POLICE BHAVAN KALABURAGI

POLICE BHAVAN KALABURAGI

08 April 2016

Kalaburagi District Reported Crimes.

ಗ್ರಾಮೀಣ ಠಾಣೆ  ಕಲಬುರಗಿ : ದಿನಾಂಕ 12-3-2016 ರಂದು 9-00 ಎ.ಎಂ.ಕ್ಕೆ ಫಿರ್ಯಾದಿ ಶ್ರೀಮತಿ ಚೈತ್ರಾ ಗಂಡ ಶರಣಬಸಪ್ಪಾ  ಬಿರಾದರ ವಯ;30 ವರ್ಷ  ಜ್ಯಾತಿ;ಲಿಂಗಾಯತ ಉ;ಮನೆಕೆಲಸ ಸಾ;ಗೌಡಗಾಂವ ತಾ;ಅಫಜಲಪೂರ ಜಿ;ಕಲಬುರಗಿ ಹಾವ; ಶಿವಲಿಂಗೇಶ್ವರ ಕಾಲೂನಿ ವಿಶ್ವರಾಧ್ಯ ಗುಡಿಯ ಎದರುಗಡೆ ಆಳಂದ ರೋಡ ಕಲಬುರಗಿ ಇವರು ಕೊಟ್ಟ ಫಿರ್ಯಾದಿ ಸಾರಂಶ ಏನೆಂದರೆ
          ಹೀಗಿದ್ದು ಇಂದು ದಿನಾಂಕ 12-3-2016 ರಂದು ಬೆಳಗ್ಗೆ ಮುಂಜಾನೆ 6-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ನಾದನಿ ಜಗದೇವಿ ಗಂಡ ರಮೇಶ ಬಿರಾದರ ಇಬ್ಬರು ಕೂಡಿಕೊಂಡು ಬಯಲು ಕಡೆಗೆ (ಮೂತ್ರ ವಿಸರ್ಜನೆಗೆ) ಹೋಗಿ ಮರಳಿ ವಿಶ್ವರಾದ್ಯ ಗುಡಿಯ ಕಡೆಯಿಂದ ರೋಡ ದಾಟಿ ಬರುತ್ತಿರುವಾಗ ಅದೇ ವೇಳಗೆ ಆಳಂದ ಕಡೆಯಿಂದ ಒಂದು ಮೋಟಾರ ಸೈಕಲ್  ನಂ.ಕೆ.ಎ.32 ಇಸಿ 9711 ನೆದ್ದರ ಚಾಲಕ ಪ್ರವೀಣ ತಂದೆ ಬಾಬುರಾವ ಕುಕುಮರ  ಇತನು  ತನ್ನ ಮೋಟಾರ ಸೈಕಲನ್ನು ಬಹಳ ವೇಗವಾಗಿ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನನ್ನಗೆ ಜೋರಾಗಿ ಡಿಕ್ಕಿ ಹೊಡೆದನು ಇದರಿಂದ ನನಗೆ  ಎಡಗಾಲು ಮೋಳಕಲು ಕೆಳಗೆ ಭಾರಿ ರಕ್ತಗಾಯ , ಬಲಟೊಂಕಕ್ಕೆ ಗುಪ್ತ ಪೆಟ್ಟಾಗಿರುತ್ತದೆ , ಹೊಟ್ಟೆಗೆ ಗುಪ್ತ ಪೆಟ್ಟಾಗಿದ್ದು , ತಲೆಯ ಬಲಭಾಗದಲ್ಲಿ ಪೆಟ್ಟಾಗಿ ರಕ್ತಗಾಯವಾಗಿರುತ್ತದೆ ಮೂಗಿಗೆ ಪೆಟ್ಟಾಗಿ ರಕ್ತಗಾಯವಾಗಿರುತ್ತದೆ, ಹಾಗೂ ನನ್ನ ಮಗ ಈಶ್ವರನಿಗೆ ಬಲಗೈ ಮುಂಗೈ ಬೆರಳುಗಳಿಗೆ ರಕ್ತಗಾಯ, ತಲೆಗೆ ,ಟೊಂಕಕ್ಕೆ ಗುಪ್ತ ಪೆಟ್ಟಾಗಿರುತ್ತದೆ , ಎರಡು ಕಾಲುಗಳಿಗೆ ಅಲಲ್ಲಿ ತರಚಿದ ರಕ್ತಗಾಯವಾಗಿರುತ್ತದೆ ಬಲಗಾಲಿನ ಪಾದದ ಹತ್ತಿರ ರಕ್ತಗಾಯವಾಗಿರುತ್ತದೆ , ಹಾಗೂ ಅಪಘಾತ ಪಡಿಸಿದ ಮೋಟಾರ ಸೈಕಲ ಕೂಡಾ ಕೆಳಗೆ ಬಿದಿದ್ದು  ಮೋಟಾರ ಸೈಕಲ  ಹಿಂದ ಕುಳಿತಿದ್ದ ಪ್ರಶಾಂತ ತಂದೆ ಬಾಬುರಾವ ಕುಂಕುಮಕರ ವಯ;22 ವರ್ಷ ಸಾ;ಕೆರಿಬೋಸಗಾ ಇತನಿಗೆ  ಎದೆಗೆ ಗುಪ್ತ ಪೆಟ್ಟಾಗಿದ್ದು , ಬಲಗಾಲು ಮೊಳಕಾಲಿಗೆ, ಪಾದದ ಮೇಲೆ ತರಚಿದಗಾಯ ,ಎಡಗೈ ಮೊಳಕೈ ಮೇಲೆ ತರಚಿದಗಾಯ ,ಟೊಂಕಕ್ಕೆ ಗುಪ್ತ ಪೆಟ್ಟಾಗಿರುತ್ತದೆ ಆದುದರಿಂದ ಸದರಿ ಹೀರೋ ಸ್ಟ್ಲೆಂಡರ ನಂ.