POLICE BHAVAN KALABURAGI

POLICE BHAVAN KALABURAGI

06 June 2017

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:05/06/2017 ರಂದು ಸಂಜೆ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಇಬ್ಬರು ವ್ಯಕ್ತಿ ದೈವಲಿಲೆಯ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಶ್ರೀ ಸಂಜೀವಕುಮಾರ ಪಿಎಸ್‌ಐ ರಾಘವೆಂಸ್ರ ನಗರ ಪೊಲೀಸ್‌ ಠಾಣೆ ಕಲಬುರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ  ಹೋಗಿ ಮರೆಯಲ್ಲಿ ನಿಂತು ನೋಡಲು ಇಬ್ಬರು ವ್ಯಕ್ತಿಗಳು ಬಸ್‌ ನಿಲ್ದಾಣದಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಕುಳಿತು 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಚೀಟಿಗಳನ್ನು ಬರೆದು ಕೊಡುತ್ತಿರುವದನ್ನು ನೋಡಿ ದಾಳಿ ಮಾಡಿ ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು 1) ಶಹಾಬುದ್ದಿನ್‌ ತಂದೆ ಅಬ್ದುಲ್‌ ಗಫಾರ ಸಾ: ಎಮ್‌ಎಸ್‌ಕೆ ಮಿಲ್‌ ಜಿಲಾನಾಬಾದ ಕಲಬುರಗಿ ಅಂತಿ ತಿಳಿಸಿದ್ದು ಸದರಿಯವನಿಗೆ ಅಂಗ ಶೋದನೆ ಮಾಡಲು ಒಂದು ಬಾಲ್‌ ಪೆನ್‌, ಚಾವಿ ಕಂಪನಿಯ ಕಡ್ಡಿ ಡಬ್ಬಿಯ ಮೇಲೆ  ಮಟಕಾ ನಂಬರ ಬರೆದ  7 ಚೀಟಿಗಳು, ನಗದು ಹಣ 3000/-ರೂಗಳು ದೊರಕಿದ್ದು, ಇನ್ನೊಬ್ಬನನ್ನು ವಿಚಾರಿಸಲು ತನ್ನ ಹೆಸರು 2) ರವಿ ತಂದೆ ಸಂಗಮನಾಥ ಸಾ:ಶಾಂತಿ ನಗರ ನೀರಿನ ಪ್ಲ್ಯಾಂಟ ಹತ್ತಿರ ಕಲಬುರಗಿ ಅಂತ ತಿಳಿಸಿದ್ದು ಸದರಿಯವನಿಗೆ ಅಂಗ ಶೋದನೆ ಮಾಡಲು 1) ಒಂದು ಬಾಲ್‌ ಪೆನ್‌, 2) 3 ಮಟಕಾ ನಂಬರಗಳನ್ನು ಬರೆದ ಮಟಕಾ ಚೀಟಿಗಳು 3) ನಗದು ಹಣ 960/- ರೂಪಾಯಿ ದೊರಕಿರುತ್ತವೆ. ಸದರಿಯವನಿಗೆ ನೀನು ಬರೆದುಕೊಂಡ ಮಟಕಾ ಚೀಟಿಯನ್ನು ಯಾರಿಗೆ ಕೊಡುತ್ತಿ ಅಂತ ವಿಚಾರಿಸಲು ನಾನು ತಿರುಗಾಡಿ ಬರೆದುಕೊಂಡ ಮಟಕಾ ಚೀಟಿ ಮತ್ತು ಹಣವನ್ನು ಶಹಾಬುದ್ದಿನ್‌ನಿಗೆ ಕೊಡಲು ಬಂದಿರುತ್ತೆನೆ ಅಂತ ತಿಳಿಸಿದನು. ಹೀಗೆ ಒಟ್ಟು ನಗದು ಹಣ 3960/- ರೂಗಳು ಮತ್ತು 10 ಮಟಕಾ ಚೀಟಿಗಳನ್ನು ಹಾಗೂ ಎರಡು ಬಾಲ್‌ ಪೆನ್‌ಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ  ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಹರಣ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮಹೇಂದ್ರ ತಂದೆ ಶಂಕರ ಬೊರೆ ಸಾ: ಲಾಲಗೇರಿ ಕ್ರಾಸ್ ಅಂಬಾ ಭವಾನಿ ಗುಡಿ ಹತ್ತಿರ ಕಲಬುರಗಿ ಇವರ ಮಗನಾದ ರೋಹಿತ ಇತನು ಸುಮಾರು 2 ವರ್ಷದ ಹಿಂದೆ ಕಳ್ಳತನ ಕೇಸಿನಲ್ಲಿ ಜೇಲಿಗೆ ಹೋಗಿ ಬಂದಿರುತ್ತಾನೆ. ಬಂದ ನಂತರ ಸುಮಾರು 3 ತಿಂಗಳು ಮನೆಯಲ್ಲಿ ಹೆಳದೆ ಹೋಗಿದ್ದು ಮರಳಿ ಬಂದಾಗ ಎಲ್ಲಿಗೆ ಹೋಗಿದ್ದೆ ಅಂತ ಕೇಳಿದಾಗ, ನಾನು ಬೆಂಗಳೂರಿಗೆ ಹೋಗಿದ್ದೆ ದಾಬಾದಲ್ಲಿ ಕೆಲಸ ಮಾಡಿಕೊಂಡಿದ್ದೆನು ಅಂತ ತಿಳಿಸಿದನು. ಈ ತರಹ ನೀನು ಮನೆಯಲ್ಲಿ ಹೇಳದೆ ಕೇಳದೆ ಹೋದರೆ ನಾವು ಏನು ತಿಳಿಕೊಬೇಕು ಅಂತ ಸಿಟ್ಟಾದಾಗ  ಪುನಃ ಒಂದು ವಾರ ಹೇಳದೆ ಕೇಳದೆ ಹೋಗಿ ಮೆನೆಗೆ ಬಂದಿರುತ್ತಾನೆ. ದಸರಾ ಹಬ್ಬದ ಸಮಯದಲ್ಲಿ ಮನೆಯಲ್ಲಿ ಹೇಳದೆ-ಕೇಳದೆ 2-3 ತಿಂಗಳು ಹೋಗಿದ್ದು ಮರಳಿ ಮನೆಗೆ ಬಂದಾಗ ಎಲ್ಲಿಗೆ ಹೋಗಿದ್ದಿ ಅಂತ ಕೇಳಿದಾಗ  ಇವಾಗಲು ನಾನು ಪುಣೆಯಲ್ಲಿ ದಾಬಾದಲ್ಲಿ ಕೆಲಸ ಮಾಡಿಕೊಂಡಿರುತ್ತೆನೆ ನನ್ನ ಬಗ್ಗೆ ವಿಚಾರ ಮಾಡಬೇಡಿ ಅಂತ ಅನ್ನುತ್ತಿದ್ದನು. ಇವನ ಸಂಗಡ ಗಂಗಾ ನಗರ ರಾಜು ಜಾಸ್ತಿ ಓಡಾಡುತ್ತಿದ್ದನು. ಈಗ ದಿನಾಂಕ:9/02/2017 ರಂದು ಸಂಜೆ 