POLICE BHAVAN KALABURAGI

POLICE BHAVAN KALABURAGI

25 July 2019

KALABURAGI DISTRICT REPORTED CRIMES

ಅಪಹರಣ ಮಾಡಿಕೊಂಡು ಹೋಗಿ ಅತ್ಯಾಚಾರವೆಸಗಿದ ಪ್ರಕರಣ :
ನರೋಣಾ ಠಾಣೆ : ದಿನಾಂಕ:17/07/2019 ರಂದು ಮಧ್ಯಾಹ್ನ 1-00 ಗಂಟೆಗೆ ಶಾಲೆಯಿಂದ ಮನೆಗೆ ಬಂದು ಮನೆಯಲ್ಲಿ ಊಟಮಾಡಿಕೊಂಡು ವಾಪಸ್ಸು 2-00 ಪಿ.ಎಂ ಗಂಟೆಗೆ ಶಾಲೆಗೆ ಹೋಗುವುದಾಗಿ ಹೇಳಿ ಹೋಗಿರುತ್ತಾಳೆ. ಸಾಯಂಕಾಲ 5-00 ಗಂಟೆಗೆ ಶಾಲೆಯಿಂದ ವಾಪಸ್ಸು ಮನೆಗೆ ಬರಬೇಕಾಗಿದ್ದು, ಸದರಿಯವಳು ಮನೆಗೆ ಬಂದಿರುವುದಿಲ್ಲ. ಮನೆಗೆ ಬರದೆ ಇದ್ದುದ್ದರಿಂದ ನಾನು ಮತ್ತು ನನ್ನ ಹೆಂಡತಿ ನನ್ನ ಮಗ ಎಲ್ಲರೂ ಸೇರಿ ನಮ್ಮೂರು ಪ್ರೌಢ ಶಾಲೆಯ ಹತ್ತಿರ ಹೋಗಿ ಶಾಲಾ ಮುಖ್ಯಾಉಪಾಧ್ಯಯರಿಗೆ ಹಾಗೂ ಶಿಕ್ಷಕರಿಗೆ ವಿಚಾರಿಸಿದಾಗ ಮಧ್ಯಾಹ್ನದ ಶಾಲೆಗೆ ಬಂದಿರುವುದಿಲ್ಲ ಅಂತಾ ತಿಳಿಸಿರುತ್ತಾರೆ. ನಾವೆಲ್ಲರೂ ಗಾಭರಿಯಾಗಿ ಊರ ತುಂಬ ಹುಡುಕಾಡುವಾಗ ನಮ್ಮ ಅಣತಮಕಿಯವರಾದ ತಾನು ಚಿಂಚನಸೂರ ದಿಂದ ಊರಿಗೆ ಬರುವಾಗ ಮಧ್ಯಾಹ್ನ 2-30 ಗಂಟೆ ಸುಮರಿಗೆ ಸಂಗೋಳಗಿ(ಸಿ) ಕ್ರಾಸ್ ಹತ್ತಿರ ಇದ್ದಾಗ ನಮ್ಮೂರಿನ ಸಚಿನ ತಂದೆ ಮರೇಪ್ಪಾ ಮದನಕರ ಇತನು ತನ್ನ ಮೊಟಾರ್ ಸೈಕಲ್ ಮೇಲೆ ನಿಮ್ಮ ಮಗಳಿಗೆ ಕೂಡಿಸಿಕೊಂಡು ನರೋಣಾ ಗ್ರಾಮದ ಕಡೆಗೆ ಹೋಗಿರುತ್ತಾನೆ ಅಂತಾ ತಿಳಿಸಿದ್ದು ನಾವು ಸಚಿನನ ಮನೆಗೆ ಹೋಗಿ ಸಚಿನನ ಆಯಿಯಾದ ಮಲ್ಲಮ್ಮ ಗಂಡ ಹುಸನಪ್ಪಾ ಮದನಕರ, ಸಚಿನನ ತಾಯಿಯಾದ ಗಂಗಮ್ಮ ಗಂಡ ಮರೇಪ್ಪಾ ಮದನಕರ, ಸಚಿನನ ಸೋದರಮಾವನ ಹೆಂಡತಿಯಾದ ಸುಜಾತಾ ಗಂಡ ಸಂಜುಕುಮಾರ ಮದನಕರ ಇವರಿಗೆ ವಿಚಾರಿಸಿದಾಗ ಅವರೆಲ್ಲರೂ ಸೇರಿ ಇದರ ಬಗ್ಗೆ ನಮಗೆ ಏನು ಗೊತ್ತಿಲ್ಲಾ ಅಂತಾ ತಿಳಿಸಿರುತ್ತಾರೆ. ಅವರೂ ಕೂಡ ಆತನ ಮೊಬೈಲಗೆ ಕರೆಮಾಡಿ ವಿಚಾರಿಸಲು ಪ್ರಯತ್ನಿಸಿದ್ದು ಆತನು ತನ್ನ ಮೊಬೈಲ್ ಬಂದ ಇಟ್ಟಿರುತ್ತಾನೆ. ನಾವು ಕೂಡ ಆತನ ಮೊಬೈಲ್ ನಂಬರ್ ಪಡೆದುಕೊಂಡು ಆತನಿಗೆ ಸಂಪರ್ಕಿಸಲು ಪ್ರಯತ್ನಿಸಿದ್ದು. ಸದರಿಯವನು ಫೋನ್ ಬಂದ ಮಾಡಿ ಇಟ್ಟಿರುತ್ತಾನೆ.  