POLICE BHAVAN KALABURAGI

POLICE BHAVAN KALABURAGI

20 February 2017

Kalaburagi District Reported Crimes.


ರೇವೂರ ಠಾಣೆ : ಶಿವಾನಂದ ತಂದೆ ಭಿಮರಾಯ ಬಂಡಾರಿ ವಯಃ 42 ಜಾಃ ಅಗಸರ  ಉಃ ಇಸ್ತ್ರಿ ಹೊಡೆಯುವ ಕೆಲಸ ಸಾಃಸ್ಟೇಷನಗಾಣಗಾಪೂರ ಇವರು ಇಂದು ದಿನಾಂಕಃ 19-02-2017  ರಂದು 11-30  ಎ.ಎಮ್.ಕ್ಕೆ  ಠಾಣೆಗೆ  ಹಾಜರಾಗಿ  ನೀಡಿದ ದೂರೆನೆಂದರೆ ಸ್ಟೇಷನಗಾಣಗಾಪೂರದ ಬಸ್ಸ್  ನಿಲ್ದಾಣದಿಂದ ರೈಲ್ವೆ ಸ್ಟೇಷನ ಕಡೆಗೆ ಹೋಗುವ  ರಸ್ತೆಯ  ಬಲಬದಿ ನನ್ನ  ಜಾಗದಲ್ಲಿ ನಾನು ಇಸ್ತ್ರಿ ಹೊಡೆಯುವ ಅಂಗಡಿ ಹಾಗೂ ಪಕ್ಕದಲ್ಲಿ ನನ್ನ ಹೆಂಡತಿಯು ಲೇಡಿಸ್ ಸ್ಟೋರ ಅಂಗಡಿ ಇಟ್ಟುಕೊಂಡು ಕೆಲಸ ಮಾಡಿಕೊಂಡು ಇಬ್ಬರೂ ಗಂಡು & ಇಬ್ಬರೂ ಹೆಣ್ಣು ಮಕ್ಕಳೊಂದಿಗ ಉಪಜೀವನ ಸಾಗಿಸುತ್ತಿದ್ದೇನೆ.ಎಂದಿನಂತೆ ನಿನ್ನೆ  ದಿನಾಂಕಃ19/02/2017 ರಂದು  ಸಾಯಂಕಾಲ 6-00 ಪಿಎಂ ಕ್ಕೆ ನನ್ನ ಹೆಂಡತಿಯು ಲೇಡಿಸ್ ಸ್ಟೋರನ್ನು ಮುಚ್ಚಿಕೊಂಡು ಮನೆಗೆ ಹೋಗಿರುತ್ತಾಳೆ, ನಾನು ರಾತ್ರಿ 9-30 ಪಿ.ಎಂ ವರೆಗೆ ಬಟ್ಟೆ ಇಸ್ತ್ರಿ ಹೊಡೆದು ಎಲ್ಲಾ  ಬಟ್ಟೆಗಳನ್ನು ಅಂಗಡಿಯಲಿಟ್ಟು  10-00 ಪಿ.ಎಮ್ ಕ್ಕೆ ಅಂಗಡಿ ಮುಚ್ಚಿಕೊಂಡು ಮನೆಗೆ ಹೋಗಿ ಮನೆಯಲ್ಲಿ ಎಲ್ಲರೂ ಊಟ  ಮಾಡಿ ಮಲಗಿರುತ್ತೇವೆ. ಹಿಗಿದ್ದು. ಇಂದು ದಿಃ19/02/2017 ರಂದು 1-30 ಎಎಂ ಕ್ಕೆ ನಮ್ಮ ಅಂಗಡಿ ಪಕ್ಕದ ಮನೆಯವರಾದ ಶ್ರೀ  ಜ್ಯೋತಿಬಾ ತಂದೆ ಸುಭಾಷ ಭೋಸ್ಲೆ ರವರು ನಮ್ಮ ಮನೆಗೆ ಬಂದು ನಮಗೆ ಎಬ್ಬಿಸಿ ನಿಮ್ಮ ಇಸ್ತ್ರಿ ಅಂಗಡಿಗೆ ಬೆಂಕಿ ಬಿದಿದ್ದೆ ಅಂತಾ ಹೇಳಿದಾಗ ನಾನು ನನ್ನ ಹೆಂಡತಿ ಹೋಗಿ ನೋಡಲು ನನ್ನ ಇಸ್ತ್ರಿ ಅಂಗಡಿಗೆ ಬೆಂಕಿ ಬಿದ್ದು ಉರಿಯುತಿತ್ತು. ಆಗ ನಾನು, ನನ್ನ ಹೆಂಡತಿ ಮತ್ತು  ಜ್ಯೋತಿಬಾ ಭೋಸ್ಲೆ, ಹಾಗೂ ಅವರ  ತಂದೆಯವರಾದ ಸುಭಾಷ ಭೋಸ್ಲೆ  ಮತ್ತು ಸಾಗರ ತಂದೆ ಸುಧಾಕರ ಗಲಾಂಡೆ, ಶರಣು ತಂದೆ ವಿಠಲ ಹೂಗಾರ ಎಲ್ಲರೂ ಕೂಡಿಕೊಂಡಿ ಬೆಂಕಿಯನ್ನು ಆರಿಸಿರುತ್ತೇವೆ.  ನಾನು  ಇಂದು ಮುಂಜಾನೆ ಬೆಳಕಿನಲ್ಲಿ ನೋಡಲು ಮೀಟರ ಹತ್ತಿರ ವಿದ್ಯುತ್ ಶಾರ್ಟ ಸೆರ್ಕ್ಯೂಟಾಗಿ  ಅಂಗಡಿಗೆ  ಬೆಂಕಿ ಹತ್ತಿದ್ದು.  ಇದರಿಂದ ನಾನು  ನನ್ನ ಇಸ್ತ್ರಿ ಅಂಗಡಿಯಲ್ಲಿದ್ದ 1) ಇಸ್ತ್ರಿ ಹೊಡೆಯಲು ಜನರು ತಂದು  ಕೊಟ್ಟಿದ್ದ 10 ಮಡಿ ಸೀರೆಗಳು ಅಂ|| ಕಿ|| 30,000 2) ಇಸ್ತ್ರಿ ಹೊಡೆಯಲು ಜನರು ತಂದು ಕೊಟ್ಟಿದ್ದ 280 ಜೊತೆ ಪ್ಯಾಂಟ- ಶರ್ಟಗಳು ಅಂದಾಜು ಕಿ|| 2,00,000 3) ಎರಡು ಸೋಕೆಸ್ ಟೇಬಲ್ ಅಂ||ಕಿ|| 10,000 4) ಎರಡು ಪ್ಲಾಸ್ಟಿಕ  ಕುರ್ಚಿಗಳು ಅಂ||ಕಿ|| 1000 5)  1000 ಮೌಲ್ಯದ  ಹ್ಯಾಂಗರ  ಒಟ್ಟು 2,42,000 ರೂ ಮೌಲ್ಯದ ವಸ್ತುಗಳು ಸುಟ್ಟಿರುತ್ತವೆ. ಹಾಗೂ ಬೆಂಕಿಯೂ ಚಿಕ್ಕ ಕಿಟಕಿಯ ಮೂಲಕ ನನ್ನ ಅಂಗಡಿಯ ಪಕ್ಕದಲ್ಲಿರುವ ನನ್ನ ಹೆಂಡತಿಯ ಲೇಡಿಸ್ ಸ್ಟೋರಗೆ ಬೆಂಕಿ ಹೋಗಿ, ಲೇಡಿಸ್ ಸ್ಟೋರನಲ್ಲಿದ್ದ ಗಿಫ್ಟ್ಸಾಮಗ್ರಿಗಳು, ಊಲನ ಬಾಗಿಲ ಪರದಾ, ವಾಲ್ ಪಿಸ್ಗಳು, ಮೇಹೆಂದಿ ಪಾಕೇಟ ಮುಂತಾದ 30,000 ರೂ ಮೌಲ್ಯ ವಸ್ತುಗಳು ಬೆಂಕಿಯ ಶಾಕಕೆ ಹಾಳಾಗಿರುತ್ತವೆ. ಹೀಗೆ ಒಟ್ಟು 2,72,000 ರೂ ಮೌಲ್ಯದ  ವಸ್ತಗಳು ಸುಟ್ಟು  ನನಗೆ  ನಷ್ಟವಾಗಿರುತ್ತದೆ ಅಂತ ವರದಿ.
