POLICE BHAVAN KALABURAGI

POLICE BHAVAN KALABURAGI

13 July 2017

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ನರೋಣಾ ಠಾಣೆ : ದಿನಾಂಕ 12-07-2017 ರಂದು  ಮುನ್ನಳ್ಳಿ ಗ್ರಾಮದ ಮಸಣಸಿದ್ದೇಶ್ವರ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪಿಟ ಜೂಜಾಟಕ್ಕೆ ಹಣ ಪಣಕಿಟ್ಟು ಆಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ.ಗಜಾನನ.ಕೆ ನಾಯಕ, ಪಿ.ಎಸ್‌.  ನರೋಣಾ ಪೊಲೀಸ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಮಾನ್ಯ ಸಿಪಿಐ ಆಳಂದ ರವರ ಮಾರ್ಗದರ್ಶನದಂತೆ ಮುನ್ನಳ್ಳಿ ಗ್ರಾಮದ ಮಸಣಸಿದ್ದೇಶ್ವರ ದೇವಸ್ಥಾನದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ದೇವಸ್ಥಾನದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ 7 ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪಿಟ ಪಣಕ್ಕೆ ಹಣ ಹಚ್ಚಿ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಅವರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲಾಗಿ  1) ಈರಣ್ಣಾ ತಂದೆ ಅಣ್ಣಪ್ಪ ಹತ್ತರಕಿ, ಸಾ||ಆಳಂದ 2) ಗುಂಡೇರಾವ ತಂದೆ ಜೋತಿರಾಮ ಇಂಗಳೆ, ಸಾ||ಮುನ್ನಳ್ಳಿ  3) ಅಮ್ಲಯ್ಯ ತಂದೆ ತಮ್ಮಯ್ಯ ಗುತ್ತೇದಾರ, 4) ಪ್ರಭು ತಂದೆ ದೇವಿಂದ್ರಪ್ಪ ಬುಜುರ್ಕೆ, ಸಾ||ಮುನ್ನಳ್ಳಿ, 5) ಧನಂಜಯ ತಂದೆ ರಾಮರಾವ ಕುಲಕರ್ಣಿ, ಸಾ||ಮುನ್ನಳ್ಳಿ 6) ಬಸವರಾಜ ತಂದೆ ಚಂದ್ರಕಾಂತ ಮಾಳಗೆ, 7) ಅಮ್ಲಯ್ಯ ತಂದೆ ರಾಮಯ್ಯ ಗುತ್ತೇದಾರ, ಸಾ||ಮುನ್ನಳ್ಳಿ ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 6220/- ರೂಪಾಯಿ ಮತ್ತು 52 ಇಸ್ಪಿಟ್‌‌ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅತ್ಯಾಚಾರ ಪ್ರಕರಣ :