ಸಚಿನನ ಸ್ವಂತೂರು ಚಿಂಚನಸೂರ ಗ್ರಾಮ ಇದ್ದು, ಕಳೆದ ಒಂದು ತಿಂಗಳಿಂದ ಸಚಿನ ಹಾಗೂ ಆತನ ಕುಟುಂಬದವರು ನಮ್ಮೂರಿನಲ್ಲಿ ಬಂದು ವಾಸವಾಗಿರುತ್ತಾರೆ. ಸಚಿನನು ನನ್ನ ಅಪ್ರಾಪ್ತ ವಯಸ್ಸಿನ ಮಗಳಾದ ಕುಮಾರಿ  ಇವಳಿಗೆ ಯಾವುದೋ ದುರುದ್ದೇಶದಿಂದ ದಿನಾಂಕ:17/07/2019 ರಂದು ಮಧ್ಯಾಹ್ನ 2-30 ಗಂಟೆ ಸುಮಾರಿಗೆ ತನ್ನ ಮೊಟಾರ್ ಸೈಕಲ್ ನಂ ಕೆಎ32 ಇಬಿ 4474  ನೇದ್ದರ ಮೇಲೆ ಅಪಹರಣ ಮಾಡಿಕೊಂಡು ಹೋದ ಬಗ್ಗೆ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ನಂತರ ಸದರಿ ಪ್ರಕರಣದ ತನಿಕೆ ಮುಂದುವರೆಯಿಸಿ ಅಪಹರಣವಾದ ಕುಮಾರಿ ಇವರು ದಿನಾಂಕ ;24/07/2019 ರಂದು ಠಾಣೆಗೆ ಹಾಜರಾಗಿದ್ದು ಸದರಿಯವಳಿಗೆ ವಿಚಾರಿಸಲಾಗಿ ತನಗೆ ಒತ್ತಾಯ ಪೂರ್ವಕವಾಗಿ ಅಪಹರಣ ಮಾಡಿಕೊಂಡು ಹೋಗಿ ಜಭರಿ ಸಂಭೋಗ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಚಿಂಚೋಳಿ ಠಾಣೆ : ಶ್ರೀ ಧರ್ಮರಾಜ ತಂದೆ ಭೀಮಶೆಟ್ಟಿ ಗೌನಳ್ಳಿ ಸಾ|| ಐನೋಳ್ಳಿ ಗ್ರಾಮ ತಾ|| ಚಿಂಚೋಳಿ ರವರು ಹೆಣ್ಣು ಮಗಳ ಮದುವೆಗೆಂದು 1,50,000 /- ರೂ. ಗಳನ್ನೂ ನನ್ನ ಮನೆಯಲ್ಲಿರುವ ಅಲ್ಮಾರಿಯಲ್ಲಿ ಜೋಪಾನವಾಗಿಇಟ್ಟಿದ್ದೆನು. ನನಗೆ, ಆರಾಮ ವಿರದ ಕಾರಣ ದಿನಾಂಕ 27.06.2019 ರಂದುನಾನು, ಬೆಂಗಳೂರಿಗೆ ಹೋಗಿದ್ದೆನು. ನಾನು, ಊರಲ್ಲಿ ಇರದ ಸಮಯನೋಡಿಕೊಂಡು ದಿನಾಂಕ 16.07.2019 ರಂದು ರಾತ್ರಿ 00.20 .ಎಂ.ಕ್ಕೆ ನನ್ನ ಮಗನಾದ ಉದಯಕುಮಾರವ ಈತನು ಬೀದರನಿಂದ ಐನೋಳ್ಳಿ ಗ್ರಾಮದಲ್ಲಿರುವ ನಮ್ಮ ಮನೆಗೆ ಬಂದು,ಮೇಲ್ ಅಂತಸ್ತಿನ ಕೋಣೆಯ ಬಾಗಿಲಿಗೆ ಹಾಕಿದ ಕೀಲಿಯನ್ನೂ ಮುರಿದು, ಒಳಗೆಹೋಗಿ, ಅಲ್ಮಾರಿಯನ್ನು ಮುರಿದು, ನನ್ನಮಗಳಮದುವೆಗೆಂದುಜೋಪಾನವಾಗಿಟ್ಟಿರುವ ಒಟ್ಟು 1,50,000 ರೂ. ಗಳನ್ನು ಕಳವುಮಾಡಿಕೊಂಡು ಹೋಗಿರುತ್ತಾನೆ. ಅವನು ಕಳುವುಮಾಡಿಕೊಂಡು ಹೋಗುವುದನ್ನು ನನ್ನ ಹೆಂಡತಿಯಾದ ಶ್ರೀಮತಿ ಪಾರ್ವತಿ ಇವರು ನೋಡಿರುತ್ತಾರೆ .ಅದೇ ರಾತ್ರಿ ಫೋನ ಮಾಡಿ ನನ್ನ ಹೆಂಡತಿಯು ವಿಷಯವನ್ನು ತಿಳಿಸಿದಳು. ಮರುದಿವಸ ದಿನಾಂಕ 18.07.2019 ರ ಬೆಳಿಗ್ಗೆ ಬೆಂಗಳೂರಿನಿಂದ ಐನೊಳ್ಳಿ ಗ್ರಾಮದಲ್ಲಿರುವ ನಮ್ಮ ಮನೆಗೆ ಬಂದು ನೋಡಲು, ನನ್ನಮಗನು, ನನ್ನ ಮನೆಯ ಬಾಗಿಲುಕೀಲಿಯನ್ನು ಮುರಿದು, ಒಳಗೆ ಹೋಗಿ ಅಲ್ಮಾರಿ ಮುರಿದು, ಅದರಲ್ಲಿದ್ದ ಒಟ್ಟು 1,50,000 /- ರೂ. ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯ ಗುನ್ನೆ ನಂಬರ 84/2019 ಕಲಂ 457, 380 .ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ,