POLICE BHAVAN KALABURAGI

POLICE BHAVAN KALABURAGI

19 July 2012

GULBARGA DIST REPORTED CRIMES


ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀ ಸಂಜಯ ತಂದೆ ನಂದಕುಮಾರ ಉಖಂಡೆ  ಸಾ|| ವಿದ್ಯಾನಗರ  ಗುಲಬರ್ಗಾರವರು ದಿನಾಂಕ 18/07/2012 ರಂದು ರಾತ್ರಿ ನಾವೆಲ್ಲರೂ ಊಟ ಮಾಡಿ ನಮ್ಮ ಬಾಡಿಗೆ ಮನೆಯ ಅಡುಗೆ ಮನೆಯ ಬಾಗಿಲದ ಕೊಂಡಿ ಒಂದು ಭಾಗ ಕೊಂಡಿ ಬಿಳದೇ ಇರುವುದ್ದರಿಂದ ಹಾಗೇ ಬಾಗಿಲು ಮುಂದೆ ಮಾಡಿ ಮಲಗಿಕೊಂಡಿರುತ್ತೇವೆ. ದಿನಾಂಕ:19/07/2012 ರಂದು ಬೆಳಿಗ್ಗೆ ನೋಡಲಾಗಿ  1,1/2 ತೊಲೆ ಬಂಗಾರದ ಮಂಗಳಸೂತ್ರ, 7 ಮಾಸಿ ಬಂಗಾರದ ಮಂಗಳಸೂತ್ರ ನನ್ನ ತಮ್ಮನ ಹೆಂಡತಿಯದ್ದು, 4 ಮಾಸಿ ಬಂಗಾರದ ಕೀವಿ ಓಲೆ ನನ್ನ ತಮ್ಮನ ಹೆಂಡತಿಯದ್ದು, ನಗದು ಹಣ 1500=00 ರೂ.ಗಳು ಹೀಗೆ ಒಟ್ಟು 24,500/- ರೂ ಬೆಲೆ ಬಾಳುವ ಬಂಗಾರ & ನಗದು ಹಣ ಕಳುವಾಗಿದ್ದು ಇರುತ್ತದೆ. ಅಲ್ಲದೆ ದೇವರ ಮುಂದೆ ಇಟ್ಟ ದೇವರ ಗಲ್ಲಾ ಪೆಟ್ಟಿಗೆ ಚಿಲ್ಲರೆ ಹಣ  ಯಾರೋ ಕಳ್ಳರು ಮನೆ ಬಾಗಿಲ ತೆರೆದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:57/2012 ಕಲಂ. 457,380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಯು.ಡಿ.ಅರ್. ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ : ಶ್ರೀಮತಿ ಗುಂಡಮ್ಮ ಗಂಡ ಬಸವರಾಜ ಚೌಡಾಪೂರ  ಸಾ || ಕೃಷ್ಣಾ ನಗರ ಬ್ರಹ್ಮಪುರ ಗುಲಬರ್ಗಾರವರು ನಾವು ಕಳೆದ 4 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಲ್ಲಿಯವರೆಗೆ ನಮಗೆ ಮಕ್ಕಳು ಆಗದೇ ಇರುವದರಿಂದ ನನ್ನ ಗಂಡನಾದ ಬಸವರಾಜ ಇತನು ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಕಳೆದ ಕೆಲವು ದಿವಸಗಳಿಂದ ಅತಿ ಹೆಚ್ಚು ಮಧ್ಯಪಾನ ಮಾಡುತ್ತಾ ಬಂದು ನಾನು ಇದ್ದು ಎನು ಸಾಧಿಸಬೇಕು ಅಂತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಮನೆಯಲ್ಲಿ ಸೀರೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಯು.ಡಿ.ಅರ್. ನಂ:9/12 ಕಲಂ 174 (ಸಿ)  ಸಿ.ಆರ್.ಪಿ.ಸಿ ಪ್ರಕಾರ ಯು.ಡಿ.ಅರ್. ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.

