POLICE BHAVAN KALABURAGI

POLICE BHAVAN KALABURAGI

19 November 2013

Gulbarga District Reported Crimes

ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ರಾಘವೇಂದ್ರ ತಂದೆ ಹಣಮಂತಪ್ಪಾ ದೇಸಾಯಿ   ಸಾ: ಪ್ಲಾಟ ನಂ 34 ಭಗವತಿ ನಗರ ಗುಲಬರ್ಗಾ ರವರು ದಿನಾಂಕ 18-11-2013 ರಂದು ರಾತ್ರಿ 11 ಗಂಟೆಗೆ ನಾನು ಮತ್ತು ನನ್ನ ಹೆಂಡತಿ ಅಂಜಲಿ ಹಾಗೂ ಇಬ್ಬರು ಮಕ್ಕಳೊಂದಿಗೆ ಮನೆಯ ಪಡಸಾಲೆಯಲ್ಲಿ  ಮಲಗಿದ್ದು  ಇಂದು ಬೆಳಗಿನ ಜಾವ 5 ಗಂಟೆಗೆ ಎದ್ದು ನೋಡಲು ಯಾರೊ ಕಳ್ಳರು ರಾತ್ರಿ ವೇಳೆಯಲ್ಲಿ ಮನೆಯ ಹಿಂದುಗಡೆ ಅಡುಗೆ ಮನೆಯ ಬಾಗಿಲು ಕೊಂಡಿ ಮತ್ತು ಅಡ್ಡ ರಾಡ  ತೆಗೆದು ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಅಲಮಾರ ತೆರೆದು ಬಂಗಾರದ ಆಭರಣ ಹಾಗು ನಗದು ಹಣ ಹೀಗೆ ಒಟ್ಟು  76,000/- ರೂ ಮೌಲ್ಯದ ಬಂಗಾರ ಬೆಳ್ಳಿ ನಗದು ಹಣ ವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಚಿಂಚೋಳಿ ಠಾಣೆ : ಶ್ರೀ ನಾಗಪ್ಪ ತಂದೆ ನರಸಪ್ಪ  ಮಡಿವಾಳ ಸಾ|| ಸಿರಸಿ (ಎ) ತಾ|| ಜೀ|| ಬೀದರ ರವರು ದಿನಾಂಕ, 18.11.2013 ರಂದು ಸಾಯಾಂಕಾಲ 06.00 ಗಂಟೆಯ ಸುಮಾರಿಗೆ ನಮ್ಮೂರಿನಿಂದ ಪಟಪಳ್ಳಿ ಗ್ರಾದಲ್ಲಿರುವ ಮ್ಮ ಅತ್ತೆ-ಮಾವರ ಮನೆಗೆ ಬಂದು ನನ್ನ ಹೆಂಡತಿಯನ್ನು ಇವತತ್ಉ ಕರೆದುಕೊಂಡು ಹೋಗುತ್ತೆನೆ ಅಂತಾ ಹೇಳಿದ್ದು  ನನ್ನ ಅತ್ತೆ ಮತ್ತು ಮಾವ ಇಬ್ಬರೂ ಇನ್ನೂ 2-3 ದಿವಸಗಳವರೆಗೆ ಇಲ್ಲೇ ಇರಲಿ ಅವಳಿಗೆ ಕರೆದುಕೊಂಡು ಹೋಗಬೇಡ ನಾವು ಕಳುಹಿಸಿಕೊಡುವುದಿಲ್ಲಾ ಅಂತಾ ಹೇಳಿದ್ದು ನಾನು ನಮ್ಮ ಅತ್ತೆ ಮಾವರ ಮನೆಯ ಪಕ್ಕದಲ್ಲಿರುವ ಶ್ರೀ ನಾಗಪ್ಪ ತಂಧೆ ಭಿಮಶಾ ಎಂಬುವವರ ಮನೆಯಂಗಳದಲ್ಲಿ ಅವರೋಂದಿಗೆ ಮಾತಾನಾಡುತ್ತಾ ನಿಂತಿದ್ದೆನು ಆಗ ನನ್ನ ಹೆಂಡತಿಯಾದ ದ್ರೌಪದಿ, ಮಾವನಾದ ಸುಭಾಸ ,ಅತ್ತೆಯಾದ ಪದ್ಮಾವತಿ ಮತ್ತು ಭಾವ –ಮೈದುನನಾದ ಸೂರ್ಯಕಾಂತ ನಾಲ್ಕುಜನರು ಕೂಡಿಕೊಂಡು ಬಂದವರೆ  ಏ ರಂಡಿ ಸೂಳಿ ಮಗನೇ ಇನ್ನೂ 2-3 ದಿವಸಗಳ ನಂತರ ಕರೆದುಕೊಂಡು ಹೋಗು ಅಂತಾ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೊಡಲಿ ಮತ್ತು ಕಲ್ಲಿನಿಂದ ನನ್ನ ತಲೆಗೆ ಹೋಡೆದು ಭಾರಿ ಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Gulbarga District Reported Crimes