 ¥sÀgÀºÀvÁ¨ÁzÀ ಠಾಣೆ : 18/2/17 gÀAzÀÄ ¸ÁAiÀÄAPÁ® 6:30 UÀAmÉUÉ ¦AiÀiÁ𢠺ÁUÀÆ CªÀgÀ ¸ÀA§A ¢PÀgÀÄ vÀªÀÄä ºÉÆ®zÀ PÉ®¸À ªÀÄÄV¹ PÉÆAqÀÄ vÀªÀÄä JwÛ£À §ArAiÀÄ°è HjUÉ J£ïºÉZï 218 £ÉÃzÀÝgÀ ¸ÀgÀqÀV(©) PÁæ¸À ºÀwÛgÀ EgÀĪÀ ¥ÉmÉÆæî ¥ÀA¥À ºÀwÛgÀ §gÀÄwÛgÀĪÁUÀ »A¢¤AzÀ §AzÀ PÁgÀ ZÁ®PÀ£ÀÄ vÀ£Àß PÁgÀ£ÀÄß CwêÉÃUÀªÁV C®PÀëvÀ£À¢AzÀ ZÀ¯Á¬Ä¹ PÉÆAqÀÄ §AzÀÄ rQÌ ¥ÀqɬĹzÀÝjAzÀ JwÛ£À §ArAiÀÄ °èzÀ ¦AiÀiÁ𢠺ÁUÀÆ EvÀgÀgÀÄ gÉÆÃqÀ ªÉÄî ©zÀÄÝ ¸ÁzÁ ºÁUÀÆ ¨ÁjUÁAiÀÄ UÉÆArzÀÄÝ ¸ÀzÀj PÁgÀ ZÁ®PÀ vÀ£Àß PÁgÀ£ÀÄß ¤°è¹zÉ Nr¹PÉÆAqÀÄ ºÉÆÃVzÀÄÝ CAvÁ ಪ್ರಕರ ವರದಿಯಾದ ಬಗ್ಗೆ.
