POLICE BHAVAN KALABURAGI

POLICE BHAVAN KALABURAGI

27 May 2011

GULBARGA DISTRICT REPORTED CRIMES

ಕೊಲೆ ಮಾಡಲು ಪ್ರಯತ್ನ ;
ಮಾಹಾಂಗಾವ ಠಾಣೆ ;
ಶ್ರೀ ಶರಣು @ ಶರಣಬಸಪ್ಪ ತಂ, ಲಾಲಪ್ಪ ಮೇಲಿನಮನಿ, ಸಾ||ಬೇಲೂರು ಜೆ. ರವರು ದಿನಾಂಕ 25-05-2011 ರಂದು ಬೆಳಿಗ್ಗೆ ಕಮಲಾಪೂರಕ್ಕೆ ತನ್ನ ಹಿರೋ ಹೊಂಡಾ ಮೋಟಾರ ಸೈಕಲ್ ನಂ: ಕೆ,ಎ-39-8414 ನೇದ್ದರ ಮೇಲೆ ಕಮಲಾಪೂರಕ್ಕೆ ಮದುವೆಗೆ ಹೋಗಿ ಮರಳಿ ಮಧ್ಯಾಹ್ನ ಹಳೆಯ ಅಂಕಲಗಿ ಕ್ರಾಸ್ ಹತ್ತಿರ ಹೋದಾಗ ಅಲ್ಲಿ 4 ಜನ ಅಪರಿಚಿತರು ತಡೆದು ನಿಲ್ಲಿಸಿ ಬಿಗಿಯಾಗಿ ಹಿಡಿದು ವಿಷವನ್ನು ಬಾಯಿಯಲ್ಲಿ ಹಾಕಿ ಕುಡಿಸಿದ್ದು ಅವರು ಅಂದಾಜು 25-30 ವರ್ಷದ ವಯಸ್ಸಿನವರಾಗಿರುತ್ತಾರೆ ನಂತರ ಉಪಚಾರ ಕುರಿತು ಡಾ||ಚಿಂಚೋಳ್ಳಿ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು ಕೊಲೆ ಮಾಡುವ ಉದ್ದೇಶದಿಂದ ಒತ್ತಾಯ ಪೂರ್ವಕವಾಗಿ ಬಿಗಿಯಾಗಿ ಹಿಡಿದು ಬಾಯಿಯಲ್ಲಿ ವಿಷ ಹಾಕಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.;
ದ್ವೀಚಕ್ರ ವಾಹನ ಕಳವು ಪ್ರಕರಣ ;
ಬ್ರಹ್ಮಪೂರ ಠಾಣೆ :
ಶ್ರೀ ಅಂಬರೀಶ ತಂದೆ ವಿಜಯಕುಮಾರ ಚಿಂಚೋಳಿ ಸಾ; ಮಾಹಾಗಾಂವವಾಡಿ ರವರು ದಿನಾಂಕ 26-05-2011 ರಂದು ಮಧ್ಯಾಹ್ನ 12 ರಿಂದ 1 ಗಂಟೆಯ ಅವಧಿಯಲ್ಲಿ ತಮ್ಮ ಹಿರೋ ಹೊಂಡಾ ಸ್ಪ್ಲೆಂಡರ ಪ್ಲಸ ನಂ ಕೆಎ 32 ಆರ್ 1727 ಅ.ಕಿ. 20000/- ನೇದ್ದನ್ನು ಸುಪರ ಮಾರ್ಕೆಟದ ಅಮಾನತ್ ಬ್ಯಾಂಕಿನ ಎದುರುಗಡೆ ನಿಲ್ಲಿಸಿದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.