4 ಗಂಟೆಗೆ ಯಾರೋ ಇಬ್ಬರು ಗೆಳೆಯರೊಂದಿಗೆ ಹೋಗಿ ಬರುತ್ತನೆ ಎಂದು ಹೇಳಿ ಮನೆಯಿಂದ ಹೋಗಿದ್ದು ಇಲ್ಲಿಯವರೆಗೆ ಬಂದಿರುವದಿಲ್ಲ. ಆತನು ಎಲ್ಲಿದ್ದಾನೆ ಅಂತ ಕೂಡಾ ನಮಗೆ ಫೋನ್‌ ಮಾಡಿ ತಿಳಿಸಿರುವದಿಲ್ಲ. ನಾವು ಮತ್ತು ಮನೆಯವರು ನಮ್ಮ ಸಂಬಂದಿಕರ ಕಡೆಗೆ ಹೋಗಿರಬಹುದು ಅಂತ ಎಲ್ಲಾ ಕಡೆ ವಿಚಾರಿಸಿದರು ಯಾವುದೆ ಮಾಹಿತಿ ಸಿಕ್ಕಿರುವದಿಲ್ಲ. ಎಲ್ಲಿಯಾದರು ಈ ಹಿಂದಿನ ರೀತಿಯಲ್ಲಿ ಕೆಲಸ ಮಾಡಿಕೊಂಡು ಇದ್ದಿರಬಹುದೆಂದು ತಿಳಿದಿದ್ದೆವು. ಆದರು ಇಂದು ನಾಳೆ ಬರಬಹದು ಅಂತ ಸುಮ್ಮನಿದ್ದೆವು. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಸೇಡಂ ಠಾಣೆ : ಶ್ರೀ ಶರಣಪ್ಪ ತಂದೆ ನಾಗೇಂದ್ರಪ್ಪ ವಾಲಿಕಾರ್ ಸಾ|| ಸೂರವಾರ ಗ್ರಾಮ ತಾ|| ಸೇಡಂ ಇವರು ದಿನಾಂಕ :02-06-2017 ರ ರಾತ್ರಿ 10 ಗಂಟೆಗೆ ಪಿರ್ಯಾದಿಯ ಅಕ್ಕ ಮತ್ತು ಪಿರ್ಯಾಧಿಯ ಕುಟುಂಬದವರು ಮನೆಯಲ್ಲಿ ಮಲಗಿರುವಾಗ ಮನೆಯ ಬಾಗಿಲ ಕೊಂಡಿ ಮುರಿದು ಮನೆಯ ಪೆಟ್ಟಿಗೆಯಲ್ಲಿಟ್ಟಿದ್ದ 1) ಒಂದು ತೊಲೆಯ ಬಂಗಾರದ ಚೈನು ಅ.ಕಿ 20,000/- ರೂ. 2) ನಗದು ಹಣ 4000/- ಹೀಗೆ ಒಟ್ಟು 24000/- ರೂ. ನೇದ್ದವುಗಳು ಯಾರೊ ಕಳ್ಳರು ದಿನಾಂಕ : 02-06-2017 ರ ರಾತ್ರಿ 10 ಗಂಟೆಯಿಂದ ದಿನಾಂಕ : 03-06-2017 ರ ಬೆಳಗಿನ 6 ಗಂಟೆಯ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ: 05/06/2017 ರಂದು ಮುಂಜಾನೆ ಮುತ್ತಗಾ ಸೀಮಾಂತರದ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟ್ಯಾಕ್ಟರನಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದಾರೆ  ಅಂತಾ  ಖಚಿತ ಬಾತ್ಮಿ ಬಂದ  ಮೇರೆಗೆ  ಶ್ರೀ ಕಲ್ಯಾಣಿ ಎ.ಎಸ್.