POLICE BHAVAN KALABURAGI

POLICE BHAVAN KALABURAGI

04 December 2011

GULBARGA DIST REPORTED CRIMES

ಕೊಲೆ ಪ್ರಕರಣ:

ಅಫಜಲಪೂರ ಪೊಲೀಸ್ ಠಾಣೆ : ಸಾಥಿರವ್ವ ಗಂಡ ದತ್ತಪ್ಪಾ ಜಮಾದಾರ ವ|| 50 ವರ್ಷ ಉ|| ಒಕ್ಕಲುತನ ಜಾತಿ|| ಕಬ್ಬಲಿಗೇರ ಸಾ|| ಬಳುಂಡಗಿ ತಾ|| ಅಫಜಲಪೂರ ರವರು ನನಗೆ ಈರಮ್ಮಾ ಎಂಬ ಮಗಳಿದ್ದು, ಮಗಳು ಹುಟ್ಟಿದ 3 ವರ್ಷಗಳ ನಂತರ ಅಂದರೆ ಸುಮಾರು 30 ವರ್ಷಗಳ ಹಿಂದೆ ನನ್ನ ಗಂಡ ದತ್ತಪ್ಪಾ ತಂದೆ ವೀರಭದ್ರಪ್ಪಾ ತಳವಾರ ಸಾ|| ಕೋಗನೂರ ಗ್ರಾಮ ಈತನಿಗೆ ಅದೆ ಗ್ರಾಮದ ಜನರು ಕೊಲೆ ಮಾಡಿದ್ದು ನನ್ನ ಗಂಡನ ಕೊಲೆಯಾದ ನಂತರ ನಾನು ನನ್ನ 3 ವರ್ಷದ ಈರಮ್ಮಾ ಮಗಳೊಂದಿಗೆ ತವರುರಾದ ಅಫಜಲಪೂರ ತಾಲೂಕಿನ ಬಳುಂಡಗಿ ಗ್ರಾಮಕ್ಕೆ ಬಂದು ವಾಸವಾಗಿದ್ದು ನನಗೆ ಯಾರು ಆಸರೆ ಇಲ್ಲದ ಕಾರಣ ಭೀಮರಾಯ ತಂದೆ ಸೈದಪ್ಪ ತಳವಾರ ಸಾ|| ಸೊನ್ನ ಹಾ|| || ಬಳೂಂಡಗಿ ಈತನೊಂದಿಗೆ ವಾಸವಾಗಿದ್ದು, ಭಿಮರಾಯ ಈತನಿಗೆ ಸಕ್ಕುಬಾಯಿ ಎಂಬ ಹೆಂಡತಿ ಇದ್ದು ಅವಳಿಗೆ ಸಂತೋಷ ಮತ್ತು ಅಂಬಿಕಾ ಇಬ್ಬರು ಮಕ್ಕಳಿರುತ್ತಾರೆ. ಸಂತೋಷ ಈತನು ಅಫಜಲಪೂರದಲ್ಲಿ ಟೇಲರ ಕೆಲಸ ಮಾಡಿಕೊಂಡಿದ್ದು ಭಿಮರಾಯ ಈತನು ಬಳೂಂಡಗಿಯಲ್ಲಿ ಪರಶುರಾಮ, ಮತ್ತು ಪ್ರಶಾಂತ ಇವರ ಹೊಲ ಪಾಲಿಗೆ ಮಾಡಿದ್ದು ಇರುತ್ತದೆ. ಹೊಲದಲ್ಲಿ ಕಬ್ಬು ಬೆಳೆದಿದ್ದು ಭಿಮರಾಯ ತಳವಾರ ಈತನು ದಿನಾಲು ಹೊಲಕ್ಕೆ ಹೋಗಿ ಕರೆಂಟ ಬಂದಾಗ ನೀರು ಬಿಡಲು ಹೊಗುತಿದ್ದು ನಂತರ ನಮ್ಮ ಮನೆಯಲ್ಲಿ ಬಂದು ಇರುತಿದ್ದನು. ದಿನಾಂಕ 30.11.2011 ರಂದು ಸಾಯಂಕಾಲ್ 7 ಗಂಟೆ ಸುಮಾರಿಗೆ ನಾನು ಮತ್ತು ಭಿಮರಾಯ ಇಬ್ಬರು ಹೊಲದಲ್ಲಿ ನೀರು