POLICE BHAVAN KALABURAGI

POLICE BHAVAN KALABURAGI

31 May 2016

Kalaburagi District Reported Crimes

ಅಪಹರಿಸಿ ಅತ್ಯಾಚಾರವೇಸಗಿದ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ:-08-05-2016 ರಂದು ಸಂಜೆ 08-30 ಗಂಟೆ ಸುಮಾರಿಗೆ ಫಿರ್ಯಾದಿ ಅಪ್ರಾಪ್ತ ಮಗಳು ತನ್ನ ಮನೆಯ ಮುಂದೆ ನಿಂತಾಗ ಗಂಗಾನಗರದ ನಿವಾಸಿಯಾದ 1) ನಾರಾಯಣ ಮತ್ತು ಅವಳ ತಾಯಿಯಾದ 2) ವಿಮಲಾಬಾಯಿ ಇಬ್ಬರು ಕೂಡಿಕೊಂಡು ಫಿರ್ಯಾದಿ ಮಗಳಿಗೆ ಬಜರದಸ್ತಯಿಂದ ಒತ್ತಾಯಪೂರ್ವಕವಾಗಿ ಬಾಯಿ ಒತ್ತಿ ಹಿಡಿದು ಮೋಟಾರ ಸೈಕಲದ ಮೇಲೆ ಕೂಡಿಸಿಕೊಂಡು ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದು:ಖಾಪತಗೊಂಡ ನನ್ನ ಮಗಳು ದಿನಾಂಕ:- 08-05-2016ರಂದು ರಾತ್ರಿ 08-30 ಗಂಟೆ ಸುಮಾರಿಗೆ ನೀರು ತುಂಬಲು ಬಂದಾಗ ಆರೋಪಿತರಾದ 1) ನಾರಾಯಣ ಮತ್ತು 2) ವಿಮಲಾಬಾಯಿ ಇವರು ಜಬರದಸ್ತಯಿಂದ ಅಪಹರಿಸಿಕೊಂಡು ಹೋಗಿ ಕೇಂದ್ರ ಬಸ ನಿಲ್ದಾಣದಿಂದ ಭಯ ಹಾಕಿ ಪೂನಾ ಪಟ್ಟಣಕ್ಕೆ ಕರೆದುಕೊಂಡು ಹೋಗಿ ಯಾವುದೋ ಒಂದು ರೂಮಿನಲ್ಲಿ ಅಕ್ರಮವಾಗಿ ಇಟ್ಟು ದಿನಾಲು ಹಗಲು ಮತ್ತು ರಾತ್ರಿ ಅನ್ನದೇ ಅತ್ಯಾಚಾರ ಮತ್ತು ಹಟಸಂಭೋಗವೆಸಗಿರುತ್ತಾನೆ ಅಂತಾ ಹೇಳಿಕೆ ಕೊಟ್ಟಿದ್ದರ ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡೆತಡೆ ಮಾಡಿ ಜಾತಿನಿಂದನೆ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಚಂದ್ರಶೇಖರ ತಂದೆ ಮರಿಯಪ್ಪಾ ಬಿಳೆಯಲಿ ಸಾ: ಮನೆ ನಂ 11-864 ಬಸವನಗರ ಎಮ್ಎಸ್‌‌‌ಕೆಮಿಲ್ ರೋಡ ಕಲಬುರಗಿ ಇವರು ಕಂದಾಯ ನಿರೀಕ್ಷಕರು ಫರಹತಾಬಾದ ಹಾಗೂ  ಗ್ರಾಮಲೆಕ್ಕಿಗನಾದ ನಾನು ಮಾನ್ಯ ತಹಸೀಲ್ದಾರವರು ಕಲಬುರಗಿರವರ ಆದೇಶ ಸಂ/ಕಂ/ಆರ್ ಓ ಆರ್/2015-16/34 ದಿನಾಂಕ: 29/03/2016 ರ ಪ್ರಕಾರ ಮೈನಾಳ ಸರ್ವೆ ನಂ 80/2,4,5 ಹಾಗೂ ಸರ್ವೇ ನಂಬರ 2/9 83 ರ ಜಮೀನಿನ ಮೇಲೆ ಸ್ಥಳಿಯ ವಿಚಾರಣೆ ಹಾಗೂ ಪಂಚನಾಮೆ ಜರುಗಿಸಲು ಇಂದು ದಿನಾಂಕ; 27/05/2016 ರ ಅಪರಾಹ್ನ 4.30 ರ ಸುಮಾರು ಮೈನಾಳ ಗ್ರಾಮಕ್ಕೆ ತೆರಳಿದ್ದು ಗ್ರಾಮಕ್ಕೆ ಪ್ರವೇಶಿಸುತ್ತಿದ್ದಂತೆ. ಶ್ರೀ ಮಲ್ಲಯ್ಯಾ ತಂದೆ ರಾಚಯ್ಯಾ ಇವರು ನಮ್ಮ ಹತ್ತಿರ ಬಂದು ನೀವು ಯಾರು, ಎಲ್ಲಿಂದ ಬಂದಿದ್ದಿರಿ ನಿಮ್ಮ ಕೆಲಸವೇನು ಎಂದು ಪ್ರಶ್ನೀಸಿದರು. ಆಗ ನಾನು ಗ್ರಾಮ ಲೆಕ್ಕಿಗ ಇವರು ಕಂದಾಯ ನಿರೀಕ್ಷಕರು ವಾಸ್ತವ ಸ್ಥಿತಿ ತಿಳಿಸಿ ಇಲ್ಲಿ ಜಮೀನಿನ ಪಂಚನಾಮೆಗಾಗಿ ಬಂದಿರುವುದಾಗಿ ತಿಳಿಸಿದ್ದೇನೆ. ಆವಾಗ ಮಲ್ಲಯ್ಯಾ ಅವರ ಬೆಂಬಲಿಗ ಸಹೋದರ ಗುರುಪಾದಯ್ಯಾ ಇವರು ತಲಾಟಿಯೆಂದು ಪರಿಚಯಿಸಿದರು ಅವರು ನಮ್ಮ ಪರಿಚಯ ಮಾಡುತ್ತಿದ್ದಂತೆ ಮಲ್ಲಯ್ಯಾ ತಂದೆ ರಾಚಯ್ಯಾ ಇವರು ನೀನು ಗ್ರಾಮ ಲೆಕ್ಕಿಗನಾಗಿದ್ದರೆ ನನ್ನ ಕೆಲಸ ಯಾಕೆ ಮಾಡಿಲ್ಲಾ ಎಂದು ಕೋಪದಿಂದ ಕೇಳಿದರು ಆಗ ನಾನು ನನ್ನ ಹತ್ತಿರ ಯಾವುದು ಬಾಕಿ ಕೆಲಸ ಇಲ್ಲಾ ಏನಿದೆ ನಿಮ್ಮ ಕೆಲಸವೆಂದು ಕೇಳಿದೆ ಅದಕ್ಕೆ ಅವರು ನಮ್ಮ ತಂದೆಯವರ ಹೆಸರಿನಲ್ಲಿದ್ದ ಜಮೀನು ನನ್ನ ಹೆಸರಿಗೆ ವರ್ಗಾವಣೆ ಮಾಡಲು ನಿನ್ನ ಕಛೇರಿಗೆ ಅರ್ಜಿ ಸಲ್ಲಿಸಿದೆ ಅದನ್ನು ಏನು ಮಾಡಿದೆ.ಫರಹತಾಭಾದ ಕಛೇರಿಗೆ ಯಾಕೇ ಕಳಿಸಿದೆ ಎಂದು ಕೇಳಿದರು.ಆಗ ನಾನು ನಿಮ್ಮ ವರ್ಗಾವಣೆ ನಮ್ಮ ಕಛೇರಿಗೆ ಬಂದಿತ್ತು ಕಡತದಲ್ಲಿ ಮಾನ್ಯ ಭೂಮಿ ಕೇಂದ್ರದ ಉಪ-ತಹಸಿಲ್ದಾರರವರು ನಿಮ್ಮ ವಂಶಾವಳಿಯ ಪ್ರಕಾರ ನೀವು ಇಬ್ಬರೂ ಮಕ್ಕಳಿದ್ದು ನಿಮ್ಮಿಬ್ಬರ ಹೆಸರಿಗೆ ಜಂಟಿಯಾಗಿ ವಿರಾಸತ ವರ್ಗಾವಣೆ ಮಾಡಲು ಸೂಚಿದ್ದು ಅದರಂತೆ ಮಾನ್ಯ ಕಂದಾಯ ನಿರೀಕ್ಷಕರು ವಿಚಾರಣೆಗಾಗಿ ಉಪತಹಸೀಲ್ದಾರರು ಫರಹತಾಬಾದರವರಿಗೆ ಕಡತ ಸಲ್ಲಿಸಿದ್ದು ಅವರ ವಿಚಾರಣೆ ನೋಟಿಸ್ ಈಗಾಗಲೇ ತಮ್ಮಗೆ ನೀಡಿದ್ದು ಮಾನ್ಯ ಉಪತಹಸೀಲ್ದಾರ ರವರ ಆದೇಶಕ್ಕಾಗಿ ನಾವು ಕಾಯುತ್ತಿದ್ದೆವೆ ಎಂದು ಹೇಳಿದ ತಕ್ಷಣ ಶ್ರೀ ಮಲ್ಲಯ್ಯಾರವರು ನನ್ನ ಕಪಾಳ ಮೋಕ್ಷ ಮಾಡಿದರು. ನಂತರ ನಾನು ಅವರಿಗೆ ಸರ್ ನೀವು ಬೆಂಗಳೂರಿನಲ್ಲಿ ಇರುವವರು ನಿಮ್ಮ ವರ್ಗಾವಣೆ ಪ್ರಗತಿಯಲ್ಲಿದೆ  ಅನ್ನುವಷ್ಟರಲ್ಲಿ ಮತ್ತೋಮ್ಮೆ ನನ್ನ ಕಪಾಳಕ್ಕೆ ಜೋರಾಗಿ ಹೊಡೆದರು. ಇದೆಲ್ಲಾ ತಲಾಟೆ ಮಾಡುವ ಕೆಲಸ ಉಪ ತಹಸೀಲ್ದಾರ ಏನು ಬದನೆಕಾಯಿ ಮಾಡಬೇಕು ನೀನು ಸುಳ್ಳು ಹೇಳುತ್ತಿದ್ದಿಯ್ಯಾ ಅಂತಾ ಕಾಲಿನಿಂದ ಒದ್ದರು. ಅಷ್ಟರಲ್ಲಿ ಕಂದಾಯ ನಿರೀಕ್ಷಕರು ಅವರನ್ನು ಸಮಜಾಯಿಸಿ ತಿಳಿಸಿದರು ನೀವು ಯಾರು ನನಗೆ ಗೊತ್ತಿಲ್ಲಾ ಇದರಲ್ಲಿ ಮಧ್ಯೆಪ್ರವೆಶ ಮಾಡಬೇಡಿ ಎಂದು ಗದರಿಸಿದರು. ಆಗ ಮಾನ್ಯ ಕಂದಾಯ ನಿರೀಕ್ಷಕರು ನಾನು ಈ ಗ್ರಾಮಕ್ಕೆ ಸಂಬಂಧಪಟ್ಟ ಆರ್‌‌‌ಐ ಫರಹತಾಬಾದ ವಲಯದ ಆರ್ ಐ ಎಂದು ತಿಳಿಸುತ್ತಿದಂತೆ ಗ್ರಾಮದ ಕೆಲ ಜನ ನನ್ನನ್ನು ಶಾಲೆಯ ಒಳಗಡೆ ಕರೆದು ಕೂಡಿಸಿದರು. ಆದರೂ ಸಹ ಸುಮ್ಮನ್ನಿರದ ಶ್ರೀ ಮಲ್ಲಯ್ಯಾ ಇವರು ಶಾಲೆಯ ಕೊಠಡಿಯ ಒಳಗಡೆ ನುಗ್ಗಿ ಶಾಲೆಯಲ್ಲಿ ಕುಳಿತ್ತಿದ್ದ ನನ್ನ ಹಿಂದಿನಿಂದ ಬಂದು ಬೆನ್ನಿಗೆ ಜೋರಾಗಿ ಒದ್ದರು. ಹಾಗೂ ನಾನು ಕುರ್ಚಿಯಿಂದ ಕೆಳಗೆ ಬೀಳುತ್ತಿದ್ದಂತೆ ಇಂವ ಹೊಲೆಯ ರಂಡಿ ಮಗ ದುಡ್ಡು ಕೊಟ್ಟರೆ ಮಾತ್ರ ಕೆಲಸ ಮಾಡುತ್ತಾನೆ ನಾನು ದುಡ್ಡು ಕೊಟ್ಟಿಲ್ಲಾ ಅಂತಾ ನನ್ನ ಕೆಲಸ ಮಾಡಿಲ್ಲಾ ಬೊಳಿಮಗ ನಾನು ಬೆಂಗಳೂರಿನಲ್ಲಿ 5 ವರ್ಷ ಫಿಲ್ಮ ಎಕ್ಟರ ಆಗಿ ಕೆಲಸ ಮಾಡಿ ಬಂದಿದ್ದಿನಿ ಇಂತಹ ಎಷ್ಟು ಜನರಿಗೆ ನೋಡಿದ್ದೆನೆ ಇವನು ಯಾರಿಗೆ ಹೇಳುತ್ತಾನೋ ಹೇಳಲ್ಲಿ ಯಾರನ್ನು ಕರೆಯಿಸುತ್ತಾನೋ ಕರೆಯಿಸಲಿ ಇವನಿಗೆ ಕಲಬುರಗಿಯಲ್ಲಿ ಎಲ್ಲಿಯಾದರೂ ಇರಲಿ ಹೋಗಿ ಒದ್ದೆಯುತ್ತೆನೆ ಎಂದರು. ಅಷ್ಟರಲ್ಲಿ ಕಂದಾಯ ನಿರೀಕ್ಷಕರು ನನ್ನನ್ನು ಬಿಡಿಸಲು ಪ್ರಯತ್ನಿಸುವಾಗ ಇವರ ಸಹೋದರ ಹಾಗೂ ಬೆಂಬಲಿಗರಾದ ಶಕೀಲ ಅಹ್ಮದ ಮಾನ್ಯ ಕಂದಾಯ ನಿರೀಕ್ಷಕರನ್ನು ಅಡ್ಡಗಟ್ಟಿ ನೀನು ಬಿಡಿಸಲು ಹೋದರೆ ನಿನಗೂ ಅದೇ ರೀತಿ ಹೊಡೆಯುತ್ತೆವೆ ಎಂದು ಅವರನ್ನು ನಿಲ್ಲಿಸಿದರು ನಂತರ ಸಾರ್ವಜನಿಕರು ಕಂದಾಯ ನಿರೀಕ್ಷಕರುನ್ನು ನನ್ನ ಹತ್ತಿರ ಕರೆದು ಕೂಡಿಸಿದರು. ತದನಂತರ ನಾವು ಬಂದ ಕೆಲಸ ಸರ್ವೆ ನಂ 80/2,4,5 ರ ಜಮೀನಿನ ಪಂಚನಾಮೆ ಜರೂಗಿಸಿ ಸರ್ವೇ ನಂ 2/9 ಮತ್ತು 83 ಜಮೀನುಗಳ ವಿಕ್ಷಣೆಗೆಂದು ಹೋಗುವಾಗ ಮತ್ತೆ ನನ್ನನ್ನು ಶ್ರೀ ಮಲ್ಲಯ್ಯಾರವರು ತಡೆದು ನನ್ನ ಕರ್ತವ್ಯಕ್ಕೆ ಅಡ್ಡಮಾಡಿ ಮತ್ತೆ ನನ್ನನ್ನು ನಾನು ಬೆಂಗಳೂರಿನಲ್ಲಿ ಎಲ್ಲವನ್ನು ಮಾಡಿದ್ದೆನೆ ಪೊಲೀಸ ಕಂಪ್ಲೇಟ ಅಂತಾ ಹೋದರೆ ಯಾವುದೇ ಸಾಕ್ಷಿವು ಸುಳ್ಳಿವು ಸಿಗದ ಹಾಗೇ ನಿನ್ನನ್ನು ಮೇಲೆ ಕಳುಹಿಸುತ್ತೆನೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣಯಲ್ಲಿ ಪ್ರಕರಣ ದಾಖಲಾಗಿದೆ.