POLICE BHAVAN KALABURAGI

POLICE BHAVAN KALABURAGI

27 November 2011

GULBARGA DIST REPORTED CRIMES

ಅಪಘಾತ ಪ್ರಕರಣ:

ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ಸತೀಶ ತಂದೆ ಬೈಲಪ್ಪಾ ಸಾ:ಅಪ್ಪರಮಡ್ಡಿ ಶಹಾಬಾದ ರವರು ನಾನು ನನ್ನ ಮೋಟಾರ ಸೈಕಲ್ ನಂ: ಕೆಎ 32 ಈಕ್ಯೂ2163 ನೇದ್ದು ಶಹಾಬಾದ ನಗರದ ಸಭೆ ಆಪೀಸ್ ಎದುರುಗಡೆ ದಿನಾಂಕ:16/11/2011 ರಂದು 10.00 ಗಂಟೆ ಸುಮಾರಿಗೆ ನಿಲ್ಲಿಸಿದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 178/2011 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. .

ಶಹಾಬಾಧ ನಗರ ಠಾಣೆ: ದಿನಾಂಕ 26/11/11 ರಂದು ಮುಂಜಾನೆ 11-05 ಗಂಟೆಯ ಸುಮಾರಿಗೆ ಪೊಲೀಸ್ ಇನ್ಸಪೇಕ್ಟರ್ ರವರು ಮತ್ತು ಮತ್ತು ಸಿಬ್ಬಂದಿಯವರು ಪೆಟ್ರೋಲಿಂಗ ಮಾಡುತ್ತ ಹೊರಟಾಗ ರೈಲ್ವೇ ನಿಲ್ದಾಣದ ಎದುರಗಡೆ ಸತೀಶ ತಂದೆ ಶಂಕರ ಇತನು ತನ್ನನ್ನು ಮರೆ ಮಾಚಿಕೊಳ್ಳುತ್ತಿರುವದ್ನು ಗಮನಿಸಿ ಸಂಶಯ ಬಂದ್ದಿದ್ದರಿಂದ ಅವನನ್ನು ಚೆಕ್ಕ ಮಾಡಲಾಗಿ ಆತನಲ್ಲಿ 4 ಮೋಬೈಲಗಳು ದೊರೆತ್ತಿದ್ದು ಅವುಗಳ ಬಗ್ಗೆ ಸರಿಯಾದ ಉತ್ತರ ನೀಡಲಾರದ ಕಾರಣ ಆತನನ್ನು ವಶಕ್ಕೆ ತೆಗೆದುಕೊಂಡು ಅವನಿಂದ ಮೋಬಾಯಿಲ್ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 179/2011 ಕಲಂ 41 (ಡಿ) ಸಿ.ಅರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಳ್ಳತನ ಪ್ರಕರಣ:

ಚೌಕ ಪೊಲೀಸ್ ಠಾಣೆ: ಶ್ರೀ ಪದ್ಮನಾಭ ತಂದೆ ಹನುಮಂತಚಾರಿ ವಯ 55 ವರ್ಷ ಉಃ ಎಸ್.ಬಿ.ಹೆಚ್ ಬ್ಯಾಂಕ ನೆಹರು ಗಂಜದ ಮ್ಯಾನೇಜರ ಗುಲಬರ್ಗಾ ರವರು ನೆಹರು ಗಂಜದ ಎದುರುಗಡೆ ಇರುವ ನಮ್ಮ ಎಸ.ಬಿ.ಎಚ. ಎ.ಟಿ.ಎಮ್ ಮಶೀನ್ ನ್ನು ದಿನಾಂಕ 27.11.2011 ರಿಂದ 28-11-2011 ರ ಬೆಳಗಿನ ಜಾವದ ತನಕ ಯಾರೋ ಕಳ್ಳರು ಎ.ಟಿ.ಎಂ ಮಶಿನ ಒಡೆದು ಕಳ್ಳತನ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 238/2011 ಕಲಂ 454, 457, 380 , 511 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಮತಿ ಚಂದ್ರಕಲಾ ಗಂಡ ರಾಜಕುಮಾರ ಮೂಲಭಾರತಿ ಸಾ; ಕೆ.ಹೆಚ್.ಬಿ.ಕಾಲೋನಿ ರಾಜಾಪೂರ ಗುಲಬರ್ಗಾ ರವರು ನಾನು ದಿನಾಂಕ 26-11-2011 ರಂದು ರಾತ್ರಿ 9-30 ಗಂಟೆಗೆ ಸುಪರ ಮಾರ್ಕೇಟ ದಿಂದ ಎಸ್.ವಿ.ಪಿ.ಸರ್ಕಲ್ ಮೇನ ರೋಡಿನಲ್ಲಿ ಬರುವ ಜಗತ ಸರ್ಕಲ್ಹ ಹತ್ತಿರದ ಮಹಾನಗರ ಪಾಲಿಕೆಯ ಕಮಿಷನರ ಮನೆಯ ಕಂಪೌಡ ಗೋಡೆಯ ಹತ್ತಿರ ರೋಡಿನ ಮೇಲೆ ಅಟೋರೀಕ್ಷಾ ನಂ: ಕೆಎ 32 ಎ 7537 ನೇದ್ದರ ಚಾಲಕ ರಾಜಕುಮಾರ ಇತನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ತನ್ನಿಂದ ತಾನೆ ಅಟೋ ಪಲ್ಟಿಮಾಡಿ ಭಾರಿ ಗಾಯಹೊಂದಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 152/2011 ಕಲಂ 278, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST


ಆಸ್ತಿಗಾಗಿ ವೃದ್ದನ ಕೊಲೆ, ಮಗ, ಮೊಮ್ಮಕಳ ಸೇರಿ ಮೂರು ಜನರ ಬಂಧನ

ದಿನಾಂಕ 25/11/2011 ರಂದು ರಾತ್ರಿ 11-00 ಗಂಟೆಗೆ ಮಾನ್ಯ ಶ್ರೀ ಪ್ರವೀಣ ಮದುಕರ ಪವಾರ ಐಪಿಎಸ್ ಎಸ್.ಪಿ. ಗುಲಬರ್ಗಾ, ಮಾನ್ಯ ಅಪರ ಎಸ್.ಪಿ ಶ್ರೀ ಕಾಶಿನಾಥ ತಳಕೇರಿ ಮತ್ತು ಮಾನ್ಯ ಶ್ರೀ ಹೆಚ್. ತಿಮ್ಮಪ್ಪ ಡಿ.ಎಸ್.ಪಿ ಗ್ರಾಮಾಂತರ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡದ ಶ್ರೀ ಚಂದ್ರಶೇಖರ ಬಿ.ಪಿ ಸಿಪಿಐ ಎಮ್.ಬಿ ನಗರ ವೃತ್ತ ಗುಲಬರ್ಗಾ ರವರ ನೇತೃತ್ವದಲ್ಲಿ ಶ್ರೀ ಪಂಡಿತ ಸಗರ ಪಿ.ಎಸ್.ಐ ವಿವಿ ಠಾಣೆ, ಶ್ರೀ ಭೋಜರಾಜ ರಾಠೋಡ ಪಿ.ಎಸ್.ಐ ಫರಹತಾಬಾದ ಠಾಣೆ, ಶ್ರೀ ಸಂಜೀವಕುಮಾರ ಪಿ.ಎಸ್.ಐ ಎಮ್.ಬಿ ನಗರ ಠಾಣೆ, ಕುಮಾರಿ ಶ್ರೀದೇವಿ ಬಿರಾದಾರ ಪ್ರೊ.ಪಿ.ಎಸ್.ಐ ಫರಹತಾಬಾದ ಹಾಗೂ ಸಿಬ್ಬಂದಿಯವರಾದ ಶಂಕರ ಹೆಚ್.ಸಿ, ಪ್ರಭಾಕರ ಪಿಸಿ, ಕರಣಸಿಂಗ ಪಿಸಿ, ಮಶಾಕ ಪಿಸಿ, ಚಂದ್ರಕಾಂತ ಪಿಸಿ, ಜಮೀಲ ಅಹ್ಮದ ಪಿಸಿ, ಮಶಾಕ ಪಿಸಿ ರವರು ಕೊಲೆಯಾದ ಕರಿಬಸಪ್ಪಾ ತಂದೆ ವಿರಭದ್ರಪ್ಪಾ ಕುಂಬಾರ ವಃ 75 ಸಾ|| ಹಾರುತಿ ಹಡಗಿಲ್ ಎಂಬುವರಿಗೆ ಕೊಲೆ ಮಾಡಿದ ಆತನ ಹಿರಿಯ ಮಗ ಪ್ರಭುಲಿಂಗ ತಂದೆ ಕರಿಬಸಪ್ಪ ಕುಂಬಾರ ಮತ್ತು ಮೊಮ್ಮಕ್ಕಳಾದ ಲೊಕೇಶ ತಂದೆ ಪ್ರಭುಲಿಂಗ ಕುಂಬಾರ ಹಾಗೂ ಶಿವರಾಜ ತಂದೆ ಪ್ರಭುಲಿಂಗ ಕುಂಬಾರ ಎಲ್ಲರೂ ಸಾ|| ಹಾರುತಿ ಹಡಗಿಲ್ ಇವರನ್ನು ದಸ್ತಗಿರಿ ಮಾಡಿ ತನಿಖೆಗೆ ಒಳಪಡಿಸಿದಾಗ ತನಿಖೆ ಕಾಲದಲ್ಲಿ ಆರೋಪಿತರು ಆಸ್ತಿಗಾಗಿ ಕೊಲೆ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದರಿಂದ ನ್ಯಾಯಾಂಗ ಬಂಧನ ಕುರಿತು ಒಪ್ಪಿಸಲಾಗುತ್ತಿದ್ದು ಈ ಬಗ್ಗೆ ತನಿಖೆ ಮುಂದುವರೆಯಿಸಿರುತ್ತಾರೆ ಪ್ರಕರಣವನ್ನು ಭೇಧಿಸಿದ ಅಧಿಕಾರಿ ಮತ್ತು ಸಿಬ್ಬಂದಿ ಜನರಿಗೆ ಇಲಾಖಾ ವತಿಯಿಮದ ಬಹುಮಾನ ಘೋಷಣೆ ಮಾಡಲಾಗಿದೆ.

