POLICE BHAVAN KALABURAGI

POLICE BHAVAN KALABURAGI

03 June 2011

ಗುಲಬರ್ಗಾ ಜಿಲ್ಲೆ

ಕಮಲಾಪುರ ಪೊಲೀಸ್ ಠಾಣೆ

ಶ್ರೀ ಕುಪೇಂದ್ರ ತಂದೆ ಸಂಗಾಣಿ ಮಹಾಗಾಂವ ಇವರ ಮಗನಾಗ ಶರಣಬಸಪ್ಪರವರು ಕಮಲಾಪುರ ಹತ್ತಿರ ಹೋಗುತ್ತಿರುವಾಗ ಯಾವುದೋ ಕ್ರೂಜರ್ ಜೀಪ್‌ ಶರಣಬಸಪ್ಪರವರಿಗೆ ಡಿಕ್ಕಿ ಹೊಡೆದ ಪರಿಣಾಮ ಶರಣಬಸಪ್ಪ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಸ್ಟೇಷನ್ ಬಜಾರ ಪೊಲೀಸ್ ಠಾಣೆ

ಶ್ರೀ ಅಜೀತ ಕುಮಾರ ತಂದೆ ಶಾಂತಪ್ಪ ಸಿಂಧೆ ವಕೀಲರು ಮನೆ ನಂ 1-20/ಎ ಜೆಸ್ಕಾಂ ಎದರುಗಡೆ ಕೋರ್ಟ ರೋಡ ಗುಲಬರ್ಗಾ. ಇವರ ಮನೆಯಲ್ಲಿ ಆಕಸ್ಮಿಕವಾಗಿ ಟಿ.ವಿ ಯಿಂದ ವಿದ್ಯುತ್‌ ಶಾಟ್‌ ಸರ್ಕಿಟ್ ಆಗಿ ಒಟ್ಟು ಸುಮಾರು 3,00,000 ರೂ ಕಿಮ್ಮತ್ತಿನ ಮನೆಯಲ್ಲಿದ್ದ ಸಾಮಾನುಗಳು ಸುಟ್ಟು ಹಾನಿಯಾಗಿರುತ್ತವೆ. ಸ್ಟೇಷನ ಬಜಾರ ಪೊಲೀಸ ಠಾಣೆಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.