ್ಲದೆ  ಬಿಲ್ಕುಷ ಬಾನೂಹೂರಾ ಬೇಗಂಅನೀಸ ಬೇಗಂ, ಖಾಜಾಮೀಯಾ. ಇವರುಗಳು ಮೃತಪಟ್ಟ ಶವಗಳು ಅಲ್ಲಿಯೆ ನಿಂತಿದ್ದ ಬೇರೆ ನಾವಿಕರು ಹೋರತಗೆದು ಹಾಕಿದ್ದು,ನೀರಿನಲ್ಲಿ ಮುಳಿಗಿದ್ದ ಆಯೇಶಾ ನಾಸಿರ ಹಾಗೂ ರೆಹನಾ ಈ ಮೂವರ  ಶವಗಳು ನೀರಿನಲ್ಲಿ ಮುಳುಗಿರುತ್ತವೆ ಸದರಿ ನಾವಿಕನು ದೋಣಿ ಮುಳಿಗಿದ ತಕ್ಷಣ ಅಲ್ಲಿಂದ ಓಡಿ ಹೋಗಿರುತ್ತಾನೆ. ಅವನ ಹೆಸರು ವಿಳಾಸ ತಿಳಿದಿರುವದಿಲ್ಲ. ಸದರಿ ದೋಣಿ ಚಾಲಕನ ಮೆಲೆ ಕಾನೂನು ಕ್ರಮ ಜರುಗಿಸಬೇಕೆಂದು  ದೂರು ನೀಡಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:253/2012 ಕಲಂ 280, 304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಹರಣ ಪ್ರಕರಣ:
ಚಿತ್ತಾಪೂರ ಪೊಲೀಸ್ ಠಾಣೆ: ಶ್ರೀ ಸಾಬಣ್ಣ ತಂದೆ ಅಯ್ಯಪ್ಪ ವಾಲಿಕಾರ ಸಾ|| ಆಶ್ರಯ ಕಾಲೋನಿ ಚಿತ್ತಾಪೂರ ರವರು ನನ್ನ ಮಗಳಾದ ಕಮಾರಿ ಅನಿತಾ ವಯ|| 15 ವರ್ಷ ಇವಳು ಈ ವರ್ಷ ಎನ್.ಇ.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಓದುತಿದ್ದು,ದಿನಾಂಕ:09/10/2012 ರಂದು 12-00 ಗಂಟೆ  ಸುಮಾರಿಗೆ ಗೆಳತಿಯ ಮನೆಗೆ ಹೋಗಿ ಬರುತ್ತಿನೆಂತ ಹೇಳಿ ಹೋದವಳು ಸಾಯಂಕಾಲ 7-00 ಗಂಟೆಯಾದರು ಮನೆಗೆ ಬರಲಿಲ್ಲ ಎಲ್ಲಾ ಕಡೆ ಹುಡಕಾಡಿ ನೋಡಿದೆವು. ನನ್ನ ಮಗಳಿಗೆ ಅಯ್ಯಪ್ಪ ತಂದೆ ಶೇಷಪ್ಪ ಇತನು ಅಪಹರಿಸಿಕೊಂಡು ಹೋಗಿದ್ದು ನನ್ನ ಮಗಳಿಗೆ ಅಪಹರಿಸಿಕೊಂಡು ಹೋಗಲು ಅವನ ಅಯ್ಯಪ್ಪನ ತಂದೆ ಶೇಷಪ್ಪ. ತಾಯಿ ಗೌರಮ್ಮ. ಅಜ್ಜಿ ಚಂದಮ್ಮ ಹಾಗು ಅಯ್ಯಪ್ಪನ ಸೋದರ ಮಾವರಾದ ದೊಡ್ಡ ಬೀಮಣ್ಣ ಬಡೀಗೆರ. ಸಣ್ಣ ಭೀಮಣ್ಣ ಬಡಿಗೆರ ಸಾ|| ಇಬ್ಬರು ಬಾಚವಾರರವರ ಕುಮ್ಮಕದಿಂದಲೆ ಅಪಹರಿಸಿಕೊಂಡು ಹೋಗಿರುತ್ತಾನೆ.ಅವರೆಲ್ಲರ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ್ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:96/2012 ಕಲಂ 366 (ಎ) 109, ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.