POLICE BHAVAN KALABURAGI

POLICE BHAVAN KALABURAGI

04 September 2012

GULBARGA DISTRICT REPORTED CRIMES


ಕಾಣೆಯಾದ ಪ್ರಕರಣ;
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ, ನಾನಾ ಗೌಡ ತಂದೆ ನರಸಪ್ಪಾ ದಿಗ್ಗಾವು ಸಾ || ಕೆಂಭಾವಿ ತಾ|| ಸುರಪುರ ಜಿ|| ಯಾದಗಿರಿ ಹಾ|| ವ|| ಧನಗರಗಲ್ಲಿ ಬ್ರಹ್ಮಪುರ ಗುಲಬರ್ಗಾ ರವರು ಠಾಣೆಗೆ ಹಾಜರಾಗಿದ್ದು ಸದರಿ ಫಿರ್ಯಾದಿದಾರನ ಹೇಳಿಕೆ ಪಡೆದುಕೊಂಡಿದ್ದು, ಹೇಳಿಕೆ ಸಾರಾಂಶವೇನೆಂದರೆ,  ನನ್ನ  ಮಗನಾದ ಶರಣು ವಯಸ್ಸು|| 17, 9 ನೇ ತರಗತಿ ವಿದ್ಯಾರ್ಥಿ ಈತನು  ದಿನಾಂಕ;28-02-2012 ರಂದು ರಂದು ಬೆಳಿಗ್ಗೆ  10-00 ಗಂಟೆಗೆ ಮನೆಯಿಂದ ಹೋದವನು ಮರಳಿ ಮನೆಗೆ ಬಂದಿರುವದಿಲ್ಲಾ. ಎಲ್ಲಾ ಕಡೆ ಹುಡಕಾಡಿದರೂ ಪತ್ತೆಯಾಗಿರುವದಿಲ್ಲ.  ಕಾಣೆಯಾದ ಮಗನನ್ನು ಪತ್ತೆ ಹಚ್ಚಿ ಕೊಡಲು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.65/2012 ಕಲಂ ಹುಡುಗ ಕಾಣೆಯಾದ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಗಂಡನ ಕಿರಕುಳದಿಂದ ಗೃಹಿಣಿ ಬಲಿ;
ಆಳಂದ ಪೊಲೀಸ್ ಠಾಣೆ: ಶ್ರೀಮತಿ ಜೈಬುನ್ನಿಸಾ ಗಂಡ ದಿ|| ಧೂಲೆಸಾಬ ಮುಲ್ಲಾ ಮು|| ಬಟಗೇರಾ ತಾ|| ಬಸವ ಕಲ್ಯಾಣ ಜಿ||ಬೀದರರವರು ನನ್ನ ಮಗಳಾದ ರಿಯಾನ್ ಬೇಗಂ ವಳಿಗೆ ಆಳಂದ ಮಹಿಬೂಬ ಬೇಗ ಇವರ ಮಗನಾದ ಇಶಾಕ ಅಹ್ಮದ ಇವನ ಸಂಗಡ ಮದುವೆ ಮಾಡಿಕೊಟ್ಟಿದ್ದು,  ರಿಯಾನ್ ಬೇಗಂ ಇವಳಿಗೆ 4 ಜನ ಮಕ್ಕಳಿರುತ್ತಾರೆ. ನನ್ನ ಅಳಿಯ ಕುಡಿದು ಬಂದು ಮನೆಗೆ ಬಂದು ನನ್ನ ಮಗಳಿಗೆ ಕುಡಿಯಲು ಹಣ ಕೊಡು ಎಂದು ಮಾನಸಿಕ ತ್ರಾಸ ಕೊಡುತ್ತಿದ್ದ ಬಗ್ಗೆ ನನ್ನ ಮಗಳು ತವರ ಮನೆಗೆ ಆಗಾಗ ಬಂದಾಗ ತಿಳಿಸಿರುತ್ತಾಳೆ. ನಾವು ಇವತ್ತಲ್ಲ ನಾಳೆ ಸರಿಯಾಗುತ್ತಾನೆ ಅಂತಾ ಸಮಜಾಯಿಸಿ ಹೇಳಿ ಕಳುಹಿಸುತ್ತಿದ್ದೆವು, ಅಳಿಯ ಇಂದಿಲ್ಲ ನಾಳೆ ಸರಿ ಹೋಗಬಹುದು ಮಕ್ಕಳು ಕೂಡಾ ಇದ್ದಾರೆ ಅವನೊಂದಿಗೆ ಇದ್ದು ಬಾಳುವ ಸಂಸಾರ ಸಾಗಿಸು ಅಂತಾ ಹೇಳಿ ಕಳುಹಿಸುತ್ತಿದ್ದೇವು. ನನ್ನ ಅಳಿಯನಿಗೆ ಹಿಡಿದುಕೊಂಡು 4 ಜನರು ಆಣ್ಣತಮ್ಮಂದಿರಿದ್ದು ಆತ್ತೆ ಮಾವ ಸಹ ಇದ್ದು, ಅವರೇಲ್ಲರು ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ. ನನ್ನ ಅಳಿಯನು ಬಾಡಿಗೆ ಮನೆಯಲ್ಲಿ ತನ್ನ ಹೆಂಡತಿ ಮಕ್ಕಳೊಂದಿಗೆ ಇರುತ್ತಾನೆ. ದಿನಾಂಕ 31/08/2012 ರಂದು ರಾತ್ರಿ 10.30 ಗಂಟೆ ಸುಮಾರಿಗೆ ನನ್ನ ಮಮ್ಮಗಳಾದ ನಸರೀನ ಬಾನು ಇವಳು ನಮಗೆ ಪೋನ್ ಮಾಡಿ ತಿಳಿಸಿದ್ದೆನೆಂದರೆ, ನಮ್ಮ ಆಮ್ಮನಿಗೆ ನಮ್ಮ ತಂದೆ ಕುಡಿದು ಬಂದು ಜಗಳ ಮಾಡಿದಕ್ಕೆ ಅಮ್ಮಿ ಇವಳು ಮನೆಯಲ್ಲಿ ಗ್ಯಾಸ ಎಣ್ಣೆ [ಸೀಮೆ ಎಣ್ಣೆ] ಮೈ ಮೇಲೆ ಸೂರಿದುಕೊಂಡು ಉರಿ ಹಚ್ಚಿಕೊಂಡಿರುತ್ತಾಳೆ. ನಮ್ಮ ತಂದೆ ಹಾಗೂ ಪಕ್ಕದ ಮನೆಯವರು ಆರಿಸಿದ್ದು ಅಮ್ಮನ ಮೈ ಪೂರ್ತಿ ಸುಟ್ಟಿದೆ ಉಪಚಾರ ಕುರಿತು ಸರ್ಕಾರಿ ದವಾಖಾನೆ ಗುಲ್ಬರ್ಗಾಕ್ಕೆ ತೆಗೆದುಕೊಂಡು ಹೋಗಿದ್ದಾರೆ ಅಂತಾ ತಿಳಿಸಿರುತ್ತಾಳೆ. ನಾವೇಲ್ಲರೂ  ಸರ್ಕಾರಿ ದವಾಖಾನೆಯಿಂದ ಬಸವೇಶ್ವರ ಆಸ್ಪತ್ರಗೆ ತಂದು ಸೇರಿಕೆ ಮಾಡಿದ್ದು. ನನ್ನ ಮಗಳಿಗೆ ವಿಚಾರಿಸಲಾಗಿ ನನ್ನ ಅಳಿಯಾ ಕುಡಿದು ಬಂದು ಹೊಡೆಯುವದು ಬೈಯುವದು ಮಾಡುತ್ತಿದ್ದು ಕುಡಿಯಲು ಹಣ ಕೊಡು ಅಂತಾ ಹೇಳುತ್ತಿದ್ದು, ಇದ್ದರಿಂದ ನನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು, ಅವನ ಕಿರುಕುಳ ತಾಳದೆ ಮೈಸುಟ್ಟಿಕೊಂಡಿರುತ್ತೇನೆ, ಅಂತಾ ತಿಳಿಸಿದಳು.  ನನ್ನ ಮಗಳು ಉಪಚಾರ ಹೊಂದುತ್ತಾ ದಿನಾಂಕ 03/09/2012 ರಂದು ಮದ್ಯಾಹ್ನ 2.00 ಗಂಟೆಗೆ ಮರಣ ಹೊಂದಿದ್ದು ಅವಳ ಮರಣಕ್ಕೆ ಆಕೆಯ ಗಂಡನೆ ಕಾರಣವಾಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 178/.2012 ಕಲಂ 498 (ಎ) 306 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIMES


ಹುಡಗ ಕಾಣೆಯಾದ ಪ್ರಕರಣ:
ಸೇಡಂ ಪೊಲೀಸ್ ಠಾಣೆ: ಶ್ರೀ, ನಾಗರಾಜ ತಂದೆ ಸೈಬಣ್ಣಾ ಇರಕೇರಿ ನಾಯಕೊಡಿ ಸಾ|| ಯರಗೋಳ ಜಿ|| ತಾ|| ಗುಲಬರ್ಗಾ ಹಾ.ವ|| ಕೋಡ್ಲಾ ಕ್ರಾಸ  ಸೇಡಂ ವರು ನನ್ನ ಮಗನಾದ ವಿಶ್ವರಾಧ್ಯ ಇವನು 10ನೇ ತರಗತಿಯಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಮಳಖೇಡದಲ್ಲಿ ಓದುತ್ತಿದ್ದು ದಿನಾಂಕ:10-08-2012 ರಂದು ಶಾಲೆಯಲ್ಲಿ ರಜೆ ಚೀಟಿ ನೀಡಿ ನಮ್ಮ ಊರಿಗೆ ಬಂದಿದ್ದನು ನಂತರ ಜಾತ್ರೆಯನ್ನು ಮುಗಿಸಿಕೊಂಡು ಶಾಲೆಗೆ ಮರಳಿ ಹೋಗುವದಾಗಿ ತಿಳಿಸಿ ಆವನ ಮಾವನ ಮನೆಗೆ ಬಟಗೇರಾ (ಕೆ) ತಾ|| ಸೇಡಂಕ್ಕೆ ಬಂದಿರುತ್ತಾನೆ. ದಿನಾಂಕ:27-08-2012 ರಂದು ಬಟಗೇರಾದಿಂದ ಶಾಲೆಗೆ ಹೋಗುವದಾಗಿ ತಿಳಿಸಿರುತ್ತಾನೆ. ಆದರೆ ವಿಧ್ಯಾರ್ಥಿಯು ಶಾಲೆಗೆ ಬಂದಿರುವದಿಲ್ಲಾ ಅಂತ ವಿಧ್ಯಾರ್ಥಿಯ ವರ್ಗ ಶಿಕ್ಷಕರು ಪೋನ ಮೂಖಾಂತರ ತಿಳಿಸಿದಾಗ ನಾವು ಆತನ ಬಗ್ಗೆ ಎಲ್ಲಾ ಕಡೆ ಹುಡಕಾಡಿದರು ಆತನ  ಸುಳಿವು ಸಿಕ್ಕಿಲ್ಲಾ ಆತನ ಮೈಮೆಲೆ ಶಾಲೆಯ ಸಮವಸ್ತ್ರಗಳಾದ ಹಳಿದಿ ಹಾಫ ಶರ್ಟ,ಮಾರುನ ಬಣ್ಣದ ಪ್ಯಾಂಟ ಇರುತ್ತವೆ, ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 190/2012 ಹುಡಗ ಕಾಣೆಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಕೆ ಕೈಕೊಂಡಿರುತ್ತಾರೆ, ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ದೂರವಾಣಿ ಸಂ: 08472-263604 ಅಥವಾ 08441-276166, ಅಥವಾ 9480803593 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.
ಮುಂಜಾಗ್ರತೆ ಕ್ರಮ ಜರೂಗಿಸಿದ ಬಗ್ಗೆ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ದಿನಾಂಕ;03/09/2012 ರಂದು ಕಪನೂರ ಗ್ರಾಮದ ಶ್ರೀ ಶರಣಪ್ಪ ತಂದೆ ತುಕ್ಕಪ್ಪ ನೀಲೂರ ಸಾ: ಕಪನೂರ ಇವರ ಅರ್ಜಿ ವಿಚಾರಣೆ ಕುರಿತು ಹೋದಾಗ ಮನೆ ನಂ ಮನೆ ನಂ-8-1305/131/1-3 ನೇದ್ದನ್ನು ರೇವಪ್ಪ ತಂದೆ ಶರಣಪ್ಪ ಚಿಂಚೋಳಿ,ಶಿವಲಿಂಗಪ್ಪ ತಂದೆ ರೇವಪ್ಪ ಚಿಂಚೋಳಿ,ನಾಗಪ್ಪ ತಂದೆ ರೇವಪ್ಪ ಚಿಂಚೋಳಿ,ಪಾರ್ವತಿ ಗಂಡ ರೇವಪ್ಪ ಚಿಂಚೋಳಿ ಸಾ: ಎಲ್ಲೂರ ಕಪನೂರ ಗ್ರಾಮ ದವರು ಸದರಿ ಮನೆಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಬೇಕು ಅಂತ ಗುಂಪು ಕಟ್ಟಿಕೊಂಡು ದ್ವೇಷವನ್ನು ಸಾಧಿಸುತ್ತಿದ್ದು ತಿಳಿದು ಬಂದಿದ್ದರಿಂದ ಸದರಿ ಎರಡು ಪಾರ್ಟಿ ಜನರು ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡುವ ಸಾದ್ಯತೆ ಇರುವುದರಿಂದ ಸದರಿಯವರ ವಿರುದ್ದ ಠಾಣೆ ಗುನ್ನೆ ನಂ: 279/2012 ಕಲಂ 107 ಸಿ.ಆರ್.ಪಿ.ಸಿ. ಮುಂಜಾಗ್ರತೆ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀಮತಿ ಲಕ್ಷ್ಮಿ ಗಂಡ ರವಿ ಹೊಸೂರಕರ್ ಸಾ: ಅಕ್ಕಮಹಾದೇವಿ ಕಾಲನಿಯ (ಕೆಹೆಚಬಿ) ಕಾಲೋನಿಯ ಹೌಸಿಂಗ ಬೊರ್ಡ ಗುಲ್ಬರ್ಗಾರವರು ನಾನು ಮತ್ತು ಅಕ್ಕ ಮಗನ ಬಸವರಾಜ ಹಾಗೂ ಸಂಬಂಧಿ ಅನಿತಾ ಗಂಡ ಚಂದ್ರಕಾಂತ ಜಮಾದಾರ ಎಲ್ಲರೂ ಮಾತಾಡುತ್ತಾ ದಿನಾಂಕ 25-08-12 ರಂದು ಸಂಜೆ 7-30 ಗಂಟೆ ಸುಮಾರಿಗೆ ಕುಳಿತಾಗ ಅಂಬುಜಾ ತಳವಾರ,ಕಿರಣ ತಳವಾರ,ರಾಜು @ ರಾಮು,ದೇವು ಸಂಗಡ ಅಣ್ಣಾರಾಯ ಇತನ ಇನ್ನೋಬ್ಬ ಮಗ ಹೆಸರು ಗೊತ್ತಿಲ್ಲಾ ಮನೆಗೆ ಬಂದು  ಅಣ್ಣಾರಾಯ ತಳವಾರ ಈತನು ದಿನಾಂಕ 15-07-2012 ರಂದು ಕೊಟ್ಟ ಕೇಸ ನಂಬರ 231/12 ಹಿಂದಕ್ಕೆ ತೆಗೆದಕೋ ನಿನಗೆ ಹಣ ಕೊಡುತ್ತೇವೆ ಎಂದು ಎಲ್ಲರೂ ಬೆದರಿಕೆ ಹಾಕಿದರು. ನನಗೆ ನಿಮ್ಮ ಹಣ ಬೇಕಾಗಿಲ್ಲ  ನನಗೆ ಅನ್ಯಾಯ ಮಾಡಿದವನಿಗೆ  ಶಿಕ್ಷೆಯಾಗಬೇಕು ಎಂದು ಹೇಳಿದೆ , ಅವರೆಲ್ಲರೂ ನನಗೆ ಜಾತಿ ನಿಂದನೆ ಮಾಡಿ ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 281/2012 ಕಲಂ 143 147 323 354 504 506 ಸಂ 149 ಐ.ಪಿ.ಸಿ 3 (1) (10) (11) ಎಸ್.ಸಿ /ಎಸ್.ಟಿ ಪಿ.ಎ ಆಕ್ಟ 1989 ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಕೆ ಕೈಕೊಂಡಿರುತ್ತಾರೆ,