GULBARGA DIST REPORTED CRIMES


ಕೊಲೆ ಪ್ರಕರಣ:
ಚಿತ್ತಾಪೂರ ಪೊಲೀಸ್ ಠಾಣೆ :ಶ್ರೀ ಬಾಬು ತಂದೆ ರಾಮಯ್ಯಾ ಬಾಗೋಡಿ ಸಾ|| ನಾಸರ್ ಜಂಗ ಏರಿಯಾ ಚಿತ್ತಾಪೂರರವರು   ನನ್ನ ಮಗನಾದ ಭೀಮು ಇತನು ದಿನಾಂಕ: 18-07-2012 ರಂದು ಸಾಯಂಕಾಲ 4-30 ಗಂಟೆ ಏಕಿ ಮಾಡಲು ಹೋದ ಸಮಯದಲ್ಲಿ ತಾಯಪ್ಪಾ ತಂದೆ ರಾಮಯ್ಯ ಭಾಗೋಡಿ ಮತ್ತು ಯಲ್ಲಪ್ಪಾ ತಂದೆ ಸಾಬಣ್ಣ ಕರದಳ್ಳಿ ಇಬ್ಬರೂ ಹಣ ಕೂಡುವ ತೆಗೆದುಕೊಳ್ಳುವ ಸಂಬಂಧ ತಕರಾರು ಮಾಡಿಕೊಳ್ಳುತ್ತಿರು ಅದನ್ನು ಕಂಡು ನನ್ನ ಮಗ ಭೀಮು ಇತನು ಜಗಳ ಮಾಡಿಕೊಳ್ಳುವದು ಸರಿಯಲ್ಲ ಅಂತಾ ಹೇಳಿದಾಗ ಭೀಮು ತಂಧೆ ಶಿವಪ್ಪ ಕರದಳ್ಳಿ,  ಈರಪ್ಪ ತಂದೆ ಯಂಕಪ್ಪ ಆಂದೋಲಾಈಸು ತಂಧೆ ಈರಪ್ಪ ಆಂದೋಲಾಯಂಕಟಿ ತಂಧೆ ಈರಪ್ಪ ಇಂಗಳಗಿಸಣ್ಣ ನಾಗಪ್ಪ ತಂದೆ ತಿಮ್ಮಯ್ಯಾ ಬಶಿರಾಬಾದ,  ಈಸು ತಂದೆ ರಾಮಯ್ಯಾ ಇಂಗಳಗಿ,  ರಾಜು ತಂಧೆ ಸಾಬಯ್ಯಾ ಕರದಳ್ಳಿರಾಜು ತಂಧೆ ಈರಪ್ಪ ಆಂದೋಲಾ, ಯಲ್ಲಪ್ಪ ತಂದೆ ಸಾಬಣ್ಣ ಕರದಳ್ಳಿ ಸಾ|| ಎಲ್ಲರೂ ನಾಸರಜಂಗ ಏರಿಯಾ ಚಿತ್ತಾಫೂರ ರವರು ಎಲ್ಲರೂ ಕೂಡಿಕೊಂಡು ಕೈ ಮುಷ್ಟಿ ಮಾಡಿ ಹೊಟ್ಟೆಗೆ ಹೊಡೆದಿರುತ್ತಾರೆ. ನಾವು ಸಹ ಅಲ್ಲಿಗೇ ಹೋಗಿ ನೋಡಲು ಭೀಮು ಇತನು ಸ್ಥಳದಲ್ಲಿ ಕುಸಿದು ಬಿದ್ದನ್ನು , ಆತನನ್ನು  ಆಸ್ಪತ್ರೆಗೆ ಕರೆದುಕೊಂಡು ಹೋಗಿದಾಗ ವೈಧ್ಯಾಧಿಕಾರಿಗಳು ಮೃತ ಪಟ್ಟಿರುವ ಬಗ್ಗೆ ತಿಳಿಸಿದ್ದರು. ನನ್ನ ಮಗನಿಗೆ ಹೊಡೆದು ಕೊಲೆ ಮಾಡಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 69/2012 ಕಲಂ 147, 148, 323, 324, 504, 302 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.