GULBARGA DIST REPORTED CRIMES

ಕಳವು ಪ್ರಕರಣ:

ಬ್ರಹ್ಮಪೂರ ಠಾಣೆ: ಶ್ರೀ.ವಿಠಲ ತಂದೆ ಈಶ್ವರಪ್ಪ ಹೊಸಮನಿ, || ಮುಖ್ಯ ಶಿಕ್ಷಕರು ಸಾ|| ಪ್ಲಾಟ ನಂ:587/3/7 ದೇವಿ ನಗರ ಆಳಂದ ರೋಡ ಗುಲಬರ್ಗಾ ರವರು ನಾನು ದೇವಿನಗರದ ಪ್ಲಾಟ ನಂ: 587/3/7 ನೇದ್ದರಲ್ಲಿ ಮನೆ ಕಟ್ಟುವ ಸಲುವಾಗಿ ಸುಪರ ಮಾರ್ಕೆಟನಲ್ಲಿರುವ ಕಾರ್ಪೊರೇಶನ ಬ್ಯಾಂಕನಿಂದ ಸಾಲ ಪಡೆದು ದಿನಾಂಕ: 26/11/2011 ರಂದು ಬೆಳಿಗ್ಗೆ 11:00 ಗಂಟೆಗೆ ಸುಪರ ಮಾರ್ಕೆಟ ಕಾರ್ಪೊರೇಶನ ಬ್ಯಾಂಕನಿಂದ 2,05,000/- ರೂಪಾಯಿ ಡ್ರಾ ಮಾಡಿಕೊಂಡು ನನ್ನ ಮೋಟರ ಸೈಕಲ ನಂ: ಕೆಎ 32 ಆರ್ 1759 ನೇದ್ದರ ಡಿಕ್ಕಿಯಲ್ಲಿ ಹಾಕಿಕೊಂಡು ಭಾರತ ಶಿಕ್ಷಣ ಸಂಸ್ಥೆಯ ಇನ್ನೊಂದು ಶಾಲೆಯಾದ ಕನ್ಯಾ ಪ್ರೌಢ ಶಾಲೆ ಜಗತ ಗುಲಬರ್ಗಾಕ್ಕೆ ಹೋಗಿ ಶಾಲೆಯ ಮುಂದೆ ನನ್ನ ಮೋಟರ ಸೈಕಲ ನಿಲ್ಲಿಸಿ ಆಫೀಸದಲ್ಲಿ ಕೆಲಸ ಇರುವದರಿಂದ ಒಳಗೆ ಹೋಗಿ 5 ನಿಮಿಷದಲ್ಲಿ ಹೊರಗೆ ಬಂದು ನೋಡಲಾಗಿ ನನ್ನ ಡಿಕ್ಕಿಯಲ್ಲಿದ್ದ ಹಣ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಶ್ರೀ ರಿಹಾನ ರಸೀದ ತಂದೆ ಶೇಖ ಹಸನ ಮುಜಾವರ ಸಾ; ಎಮ್.ಐ.ಜಿ.-7 ಹೌಸಿಂಗ ಬೋರ್ಡ ಕೆ.ಹೆಚ್.ಬಿ.ಕಾಲೋನಿ ಹಳೆ ಜೇವರ್ಗಿ ಗುಲಬರ್ಗಾ ರವರು ನಾನು ದಿನಾಂಕ 26-11-2011 ರಂದು ಸಾಯಂಕಾಲ ಕೊರಂಟಿ ಹನುಮಾನ ಗುಡಿಯಿಂದ ಹಳೆ ಜೇವರ್ಗಿ ರೋಡಿನಲ್ಲಿ ಬರುವ ಆರ್ಮಿ ಬಿಲ್ಡಿಂಗ ಹತ್ತಿರ ಹೊರಟಾಗ ಮೋಟಾರ ಸೈಕಲ್ ನಂ: ಕೆಎ 32 ವಿ 4108 ನೇದ್ದರ ಸವಾರ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ನನಗೆ ಡಿಕ್ಕಿ ಪಡಿಸಿ ಅಪಘಾತ ಮೋಟಾರ ಸೈಕಲ್ ಸಮೇತ ಓಡಿ ಹೋಗಿರುತ್ತಾನೆ, ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 151/11 ಕಲಂ: 279 .337 ಐ.ಪಿ.ಸಿ ಸಂ:187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.