POLICE BHAVAN KALABURAGI

POLICE BHAVAN KALABURAGI

25 October 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 24.10.2018 ರಂದು ರಾತ್ರಿ ಮೃತ ಮಗದೂಮ ಅಲಿ ಇತನು ತನ್ನ ಮೋ/ಸೈಕಲ್ ನಂ: ಕೆಎ-33/ಜೆ-103 ನೇದ್ದನ್ನು ಕಾಮತ ಹೊಟೆಲ ಕಡೆಯಿಂದ ಜಗತ ಸರ್ಕಲ ಕಡೆಗೆ ಹೋಗುವ ಕುರಿತು ರೋಡ ಡಿವೈಡರ ಹತ್ತೀರ ಬಂದು ಮೋಟಾರ ಸೈಕಲ ತಿರುಗಿಸಿಕೊಂಡು ಜಗತ ಸರ್ಕಲ ಕಡೆಗೆ ಹೋಗುವಾಗ ದೇವಾನಂದ ಅಂಗಡಿ ಮತ್ತು ಓರಿಯಂಟಲ ಬ್ಯಾಂಕ ಆಫ್ ಕಾಮರ್ಸ ಎದುರು ರೋಡ ಮೇಲೆ ಟ್ಯಾಂಕರ ಲಾರಿ ನಂ ಕೆಎ-33-7809 ನೇದ್ದರ ಚಾಲಕ ಜೈ ಭೀಮ ಇತನು ಚೌಕ ಸರ್ಕಲ ಕಡೆಯಿಂದ ಜಗತ ಸರ್ಕಲ ಕಡೆಗೆ ಹೋಗುವ ಕುರಿತು ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮಗದೂಮ ಅಲಿ ಇವರ ಮೋಟಾರ ಸೈಕಲಕ್ಕೆ ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿ ಮಗದೂಮ ಅಲಿ ಇವರು ಕೆಳಗಡೆ ಬಿದ್ದಾಗ ಚಾಲಕನು ಅವರ ಮೇಲೆ ಲಾರಿಯ ಗಾಲಿಯನ್ನು ಹಾಯಿಸಿ ಅವರಿಗೆ ಭಾರಿಗಾಯಗೊಳಿಸಿದ್ದರಿಂದ ಮಗದೂಮ ಅಲಿ ಇವರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಅಂತಾ  ಶ್ರೀ ವಾಹೀದಮಿಯಾ ತಂದೆ ಮಗದೂಮ ಅಲಿ  ಸಾ: ಶಹಾ ಜಿಲಾನಿ ಹೈಸ್ಕೂಲ ಹಿಂದುಗಡೆ ದಿಲದಾರ ಕಾಲೋನಿ  ಎಮ್.ಎಸ್.ಕೆ ಮಿಲ್ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 21-10-2018 ರಂದು ಮದ್ಯಾಹ್ನ ನಾನು ನನ್ನ ವಯಕ್ತಿಕ ಕೆಲಸಕ್ಕಾಗಿ ಅಫಜಲಪೂರಕ್ಕೆ ಬಂದಿದ್ದೆನು. ನನ್ನ ಕೆಲಸ ಮುಗಿಸಿಕೊಂಡು ಮರಳಿ ಊರಿಗೆ ಹೋಗಬೇಕು ಅಂತಾ ಅಫಜಲಪೂರ – ಉಡಚಣ ಬಸ್ಸಿನಲ್ಲಿ ಬಾಗಿಲು ಎದುರಿನ ಸೀಟಿನಲ್ಲಿ ಕುಳಿತಿದ್ದೆನು. ಆಗ ನನ್ನ ತಂಗಿಯ ಗಂಡನಾದ ಶೇಖರ ತಂದೆ ಬಸಪ್ಪ ಹೊನ್ನಕೇರಿ ಸಾ|| ಭೋಸಗಾ ಹಾ|| ವ|| ಸೋಲ್ಲಾಪೂರ  ಈತನು ಸಹ ಕರಜಗಿಯ ಅಶೋಕ ನಗರಕ್ಕೆ ಹೋಗಲು ಅದೆ ಬಸ್ಸಿನಲ್ಲಿ ಬಂದು ನನ್ನ ಪಕ್ಕದಲ್ಲಿ ಕುಳಿತುಕೊಂಡನು. ಇಬ್ಬರು ಮಾತಾಡುತ್ತಾ ಕರಜಗಿ ಕಡೆಗೆ ಹೊರಟೆವು. ನಮ್ಮಂತೆ ಬಸ್ಸಿನಲ್ಲಿ ಇನ್ನು ಅನೇಕ ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ನಮ್ಮೂರಿನವರಾದ ಕಾಶೀನಾಥ ಯಾದವ, ರಾಮಣ್ಣ ಹಲಸಂಗಿ, ಮಹಾಧೇವ ಸಿರನಾಳ ಇವರು ಸಹ ಸದರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ಸಿನ ಕಂಡೆಕ್ಟರನು ಬಾಗಿಲು ಮುಚ್ಚದೆ ಹಾಗೆ ಕುಳಿತಿದ್ದನು. ಬಸ್ಸು ಅಶೋಕ ನಗರದ ಸಮೀಪ ಹೋಗುತ್ತಿದ್ದಂತೆ ಸದರಿ ಬಸ್ಸಿನ ಚಾಲಕನು ಬಸ್ಸನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿ ಒಮ್ಮೇಲೆ ಕಟ್ ಹೊಡೆದಿದ್ದರಿಂದ ನನ್ನ ಪಕ್ಕದಲ್ಲಿ ಕುಳಿತಿದ್ದ ನನ್ನ ತಂಗಿಯ ಗಂಡನಾದ ಶೇಖರನು ಬಾಗಿಲಿನಿಂದ ಹೊರಗೆ ಬಿದ್ದನು. ಆಗ ನಾನು ಮತ್ತು ಬಸ್ಸಿನಲ್ಲಿದ್ದವರು ಕೂಗಿದ್ದರಿಂದ ಬಸ್ಸಿನ ಚಾಲಕನು ಸ್ವಲ್ಪ ಮುಂದೆ ಹೋದ ನಂತರ ಬಸ್ಸ ನಿಲ್ಲಿಸಿದನು. ನಾವು ಕೆಳಗೆ ಇಳಿದು ನೊಡಲು ನನ್ನ ತಂಗಿಯ ಗಂಡನ ತಲೆಯ ಹಿಂಬಾಗದಲ್ಲಿ ಭಾರಿ ಒಳಪೆಟ್ಟು ಮತ್ತು ರಕ್ತಗಾಯಗಳಾಗಿ ಪ್ರಜ್ಞೆ ಹೀನ ಸ್ಥಿತಿಯಲ್ಲಿದ್ದನು. ಸದರಿ ಬಸ್ ನಂ ಕೆಎ-32 ಎಫ್-1920 ಇದ್ದು. ಚಾಲಕ ಮತ್ತು ಕಂಡೆಕ್ಟರ ರವರಿಗೆ ಅವರ ಹೆಸರು ವಿಚಾರಿಸಲು ಚಾಲಕನು ತನ್ನ ಹೆಸರು ರಾವುತಪ್ಪ ತಂದೆ ಯಲ್ಲಪ್ಪ ಗಂಗನಳ್ಳಿ ಅಂತ ಮತ್ತು ಕಂಡೆಕ್ಟರನು ತನ್ನ ಹೆಸರು ಕಾಮಣ್ಣ ತಂದೆ ಜಟ್ಟೆಪ್ಪ ಕತನಳ್ಳಿ ಅಂತ ತಿಳಿಸಿದನು. ಸದರಿ ಬಸ್ಸು ಅಫಜಲಪೂರ ಡಿಪೊದು ಇರುತ್ತದೆ. ನಂತರ ನಾನು ಮತ್ತು ಬಸ್ಸಿನ ಡ್ರೈವರ-ಕಂಡೆಕ್ಟರ್ ಹಾಗೂ  ಬಸ್ಸಿನಲ್ಲಿದ್ದ ನಮ್ಮೂರಿನ ಕಾಶೀನಾಥ ಯಾದವ, ರಾಮಣ್ಣ ಹಲಸಂಗಿ, ಮಹಾಧೇವ ಸಿರನಾಳ ರವರೆಲ್ಲರೂ  ನನ್ನ ತಂಗಿಯ ಗಂಡನನ್ನು ಒಂದು ಖಾಸಗಿ ವಾಹನದಲ್ಲಿ ನನ್ನ ತಂಗಿಯ ಗಂಡನಿಗೆ ಚಿಕಿತ್ಸೆಗಾಗಿ ಅಫಜಲಪೂರಕ್ಕೆ ಕರೆದುಕೊಂಡು ಬರುತ್ತಿದ್ದಾಗ ಮಾರ್ಗ ಮದ್ಯ ಸಿರವಾಳ ಹತ್ತಿರ ಮೃತಪಟ್ಟಿರುತ್ತಾನೆ. ಅಂತಾ ಶ್ರೀ ಪಾಂಡುರಂಗ ತಂದೆ ಪ್ರಲ್ಹಾದ ಸಿರನಾಳ ಸಾ|| ಶೇಷಗಿರಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಮೇಹರಬಾನು ಗಂಡ ಅಹಮದ್ ಹುಸೇನ್ ಮನಸೂರ ಸಾ|| ಮನೆ ನಂ; 11-1410/34/ಎಫ್3 ಗಾಲಿಭ ಕಾಲೋನಿ 2 ನೇ ಕ್ರಾಸ್ ಮಹ್ಮದಿ ಚೌಕ್ ಜಿಲಾನಾಬಾದ ಕಲಬುರಗಿ ರವರ ಗಂಡ ಅಹಮದ್ ಹುಸೇನ್ ಮನಸೂರ ಇತನು ಗಾಜೀಪೂರ ಮಾರ್ಕೇಟನಲ್ಲಿ ಮ್ಯಾಟ್ರೇಡಸ್ ಚಪ್ಪಲ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತಾರೆ. ನಮ್ಮದು ಸರದಾರ ಪಟೇಲ್ ವೃತ್ತದ್ದಲಿ ಎರಡು ಸೆಟರ್ ಅಂಗಡಿಗಳು ಇದ್ದು ಅವುಗಳು ನಮಗೆ ಪರಿಚಯದವನಾದ ಮುಷ್ತಾಫ@ಬಾಬಾ ತಂದೆ ನಜೀರ ಸಹಮದ್ ಸಾ|| ಬಸವೇಶ್ವರ ಕಾಲೋನಿ ಕಲಬುರಗಿ ಇತನಿಗೆ ಆ ಎರಡು ಸೆಟರ್ ಅಂಗಡಿಗಳು 5 ವರ್ಷಗಳ ಹಿಂದೆ 20 ಲಕ್ಷಕ್ಕೆ ಮಾರಾಟ ಮಾಡಿದ್ದು. ಅದರಲ್ಲಿ 10 ಲಕ್ಷ ಆತನು ನಮಗೆ ಕೊಟ್ಟಿದ್ದು ನಂತರ ಕೆಲವೆ ದಿನಗಳಲ್ಲಿ ಆ ಸೆಟರ್ ಅಂಗಡಿಗಳು ಮಾಸ್ಟರ್ ಪ್ಲಾನನಲ್ಲಿ ಕಾರ್ಪೊರೆಷನನವರು ಒಡೆದು ಹಾಕಿದ್ದು ಇರುತ್ತದೆ. ಆಗ ಮುಷ್ತಾಫ@ಬಾಬಾ ಇತನು ನಮಗೆ ಮರಳಿ ಹಣ ಕೊಡುವಂತೆ ಕೆಳಿದ್ದು ಅದಕ್ಕಾಗಿ ನಾವು ಮರಳಿ 5 ಲಕ್ಷ ಕೊಟ್ಟಿದ್ದು ಇನ್ನೂ 5 ಲಕ್ಷ ಕೊಡುವದು ಬಾಕಿ ಇರುತ್ತದೆ ಆದರೆ ಮುಷ್ತಾಫ@ಬಾಬಾ ಇತನು ದಿನಾಲು ನಮ್ಮ ಮನೆಗೆ ಹಾಗು ನಮ್ಮ ಚಪ್ಪಲ್ ಅಂಗಡಿಗೆ ಹೋಗಿ ನಮ್ಮ ಪತಿ ಹಾಗು ಮಕ್ಕಳಿಗೆ  ಹಣ ಕೊಡುವಂತೆ ಕೇಳುವದು ಜಗಳ ಮಾಡುವದು ಮಾಡುತ್ತಾ ಬಂದಿರುತ್ತಾನೆ. ಹಿಗಿದ್ದು ಇಂದು ದಿನಾಂಕ; 23/10/2018 ರಂದು 2 ಪಿಎಮ್ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಮುಷ್ತಾಫ@ಬಾಬಾ ಇತನು ನಮ್ಮ ಮನೆಯ ಮುಂದೆ ರಸ್ತೆಯಲ್ಲಿ ಬಂದು ನನ್ನ ಗಂಡನ ಹೆಸರು ಒದರಿದನು ಆಗ ನಾನು ಹೊರಗಡೆ ಹೊದಾಗ ಮುಷ್ತಾಫ@ಬಾಬಾ ಇತನು ಅಹಮದ್ ಹುಸೇನ್ ಎಲ್ಲಿದ್ದಾನೆ ಅಂತಾ ಕೇಳಿದನು ಆಗ ನಾನು ಅವರು ಮನೆಯಲ್ಲಿ ಇಲ್ಲ ಅಂತಾ ಅಂದಾಗ ನನಗೆ ಕೊಡಬೇಕಾದ  5 ಲಕ್ಷ ರೂಪಾಯಿ ನನಗೆ ಬೇಕು ಅಂತಾ ಅಂದನು ಆಗ ನಾನು ಸದ್ಯ ನಮ್ಮಲ್ಲಿ ಹಣ ಇಲ್ಲ ನಮ್ಮ ಮನೆ ಮಾರಿ ಹಣ ಕೊಡುತ್ತೇವೆ ಅಂತಾ ಹೇಳಿದೇನು ಆಗ ಆತನು ನಿನ್ನ ಗಂಡ ನನಗೆ ಕೊಡಬೇಕಾದ ಹಣ ಕೊಡದಿದ್ದರೆ ಭೋಸಡಿ ಮಕ್ಕಳೆ ನಿಮಗೆ ಜೀವಸಹಿತ ಬಿಡುವದಿಲ್ಲ ಅಂತಾ ಅವಾಚ್ಯವಾಗಿ ಬೈದು ನನಗೆ ದಬ್ಬಿಸಿಕೊಟ್ಟನು ಆಗ ಅಲ್ಲೆ ಇದ್ದ ಸುರಯಾ ಬೆಗಂ ಗಂಡ ಅಬ್ದುಲ್ ನಬಿ ಹಾಗು ನಮ್ಮ ಮಗ ಮಿಸ್ಫರ್ ಹುಸೇನ ಇವರು ಹೆಣ್ಣಮಗಳ ಜೊತೆ ಯಾಕೆ ಜಗಳಮಾಡುತ್ತಿರಿ ಅಂತಾ ಅಂದಾಗ ನನ್ನೊಂದಿಗೆ ಜಗಳ ಮಡುವದು ಬಿಟ್ಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