ಐ ಶಹಾಬಾದ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೊದಾಗ ಮುತ್ತಗಾ ಗ್ರಾಮದ ಕಾಗಿಣಾ ನದಿ ಕಡೆಯಿಂದ  ಒಂದು ಮರಳು ತುಂಬಿದ ಟ್ಯಾಕ್ಟರ ಬರುತ್ತಿದ್ದು ಸದರಿ ಟ್ರಾಕ್ಟರ ಚಾಲಕನು ನಮ್ಮ ಪೊಲೀಸ ಜೀಪ ನೋಡಿ  ತನ್ನ ಟ್ರಾಕ್ಟರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದನು  ಸದರಿ ಟ್ರಾಕ್ಟರ ಪರಿಶೀಲಿಸಿ ನೋಡಲಾಗಿ` ಟ್ರಾಕ್ಟರ ನಂಬರ ಎ.ಪಿ28 ಟಿ.ಸಿ 8042 ಇದ್ದು  ಅ.ಕಿ  2 ಲಕ್ಷ ರೂ ಅಂತಾ ಇದ್ದು ಸದರಿ ಟ್ರಾಕ್ಟರನದಲ್ಲಿ ಮರಳು ತುಂಬಿದು ಮರಳಿನ ಅ.ಕಿ 1000-00 ರೂ ಸದರಿ ಮರಳು ತುಂಬಿದ ಟ್ರಾಕ್ಟರನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ನಿಂಗಮ್ಮ ಗಂಡ ದಿ|| ಸಾಯಬಣ್ಣ ಗೋಪಾಲಕರ್ ಸಾ|| ಜೇವರ್ಗಿ (ಕೆ) ತಾ|| ಜೇವರ್ಗಿ ಜಿಲ್ಲಾ ಕಲಬುರಗಿ ಇವರು ದಿನಾಂಕ 10-10-09-2015 ರಂದು ಅಬೀದಾ ಬೆಗಂ ಗಂಡ ಬಂದೆನವಾಜ ಹಾಜಿ ಸಾ|| ಅರಳಗುಂಡಗಿ ಇವರ ಪುತ್ರನಾದ  ಅಬೂಬಕರ ಇವರ ಒಪ್ಪಿಗೆಯ ಮೇರೆಗೆ ಸರ್ವೆ ನಂ 278/3 ರ ಕ್ಷೇತ್ರ 6 ಎಕರೆ 8 ಗುಂಟೆ ಅರಳಗುಂಡಗಿ ಗ್ರಾಮದ ಜಮೀನನ್ನು ರೂಪಾಯಿ 20,40,000/- ರೂ  ಜಮೀನು ಖರಿದಿ ಕೊಡಲು ಒಪ್ಪಿ ಸದರಿ ದಿನ 20,00,000/- ರೂ ನಗದಾಗಿ ನನ್ನ ಗಂಡನಿಂದ ಪಡೆದು ದಸ್ತಾವೇಜು ಸಂಖ್ಯೆ 3938/15-16 ದಿನಾಂಕ 10-09-2015 ರಂದು ಖರೀದಿ ಕರಾರು ಪತ್ರ ಬರೆದುಕೊಟ್ಟಿದ್ದು ತದನಂತರ ಊರಿನವರ ಮುಖಾಂತರ ನಮಗೆ ಸದರಿಯವರು ಮೋಸ ಮಾಡಿರುವ ವಿಚಾರ ಬಂದು ಸದರಿಯವರು ನಮಗೆ ಬೇರೆ ಜಮೀನು ತೋರಿಸಿ ಆ ಜಮೀನಿನಲ್ಲಿ ಮನೆಗಳು ನಿರ್ಮಿಸಲಾಗಿರುವ ಸರ್ವೆ ನಂ 278/3 ರ ಜಮೀನನ್ನು ಮೋಸದಿಂದ ಬರೆದುಕೊಟ್ಟಿರುತ್ತಾರೆ. ನನ್ನ ಗಂಡ ದಿನಾಂಕ 27-12-17 ರಂದು