ಮಹಿಳಾ ಠಾಣೆ : ಕುಮಾರಿ ಇವಳು ಬೆಳಗ್ಗೆ ಶರಣು ತಂದೆ ಜಗನ್ನಾಥ ತೆಗನೂರ ಎನ್ನುವವರು ನಡೆಸುತ್ತಿರುವ ಆಟೋದಲ್ಲಿ ಬೇರೆ ಮಕ್ಕಳೋಂದಿಗೆ  ಶಾಲೆಗೆ ಹೋಗಿ  ಶಾಲೆಯ ಸಮಯ 8-30.ಎಮ್ ದಿಂದ  3-30 ಪಿಎಮ್ ದವರೆಗೆ ಶಾಲೆ ಮುಗಿಸಿಕೊಂಡು ಮರಳಿ 4-45 ಪಿಎಮ್ ಬರುತ್ತಾಳೆಮನೆಯಲ್ಲಿ ನನ್ನ ಮಗಳು  ಮತ್ತು ನನ್ನ ಹೆಂಡತಿ ಮಾತ್ರ ಇರುತ್ತಾರೆ. ನಿನ್ನೆ ದಿನಾಂಕ 11-7-2017 ರಂದು ಬೆಳಗ್ಗೆ 7-30 ಗಂಟೆಗೆ ಮನೆಯಿಂದ ಆಟೋದಲ್ಲಿ ಶಾಲೆಗೆ ಹೋಗಿರುತ್ತಾಳೆ ನಾನು ರಾತ್ರಿ 8-30ಪಿಎಂದ ಸುಮಾರಿಗೆ ಮನೆಗೆ ಬಂದು ಊಟ ಮಾಡಿ ಮನೆಯಲ್ಲಿದ್ದಾಗ ನನ್ನ ಮಗಳು ಮೂತ್ರವಿರ್ಸಜನೆ ಮಾಡಿ ಬಂದು ಒಮ್ಮಿದೊಮ್ಮೆ ಹೊಟ್ಟೆ ನೋವು ಅಂತಾ ಅಳಲಾರಂಭಿಸಿದಳು ಅವಳನ್ನು ಶಾಲೆಯಲ್ಲಿ ಪ್ರಾಥನೆ ಮಾಡುವ ವೇಳೆಯಲ್ಲಿ ಶಾಲೆಯ ಕನ್ನಡ/ಪಿ.ಟಿ ಮಾಸ್ಟರ ಅವಳನ್ನು ಒಂದು ಕೋಣೆಯಲ್ಲಿ ಕರೆದುಕೊಂಡು ಹೋಗಿ ಒಂದು ಸಲ ಕೈಗೆ ಹೊಡೆದು ಅವಳ ಬಟ್ಟೆನ್ನು ಬಿಚ್ಚಲು ಹೇಳಿದ್ದು ಆನಂತರ ಅವನು ತನ್ನ ಕೂದಲನ್ನು ಏಕಿ ಮಾಡು ಜಾಗದಲ್ಲಿ ಹಾಕಿದಾನೆ ಎಂದು ತಿಳಿಸಿದ್ದು ಅವಳನ್ನು ಕರೆದುಕೊಂಡು ಡಾ:ಮಂಗಳಾ ಹರವಾಳ ಇವಳ ಹತ್ತಿರ ತೋರಿಸಿದಾಗ ಅವರು ನನ್ನ ಮಗಳಿಗೆ ಬಲತ್ಕಾರ ಆಗಿರಬಹುದೆಂದು ಸಂಶಯಪಟ್ಟು ಸರ್ಕಾರಿ ಆಸ್ಪತ್ರೆಗೆ ತೋರಿಸಲು ತಿಳಿಸಿದರು ನಾವು ಮಗಳನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆಸ್ಪತ್ರೆಯವರು ಬಲತ್ಕಾರವಾದ ಬಗ್ಗೆ ಸಂಶಯಪಟ್ಟರು ನನ್ನ ಮಗಳು  ನಡೆದ ಘಟನೆಯ ಬಗ್ಗೆ ಕೂಲಕುಂಶವಾಗಿ ತನಿಖೆ ಮಾಡಿ ತಪ್ಪಸ್ಥಿರ ವಿರುದ್ದ ಕಾನೂನುಕ್ರಮ ಜರುಗಿಸಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.
ಅಪಘಾತ ಪ್ರಕರಣ :
ಮಳಖೇಡ ಠಾಣೆ : ಶ್ರೀ ಉಸ್ಮಾನ ತಂದೆ ಸೈಯದ ಇನಾಯತ ಅಹ್ಮದ ಖಾದರಿ ಸಾ: ಕಲಬುರಗಿ ರವರ  ಅಣ್ಣನಾದ ಸೈಯದ ಅಲಿ ಹೈದರ ಖಾದರಿ ಇತನ ಹೆಸರಿನಲ್ಲಿ ನಮ್ಮದೊಂದು ಮಹಿಂದ್ರಾ ಸ್ಕಾರ್ಪಿಯೋ ಜೀಪ ನಂ-KA-28.M-8444 ನೇದ್ದು ಇರುತ್ತದೆ, ನಿನ್ನೆ ದಿನಾಂಕ 09-07-2017 ರಂದು ನಮ್ಮ ಸಂಭಂಧಿಕರೊಬ್ಬರು ಹೊರದೇಶಕ್ಕೆ ಹೋಗುವವರಿದ್ದಿದ್ದರಿಂದ ಅವರಿಗೆ ಹೈದ್ರಾಬಾದ ಏರಪೋರ್ಟ ವರೆಗೆ ಬಿಟ್ಟು ಬರುವ ಸಂಬಂಧ ನಾನು ಮತ್ತು ನನ್ನ ಗೆಳೆಯ ಮಹ್ಮದ ರಸೂಲ@ಸೋಹೆಲ ತಂದೆ ರೌಫ ಪಟೇಲ ಸರಪಂಚ್ ಹಾಗು ಅಬ್ದುಲ ಕಲೀಮ್ ತಂದೆ ಅಬ್ದುಲ ಸಲೀಮ 3 ಜನರು ಕೂಡಿಕೊಂಡು ನಮ್ಮ ಸಂಭಂದಿಕರಿಗೆ ಹೈದ್ರಾಬಾದನ ಹವಾಯಿ ಅಡ್ಡೆಯವರೆಗ ಬಿಟ್ಟು ಬರುವ ಸಲುವಾಗಿ ನಮ್ಮ ಸ್ಕಾರ್ಪಿಯೋ ಗಾಡಿ ತೆಗೆದುಕೊಂಡು ನಿನ್ನೆ 11-30 ,ಎಮ್ ಕ್ಕೆ ಹೊರಟು ಹೈದ್ರಾಬಾದಗೆ ಹೋಗಿ ಏರಪೋರ್ಟದಲ್ಲಿ ನಮ್ಮ ಸಂಭಂಧಿಕರಿಗೆ ಬಿಟ್ಟು ಮರಳಿ ನಾವು ಅಲ್ಲಿಂದ 06-00 ಪಿ,ಎಮ್ ಕ್ಕೆ 03 ಜನರು ಕಲಬುರಗಿಯ ಕಡೆಗೆ ಬರುತ್ತಿದ್ದಾಗ ನನ್ನ ಗೆಳೆಯ ಮಹ್ಮದ ರಸೂಲ@ಸೋಹೆಲ್ ಇತನು ವಾಹನ ಚಲಾಯಿಸುತ್ತಿದ್ದನು ನಾವು ಅದರಲ್ಲಿ ಕುಳಿತಿದ್ದೆವು ನಾವು ಪರಗಿ-ಕೊಡಂಗಲ್ಸೇಡಂ ಮಾರ್ಗವಾಗಿ ಕಲಬುರಗಿ ಕಡೆಗೆ ಬರುತ್ತಿದ್ದಾಗ ದಿನಾಂಕ 09-07-2017 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ನಾವು ಮಳಖೇಡ ಗ್ರಾಮದ ಸಮೀಪ ಬರುತ್ತಿದ್ದಾಗ ಬ್ರಿಜ್ ಹತ್ತಿರ ನಮ್ಮ ಸ್ಕಾರ್ಪಿಯೋ ವಾಹನದ ಚಾಲಕ ತನ್ನ ವಶದಲ್ಲಿದ್ದ ವಾಹನವನ್ನು ಅತೀವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿ ಒಮ್ಮೆಲೆ ಬಲಗಡೆ ಕಟ್ ಮಾಡಿ ತಿರುವಿದ್ದರಿಂದ ನಮ್ಮ ಕಾರು ರೋಡ ಮೇಲೆ ಪಲ್ಟಿಯಾಗಿ ರೋಡಿನ ಬಲಡಗೆ ತೆಗ್ಗಿನಲ್ಲಿ ಅಫಗಾತವಾಗಿ ಬಿದ್ದಾಗ  ಸದರಿ ಅಫಗಾತದಲ್ಲಿ ನನಗೆ ಕುತ್ತಿಗೆಯ ಹಿಂದುಗಡೆ ಸಾದಾ ಒಳಪೆಟ್ಟು ಆಗಿರುತ್ತದೆ, ನಮ್ಮ ಕಾರಿನ ಚಾಲಕ ಮಹ್ಮದ ರಸೂಲ@ ಸೋಹೆಲ್ ಈತನಿಗೆ ನೋಡಲಾಗಿ ಆತನಿಗೆ ಬಲಗಡೆ ಮಗ್ಗಲಿಗೆ ತರಚಿದ ರಕ್ತಗಾಯ ಮತ್ತು ಗುಪ್ತಗಾಯ ಆಗಿದ್ದು ಬಲಗೈ ರಟ್ಟೆಯ ಹತ್ತಿರ ಗುಪ್ತಗಾಯವಾಗಿದ್ದು ಕಂಡು ಬಂದಿರುತ್ತದೆ ನಂತರ ಬರುವ ಹೋಗುವ ವಾಹನಗಳ ಬೆಳಕಿನಲ್ಲಿ ಅಬ್ದುಲ ಕಲೀಮ ಇತನಿಗೆ ನೋಡಲಾಗಿ ಆತನಿಗೆ ಭಾರಿ ಗಾಯಗಳಾಗಿದ್ದರಿಂದ ಬೆಹೋಶ ಇದ್ದನು ಆತನಿಗೆ ನೋಡಲಾಗಿ ಬಲಗಡೆ ಪಕ್ಕೆಲಬುಗಳಿಗೆ ಭಾರಿ ರಕ್ತಗಾಯವಾಗಿ ಮುರಿದಿದ್ದು ತಲೆಗೆ ಬಲಗಡೆ ಭಾರಿ ರಕ್ತಗಾಯವಾಗಿದ್ದು ಕುತ್ತಿಗೆಯ ಹತ್ತಿರ ಭಾರಿ ಗಾಯವಾಗಿ ಎಲುಬು ಮುರಿದಿದ್ದು ಮೂಗಿನಿಂದ ರಕ್ತಸ್ರಾವ ಆಗಿರುತ್ತದೆ, ಎರಡು ಕಣ್ಣಿನ ಹತ್ತಿರ ಭಾರಿ ಗುಪ್ತಗಾಯವಾಗಿದ್ದು ಎರಡು ಕೈಗಳಿಗೆ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿದ್ದು ಕಂಡು ಬಂದಿರುತ್ತದೆ, ನಂತರ ನಾನು ವಿಷಯ ನನ್ನ ತಂದೆಯವರಿಗೆ ಪೋನ ಮಾಡಿ ತಿಳಿಸಿ ಒಂದು ಖಾಸಗಿ ವಾಹನ ನಿಲ್ಲಿಸಿ ಅದರಲ್ಲಿ ಅವರಿಬ್ಬರಿಗೆ ಉಪಚಾರ ಕುರಿತು ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ತಂದು ಸೇರಿಕೆ ಆಗಿದ್ದು,ಸದರಿ ಅಫಗಾತದಲ್ಲಿ ನಮ್ಮ ಕಾರು ಪೂರ್ತಿ ಜಖಂಗೊಂಡಿರುತ್ತದೆ, ಅಬ್ದುಲ ಕಲೀಮ ಇತನಿಗೆ ಭಾರಿ ಪ್ರಮಾಣದ ಗಾಯಗಳಾಗಿದ್ದರಿಂದ ಆತನಿಗೆ ಹೆಚ್ಚಿನ ಉಪಚಾರ ಕುರಿತು ಮೇಡಿಕೇರ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆ ಆತ ಇನ್ನೂ ಮಾತಾಡುವ ಸ್ಥಿತಿಯಲ್ಲಿ ಇರುವುದಿಲ್ಲ ಅಬ್ದುಲ ಕಲೀಮ ತಂದೆ ಅಬ್ದುಲ ಸಲೀಮ , ಸಾ: ಪ್ಲಾಟ ನಂ-71 ಗಣೇಶ ನಗರ ರಿಂಗ ರೋಡ ಕಲಬುರಗಿ ಇವರು ದಿನಾಂಕ 09-07-2017 ರಂದು ರಾತ್ರಿ ಬಸವೇಶ್ವರ  ಆಸ್ಪತ್ರೆಗೆ ಬಂದು ಸೇರಿಕೆ ಆಗಿ ಉಪಚಾರ ಹೊಂದುತ್ತಾ, ಗುಣಮುಖ ಹೊಂದದೆ  ದಿನಾಂಕ 12-07-2017 ರಂದು ಬೆಳಿಗ್ಗೆ  ಮೃತಪಟ್ಟಿರುತ್ತಾನೆ ಕಾರಣ ಸದರಿ ಅಫಗಾತ ಪಡಿಸಿದ ಕಾರಿನ ಚಾಲಕನ ಮೇಲೆ  ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀ.ಈರಣ್ಣ ತಂದೆ ನಾಗಣ್ಣ ವಗ್ಗಿ ಸಾ : ಕಡಗಂಚಿ ಇವರು ದಿನಾಂಕ:10-07-2017 ರಂದು ಸೋಮವಾರ ದಿವಸ ರಾತ್ರಿ ನಾನು ನಮ್ಮೂರಿನ ಹನುಮಾನ ದೇವಸ್ಥಾನದ ಹತ್ತಿರ ನಿಂತಿರುವಾಗ ನಮ್ಮ ಗ್ರಾಮದವರಾದ ನಾಗಣ್ಣ ತಂದೆ ಶರಣಪ್ಪ ಬಟಗೇರಿ ಮತ್ತು ಸಾಯಿನಾಥ ತಂದೆ ಶಿವರಾಯ ಜಂಬಗಾ ಇವರುಗಳು ಬಂದು ನಾಗಣ್ಣನು ನಮ್ಮ ಹೊಲಕ್ಕೆ ಹೋಗಿ ಊಟಮಾಡಿಕೊಂಡು ಬರೋಣಾ ನಡಿ ಅಂತ ಹೇಳಿದ ಮೇರೆಗೆ ನಾನು ಮತ್ತು ನಾಗಣ್ಣ ಹಾಗೂ ಸಾಯಿನಾಥ ರವರು ಕೂಡಿ ಧರ್ಮವಾಡಿ ರಸ್ತೆಗೆ ಇರುವ ನಾಗಣ್ಣ ಇವರ ಹೊಲದ ಕಡೆಗೆ ಹೋಗುತ್ತಿರುವಾಗ ಬಸವಣ್ಣನ ಕಟ್ಟೆಯ ಹತ್ತಿರದಲ್ಲಿರುವಾಗ ರಾತ್ರಿ ನಾಗಣ್ಣ ಹಾಗೂ ಸಾಯಿನಾಥ ಇವರುಗಳು ನನಗೆ ವಿನಾಕಾರಣವಾಗಿ ಇಬ್ಬರು ಸೇರಿ ರಂಡಿಮಗನೆ ನಿನಗೆ ಅಲ್ಲೆ ಹೊಡಿಬೇಕೆಂದು ಅಂದುಕೊಂಡಿದ್ದೇವು ಆದರೆ ಊರಲ್ಲಿ ಹೊಡಿಬಾರದು ಅಂತಾ ಇಲ್ಲಿಗೆ ಕರೆದುಕೊಂಡು ಬಂದಿವಿ ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಸಾಯಿನಾಥನು ಬಡಿಗೆಯಿಂದ ನನ್ನ ಮೆಲಕಿನ ಹತ್ತಿರ ಹೊಡೆದು ರಕ್ತಾಯ ಪಡಿಸಿದನು, ನಾಗಣ್ಣನು ಕಲ್ಲಿನಿಂದ ಬೆನ್ನಿನ ಮೇಲೆ ಮತ್ತು ತಲೆಗೆ ಹೊಡೆದಿದ್ದರಿಂದ ಒಳಪೆಟ್ಟಾಗಿರುತ್ತದೆ. ಅಲ್ಲದೇ ಇಬ್ಬರು ಕೂಡಿ ನನಗೆ ನೆಲಕ್ಕೆ ಕೆಡವಿ ಕಾಲಿನಿಂದ ಬೆನ್ನುಮೇಲೆ ಹೊಟ್ಟೆಗೆ ಒದ್ದರಿತ್ತಾರೆ. ಅಸ್ಟೊತ್ತಿಗೆ ನಾನು ಭೆಹುಷಾಗಿ ಅಲ್ಲಿಯೇ ಬಿದ್ದಿರುತ್ತೇನೆ. ನಂತರ ಮರುದಿವಸ ಮುಂಜಾನೆ 8 ಗಂಟೆ ಸುಮಾರಿಗೆ ನಮ್ಮೂರಿನ ಹಣಮಂತರಾಯ ಜಮಾದಾರ ಹಾಗು ಜಗನ್ನಾಥ ತಂದೆ ಅಂಬರಾಯ ಕುಡಕೆನವರ ಇವರುಗಳು ಅವರ ಹೊಲಕ್ಕೆ ಹೂಗುವಾಗ ನಾನು ಬಿದ್ದಿರುವದನ್ನು ನೋಡಿ ನನ್ನನ್ನು ಎಬ್ಬಿಸಿ ನನಗೆ ಆಗಿರುವ ಗಾಯಗಳ ಬಗ್ಗೆ ವಿಚಾರಿಸಿದ್ದು ನಾನು ಮೇಲೆ ಹೇಳಿದಂತ ಘಟನೆ ಬಗ್ಗೆ ಅವರಿಗೆ ಹೇಳಿರುತೇನೆ. ರಾತ್ರಿವೇಳೆಯಲ್ಲಿ ನನ್ನ ಜೇಬಿನಲ್ಲಿದ್ದ 50,000/- ರೂಪಾಯಿಗಳು ಇರಲಿಲ್ಲ ಎಲ್ಲಿಯೋ ದಾರಿಯಲ್ಲಿ ಬಿದ್ದರಬಹುದು. ನಂತರ ನಾನು ಹಾಗೆ ನಿಧಾನವಾಗಿ ನಡೆದುಕೊಂಡು ನಮ್ಮ ಮನೆಗೆ ಬಂದು ವಿಷಯವನ್ನು ನನ್ನ ತಂದೆಗೆ ಹಾಗೂ ನನ್ನ ತಮ್ಮನಾದ ರಮೇಶನಿಗೆ ತಿಳಿಸಿದ್ದು ಅವರು ನನಗೆ ಉಪಚಾರಕುರಿತು ನಮ್ಮೂರಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆಮಾಡಿದ್ದು ನಾನು ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದಿರುತ್ತೆನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.