POLICE BHAVAN KALABURAGI

POLICE BHAVAN KALABURAGI

02 May 2012

GULBARGA DIST REPORTED CRIMES


ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ: ದಿನಾಂಕ 30-04-12 ರಂದು ಸಾಯಂಕಾಲ 7-00 ಗಂಟೆಗೆ ಸರ್ಕಾರಿ ಜೀಪ ನಂ ಕೆಎ-01 ಜಿ-1601 ನೇದ್ದನ್ನು ವಿಧಾನ ಸೌಧದ ಕಂಪೌಂಡಿನ ಶೆಡನಲ್ಲಿ ನಿಲ್ಲಿಸಿದ್ದು ದಿನಾಂಕ 02-05-2012 ರಂದು ಬೆಳಿಗ್ಗೆ 10-00 ಗಂಟೆಗೆ ಬಂದು ನೋಡಲಾಗಿ, ಸದರಿ ಜೀಪಿನ  ಎಕ್ಸೈಡ ಬ್ಯಾಟರಿ ನಂ:ಎಮ್.ಎಚ್.ಡಿ 800 ಸಂ 342309 ನೇದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ತಿಮ್ಮಪ್ಪ್ ತಳವಾರ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: ಠಾಣೆ ಗುನ್ನೆ ನಂ 59/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ಶಹಾಬಾದ ನಗರ ಪೊಲೀಸ್ ಠಾಣೆ: ಶ್ರೀ ಮಹಿಬೂಬ ತಂದೆ ಅಬ್ದುಲ  ಜಬ್ಬಾರ ಇನಾಮದಾರ ವ:21 ಉ:ಜೀಪಚಾಲಕ ಸಾ||ಮರತೂರ ಹಾ||ವ||ಪಠಾಣಗಲ್ಲಿ ಶಹಾಬಾದರವರು ನನ್ನ ತಂದೆಯವರಾದ ಅಬ್ದುಲ ಜಬ್ಬಾರ ಇನಾಮದಾರ ಇವರಿಗೆ ದಿನಾಂಕ: 01-05-2012 ರಿಂದ ದಿನಾಂಕ: 02-05-2012 ರ ಮಧ್ಯರಾತ್ರಿ ಅವಧಿಯಲ್ಲಿ ಕೊಲೆಯಾಗಿದೆ ಅಂತಾ ನಾನು ಮುಂಜಾನೆ ನಾನು ಶಹಾಪೂರದಲ್ಲಿದ್ದಾಗ ವಿಷಯ ತಿಳಿದುಕೊಂಡು ಬಂದು ನೋಡಲಾಗಿ ಯಾರೋ ತನ್ನ ತಂದೆಯನ್ನು ಅಬ್ದುಲ ಗನಿ ಸಾಬ ಇವರ ಹೊಲದ ಹತ್ತಿರುವಿರುವ ಹಾಜಿಪೀರ ದರ್ಗಾದ ಹತ್ತಿರ ಕರೆದುಕೊಂಡು ಹೋಗಿ ಕಲ್ಲಿನಿಂದ ಮುಖಕ್ಕೆ ಜಜ್ಜಿ, ತಲೆಗೆ ಹೊಡೆದು ಭಾರಿ ರಕ್ತ ಗಾಯಪಡಿಸಿ ಕೊಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ 53/2012 ಕಲಂ 302 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.