ಮೃತ ಪಟ್ಟಿರುತ್ತಾರೆ. ಕೆಲವು ದಿನಗಳ ನಂತರ ನಾನು ಮತ್ತು ನನ್ನ ಮೈದುನನಾದ ಭಾಗಣ್ಣ ತಂದೆ ಮರೇಪ್ಪ ಇವರು ಸದರಿ ಮೋಸ ವಿಚಾರ ಕೇಳಲು ಹೋದಾಗ ಆ ಸಮಯದಲ್ಲಿ ಹಣ ವಾಪಸ್ಸು ಕೊಡುತ್ತೆವೆಂದು ತಿಳಿಸಿದ್ದು ಇಲ್ಲಿಯವರೆಗೆ ಕೊಟ್ಟಿಲ್ಲ. ಇಂದು ದಿನಾಂಕ 05-06-17 ರಂದು ಮದ್ಯಾನ 12 ಗಂಟೆಯ ಸಮಯದಲ್ಲಿ ನಾನು ಮತ್ತು ನನ್ನ ಮೈದುನನಾದ ಭಾಗಣ್ಣ ತಂದೆ ಮರೇಪ್ಪ ಇಬ್ಬರು ಅರಳಗುಂಡಗಿ ಗ್ರಾಮಕ್ಕೆ ಅವರ ಮನೆಗೆ ಹೋಗಿ ನೀವು ಮೋಸಮಾಡಿ ಹೋಲ ಖರೀದಿ ಕೊಟ್ಟು ನಮ್ಮ ಹಣವು ಕೊಡಲಿಲ್ಲ ಹಣ ಕೋಡಿರಿ ಅಂತಾ ಕೇಳಿದೆವು ಆಗ ಅಬೀದಾ ಬೆಗಂ ಗಂಡ ಬಂದೆನವಾಜ ಖಾಜಿ ಹಾಗು ಆಕೆಯ ಮಕ್ಕಳಾದ 1) ಅಬೂಬಕರ ತಂದೆ ಬಂದೆನವಾಜ  2) ಅಸ್ಲಾಂ ತಂದೆ ಬಂದೆನವಾಜ  3) ಆದಂ ತಂದೆ ಬಂದೆನವಾಜ  ಎಲ್ಲರೂ ಕೂಡಿ ನಮಗೆ ಹಣ ನಾವು ತೆಗೆದುಕೊಂಡಿಲ್ಲ ಏನು ಬೇಕಾದರು ಮಾಡಿಕೊಳ್ಳಿ ಹೋಲಿಯಾ ಸೂಳೆ ಮಕ್ಕಳೆ ಇದಕ್ಕೆ ಬಿದ್ದಿರಿ ಹಣ ಕೊಟ್ಟ ಸಾಯಬಣ್ಣನೇ ಸತ್ತ ನೀವೇನೂ ಕೆಳಬೆಕಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಅಬೀದಾ ಬೆಗಂ ನನಗೆ ಕಪಾಳಕ್ಕೆ ಹೋಡೆದು ಹೋಲೆರ ರಂಡಿ ಹೋಗು ಎಂದು ಅವಾಚ್ಯ ಶಬ್ದಗಳಿಂದ ಬೈದು ನೂಕಿರುತ್ತಾಳೆ. ಆಗ ಅಬೂಬಕರ, ಅಸ್ಲಾಂ, ಆದಂ ಇವರು ನನಗೆ ಮಾನ ಹಾನಿಯಾಗುವಂತೆ ನನ್ನ ಕೂದಲು ಹಿಡಿದು ಮತ್ತು ಸೀರೆ ಎಳೆದಾಡಿ ಕೈಯಿಂದ ನನ್ನ ಬೆನ್ನಿಗೆ ಹಲ್ಲೆ ಮಾಡಿರುತ್ತಾರೆ. ಆಗ ಜಗಳ ಬಿಡಿಸಲು ಬಂದ ನನ್ನ ಮೈದುನನಿಗೆ ಅಬೀದಾ ಬೆಗಂ ಮತ್ತು ಆದಂ ತಡೆದು ನಿಲ್ಲಿಸಿ ಈ ಹೊಲೆ ಸೂಳೆ ಮಗನಂದು ಬಹಳ ಆಗಿದೆ ಎಂದು ನೂಕಾಡಿದರು ಆ ಸಂಧರ್ಭದಲ್ಲಿ ಅನೇಕ ಜನರು ನೆರೆದಿದ್ದು ಜಗಳ ಬಿಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.