ಇಸ್ಪೀಟ ಜುಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಕಮಲಾಪೂರ ಠಾಣೆ : ದಿನಾಂಕ: 18-11-2013 ರಂದು 15-00 ಗಂಟೆ ಸುಮಾರಿಗೆ ಪಟವಾದ ಗ್ರಾಮದ ಸಿದ್ದಪ್ಪಾ ರಮಾ ಇವರ ಮನೆ ಮುಂದೆ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹಾರ ಇಸ್ಪೀಟ ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಭಾತ್ಮಿ ಮೇರೆಗೆ ಪಂಚರು ಮತ್ತು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಿ ದಾಳಿ ಮಾಡಿ 1ಸಿದ್ದಪ್ಪಾ ತಂದೆ ಕಾಶಪ್ಪಾ ರಮಾ 2ರಾಜಶೇಖರ ತಂದೆ ಶಿವರಾಜ ತಡೋಳಿ 3ರವಿ ತಂದೆ ಸಂಗಪ್ಪಾ ಬೆಂಕಿ 4. ಸಂಜೀವಕುಮಾರ ತಂದೆ ಸುಭಾಶ ತಡೋಳಿ 5.. ತುಕಾರಾಮ ತಂದೆ ಪುಂಡಲೀಕ ಉಪ್ಪಾರ 6.ಮಾಣಿಕ ತಂದೆ ಕಾಸು ಚವ್ಹಾಣ 7. ರವಿ ತಂದೆ ಹಣಮಂತ ಜಮಾದಾರ 8. ಬಸವರಾಜ ತಂದೆ ರಾಜಪ್ಪಾ ರಮಾ 9. ಶಿವಪುತ್ರ ತಂದೆ ಮಡಿವಾಳಪ್ಪಾ ಹುಡಗಿ 10.. ತುಕರಾಮ ತಂದೆ ಚಂದ್ರು ಚವ್ಹಾಣ 11. ರವಿ ತಂದೆ ಶಿವರಾಜ ರಮಾ 12. ಅನೀಲ ತಂದೆ ಮಾನಶೆಟ್ಟಿ ಸಾಃ ಎಲ್ಲರು ಪಟವಾದ ತಾ:ಜಿ: ಗುಲಬರ್ಗಾ ರವರನ್ನು ದಸ್ತಗೀರ ಂಆಡಿ ಸದರಿಯವರಿಂದ  24,450-00 ರೂ. ಮತ್ತು 52 ಇಸ್ಪೇಟ ಎಲೆಗಳನ್ನು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಜಪ್ತಿ ಪಡಿಸಿಕೊಂಡು. ನಂತರ ಜಪ್ತ ಪಂಚನಾಮೆಯೊಂದಿಗೆ, ಎಲ್ಲಾ 12 ಜನ ಆರೋಪಿತರೊಂದಿಗೆ ಟಾಣೆಎ ಬಂದು ಸದರಿಯವರ ವಿರುದ್ಧ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ
ಅಪಘಾತ ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಶ್ರೀ.ರಾಮಣ್ಣಾಗೌಡ ತಂದೆ ಶಿವಣ್ಣಾಗೌಡ ಪಾಟೀಲ ಸಾಃ ಧಂಗಾಪೂರ ತಾ:ಆಳಂದ.ಇವರು ನಾನು ಮತ್ತು ನಮ್ಮೂರ ಬಾಬು ತಂದೆ ಲಕ್ಕು ಮಾಂಗ ಇಬ್ಬರೂ ನನ್ನ ಮೋಟರ್ ಸೈಕಲ್ ನಂ: KA:32 EA:2988 ನೇದ್ದರ ಮೇಲೆ ಕುಳಿತುಕೊಂಡು ಧಂಗಾಪೂರದಿಂದ-ಮಾದನ ಹಿಪ್ಪರಗಾಕ್ಕೆ ಬರುತ್ತಿರುವಾಗ ದಿನಾಂಕ 18-11-2013 ರಂದು 12:30 ಗಂಟೆಗೆ ಮಾದನ ಹಿಪ್ಪರಗಾ KEB ಕ್ರಾಸ್ ಹತ್ತಿರ ರಸ್ತೆಯಲ್ಲಿ ಬರುತ್ತಿರುವಾಗ ಎದುರಿನಿಂದ ಸೀಲ್ವರ್ ಕಲರ್ ಗಾಮಾ ವಾಹನ ನಂ:MH:45 F-428 ನೇದ್ದರ ಚಾಲಕನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟರ್ ಸೈಕಲ್ ನಂ:KA:32 EA:2988 ನೇದ್ದಕ್ಕೆ ಡಿಕ್ಕಿಪಡಿಸಿ ವಾಹನ ನಿಲ್ಲಿಸದೆ ವಾಹನ ತಗೆದುಕೊಂಡು ಹೋಗಿರುತ್ತಾನೆ.ನನ್ನ ಮೋಟರ್ ಸೈಕಲ್ ಹಿಂದಿನ ಸೀಟಿನಲ್ಲಿ ಕುಳಿತ ಬಾಬು ಮಾಂಗ ರವರಿಗೆ ಬಲಕಾಲಿನ ಮೊಳಕಾಲ ಕೇಳಗೆ ಬಾರಿ ರಕ್ತಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.