ಕೆ.ಎ.32 ಇಸಿ.9711 ನೆದ್ದರ ಚಾಲಕ  ಪ್ರವೀಣ ತಂದೆ ಬಾಬುರಾವ ಕುಂಕುಮಕರ ವಯ;26 ವರ್ಷ ಸಾ;ಕೆರಿಬೋಸಗಾಗ್ರಾಮ ಇತನಮೇಲೆ ಕಾನೂನು ಕ್ರಮಜರುಗಿಸಬೇಕು ಅಂತಾ ಕೊಟ್ಟ ಫಿರ್ಯಾದಿ ಹೇಳಿಕೆ ಸಾರಂಸದ ಮೇಲಿಂದ ನಮ್ಮ ಠಾಣೆಯ ಗುನ್ನೆ ನಂ 94/2016 ಕಲಂ. 279,337,338 ಐಪಿಸಿ ನೆದ್ದರ ಪ್ರಕಾರ ಗುನ್ನೆ ದಾಖಲಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
             ಇಂದು ದಿನಾಂಕ 8-4-2016 ರಂದು 9-00 ಎ.ಎಂ.ಕ್ಕೆ. ಸದರಿ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿ ದಾರ ಶ್ರೀ ಶರಣಪ್ಪಾ @ ಶರಣಬಸಪ್ಪಾ ತಂದೆಸಾತಲಿಂಗಪ್ಪಾ ಬಿರಾದರ ವಯ;35ವರ್ಷಜ್ಯಾತಿ;ಲಿಂಗಾಯತ ಉ;ಹೊಟೆಲ ಕೆಲಸ ಸಾ;ಗೌಡಗಾಂವ ತಾ;ಅಫಜಲಪೂರ ಜಿ;ಕಲಬುರಗಿ ಹಾವ;ಶಿವಲಿಂಗೇಶ್ವರ ಕಾಲೂನಿ ವಿಶ್ವರಾಧ್ಯ ಗುಡಿಯ ಎದರುಗಡೆ ಆಳಂದ ರೋಡ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪುರವಣೆ ಹೇಳಿಕೆ ಸಾರಂಶ ಏನೆಂದರೆ  ಅಪಘಾತದಲ್ಲಿ ಗಾಯಗೊಂಡ ತನ್ನ ಹೆಂಡತಿ ಚೈತ್ರಾ ಇವಳನ್ನು ಹೆಚ್ಚಿನ ಉಪಚಾರ ಕುರಿತು ದಿನಾಂಕ.25-3-2016ರಂದು ಕಲಬುರಗಿಯಿಂದ ಸೋಲಾಪೂರ ಅಶ್ವೀನಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿದ್ದು  ಅಲ್ಲಿ ಉಪಚಾರದಲ್ಲಿ ಗುಣಮುಖಳಾಗದೆ ದಿನಾಂಕ.28-3-2016 ರಂದು 11-45 ಎ.ಎಂ.ಕ್ಕೆ.ಸೋಲಾಪೂರ ಅಶ್ವೀನಿ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾಳೆ  ಕಾರಣ ಮುಂದಿನ ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಪುರವಣೆ ಹೇಳಿಕೆ ಸಾರಂಶದ ಮೇಲಿಂದ ಈಗಾಗಲೆ ವರದಿಯಾದ ನಮ್ಮ ಠಾಣೆಯ ಗುನ್ನೆ ನಂ. 94/2016 ಕಲಂ. 279,337,338 ಐಪಿಸಿ ನೆದ್ದರ  ಪ್ರಕರಣದಲ್ಲಿ ಕಲಂ. 304 (ಎ) ಐಪಿಸಿ ನೆದ್ದನ್ನು ಅಳವಡಿಸಿಕೊಂಡು ಮುಂದಿನ ಕ್ರಮ ಕೈಕೊಂಡಿದ್ದು ಇರುತ್ತದೆ.