ಬಿಡುತಿದ್ದಾಗ ನನ್ನ ಮಗಳು ಈರಮ್ಮಾ ಇವಳು ಪಕ್ಕದ ಮನೆಯ ಶಿವಕಾಂತಬಾಯಿ ಇವಳು ಬಾಯಿ ಮಾತಿನ ಜಗಳ ತೆಗೆದು ನನ್ನ ಗಂಡನಾದ ದೇವಿಂದ್ರ ಈತನಿಗೆ ಓಲೆ ಊದುವ ಫೊಕಣಿಯಿಂದ ತಲೆಗೆ ಹೊಡೆದಿದ್ದಾಳೆ ರಕ್ತ ಬಂದಿದೆ ಅವನಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗೊಣ ಬಾ ಅಂತ ಕರೆದಾಗ ನಾನು ಮತ್ತು ಭಿಮರಾಯ ಇಬ್ಬರು ಮನೆಗೆ ಬಂದು ಭಿಮರಾಯ ಈತನು ಶಿವಕಾಂತಬಾಯಿಗೆ ಯಾಕೆ ಹೊಡೆದಿದ್ದಿ ಅಂತ ಕೇಳಿದಾಗ ಅವಾಚ್ಯವಾಗಿ ಬೈದು ಅವನು ಏನು ನಿನ್ನ ಖಾಸ್ ಅಳಿಯ ಅದಾನ ಅವನು ನಿನ್ನ ರಂಡಿಯ ಮಗಳ ಗಂಡ ಅದಾನ ಅಂತಾ ಅಂದಳು ಅದಕ್ಕೆ ಭಿಮರಾಯ ಈತನು ಸಿಟ್ಟಿಗೆ ಬಂದು ಸದರಿ ಶಿವಕಾಂತಬಾಯಿಗೆ ಕೈಯಿಂದ ಅವಳ ಕಪಾಳದ ಮೇಲೆ ಹೊಡೆದಿದ್ದನು. ಆಗ ಅವಳು ಭಿಮರಾಯನಿಗೆ ನೀನು ರಂಡಿ ಮಗಳ ಗಂಡನಗೊಸ್ಕರ ನನಗೆ ಹೊಡೆದಿದ್ದಿ ನಿನಗೆ ಏನ ಮಾಡುಸ್ತಿನಿ ನೋಡು ಅಂತಾ ಅಂದಳು ನಂತರ ಅವಳು ಈ ವಿಷಯವನ್ನು ಭಿಮರಾಯನ ಚಿಕ್ಕಪ್ಪನ ಮಗನಾದ ದಯಾನಂದ ತಂದೆ ಸಾಯಿಬಣ್ಣಾ ತಳವಾರ ಸಾ|| ಸೋನ್ನ ಇವನ ಹತ್ತಿರ ಹೋಗಿ ನಿನ್ನ ತಮ್ಮ ನನಗೆ ಬಂದು ಹೇಗೆ ಹೋಡೆದಿದ್ದಾನೆ ನೋಡು ಅಂತಾ ಹೇಳಿದ್ದು ಮತ್ತು ನಾವು ಅವನ ಮೇಲೆ ಸೇಡು ತಿರಿಸಿಕೊಳ್ಳುತ್ತೆವೆ ಅಂತಾ ಅವನ ಮುಂದೆ ಹೇಳಿದ ಬಗ್ಗೆ ದಯಾನಂದ ಈತನು ನನಗೆ ಬಂದು ಹೇಳಿದ್ದು ಇರುತ್ತದೆ. ದಿನಾಂಕ 03/12/2011 ರಂದು ರಾತ್ರಿ 8 ಗಂಟೆಯ ಸುಮಾರಿಗೆ ನಮ್ಮ ಮೆಟಗಿಯಿಂದ ಭೀಮರಾಯ ತಂದೆ ಸೈದಪ್ಪಾ ತಳವಾರ ನಮ್ಮ ಹತ್ತಿರ ಹೊಲದ ಕೆಲಸಕ್ಕೆಂದು ಜೀತ ಇದ್ದ ಸಿದ್ದಪ್ಪಾ ತಂದೆ ಗುಂಡುರಾಯ ಮಾಸ್ತರ ಸಾ|| ಸೋನ್ನ ಇಬ್ಬರು ಪ್ರತಿ ದಿನದಂತೆ ಹೊಲದ ಕಬ್ಬಿಗೆ ನೀರು