ಅಪಜಲಪೋರ್ ಠಾಣೆ :  ದಿನಾಂಕ 19-02-2017 ರಂದು 4.10 ಪಿಎಮ್ ಕ್ಕೆ ನಮ್ಮ ಠಾಣೆಯ ಚಂದ್ರಕಾಂತ ಸಿಹೆಚ್ ಸಿ-449 ರವರು ಒಬ್ಬ ಆರೋಪಿತನೊಂದಿಗೆ ಠಾಣೆಗೆ ಬಂದು ವರದಿ ಕೊಟ್ಟಿದ್ದು, ಸದರಿ ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ 19-02-2017 ರಂದು 3:30 ಪಿ ಎಮ್ ಕ್ಕೆ ತಮ್ಮ ಆದೇಶದಂತೆ ಅಫಜಲಪೂರ ಪಟ್ಟಣದಲ್ಲಿ ಪೆಟ್ರೊಲಿಂಗ ಕರ್ತವ್ಯ ಹಾಗೂ ಗುಪ್ತ ಮಾಹಿತಿ ಸಗ್ರಹಿಸಲು ಠಾಣೆಯಿಂದ ಹೊರಟು, ಪೆಟ್ರೊಲಿಂಗ ಮಾಡುತ್ತಾ ಅಫಜಲಪೂರ ಪಟ್ಟಣದ ಅಫ್ಜಲಖಾನ್ ಚೌಕ ಹತ್ತಿರ 4.00 ಪಿಎಮ್ ಕ್ಕೆ ಹೋದಾಗ, ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಅಲಿಂದ ಹೋಗಿ ಬರುವ ಜನರಿಗೆ ಅವಾಚ್ಯವಾಗಿ ಬೈಯುವುದು ಅಸಬ್ಯ ರೀತಿಯಿಂದ ವರ್ತಿಸುವುದು ಹಾಗೂ ಒದರಾಡುವುದು – ಕೂಗಾಡುವುದು ಮಾಡಿ ಸಾರ್ವಜನಿಕರ ಶಾಂತಿ ಭಂಗವಾಗುವಂತೆ ವರ್ತಿಸುತ್ತಿದ್ದನು. ಹಾಗೂ ಸದರಿಯವನು ಅಲ್ಲಿ ತಿರುಗಾಡುವ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಕೊಟ್ಟು ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ಉಂಟು ಮಾಡುತ್ತಿದ್ದನು. ಮತ್ತು ತನ್ನ ಬಟ್ಟೆಗಳನ್ನು ಬಿಚ್ಚಿಕೊಳ್ಳುತ್ತಾ ಅಸಬ್ಯವಾಗಿ ವರ್ತಿಸುತ್ತಿದ್ದನು, ಸದರಿಯವನು ಸಾರ್ವಜನಿಕರ ಶಾಂತಿ ಭಂಗವನ್ನುಂಟು ಮಾಡುತ್ತಿದ್ದರಿಂದ, ಸದರಿಯವನನ್ನು ನಾನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಸಾದಿಕ್ ತಂದೆ ಸೈಯದ ಯುಸುಫ್ ಮಕಂದಾರ ವ||30 ವರ್ಷ ಉ||ಬೇಕರಿ ಕೆಲಸ ಸಾ||ನಿಚೆಗಲ್ಲಿ ಅಫಜಲಪೂರ ಅಂತ ಏರು ಧ್ವನಿಯಲ್ಲಿ ಹೇಳಿದನು. ಸದರಿಯವನನ್ನು ಅದೇ ಸ್ಥಳದಲ್ಲಿ ಬಿಟ್ಟಲ್ಲಿ ಪು:ನ ಸಾರ್ವಜನಿಕರ ಶಾಂತಿ ಭಂಗವುಂಟು ಮಾಡುತ್ತಿದ್ದರಿಂದ ಹಾಗೂ ಪಟ್ಟಣದ ಜನರಿಗೆ ತೊಂದರೆಯಾಗುತ್ತಿದ್ದರಿಂದ ಮತ್ತು ಸದರಿಯವನಿಂದ ಪಟ್ಟಣದಲ್ಲಿ ಅಹಿತಕರ ಘಟನೆಗಳು ಜರುಗುವ ಸಂಭವ ಇರುವುದರಿಂದ ಸದರಿಯವನನ್ನು ಹಿಡಿದುಕೊಂಡು ಠಾಣೆಗೆ 4.10 ಪಿ.ಎಂ ಕ್ಕೆ ಬಂದು ಸದರಿಯವನ ವಿರುದ್ದ ಮಾನ್ಯರವರು ಮುಂದಿನ ಕ್ರಮ ಕೈಕೊಳ್ಳಬೇಕು ಅಂತ ಸಲ್ಲಿಸಿದ್ದ ವರದಿ ಸಾರಂಶದ ಮೇಲಿಂದ ಪ್ರಕಾರ ಪ್ರಕರ ವರದಿಯಾದ ಬಗ್ಗೆ.