POLICE BHAVAN KALABURAGI

POLICE BHAVAN KALABURAGI

16 August 2014

Gulbarga District Reported Crimes

ಕೊಲೆ ಪ್ರಕರಣ :
ವಾಡಿ ಠಾಣೆ : ದಿನಾಂಕ 14-08-2014 ರಂದು ಬೆಳಿಗ್ಗೆ 8-30 ಗಂಟೆಗೆ ರಾಜು ತಂದೆ ಶೇಖದವಲಸಾಬ ಈತನು ಕುಂಬಾರಹಳ್ಳಿ ಗೇಟ ಹತ್ತಿರ ಕಾಯಿಪಲ್ಯ ತರುವ ಸಲೂವಾಗಿ ಹೊರಟಾಗ ಮುಂದೆ ಕುಂಬಾರಹಳ್ಳಿ ಗೇಟ ಹತ್ತಿರ ಮಯೂರ ಬಾರ ಮುಂದುಗಡೆ ಸಿದ್ದಪ್ಪಾ ಚಾಲಕ ಮತ್ತು ಸಮೀರ ತಂದೆ ಛೊಟುಮಿಯಾ ಇಬ್ಬರು ಕುಳಿತುಕೊಂಡಿದ್ದು ಸಮೀರ ಈತನು ಬಾರಲೆ ಭೊಸಡಿ ಮಗನೆ ಅಂತಾ ಕರೆದಾಗ ಆತನು ಅವನ ಹತ್ತಿರ ಹೋಗಿ ಇಂದು ನಾನು ಕೆಲಸಕ್ಕೆ ಬರುವುದಿಲ್ಲಾ ಸುಟ್ಟಿ ಮಾಡುತ್ತೆನೆ ಅಂತಾ ಹೇಳಿದಾಗ ಸಮೀರ ಈತನು ರಂಡಿ ಮಗನೆ ಹೇಗೆ ಬರುವದಿಲ್ಲಾ ಅಂತಾ ಎದೆಯ ಮೇಲೆ ಅಂಗಿ ಹಿಡಿದು ಕೈಯಿಂದ ಹೊಡೆದು ದಬ್ಬಿ ಕೊಟ್ಟಿದ್ದರಿಂದ ಆತನು ಕೆಳಗಡೆ ಬಿದ್ದಾಗ ಪರ್ಶೀ ಕಲ್ಲು ಆತನ ಬಲಗಾಲ ಹೆಬ್ಬೆಟ್ಟಿಗೆ ಹತ್ತಿ ರಕ್ತಗಾಯವಾಗಿದ್ದು ಆಗ ಜಗಳ ನೋಡಿದ ಆತನ ತಮ್ಮ ಅನೀಲ ಈತನು ಬಂದು ನಮ್ಮ ಅಣ್ಣನಿಗೆ ಯಾಕೆ ಹೊಡೆಯುತ್ತಿ ಅಂತಾ ಬಿಡಿಸಲು ಬಂದಾಗ ಭೊಸಡಿ ಮಗನೆ, ನೀನು ನಿಮ್ಮ ಅಣ್ಣನ ಮೇಲುಕಟ್ಟಿ ಬರುತ್ತಿ ಅಂತಾ ಕೈಯಿಂದ ಹೊಡೆದು ಬಲಗೈಯಿಂದ  ಅನೀಲ ಈತನ ಕುತ್ತಿಗೆ ಒತ್ತಿ ಹಿಡಿದು ಜೋರಾಗಿ ದಬ್ಬಿ ಕೊಟ್ಟಾಗ  ಆತನು ಕೇಳಗಡೆ ಬಿಳುತ್ತಿದ್ದಂತೆ  ಮತ್ತೊಮ್ಮೆ ಕುತ್ತಿಗೆ ಹಿಡಿದು ದಬ್ಬಿದಾಗ ಆತನು ಕೇಳಗಡೆ ಬಿದ್ದಾಗ ಪ್ರಭು ರಾಠೋಡ ಸಾಹೇಬಗೌಡ ಮತ್ತು ಅಮಜದಖಾನ ಬಂದು ನೊಡಿದ್ದು ಸಾಹೇಬಗೌಡ ಈತನು ಬಿಡಿಸಲು ಹೊದರೆ ಆತನಿಗೆ ಬೈದು ಅಲ್ಲಿಂದ ಓಡಿ ಹೋದನು ಆನೀಲ ಈತನಿಗೆ ಮಾತನಾಡಿಸಲು ಮಾತನಾಡಲಿಲ್ಲ ಬಲಗದ್ದದ ಹತ್ತಿರ ರಕ್ತಗಾಯವಾಗಿದ್ದು ನೋಡಲಾಗಿ ಆತನು ಮರಣ ಹೊಂದಿದ್ದು ಸಮೀರ ಈತನು ರಾಜು ಈತನ ಲಾರಿ ಖರಿದಿ ಮಾಡಿದ್ದು ಅದರ ಬಾಕಿ ಹಣ ಕೊಡಬೇಕಾಗಿದ್ದು ಕೇಳಿದರೆ ಜಗಳ ಮಾಡುತ್ತಾ ಬಂದಿದ್ದು ಅದೆ ವೈಮನಸ್ಸಿನಿಂದ ಇಂದು ರಾಜು ಈತನು ಕೆಲಸಕ್ಕೆ ಹೊಗದೆ ಇದ್ದುದ್ದರಿಂದ ಜಗಳ ತೆಗೆದು ರಾಜುಗೆ ಹೊಡೆಬಡೆಮಾಡಿದ್ದು ಜಗಳ ಬಿಡಿಸಲು ಬಂದ ಅನೀಲ ಈತನಿಗು ಬೈದು ಹೊಡೆಬಡೆಮಾಡಿ ಕುತ್ತಿಗೆಯನ್ನು ಕೈಯಿಂದ ಜೋರಾಗಿ ಒತ್ತಿ ಹಿಡಿದು ದಬ್ಬಿಕೊಟ್ಟಿದ್ದರಿಂದ ಕೇಳಗಡೆ ಬಿದ್ದು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ಮಹಿಳೆಯ ಶವ ಪತ್ತೆ :
ಕೊಂಚಾವರಂ ಠಾಣೆ : ಶ್ರೀ ಭೋಜು ತಂದೆ ಮಾನಸಿಂಗ ರಾಠೋಡ ಸಾ|| ಪೆದ್ದಾತಾಂಡಾ ಇವರು  ದಿನಾಂಕ  13.08.2014 ರಂದು 08.30 ಪಿ ಎಮ್ ಕ್ಕೆ ಬಂದು ಪೆದ್ದಾತಾಂಡಾದ ಕಾಡಿನಲ್ಲಿ ಒಂದು ಗೋಣಿ ಚೀಲದಲ್ಲಿಂದ ಏನೋ ಕೆಟ್ಟ ವಾಸನೆ ಬರುವದನ್ನು ನೋಡಿ ತಾಂಡಾದವರನ್ನು ಕರೆಯಿಸಿ ನೋಡಲಾಗಿ ನಂತರ ಕುಂಚಾವರಮ ಠಾಣೆ ಗೆ ಹೋಗಿ ಫಿರ್ಯಾದಿ  ನೀಡಿದ್ದು ಅದೇ ಸದರಿ ಕೆಟ್ಟವಾಸನೆಯು ಅಪರಿಚಿತ ಮಹಿಳೆಯದ್ದು ಇರುತ್ತದೆ. ಆ ಶವದ ಮೇಲೆ ಕೆಂಪು ಮತ್ತು ಕಪ್ಪು ಬಣ್ನದ ನೈಟಿ ಹಾಕಿದ್ದು ಇದ್ದು ಟವಲ ಕೂಡಾ ಆ ಶವದ ಮೇಲೆ ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕೊಂಚಾವರಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ  ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 15-08-2014 ರಂದು ಹಿತ್ತಲಶೀರೂರ ಗ್ರಾಮದ ಕಲ್ಮೇಶ್ವರ ಗುಡಿಯ ಹತ್ತಿರ ಬೇವಿನ ಮರದ ಕೆಳಗೆ ಸಾರ್ವಜನಿಕ ರಸ್ತೆಯಲ್ಲಿ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ನಿಂಬರ್ಗಾ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹಿತ್ತಿಲಶೀರೂರ ಗ್ರಾಮದ ಕಲ್ಮೇಶರ ದೇವರ ಗುಡಿಯ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ರಸ್ತೆಯ ಬೇವಿನ ಮರದ ಕೆಳಗೆ 09 ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ 09 ಜನರನ್ನು ಹಿಡಿದು ವಿಚಾರಿಸಿ ಚೆಕ ಮಾಡಲಾಗಿ 01. ಶಾಮಲಿಂಗ ತಂದೆ ಹಾವಣ್ಣಾ ಪೂಜಾರಿ 02. ಮಲ್ಲಿನಾಥ ತಂದೆ ಗುರುಶಾಂತಪ್ಪ ನವಲೆ ಸಾ : ಮಾಡಿಯಾಳ 03 ಶರಣಪ್ಪ ತಂದೆ ಅಂಬಾರಾಯ ಕಾಮನಕರ 04. ನಾಗಪ್ಪ ತಂದೆ ಬಸಣ್ಣ ಚಿಕಣಿ 05. ಶಿವಣ್ಣಾ ತಂದೆ ಹಾವಣ್ಣಾ ಪೂಜಾರಿ 06. ನಿಂಗಪ್ಪಾ ತಂದೆ ಚಂದ್ರಾಮ ಶಿರೂರ 07. ಅರ್ಜುನ ತಂದೆ ಸಿದ್ದಣ್ಣಾ ಮಾಡಿಯಾಳ 08. ಈರಪ್ಪಾ ತಂದೆ ರಾಮಚಂದ್ರ ಕೋಗನೂರ 09. ಶರಣಪ್ಪ ತಂದೆ ಹಾವಣ್ಣಾ ಪೂಜಾರಿ ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಒಟ್ಟು 2700/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು ಪಂಚರ ಸಮಕ್ಷಮ ಗುನ್ನೆ ಸ್ಥಳದಲ್ಲಿ ಜಪ್ತಿಪಡಿಸಿಕೊಂಡು ಮರಳಿ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ನಿಂಬರ್ಗಾ ಠಾಣೆ : ದಿನಾಂಕ 15-08-2014 ರಂದು ಮಾಡಿಯಾಳ ಗ್ರಾಮದ ಖಜ್ಜಾನ ಗೋರಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ನಿಂಬರ್ಗಾ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಡಿಯಾಳ ಗ್ರಾಮದ ಖಜ್ಜಾನ ಗೋರಿಯ ಹತ್ತಿರ  ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ರಸ್ತೆಯ ಬೇವಿನ ಮರದ ಕೆಳಗೆ 09 ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ 05 ಜನರನ್ನು ಹಿಡಿದು ವಿಚಾರಿಸಿ ಚೆಕ ಮಾಡಲಾಗಿ 01. ಶ್ರೀಮಂತ ತಂದೆ ಶಿವರಾಯ ಮಡ್ಡಿತೋಟ, 02. ಹಣಮಂತ ತಂದೆ ಯಲ್ಲಪ್ಪ ಪರಸನ 03. ಸಿದ್ದಾರಾಮ ತಂದೆ ಸುಲ್ತಾನಪ್ಪ ಮ್ಯಾಡಗೇರಿ 04. ಶಾಂತಪ್ಪ ತಂದೆ ಈರಪ್ಪಾ ಮುಂದಿನಕೇರಿ 05. ಲಕ್ಷ್ಮಿಕಾಂತ ತಂದೆ ಬಸಣ್ಣಾ ಮುಂದಿನಕೇರಿ ಸಾ|| ಎಲ್ಲರೂ ಮಾಡಿಯಾಳ ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಒಟ್ಟು 6200/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು ಪಂಚರ ಸಮಕ್ಷಮ ಗುನ್ನೆ ಸ್ಥಳದಲ್ಲಿ ಜಪ್ತಿಪಡಿಸಿಕೊಂಡು ಮರಳಿ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಿದ್ರಾಮಯ್ಯಾ ತಂದೆ ಪಡದಯ್ಯಾ ಹಿರೇಮಠ ಸಾ : ಯರನಾಳ ತಾ : ಬಸವನಬಾಗೇವಾಡಿ ಜಿಲ್ಲಾ : ಬಿಜಾಪೂರ ರವರಿಗೆ ದಿನಾಂಕ 13-08-2014 ರಂದು ರಾತ್ರಿ 10;00 ಗಂಟೆಯಿಂದ ಬೆಳಿಗ್ಗೆ 08;00 ಗಂಟೆಯ ವರೆಗೆ ಬನ್ನಟ್ಟಿ ಕ್ರಾಸ ಚಕ್ಕಪೋಸ್ಟನಲ್ಲಿ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ನಾನು ಮತ್ತು ನನ್ನೊಂದಿಗೆ ನನ್ನ ಗೆಳೆಯ ಗಿರೀಶ ತಂದೆ ಶಿವಶಂಕರ ಜಮಖಂಡಿ ಸಾ|| ಚಡಚಣ ರವರು ಕೂಡಿ 11;00 ಗಂಟೆಗೆ ಬನ್ನಟ್ಟಿ ಕ್ರಾಸ ಹತ್ತಿರ ಕರ್ತವ್ಯ ನಿರ್ವಹಿಸುತ್ತಿರುವಾಗ ಬನ್ನಟ್ಟಿ ಗ್ರಾಮ ವಿಠ್ಠಲ ಬನ್ನಟ್ಟಿ ಮತ್ತು ಪ್ರಕಾಶ ಜಮಾದಾರ ರವರು ಬಂದು ನನಗೆ ನಮ್ಮ ಮರಳಿನ ಗಾಡಿಗಳು ಬಿಡಬೆಕು ಅಂತಾ ಅಂದರು, ಆಗ ನಾನು ಮರಳಿನ ವಾಹನಗಳು ಬಂದರೆ ಅವುಗಳನ್ನು ಬಿಡುವುದಿಲ್ಲಾ ಇದು ಮೇಲಾಧಿಕಾರಿಗಳ ಆದೇಶ ಇರುತ್ತದೆ ಅಂತಾ ಹೇಳಿದೆನು. ಆಗ ಅವರಿಬ್ಬರು ನನ್ನೊಂದಿಗೆ ಬಾಯಿ ತಕರಾರು ಮಾಡಿ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಅಲ್ಲಿಂದ ಹೋದರು, ಈ ವಿಷಯವನ್ನು ನಮ್ಮ ರೆವಿನೂ ಇನ್ಸಪೆಕ್ಟರಾದ ರಾಜು ಗೋಪಣೆ ಮತ್ತು ತಹಸೀಲ್ದಾರ ಸಾಹೇಬರಿಗೆ ಫೋನ ಮುಖಾಂತರ ತಿಳಿಸಿದೆನು, ನಂತರ ನಾವು ಅಲ್ಲೆ ಇದ್ದು ಕರ್ತವ್ಯ ಮುಗಿಸಿಕೊಂಡು ಬೆಳಿಗ್ಗೆ ಮನೆಗೆ ಬಂದಿರುತ್ತೇವೆ, ನಂತರ 11;00 ಎ.ಎಂ ಕ್ಕೆ ನಾನು ಮತ್ತು ನಮ್ಮ ಸಹದ್ಯೋಗಿ ಗುರು ಹಂಡಿ ರವರು ಕೂಡಿಕೊಂಡು ತಹಸೀಲ್ದಾರ ಕಾರ್ಯಾಲಯದಲ್ಲಿ ಕರ್ತವ್ಯದ ಮೇಲೆ ಇದ್ದಾಗ ಸದರಿ ವಿಠ್ಠಲ ಬನ್ನಟ್ಟಿ ಮತ್ತು ಪ್ರಕಾಶ ಜಮಾದಾರ ರವರು ನಮ್ಮ ಹತ್ತಿರ ಬಂದು ವಿಠ್ಠಲ ಬನ್ನಟ್ಟಿ ಇವನು ನನಗೆ ಏನೋ ಸೂಳಿಮಗನಾ ನಿನ್ನೆ ನಮ್ಮ ಗಾಡಿಗಳನ್ನು ಬಿಡದೆ ಬೆರೆಯವರ ಗಾಡಿಗಳನ್ನು ಬಿಟ್ಟಿದಿ ಮಗನಾ ಅಂತಾ ಅಂದರು ಆಗ ನಾನು ನನಗ್ಯಾಕ ಬೈತಿರಿ ಅಂತಾ ಕೇಳಿದ್ದಕ್ಕೆ ಪ್ರಕಾಶ ಜಮಾದಾರ ಇವನು ನಿಮ್ಮ ತಹಸೀಲ್ದಾರ ಆಫೀಸಿನವರಿಗೆ ಬಹಳ ಸೊಕ್ಕು ಬಂದಿದೆ, ನಿಮ್ಮನ್ನ ಸುಮನೆ ಬಿಡುವುದಿಲ್ಲ. ಅಂತಾ ಅಂದು ಆಗ ಅಲ್ಲೆ ಇದ್ದ ನನ್ನ ಸಹದ್ಯೋಗಿ ಗುರು ಹಂಡಿ ಇವರು ಸುಮನೆ ಯಾಕ ಬೈತಿರಿ ಅಂತಾ ಅಂದಿದಕ್ಕೆ ಅವನಿಗು ಸಹ ಪ್ರಕಾಶ ಜಮಾದಾರ ಇವನು ಅವಾಚ್ಯ ಶಬ್ದಗಳಿಂದ ಬೈದು ಜೀವ ಭಯ ಹಾಕಿ ಅಲ್ಲಿಂದ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.