ಬಿಟ್ಟು ಬರುತ್ತೆವೆ ಅಂತಾ ಹೋಗಿದ್ದು ಬಹಳ ಹೊತ್ತಾದರು ಭಿಮರಾಯ ಮತ್ತು ಆಳಮಗಾ ಸಿದ್ದಪ್ಪಾ ಇವರು ಮರಳಿ ಮನೆಗೆ ಬರದ ಕಾರಣ ನಾನು ಹೊಲದಲ್ಲಿ ನೊಡಿಕೊಂಡು ಬಂದರಾಯ್ತು ಅಂತ ಹೊಲದ ದಾರಿ ಹಿಡಿದು ಹೊಗುತಿದ್ದಾಗ ಬಾಬು ಮುಜಾವರ ಇವರ ಹೊಲದ ದಂಡೆಗೆ ಇರುವ ಬಳ್ಳುಂಡಗಿಯಿಂದ-ಚಿಕ್ಕ ಅಳ್ಳಗಿಗೆ ಹೊಗುವ ರಸ್ತೆಯ ಮದ್ಯದಲ್ಲಿ ಭಿಮರಾಯ ತಂದೆ ಸೈದಪ್ಪಾ ತಳವಾರ ಈತನು ಸತ್ತು ಬಿದ್ದಿದ್ದು ನೋಡಿ ಗಾಬರಿಯಿಂದ ನೊಡಲಾಗಿ ಅವನ ಕುತ್ತಿಗೆಗೆ ಆಯುಧದಿಂದ ಕೊಯ್ದಿದ್ದು ಎಡ ಎದೆಗೆ ಬಂದುಕಿನಿಂದ ಗುಂಡು ಹಾರಿಸಿದ್ದರ ಒಂದು ಚಿಕ್ಕ ತುತಿನ ರಕ್ತಗಾಯ ಹಾಗು ಅದೆ ರೀತಿ ಹೊಂಕಳ ಹತ್ತಿರ ಒಂದು ಚಿಕ್ಕ ರಕ್ತಗಾಯ ಕಂಡು ಬಂದಿದ್ದು ನೋಡಿದೆನು. ದಿನಾಂಕ 03/12/2011 ರಂದು ರಾತ್ರಿ 8 ಗಂಟೆಯ ಸುಮಾರಿಗೆ ಭಿಮಾರಾಯ ತಳವಾರ ಈತನು ಶಿವಕಾಂತಬಾಯಿಗೆ ಕೈಯಿಂದ ಒಂದೇರಡು ಎಟು ಹೊಡೆದಿದ್ದರಿಂದ ಅದೆ ದ್ವೇಶದಿಂದ ಅವಳು ದ್ವೇಷ ಸಾಧಿಸಿ ಅರ್ಜುನ ತಂದೆ ರಾಮಚಂದ್ರ ತಳವಾರ, ಶಿವಕಾಂತಬಾಯಿ ಗಂಡ ಅರ್ಜುನ ತಳವಾರ, ಪ್ರಕಾಶ ತಂದೆ ಅರ್ಜುನ ತಳವಾರ, ಸುರೇಶ ತಂದೆ ಅರ್ಜುನ ತಳವಾರ ಸಾ|| ಎಲ್ಲರೂ ಬಳೂಂಡಗಿ ಗ್ರಾಮ ತಾ|| ಅಫಜಲಪೂರ ಇವರೆಲ್ಲರೂ ಭಿಮರಾಯನಿಗೆ ಪಿಸ್ತೂಲಿನಿಂದ ಗುಂಡು ಹೊಡೆದು ಆಯುಧದಿಂದ ಕುತ್ತಿಗೆಗೆ ಭಯಾನಕವಾಗಿ ಕೊಯ್ದು ಕೊಲೆ ಮಾಡಿರುತ್ತಾರೆಂದು ನನಗೆ ಬಲವಾದ ಸಂಶಯ ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 198/11 ಕಲಂ 302 ಸಂ. 34 ಐ ಪಿ ಸಿ ಮತ್ತು 25 27 ಐ ಎ ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕೂಲಿ ಕಾರ್ಮಿಕನ ಸಾವು:

ಮಳಖೇಡ ಠಾಣೆ: ಹಸೀನಾ ಗಂಡ ಮಹ್ಮದ್ ಜಿಲಾನಿ ವ:35 ಜಾ|| ಮುಸ್ಲೀಂ ಸಾ|| ದಂಡೋತಿ ತಾ|| ಚಿತ್ತಾಪುರ ರವರು ನನ್ನ ಗಂಡನಾದ ಮಹ್ಮದ್ ಜಿಲಾನಿ ಇತನು ಕೂಲಿ ಕೆಲಸಕ್ಕೆ ಅಂತ ಮಳಖೇಡ ಗ್ರಾಮದ ಆರ್.ಸಿ.ಎಫ್ ಕಂಪನಿಯಲ್ಲಿ ಟ್ರಾಕ್ಟರಗೆ ಕಟ್ಟಿಗೆ ಹಾಕುವ ಕೆಲಸಕ್ಕೆ ಹೋಗಿದ್ದು ಕೆಲಸ ಮಾಡುತ್ತಿದ್ದಾಗ ಮೈಮೇಲೆ ಕಟ್ಟಿಗೆ ಬಿದ್ದು ಗಾಯವಾಗಿದ್ದು ಉಪಚಾರದ ಸಲುವಾಗಿ ಸರ್ಕಾರಿ ಆಸ್ಪತ್ರೇ ಗುಲಬರ್ಗಾಕ್ಕೆ ಕರೆದುಕೊಂಡು ಹೊರಟಾಗ ಮಾರ್ಗ ಮಧ್ಯ ಮೃತಪಟ್ಟಿದ್ದು, ಮೊಹಮದ ಯುಸೂಪ್ ಖಾನ, ಮತ್ತು ಮಹ್ಮದ್ ಗೌಸ್ ಇವರು ಕಟ್ಟಿಗೆಯನ್ನು ಟ್ರ್ಯಾಕ್ಟರದಲ್ಲಿ ಹಾಕುವಾಗ ಜೀವಕ್ಕೆ ಅಪಾಯವಾಗಬಹುದು ಅಂತಾ ಗೊತ್ತಿದ್ದು ಮುಂಜಾಗ್ರತಾ ಕ್ರಮ ಕೈಕೊಳ್ಳದೆ ನನ್ನ ಗಂಡ ಮಹ್ಮದ ಜಿಲಾನಿ ಇತನಿಗೆ ಟ್ರ್ಯಾಕ್ಟರನಲ್ಲಿ ಕಟ್ಟಿಗೆ ಕೊಡ್ಡ ಹಾಕಲು ಹೇಳಿ ನಿಷ್ಕಾಳಜಿತನ ಹಾಗು ಬೇಜವಬ್ದಾರಿತನ ತೋರಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.103/2011 ಕಲಂ 304 (ಎ) ಸಂಗಡ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

GULBARGA DIST REPORTED CRIME

ಕೊಲೆ ಪ್ರಕರಣ:

ಫರಹತಾಬಾದ ಪೊಲೀಸ್ ಠಾಣೆ: ಶ್ರೀ ಮಸ್ತಾನಸಾಬ ತಂದೆ ಮೌಲಾನಾಸಾಬ ಶೇಖ ವ:45 ವರ್ಷ ಜಾ: ಮುಸ್ಲಿಂ ಉ: ಗುತ್ತಿಗೇದಾರ ಸಾ: ಡೆಕೇನ ಕಾಲೂನಿ ಶೇಖ ರೋಜಾ ಖಾದ್ರಿ ಚೌಕ ಗುಲಬರ್ಗಾ ರವರು ನಮ್ಮ ತಂದೆ 5 ಜನ ಗಂಡು ಮಕ್ಕಳು 4 ಜನ ಹೆಣ್ಣು ಮಕ್ಕಳಿದ್ದು ತಂದೆ ಯವರು 6 ವರ್ಷಗಳ ಹಿಂದೆ ಮೃತ್ತ ಪಟ್ಟಿರುತ್ತಾನೆ. ತಾಯಿಯಾದ ಮಹಿಬೂಬಿ ಇವಳು ನನ್ನ ಹತ್ತಿರ ಇದ್ದು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಗಂಡು ಮಕ್ಕಳಲ್ಲಿ ನಾನು ಮತ್ತು ಖಾಜಾಸಾಬ. ಅಬ್ಬಾಸ. ಅಯುಬ. ಹಾಗೂ ರಹೀಮ ಎಲ್ಲರೂ ಕಾರ ಪೇಂಟರ ಕೆಲಸ ಮಾಡಿಕೊಂಡು ಹೊಂಡತಿ ಮಕ್ಕಳ್ಳೊಂದಿಗೆ ಆಳಂದ ರಸ್ತೆಯ ಖಾದರಿ ಚೌಕದ ಡೆಕ್ಕನ ಕಾಲೂನಿಯಲ್ಲಿ ಬೇರೆ ಬೇರೆಯಾಗಿ ವಾಸಿಸುತ್ತೆವೆ. ನನ್ನ ತಮ್ಮನಾದ ರಹೀಮ ಶೇಖ ಇತನು ತನ್ನ ಹೆಂಡತಿಯಾದ ಫಾತಿಮಾ ಹಾಗೂ ತನ್ನ 2 ಮಕ್ಕಳೊಂದಿಗೆ ಶೇಖ ರೋಜಾದ ನಬಿ ಕಾಲೂನಿಯಲ್ಲಿ ವಾಸವಾಗಿರುತ್ತಾರೆ. ಆತನು ಕೂಡಾ ಕಾರ ಪೇಂಟರ ಕೆಲಸ ಮಾಡಿಕೊಂಡು ಇರುತ್ತಾನೆ. ದಿನಾಂಕ 3/12/2011 ರಂದು ಬೆಳ್ಳಿಗೆ 10 ಗಂಟೆಯ ಸುಮಾರಿಗೆ ಖಣದಾಳದ ಸರಕಾರಿ ಪ್ರೌಡ ಶಾಲೆಯ ಆವರಣದಲ್ಲಿ ಒಬ್ಬ ವ್ಯಕ್ತಿ ಕೊಲೆಯಾಗಿದ್ದು ಆ ವ್ಯಕ್ತಿಯ ಜೇಬಿನಲ್ಲಿದ ಡೈರಿಯಲ್ಲಿ ನನ್ನ ಫೋನ ನಂಬರ ನೋಡಿ ನನಗೆ ಫೋನ ಮಾಡಿದ್ದು ನಾನು ಗಾಬರಿಗೊಂಡು ನಾನು ಮತ್ತು ನನ್ನ ತಮ್ಮನಾದ ಖಾಜಾ ಹಾಗೂ ಇತರರೊಂದಿಗೆ ಸ್ಥಳಕ್ಕೆ ಹೋಗಿ ನೋಡಲು ತನ್ನ ತಮ್ಮನಾದ ರಹೀಮ ಇತನು ಮೃತ್ತ ಪಟ್ಟಿದ್ದು ನೋಡಲಾಗಿ ಆತನ ಕುತ್ತಿಗೆಗೆ ಹರಿತವಾದ ಚಾಕುವಿನಿಂದ ಚುಚ್ಚಿ ಭಾರಿ ರಕ್ತಗಾಯ ಪಡಿಸಿದ್ದರಿಂದ ಮೃತ್ತ ಪಟ್ಟಿರುತ್ತಾನೆ. ರಹೀಮ ಇತನು ನಿನ್ನೆ ದಿನಾಂಕ 2/12/2011 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ ಇನ್ನೊಬ್ಬ ತಮ್ಮನಾದ ಖಾಜಾಸಾಬ ಇತನ ಮೊಬೈಲ ತಗೆದುಕೊಂಡು ನನಗೆ ಕೆಲಸ ಇದೆ ಹೊಗುತ್ತೆನೆ ಅಂತಾ ಹೇಳಿದರ ಬಗ್ಗೆ ನನ್ನ ತಮ್ಮನಾದ ಖಾಜಾಸಾಬ ಇತನಿಂದ ಗೊತ್ತಾಗಿದ್ದು ಇರುತ್ತದೆ. ಸದರಿ ನನ್ನ ತಮ್ಮನಾದ ರಹೀಮ ಇತನಿಗೆ ನಿನ್ನೆ ದಿನಾಂಕ 2/12/2011 ರಂದು ಯಾರೊ ರಾತ್ರಿ ವೇಳೆಯಲ್ಲಿ ಯಾವುದೊ ದುರುದ್ವೇಶದಿಂದ ಕರೆದುಕೊಂಡು ಹೋಗಿ ಖಣದಾಳ ಗ್ರಾಮಕ್ಕೆ ಹೊಗುವ ಸರಕಾರಿ ಪ್ರೌಡ ಶಾಲೆಯ ಆರವಣದಲ್ಲಿ ಕೊಲೆ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 212/2011 ಕಲಂ 302 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.