POLICE BHAVAN KALABURAGI

POLICE BHAVAN KALABURAGI

12 February 2015

Kalaburagi District Reported Crimes

ಕೊಲೆ ಪ್ರಕರಣ :
ಮಹಿಳಾ ಠಾಣೆ : ಶ್ರೀ ರಾಜೇಂದ್ರ ತಂದೆ ನಾಯಕ ಗಾಯಕವಾಡ ಸಾ:ಮನೆ ನಂ:64 ಕೆ.ಹೆಚ್.ಬಿ ಕಾಲೋನಿ ಓಲ್ಡ್ ಜೇವರ್ಗಿ ರೋಡ ಕಲಬುರಗಿ ಇವರ ಮಗಳಾದ ಜ್ಞಾನಲತಾ ಇವಳನ್ನು ಇಮಾಮ ತಂದೆ ಮೈನೊದ್ದೀನ್ ಇತನು ಮದುವೆಯಾಗಿದ್ದು, ಮದುವೆಯ ನಂತರ ಅವಳಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದು, ದಿನಾಂಕ 24-08-2014 ರಂದು ಇಮಾಮ್ ಮತ್ತು ಅವನ ತಾಯಿ ಹನೀಫಾ ಬೀ ಹಾಗೂ ಸಂಜೀವ ಕುಮಾರ ಎಂಬುವರು ನನ್ನ  ಮಗಳನ್ನು ಕೊಲೆಗೈದು ಶವವನ್ನು ಬಚ್ಚಿಟ್ಟು ಸಾಕ್ಷಿ ಪುರಾವೆ ನಾಶ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ವಾಹನ ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಸಚಿನಕುಮಾರ ತಂದೆ ಭೀಮಸಿಂಗ್ ಚವ್ಹಾಣ ಸಾಃ ಎಲ್.ಐ.ಜಿ 104, 01 ನೇ ಹಂತ ಆದರ್ಶ ನಗರ ಕಲಬುರಗಿ ಇವರ ಪರಿಚಯದವರಾದ ಸಿದ್ದು, ಪ್ರವೀಣ, ಪ್ರಶಾಂತ ಹಾಗು ಜೀವನಕುಮಾರ ಇವರೆಲ್ಲರೂ ಕೆಲಸದ ನಿಮಿತ್ಯ ಟಾಟಾ ಸುಮೋ ವಾಹನವನ್ನು ಬಸವಕಲ್ಯಾಣಕ್ಕೆ ಹೋಗಿ ಬರುವದಾಗಿ ವಾಹನವನ್ನು ತೆಗೆದುಕೊಂಡು ಮರಳಿ ರಾತ್ರಿ ದಿನಾಂಕ: 11/02/2015 ರಂದು ರಾತ್ರಿ 01:30 ಎ.ಎಂ. ಸುಮಾರಿಗೆ ವಾಹನವನ್ನು ತಂದೆ ಮನೆಯ ಮುಂದೆ ನಿಲ್ಲಿಸಿ, ನನಗೆ ಕೀ ಕೊಟ್ಟು ಹೋದರು. ನಂತರ ಫಿರ್ಯಾದಿದಾರನು ವಾಹನಕ್ಕೆ ಲಾಕ್ ಮಾಡಿ ಮನೆಯಗೊಳಗೆ ಹೋಗಿ ಮಲಗಿಕೊಂಡು ಬೆಳಗ್ಗೆ 07:00 ಎ.ಎಂ. ಸುಮಾರಿಗೆ ಮನೆಯಿಂದ ಹೊರಗಡೆ ಬಂದು ನೋಡಲಾಗಿ ಹೊರಗಡೆ ನಿಲ್ಲಿಸಿದ ಟಾಟಾ ಸುಮೋ ವಾಹನ ಸಂ. ಕೆ.ಎ 32 ಎಂ. 3930 ಇರಲಿಲ್ಲ. ಅದರ ಅಂದಾಜು ಬೆಲೆ 2,50,000/- ರೂ. ಇರುತ್ತದೆ. ಸದರಿ ವಾಹನವನ್ನು ಎಲ್ಲಾ ಕಡೆಗೂ ಹುಡುಕಾಡಿದರೂ ಸಹ ಸಿಕ್ಕಿರುವುದಿಲ್ಲಾ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಾತ್ಮ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.